Vastu Tips: ಊಟ ಬಡಿಸುವಾಗ ಈ ಕೆಲಸ ಮಾಡಿದರೆ ಮನೆಯಲ್ಲಿ ಸದಾ ತುಂಬಿರುತ್ತ ಧನ-ಧಾನ್ಯ

Vastu Tips: ಜೀವನದಲ್ಲಿ ಯಾವುದಕ್ಕೂ ಕೊರತೆ ಇರದಂತೆ ಬದುಕಬೇಕು ಎಂಬುದು ಎಲ್ಲರ ಬಯಕೆ ಆಗಿರುತ್ತದೆ. ವಾಸ್ತು ಶಾಸ್ತ್ರದಲ್ಲೂ ಇದಕ್ಕೆ ಸಂಬಂಧಿಸಿದಂತೆ ಹಲವು ನಿಯಮಗಳನ್ನು ಹೇಳಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಊಟ ಬಡಿಸುವಾಗ ಕೆಲವು ವಿಷಯಗಳ ಬಗ್ಗೆ ವಿಶೇಷ ಗಮನ ಹರಿಸುವುದರಿಂದ ಅಂತಹ ಮನೆಯಲ್ಲಿ ಎಂದಿಗೂ ಕೂಡ ಧನ-ಧಾನ್ಯಗಳಿಗೆ ಕೊರತೆಯೇ ಇರುವುದಿಲ್ಲ ಎಂದು ಹೇಳಲಾಗುತ್ತದೆ. 

Written by - Yashaswini V | Last Updated : Aug 11, 2023, 03:28 PM IST
  • ಆಹಾರ ತಯಾರಿಸುವಾಗ ನಾವು ಎಲ್ಲಿ ಆಹಾರ ತಯಾರಿಸುತ್ತೇವೆ ಎಂಬುದರ ಬಗ್ಗೆ ವಿಶೇಷ ಗಮನ ಹರಿಸಬೇಕು.
  • ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಅಡುಗೆ ಮನೆ ಸದಾ ಆಗ್ನೇಯ ದಿಕ್ಕಿನಲ್ಲಿ ಇರಬೇಕು.
  • ಅಡುಗೆ ಮಾಡುವವರು ಪೂರ್ವ ದಿಕ್ಕಿಗೆ ಮುಖಮಾಡಿ ಆಹಾರ ತಯಾರಿಸಬೇಕು.
Vastu Tips: ಊಟ ಬಡಿಸುವಾಗ ಈ ಕೆಲಸ ಮಾಡಿದರೆ ಮನೆಯಲ್ಲಿ ಸದಾ ತುಂಬಿರುತ್ತ ಧನ-ಧಾನ್ಯ  title=

Vastu Tips: 'ಅನ್ನಂ ಪರಬ್ರಹ್ಮ ಸ್ವರೂಪಂ' ಅಂತ ಹೇಳ್ತಾರೆ. ಅನ್ನ ಎಂದರೆ ಆಹಾರಕ್ಕೆ ಬಹಳ ಪ್ರಾಮುಖ್ಯತೆ ಇದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಆಹಾರ ತಯಾರಿಸುವುದರಿಂದ ಹಿಡಿದು ಊಟ ಬಡಿಸುವವರೆಗೂ ಕೆಲವು ನಿಯಮಗಳನ್ನು ಪಾಲಿಸುವುದು ತುಂಬಾ ಮುಖ್ಯ. ಅದರಲ್ಲೂ ವಾಸ್ತು ಶಾಸ್ತ್ರದ ಪ್ರಕಾರ, ಊಟ ಬಡಿಸುವಾಗ ಕೆಲವು ವಿಷಯಗಳಿಗೆ ಪ್ರಾಮುಖ್ಯತೆ ನೀಡುವುದರಿಂದ ಅಂತಹ ಮನೆಯಲ್ಲಿ ಎಂದಿಗೂ ಕೂಡ ಸಿರಿ-ಸಂಪತ್ತಿಗೆ ಕೊರತೆಯೇ ಆಗುವುದಿಲ್ಲ ಎಂಬ ನಂಬಿಕೆ ಇದೆ. 

