ನವದೆಹಲಿ : ಭಗವಾನ್ ಶಿವನ (Lord Shiva) ಕಣ್ಣೀರಿನಿಂದ ಹುಟ್ಟಿದ ರುದ್ರಾಕ್ಷಿಗಳು ತುಂಬಾ ಮಂಗಳಕರವಾಗಿವೆ. ಇವುಗಳನ್ನು ಧರಿಸುವುದರಿಂದ ವ್ಯಕ್ತಿಯಲ್ಲಿ ಸಕಾರಾತ್ಮಕತೆ ತುಂಬುತ್ತದೆ. ರುದ್ರಾಕ್ಷಿ ಧರಿಸಿದ ವ್ಯಕ್ತಿಯ ಜೀವನದಲ್ಲಿ ಸಮಸ್ಯೆ, ಭಯ ಇತ್ಯಾದಿಗಳಿಗೆ ಜಾಗವೇ ಇರುವುದಿಲ್ಲ (impacts of wearing rudrakshi). ಆತ ಸದಾ ನೆಮ್ಮದಿಯ ಬದುಕು ಬದುಕುತ್ತಾನೆ.  ಈಶ್ವರನ ಕೃಪೆಯಿಂದ ಇವರು ಮಾಡುವ ಎಲ್ಲಾ ಕೆಲಸದಲ್ಲಿಯೂ ಯಶಸ್ಸು ಸಿಗುತ್ತದೆ. ಶಿವ ಮಹಾಪುರಾಣದಲ್ಲಿ ಏಕ ಮುಖಿ ರುದ್ರಾಕ್ಷದಿಂದ 38 ಮುಖಿ ರುದ್ರಾಕ್ಷದವರೆಗೆ ಉಲ್ಲೇಖವಿದೆ (importance of wearing rudrakshi). ಹಾಗೆಯೇ ಇವೆಲ್ಲವುಗಳ ಪರಿಣಾಮಗಳನ್ನು ಸಹ ಹೇಳಲಾಗಿದೆ. ಇವುಗಳಲ್ಲಿ ಕೆಲವು ರುದ್ರಾಕ್ಷಗಳು ಬಹಳ ಪರಿಣಾಮಕಾರಿ. 


COMMERCIAL BREAK
SCROLL TO CONTINUE READING

ರುದ್ರಾಕ್ಷ ಮತ್ತು ಅದರ ಪ್ರಯೋಜನಗಳು :
ಏಕ ಮುಖಿ ರುದ್ರಾಕ್ಷಿ: 
ಏಕ ಮುಖಿ ರುದ್ರಾಕ್ಷವನ್ನು (eka muka rudrakshi) ಅತ್ಯಂತ ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ. ಆಧ್ಯಾತ್ಮಿಕ ಪ್ರಗತಿ ಮತ್ತು ಏಕಾಗ್ರತೆಗಾಗಿ ಇದನ್ನು ಧರಿಸಲಾಗುತ್ತದೆ. ಸಾಮಾನ್ಯವಾಗಿ ಆಧ್ಯಾತ್ಮಿಕ ಗುರುಗಳು ಅದನ್ನು ಧರಿಸುತ್ತಾರೆ. ಇದಲ್ಲದೆ, ಇದು ವಿದ್ಯಾರ್ಥಿಗಳಿಗೆ ತುಂಬಾ ಪರಿಣಾಮಕಾರಿ ಎನ್ನಲಾಗಿದೆ (importance of eka mukha rudrakshi). ಈ ರುದ್ರಾಕ್ಷಿಯು ಆತ್ಮವಿಶ್ವಾಸ ಮತ್ತು ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಯಾರ ಜಾತಕದಲ್ಲಿ ಸೂರ್ಯನು (Sun God)ದುರ್ಬಲನಾಗಿರುತ್ತಾನೆಯೋ, ಅವರು ಈ ರುದ್ರಾಕ್ಷಿಯನ್ನು ಧರಿಸುವುದರಿಂದ ಅದ್ಭುತ ಫಲಿತಾಂಶಗಳು ಸಿಗಲಿದೆ. ಕಣ್ಣು, ತಲೆನೋವು, ಹೊಟ್ಟೆ, ಮೂಳೆ ಮತ್ತು ರಕ್ತದೊತ್ತಡಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಸಹ ಇದು ಪರಿಹಾರ ನೀಡುತ್ತದೆ. 


ಇದನ್ನೂ ಓದಿ :  Mangal Gochar: ಮುಂದಿನ 24 ಗಂಟೆಗಳು ಬಹಳ ವಿಶೇಷ, ಮಂಗಳನ ರಾಶಿ ಬದಲಾವಣೆ ನಿಮ್ಮ ಮೇಲೆ ಹೇಗೆ ಪರಿಣಾಮ ಬೀರಲಿದೆ?


