Chelina Jatre: ನಾಗರ ಪಂಚಮಿ ದಿನ ನಾಗಪ್ಪನ ಮೂರ್ತಿಗೆ ಹಾಲೆರುವುದು ಸರ್ವೇ ಸಾಮಾನ್ಯ. ಆದರಿಲ್ಲಿ ಪಂಚಮಿ ದಿನವೇ ಈ ಗ್ರಾಮದಲ್ಲಿ ಚೇಳುಗಳಿಗೆ ಪೂಜಿಸಿ ಆರಾಧಿಸುತ್ತಾರೆ.  ಚೇಳುಗಳನ್ನು  ಕೈ ಮೇಲೆ, ಮೈ ಮೇಲೆ, ಬಾಯಲ್ಲಿ ಇಟ್ಟು ಸಂಭ್ರಮಿಸುವುದೇ ಈ ಜಾತ್ರೆಯ ವಿಶೇಷ. ಅಷ್ಟಕ್ಕೂ ಯಾವುದೀ ಜಾತ್ರೆ, ಇಂತಹ ಜಾತ್ರೆ ನಡೆಯುವುದಾದರೂ ಎಲ್ಲಿ ಅಂತೀರಾ ಈ ಸುದ್ದಿಯನ್ನು ಒಮ್ಮೆ ಓದಿ. 


COMMERCIAL BREAK
SCROLL TO CONTINUE READING

ರಾಜ್ಯದೆಲ್ಲಡೆ ನಾಗರಪಂಚಮಿ ಹಬ್ಬದ ದಿನದಂದು  ನಾಗರಾಜನನ್ನು ಪೂಜಿಸಿ ನಾಗರ ಹುತ್ತಕ್ಕೆ, ಇಲ್ಲವೇ ಸಮೀಪದಲ್ಲಿರುವ ನಾಗರ ಕಲ್ಲಿಗೆ ಹಾಲೆರೆದು ಪೂಜಿಸುವುದು ವಾಡಿಕೆ. ಆದರಿಲ್ಲಿ, ಚಿಕ್ಕಮಕ್ಕಳು, ಮಹಿಳೆಯರು, ಯವಕರು ಹಾಗೂ ವಯಸ್ಕರು  ವಿಷ ಜಂತುಗಳ ಜೊತೆ ಯಾವುದೇ ಭಯವಿಲ್ಲದೇ ಸಂಭ್ರಮ ಪಡುತ್ತಾರೆ. ಈ ಗ್ರಾಮದಲ್ಲಿ ನಾಗರ ಪಂಚಮಿ ದಿನ, ಚೇಳುಗಳನ್ನು ಪೂಜಿಸಿ ಅವುಗಳ ಜೊತೆ ಆಟ ಆಡುವುದೇ ವಿಶೇಷವಂತೆ. 


ಇದನ್ನೂ ಓದಿ- Varamahalakshmi Festival: ವರಮಹಾಲಕ್ಷ್ಮಿಗೆ ನೈವೇದ್ಯಕ್ಕಾಗಿ ಯಾವ ತಿಂಡಿಗಳು ಸೂಕ್ತ...ಇಲ್ಲಿದೆ ಮಾಹಿತಿ


ಹೌದು, ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಕಂದಕೂರು ಎಂಬ  ಗ್ರಾಮದಲ್ಲಿ ಚೇಳುಗಳ ಜಾತ್ರೆ ನಡೆಯುತ್ತದೆ. ಗ್ರಾಮದ ಬೆಟ್ಟದ ಮಧ್ಯೆ ಕೊಂಡಮ್ಮದೇವ ದೇವಾಲಯವಿದೆ. ಈ ದೇವಾಲಯದಲ್ಲಿ ಅಪರೂಪದಲ್ಲಿ ಅಪರೂಪ ಎಂಬಂತೆ ಚೇಳಿನ ಮೂರ್ತಿಗಳಿವೆ. ಪ್ರತಿ ವರ್ಷ ನಾಗರ ಪಂಚಮಿಯ ದಿನ ಇಲ್ಲಿ ದೇವಿಯ ಜಾತ್ರೆ ನಡೆಯುತ್ತದೆ. ವಿಶೇಷವೆಂದರೆ ಈ ಜಾತ್ರೆ ಸಮಯದಲ್ಲಿ ಇಲ್ಲಿ ಸಾವಿರಾರು ಚೆಲುಗಳು ಬಂದು ಸೇರುತ್ತವೆ. ಇಲ್ಲಿನ ಜಾತ್ರಾ ಮಹೋತ್ಸವಕ್ಕೆ ಸೇರುವ ಜನರು ಇಲ್ಲಿ ದೇವಿಯ ಜೊತೆಗೆ ಚೇಳಿನ ಮೂರ್ತಿಗಳ ದರ್ಶನ ಪಡೆದು ಸುತ್ತಮುತ್ತಲಿನ ಗುಡ್ಡಗಳಲ್ಲಿ ಹೇರಳವಾಗಿ ಸಿಗುವ ಚೇಳುಗಳನ್ನು ಹಿಡಿದು ಮೈಮೇಲೆಲ್ಲಾ ಹಾಕಿ ಸಂಭ್ರಮಿಸುತ್ತಾರೆ. 


ಇದನ್ನೂ ಓದಿ- ಮನೆಯಲ್ಲಿ ಎಂತಹ ಬಡತನವೆ ಇರಲಿ, ಇವರನ್ನು ಆಗರ್ಭ ಶ್ರೀಮಂತರಾಗುವುದರಿಂದ ತಡೆಯೋಕಾಗಲ್ಲ!


ವಿಶೇಷವೆಂದರೆ, ಯುವಕರು, ಪುರುಷರು ಮಾತ್ರವಲ್ಲದೆ, ಹೆಣ್ಮಕ್ಕಳಿಗೂ, ಪುಟ್ಟ ಪುಟ್ಟ ಮಕ್ಕಳಿಗೂ ಕೂಡ ಚೇಳುಗಳೆಂದರೆ ಕಿಂಚಿತ್ತಾದರೂ, ಭಯವಾಗಲಿ, ಆತಂಕವಾಗಲಿ ಇಲ್ಲವೇ ಇಲ್ಲ. ಇಲ್ಲಿನ ಜನರ ಮತ್ತೊಂದು ನಂಬಿಕೆ ಎಂದರೆ, ನಾಗರ ಪಂಚಮಿಯಂದು ಇಲ್ಲಿ ಕಾಳಿಸಿಕೊಳ್ಳುವ ಚೇಳುಗಳು ಯಾರಿಗೂ ಕಚ್ಚುವುದಿಲ್ಲವಂತೆ. ಒಂದೊಮ್ಮೆ ಕಚ್ಚಿದರೂ ದೇವಿಯ ಭಂಡಾರ ಹಚ್ಚಿಕೊಂಡ್ರೆ ತಕ್ಷಣವೇ ಅದು ವಾಸಿಯಾಗುತ್ತದೆ ಎಂತಲೂ ಹೇಳಲಾಗುತ್ತವೆ.  


ಇನ್ನೂ ಈ ಚೇಳಿನ ಜಾತ್ರೆಯಲ್ಲಿ ಕರ್ನಾಟಕದ ಜನರು ಮಾತ್ರವಲ್ಲದೆ, ಅಕ್ಕಪಕ್ಕದ ರಾಜ್ಯಗಳಾದ ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರಗಳಿಂದಲೂ ಸಾವಿರಾರು ಭಕ್ತರು ಆಗಮಿಸುತ್ತಾರೆ ಎಂದು ವರದಿಯಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.