ಧರ್ಮ ಶಾಸ್ತ್ರಗಳ ಪ್ರಕಾರ, ಸಂಪತ್ತಿನ ದೇವತೆಯಾದ ತಾಯಿ ಮಹಾಲಕ್ಷ್ಮಿಯನ್ನು ಮೆಚ್ಚಿಸಲು ಹಾಗೂ ಮನೆಯಲ್ಲಿ ಲಕ್ಷ್ಮಿ ನೆಲೆಸುವಂತೆ ಮಾಡಲು ಅಡುಗೆ ಮಾಡುವಾಗ ಮತ್ತು ಊಟ ಬಡಿಸುವಾಗ ಕೆಲವು ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ ಎಂದು ಹೇಳಲಾಗುತ್ತದೆ. 

ಅಡುಗೆ ಮಾಡುವಾಗ ಮತ್ತು ಊಟ ಬಡಿಸುವಾಗ ಈ ಕೆಲಸ ಮಾಡಿದರೆ ಮನೆಯಲ್ಲಿ ಸದಾ ತುಂಬಿರುತ್ತ ಧನ-ಧಾನ್ಯ : 
* ಈ ದಿಕ್ಕಿನಲ್ಲಿರಲಿ ಅಡುಗೆಮನೆ:

ಮೊದಲೇ ತಿಳಿಸಿದಂತೆ ಆಹಾರ ತಯಾರಿಸುವಾಗ ನಾವು ಎಲ್ಲಿ ಆಹಾರ ತಯಾರಿಸುತ್ತೇವೆ ಎಂಬುದರ ಬಗ್ಗೆ ವಿಶೇಷ ಗಮನ ಹರಿಸಬೇಕು.  ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಅಡುಗೆ ಮನೆ ಸದಾ ಆಗ್ನೇಯ ದಿಕ್ಕಿನಲ್ಲಿ ಇರಬೇಕು. ಅಡುಗೆ ಮಾಡುವವರು ಪೂರ್ವ ದಿಕ್ಕಿಗೆ ಮುಖಮಾಡಿ ಆಹಾರ ತಯಾರಿಸಬೇಕು. ಇದರಿಂದ ಮನೆಯಲ್ಲಿ ಎಂದಿಗೂ ಯಾವುದಕ್ಕೂ ಕೊರತೆ ಆಗುವುದಿಲ್ಲ ಎಂಬ ನಂಬಿಕೆ ಇದೆ. 

ಇದನ್ನೂ ಓದಿ- Atro Tips: ಪ್ರತಿ ಶ್ರೀಮಂತ ವ್ಯಕ್ತಿಯ ಮನೆಯಲ್ಲಿರುತ್ತೆ ಈ ಫೋಟೋ.. ಪ್ರತಿ ಕೆಲಸದಲ್ಲಿ ಯಶಸ್ಸು, ಹಣದ ಸುರಿಮಳೆ ಗ್ಯಾರೆಂಟಿ!

* ರೊಟ್ಟಿ ಮಾಡುವಾಗ ಈ ತಪ್ಪನ್ನು ಮಾಡಬೇಡಿ: 
ನಮ್ಮಲ್ಲಿ ಕೆಲವು ಎಲ್ಲಾ ರೀತಿಯ ಹಿಟ್ಟುಗಳನ್ನು ಬಳಸಿ ರೊಟ್ಟಿ ಮಾಡುತ್ತಾರೆ. ಇದಲ್ಲದೆ, ಕೆಲವರು ಹಿಂದಿನ ದಿನ ತಯಾರಿಸಿದ ಆಹಾರದೊಂದಿಗೆ ಹಿಟ್ಟು ಬೆರೆಸಿ ರೊಟ್ಟಿ ಮಾಡುತ್ತಾರೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ, ಎಂದಿಗೂ ಕೂಡ ಬೆರೆಸಿದ ಹಿಟ್ಟಿನಿಂದಾಗಲಿ, ಇಲ್ಲವೇ ಹಿಂದಿನ ದಿನ ಮಿಕ್ಕ ಆಹಾರದೊಂದಿಗೆ ಹಿಟ್ಟು ಬೆರೆಸಿ ಆಹಾರ ತಯಾರಿಸಬಾರದು. ಹಿಂದಿನ ದಿನ ತಯಾರಿಸಿದ ಆಹಾರ/ ಹಳಸಿದ ರೊಟ್ಟಿ ಮತ್ತು ಹಿಟ್ಟು ರಾಹುವಿಗೆ ಸಂಬಂಧಿಸಿವೆ. ಇದರಿಂದ ಆಹಾರ ತಯಾರಿಸಿ ತಿನ್ನುವುದರಿಂದ ರೋಗಗಳಿಗೆ ಬಲಿಯಾಗಬಹುದು ಎಂದು ಹೇಳಲಾಗುತ್ತದೆ. 