ಎರಡು ಮುಖಿ ರುದ್ರಾಕ್ಷಿ: 
ಎರಡು ಮುಖಿ ರುದ್ರಾಕ್ಷಿಯನ್ನು ಶಿವ ಶಕ್ತಿಯ (Shiva Shakti)ರೂಪವೆಂದು ಪರಿಗಣಿಸಲಾಗುತ್ತದೆ. ಜಾತಕದಲ್ಲಿ ಚಂದ್ರ ದುರ್ಬಲನಾಗಿದ್ದರೆ ಈ ರುದ್ರಾಕ್ಷಿಯನ್ನು ಧರಿಸಬೇಕು. ಈ ಕಾರಣದಿಂದಾಗಿ, ವ್ಯಕ್ತಿಯು ಮಾನಸಿಕವಾಗಿ ಬಲಶಾಲಿಯಾಗುತ್ತಾನೆ ಮತ್ತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸಾಧ್ಯವಾಗುತ್ತದೆ. ಇದಲ್ಲದೆ, ಇದು ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧವನ್ನು ಸುಧಾರಿಸುತ್ತದೆ. 


ನಾಲ್ಕು ಮುಖಿ ರುದ್ರಾಕ್ಷಿ : 
ನಾಲ್ಕು ಮುಖಿ ರುದ್ರಾಕ್ಷಿಯನ್ನು ಬ್ರಹ್ಮದ ರೂಪವೆಂದು ಪರಿಗಣಿಸಲಾಗುತ್ತದೆ. ಇದು ಚತುರ್ವರ್ಗ ಫಲಗಳನ್ನು ನೀಡುತ್ತದೆ ಎಂದು ಪರಿಗಣಿಸಲಾಗಿದೆ. ಅಂದರೆ ಅದನ್ನು ಧರಿಸುವುದರಿಂದ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಪ್ರಾಪ್ತಿಯಾಗುತ್ತದೆ. ಈ ರುದ್ರಾಕ್ಷಿಯು ವ್ಯಕ್ತಿಯ ಜ್ಞಾನ, ಬುದ್ಧಿವಂತಿಕೆ, ಸಂಪತ್ತು ಮತ್ತು ವೈಭವವನ್ನು ಹೆಚ್ಚಿಸುತ್ತದೆ. ಅಲ್ಲದೆ, ವ್ಯಕ್ತಿಯು ಯಾವಾಗಲೂ ಆರೋಗ್ಯವಾಗಿರುತ್ತಾನೆ. ಈ ರುದ್ರಾಕ್ಷಿಯು ಬುಧ ಗ್ರಹಕ್ಕೆ (mercury)ಸಂಬಂಧಿಸಿರುವುದರಿಂದ, ಇದು ವ್ಯಕ್ತಿಯನ್ನು ಬುದ್ಧಿವಂತ ಮತ್ತು ಸಂವಹನ ಕೌಶಲ್ಯದಲ್ಲಿ ಪರಿಣಿತನನ್ನಾಗಿ ಮಾಡುತ್ತದೆ. 


ಇದನ್ನೂ ಓದಿ : Surya Guru Yuti 2022 : 12 ವರ್ಷಗಳ ನಂತರ ಕುಂಭ ರಾಶಿಗೆ ಸೂರ್ಯ-ಗುರು : ಮಾರ್ಚ್ 15 ರೊಳಗೆ ಈ ರಾಶಿಯವರಿಗೆ ಭಾರೀ ಲಾಭ!


ಏಳು ಮುಖಿ ರುದ್ರಾಕ್ಷಿ  : 
ಏಳು ಮುಖಿ ರುದ್ರಾಕ್ಷಿಯ ಅಧಿಪತಿ ಶುಕ್ರ (Venus). ಈ ರುದ್ರಾಕ್ಷಿಯನ್ನು ಧರಿಸಿದವರ ಮೇಲೆ ಲಕ್ಷ್ಮೀ (Godess Lakshmi)ಅಪಾರವಾದ ಆಶೀರ್ವಾದವನ್ನು ಹರಿಸುತ್ತಾಳೆ. ಅಲ್ಲದೆ, ಈ ರುದ್ರಾಕ್ಷಿಯನ್ನು ಧರಿಸಿದವನು ಕಲೆಯಲ್ಲಿ ಪ್ರವೀಣನಾಗಿ ಸೌಂದರ್ಯ, ಸುಖ, ಕೀರ್ತಿಯನ್ನು ಪಡೆಯುತ್ತಾನೆ. ಈ ರುದ್ರಾಕ್ಷಿ ಉದ್ಯಮಿಗಳು, ಉದ್ಯೋಗಿಗಳು, ಭಾಷಣಕಾರರು ಮತ್ತು ಬರಹಗಾರರಿಗೆ ಗರಿಷ್ಠ ಪ್ರಯೋಜನಗಳನ್ನು ನೀಡುತ್ತದೆ. 


ಆದರೆ ರುದ್ರಾಕ್ಷಿ ಧರಿಸುವಾಗ ವಿಧಿವಿಧಾನಗಳ ಪ್ರಕಾರ ಧರಿಸಬೇಕು ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಕ್ರಮಬದ್ಧವಾಗಿ ರುದ್ರಾಕ್ಷಿ ಧರಿಸಿದರೆ ಮಾತ್ರ  ಅದರ ಫಲ ಸಿಗುತ್ತದೆ. ಮಹಾಶಿವರಾತ್ರಿಯು (mahashivaratri) ರುದ್ರಾಕ್ಷಿಯನ್ನು ಧರಿಸಲು ಉತ್ತಮ ದಿನವಾಗಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.