Benefits of Cycling for Women: ದೈಹಿಕವಾಗಿ ಸದೃಢವಾಗಿ ಆರೋಗ್ಯಕರವಾಗಿರಲು ದೈನಂದಿನ ಜೀವನದಲ್ಲಿ ಆರೋಗ್ಯಕರ ಚಟುವಟಿಕೆಗಳನ್ನು ಅಳವಡಿಸಿಕೊಳ್ಳುವುದು ತುಂಬಾ ಮುಖ್ಯ. ಸೈಕ್ಲಿಂಗ್ ಕೂಡ ಇಂತಹ ಆರೋಗ್ಯಕರ ಚಟುವಟಿಕೆಗಳಲ್ಲಿ ಒಂದು. 


COMMERCIAL BREAK
SCROLL TO CONTINUE READING

ಪ್ರಸ್ತುತ ಬದಲಾದ ಜೀವನಶೈಲಿಯಲ್ಲಿ ಗಂಟೆಗಟ್ಟಲೆ ಒಂದೇ ಸ್ಥಳದಲ್ಲಿ ಕುಳಿತು ಕೆಲಸ ಮಾಡುವವರೇ ಹೆಚ್ಚು. ಇದರಿಂದಾಗಿ ಯಾವುದೇ ದೈಹಿಕ ಚಟುವಟಿಕೆಗಳಿಲ್ಲದೆ ತೂಕ ಹೆಚ್ಚಾಗುತ್ತದೆ. ಅದರಲ್ಲೂ ಒಂದೇ ಸ್ಥಳದಲ್ಲಿ ಗಂಟೆಗಟ್ಟಲೆ ಕುಳಿತುಕೊಳ್ಳುವುದರಿಂದ ಹೊಟ್ಟೆಯ ಸುತ್ತಲಿನ ಭಾಗದಲ್ಲಿ ಹೆಚ್ಚು ಕೊಬ್ಬು ಶೇಖರವಾಗುತ್ತದೆ. ಇದನ್ನು ತಪ್ಪಿಸಲು, ನಿತ್ಯ 15-20 ನಿಮಿಷವಾದರೂ ದೈಹಿಕ ವ್ಯಾಯಾಮಕ್ಕೆ ಒತ್ತು ನೀಡಬೇಕು. ಇದಕ್ಕೆ ಬೈಸಿಕಲ್ ಸವಾರಿಯೂ ಅತ್ಯುತ್ತಮ ಆಯ್ಕೆಯಾಗಿದೆ. 


ಬೈಸಿಕಲ್ ಸವಾರಿ ಅಥವಾ ಸೈಕ್ಲಿಂಗ್ ಮಾಡುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಇದು ದೇಹದ ತೂಕವನ್ನು ಕಡಿಮೆ ಮಾಡುವುದಷ್ಟೇ ಅಲ್ಲದೆ, ಒತ್ತಡವನ್ನು ನಿವಾರಿಸುತ್ತದೆ. ಅಷ್ಟೇ ಅಲ್ಲ, ಇದು ಒಟ್ಟಾರೆ ಫಿಟ್ನೆಸ್ ಗೆ ಕೊಡುಗೆಯನ್ನು ನೀಡುತ್ತದೆ.  ಅದರಲ್ಲೂ ಮಹಿಳೆಯರಿಗೆ ಸೈಕ್ಲಿಂಗ್ ಮಾಡುವುದರಿಂದ ಹಲವು ಪ್ರಯೋಜನಗಳಿವೆ. ಅವುಗಳೆಂದರೆ... 


ಇದನ್ನೂ ಓದಿ- Summer Diet: ಬಿರು ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಲು ತುಂಬಾ ಪ್ರಯೋಜನಕಾರಿ ಮಸಾಲೆಗಳಿವು


ಮಹಿಳೆಯರಿಗೆ ಸೈಕ್ಲಿಂಗ್ ನಿಂದ ಸಿಗುವ ಅದ್ಭುತ ಪ್ರಯೋಜನಗಳೆಂದರೆ:- 
ಎನರ್ಜಿ ಬೂಸ್ಟರ್: 

ಸೈಕ್ಲಿಂಗ್ ಉತ್ತಮ ಎನರ್ಜಿ ಬೂಸ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ. ಸೈಕ್ಲಿಂಗ್‌ನಿಂದ ದೇಹಕ್ಕೆ ಶಕ್ತಿ ದೊರೆಯುವುದರ ಜೊತೆಗೆ ಇದು ಚಯಾಪಚಯ ದರವನ್ನು ಕೂಡ ಹೆಚ್ಚಿಸುತ್ತದೆ. 


ಕೀಲು ನೋವು: 
ವಯಸ್ಸಾದಂತೆ ಮೂಳೆಗಳು  ಸವೆಯುವುದು ಸರ್ವೇ ಸಾಮಾನ್ಯ. ಅದರಲ್ಲೂ ಮನೆಕೆಲಸ, ಹೊರಗಡೆ ಕೆಲಸ ಎಂದು ಸದಾ ಬಿಡುವಿಲ್ಲದೆ ದುಡಿಯುವ ಮಹಿಳೆಯರಿಗೆ ಕೀಲು ನೋವಿನ ಸಮಸ್ಯೆ ಪುರುಷರಿಗಿಂತ ಹೆಚ್ಚು. ಆದರೆ, ನಿತ್ಯ ಜೀವನದಲ್ಲಿ ಸೈಕ್ಲಿಂಗ್ ಅಳವಡಿಸಿಕೊಳ್ಳುವುದರಿಂದ ಇದು ಮೊಣಕಾಲು, ಮಂಡಿ ಜೊತೆಗೆ ಬೆನ್ನು ಮೂಳೆಯ ಮೇಲೆ ಒತ್ತಡವನ್ನು ಕಡಿಮೆ ಮಾಡುತ್ತದೆ. 
 
ಸ್ನಾಯುಗಳಿಗೆ ಬಲ: 
ಕುಂಡಿ ಮತ್ತು ಮೊಣಕಾಲಿನ ಕೀಲುಗಳ ಚಲನಶೀಲತೆಗೆ  ಸೈಕ್ಲಿಂಗ್ ತುಂಬಾ ಪ್ರಯೋಜನಕಾರಿ. ಇದು ಸ್ನಾಯುಗಳಿಗೂ ಕೂಡ ಬಲ ನೀಡುತ್ತದೆ.  


ಇದನ್ನೂ ಓದಿ- Raisin Water: ನಿತ್ಯ ಖಾಲಿ ಹೊಟ್ಟೆಯಲ್ಲಿ ಒಣದ್ರಾಕ್ಷಿ ನೀರು ಕುಡಿದರೆ ಈ ಸಮಸ್ಯೆಗಳು ಹತ್ತಿರವೂ ಸುಳಿಯಲ್ಲ


ಹೆಚ್ಚುವರಿ ಕ್ಯಾಲೋರಿಗಳು ಸುಡಲು ಪ್ರಯೋಜನಕಾರಿ: 
ನಿತ್ಯ ಸೈಕ್ಲಿಂಗ್ ಮಾಡುವುದರಿಂದ ಇದು ದೇಹದಲ್ಲಿ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು  ಆರೋಗ್ಯಕರವಾಗಿ ತೂಕ ಇಳಿಸಲು ಪ್ರಯೋಜನಕಾರಿ ಆಗಿದೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.