* ಐಷಾರಾಮಿ ಜೀವನಕ್ಕಾಗಿ ಆಹಾರ ತಯಾರಿಸುವಾಗ ಈ ಕೆಲಸ ಮಾಡಿ: 
ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರ ಗ್ರಹವನ್ನು ಸಂಪತ್ತು, ಐಷಾರಾಮಿ ಜೀವನ, ವೈಭವ ಮತ್ತು ಐಶ್ವರ್ಯಕಾರಕ ಎಂದು ಹೇಳಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ನೀವು ಐಷಾರಾಮಿ ಜೀವನವನ್ನು ಬಯಸಿದರೆ ಚಪಾತಿ, ರೊಟ್ಟಿಯನ್ನು ತಯಾರಿಸುವಾಗ ಅದರಲ್ಲಿ ಸ್ವಲ್ಪ ತುಪ್ಪ ಮತ್ತು ಸಕ್ಕರೆಯನ್ನು ಬೆರೆಸಿ ಮಿಶ್ರಣ ಮಾಡಿ. ಇದರಿಂದ ನಿಮ್ಮ ಮೇಲೆ ಲಕ್ಷ್ಮಿ ಕೃಪೆ ಸದಾ ಇರಲಿದ್ದು ನೀವು ಅಪಾರ ಸಂಪತ್ತಿನ ಒಡೆಯರಾಗುತ್ತೀರಿ ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ- Vastu Tips: ಶ್ರಾವಣ ಮಾಸದಲ್ಲಿ ಈ ಸಸ್ಯಗಳನ್ನು ಮನೆಗೆ ತಂದರೆ ಸಿಗುತ್ತೆ ಸಿರಿವಂತರಾಗುವ ಭಾಗ್ಯ

* ಊಟ ಬಡಿಸುವಾಗ ಮೊದಲು ಈ ಕೆಲಸ ಮಾಡಿ: 
ಯಾವುದೇ ಸಮಯದಲ್ಲಾದರೂ ಆಹಾರ ತಯಾರಿಸಿದ ಬಳಿಕ ಮೊದಲು ನೀವು ತಯಾರಿಸಿರುವ ಆಹಾರವನ್ನು ಹಿಂದೂ ಧರ್ಮದಲ್ಲಿ ಕಾಮಧೇನು ಎಂದು ಪರಿಗಣಿಸಲ್ಪಟ್ಟಿರುವ ಹಸುವಿಗೆ ತಿನ್ನಿಸಿ. ಬಳಿಕ ಮನೆಯವರು ಊಟ ಮಾಡಿ. ಈ ರೀತಿ ಮಾಡುವುಯಾದರಿಂದ ಮುಕ್ಕೋಟಿ ದೇವ-ದೇವತೆಗಳ ಆಶೀರ್ವಾದ ನಿಮ್ಮ ಮನೆಯ ಮೇಲೆ ಸದಾ ಇರಲಿದೆ ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲ ಅಂತ ಮನೆಯಲ್ಲಿ ಧನ-ಧಾನ್ಯಕ್ಕಾಗಲಿ, ಸಿರಿ-ಸಂಪತ್ತಿಗಾಗಲಿ ಎಂದಿಗೂ ಕೊರತೆಯಾಗುವುದಿಲ್ಲ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News