ನವದೆಹಲಿ: Vastu Tips - ವಾಸ್ತು  ಸಂಬಂಧಿತ ದೋಷಗಳನ್ನು ಹೋಗಲಾಡಿಸಲು ಅಡುಗೆ ಮನೆಯಲ್ಲಿ ಬಳಕೆಯಾಗುವ ಕೆಲ ವಸ್ತುಗಳು ತುಂಬಾ ಸಹಾಯಕಾರಿಯಾಗಿವೆ. ಹಾಗೆ ನೋಡಿದರೆ ಪಟಕಕ್ಕೆ ಸಂಬಂಧಿಸಿದ ಕೆಲವು ವಾಸ್ತು ಸಲಹೆಗಳಿವೆ, ಇವುಗಳನ್ನು ಅನುಸರಿಸುವ ಮೂಲಕ ಕೇವಲ ವಾಸ್ತು ದೋಷಗಳಿಂದ ಮುಕ್ತಿ ಪಡೆಯುವುದಲ್ಲದೆ, ಆರ್ಥಿಕ ಸ್ಥಿತಿ (Financial Problems) ಮತ್ತು ಆರೋಗ್ಯಕ್ಕೆ ಸಂಬಂಧಿಸಿದ (Health Problems) ಎಲ್ಲಾ ಸಮಸ್ಯೆಗಳಿಗೆ ನೀವು ಅಂತ್ಯ ಹಾಡಬಹುದು. ಹಾಗಾದರೆ ಬನ್ನಿ ಪಟಕವನ್ನು ಬಳಸಿ ವಾಸ್ತು ದೋಷದಿಂದ ಹೇಗೆ ಹೋಗಲಾಡಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

>> ಕುಟುಂಬದ ಸದಸ್ಯರ ಆದಾಯದಲ್ಲಿ ನಿರಂತರ ಕುಸಿತ ಕಂಡುಬಂದಲ್ಲಿ ಅಥವಾ ಆರ್ಥಿಕ ಪ್ರಗತಿಯಲ್ಲಿ ಯಾವುದೇ ರೀತಿಯ ಅಡಚಣೆ ಕಂಡುಬಂದಲ್ಲಿ, ಹಣದ ಲಾಭ ಮತ್ತು ಆರ್ಥಿಕ ಪ್ರಗತಿಗಾಗಿ ನೀರಿನಲ್ಲಿ  ಪಟಕ ಹಾಕಿ ಸ್ನಾನ ಮಾಡಿ. ಹೀಗೆ ಮಾಡುವುದರಿಂದ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ.


>> ಮನೆಯಲ್ಲಿ ಯಾವುದೇ ರೀತಿಯ ವಾಸ್ತು ದೋಷವಿದ್ದರೆ ಅದನ್ನು ಹೋಗಲಾಡಿಸಲು ಮನೆಯ ಯಾವುದೇ ಮೂಲೆಯಲ್ಲಿರುವ ಬಟ್ಟಲಿನಲ್ಲಿ ಕೆಲವು ಪಟಕದ ತುಂಡುಗಳನ್ನು ಹಾಕಿ. ಎಲ್ಲರಿಗೂ ಕಾಣುವ ರೀತಿಯಲ್ಲಿ ಅದನ್ನು ಇಡಬೇಕು.  ಹಾಗೆಯೇ ಕಾಲಕಾಲಕ್ಕೆ ಅದನ್ನು ಬದಲಾಯಿಸುತ್ತಿರಿ. ಪದಕಟ ಈ ಪರಿಹಾರದಿಂದ ಮನೆಯ ಋಣಾತ್ಮಕ ಶಕ್ತಿ ದೂರವಾಗುತ್ತದೆ.


>> ವ್ಯಾಪಾರದಲ್ಲಿ ಆರ್ಥಿಕ ನಷ್ಟ ಉಂಟಾದರೆ ಕೆಂಪು ಬಟ್ಟೆಯಲ್ಲಿ ಪಟಕ ಕೆಲವು ತುಂಡುಗಳನ್ನು ಕಟ್ಟಿ ಮುಖ್ಯ ದ್ವಾರಕ್ಕೆ ನೇತು ಹಾಕಬೇಕು. ಈ ಕ್ರಮದಿಂದ, ವ್ಯವಹಾರದಲ್ಲಿ ಆರ್ಥಿಕ ಲಾಭ ಬರಲು ಆರಂಭಿಸುತ್ತದೆ.


ಇದನ್ನೂ ಓದಿ-Spiritual Meditation: ಆಧ್ಯಾತ್ಮಿಕ ಧ್ಯಾನ ಎಂದರೇನು? ಅದರ ಪ್ರಯೋಜನ ಮತ್ತು ಅಭ್ಯಾಸದ ಬಗೆ ಹೇಗೆ ಗೊತ್ತೇ?


>> ನೀವು ಸಾಲದ ಹೊರೆಯಿಂದ ನೀವು ಬಳಲುತ್ತಿದ್ದರೆ ಮತ್ತು ಅದರಿಂದ ಮುಕ್ತಿ ಹೊಂದಲು ಬಯಸಿದರೆ, ಸಿಂಧೂರದೊಂದಿಗೆ ಪಟಕ ಬೆರೆಸಿ ವೀಳ್ಯದೆಲೆಯಲ್ಲಿ ಕಟ್ಟಿಕೊಳ್ಳಿ. ನಂತರ, ಬುಧವಾರದಂದು ಅದನ್ನು ಆಲದ ಮರದ ಕೆಳಗೆ ಇರಿಸಿ. ಹೀಗೆ ಮಾಡುವುದರಿಂದ ಸಾಲದ ಹೊರೆ ಶೀಘ್ರವೇ ಕಡಿಮೆಯಾಗಲಿದೆ.


ಇದನ್ನೂ ಓದಿ-Relationship Tips: ನಿಮ್ಮ ಸಂಗಾತಿಯ ಜೊತೆಗೆ ಬೆಳಗ್ಗೆ ಈ ಕೆಲ್ಸಾ ಮಾಡಿ, ದಿನವಿಡೀ ಮೂಡ್ ರೊಮ್ಯಾಂಟಿಕ್ ಆಗಿರುತ್ತದೆ


(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆಯಿರಿ. ಝೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ಓದಿ-ನಿಮ್ಮ ರಾಶಿ ಯಾವುದು? ನಿಮ್ಮ ಲವ್ ಮತ್ತು ರಿಲೇಶನ್ಶಿಪ್ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.