Amruthaballi White Hair Tips: ಇಂದಿನ ಕೆಟ್ಟ ಆಹಾರ ಪದ್ಧತಿ ಮತ್ತು ಕೆಟ್ಟ ಜೀವನಶೈಲಿಯಿಂದಾಗಿ ಕೆಲವರ ಕೂದಲು ವಯಸ್ಸಿಗೆ ಮುನ್ನವೇ ಬೂದು ಬಣ್ಣಕ್ಕೆ ಅಂದರೆ ಬಿಳಿ ಬಣ್ಣಕ್ಕೆ ತಿರುಗುತ್ತದೆ. ಇದರಿಂದ ಮುಕ್ತಿ ಪಡೆಯಲು ಕೆಲವರು ತಮ್ಮ ಕೂದಲಿನ ಮೇಲೆ ವಿವಿಧ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 25 ಎಸೆತ, 23 ಸಿಕ್ಸ್, 163 ರನ್…! ವಿಶ್ವದಾಖಲೆ ಬರೆದೇಬಿಟ್ಟ 28ರ ಹರೆಯದ ಈ ಸ್ಟಾರ್ ಬ್ಯಾಟ್ಸ್’ಮನ್!


ಇವಷೇ ಅಲ್ಲದೆ, ಕೂದಲು ಬೇಗನೆ ಒಡೆಯಲು ಪ್ರಾರಂಭಿಸುತ್ತದೆ ಮತ್ತು ದುರ್ಬಲಗೊಳ್ಳುತ್ತದೆ. ಒಂದು ವೇಳೆ ಕೂದಲು ಬಿಳಿಯಾಗುವ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ತೊಡೆದುಹಾಕಲು ಬಯಸಿದರೆ, ನಿಮ್ಮ ಅಡುಗೆಮನೆಯಲ್ಲಿ ಇರುವ ಈ ವಸ್ತುಗಳು ನಿಮಗೆ ಪ್ರಯೋಜನಕಾರಿಯಾಗಬಲ್ಲವು. ಯಾವ ವಸ್ತುಗಳು ಕೂದಲಿಗೆ ಪ್ರಯೋಜನವನ್ನು ನೀಡುತ್ತವೆ ಎಂಬುದನ್ನು ತಿಳಿಯೋಣ.


1. ಅಮೃತಬಳ್ಳಿ: ಬಿಳಿ ಕೂದಲನ್ನು ತೊಡೆದುಹಾಕಲು ಬಯಸುವವರಿಗೆ, ಅಮೃತಬಳ್ಳಿ ಉತ್ತಮ ಆಯ್ಕೆಯಾಗಿದೆ. ಇದಕ್ಕಾಗಿ ಒಂದು ಬಟ್ಟಲು ಅಮೃತಬಳ್ಳಿಯ ಎಲೆಗಳನ್ನು ಅರೆದು ಕೂದಲಿಗೆ ಹಚ್ಚಿ ಒಂದು ಗಂಟೆಯಾದರೂ ಬಿಡಿ. ಇದು ನಿಮ್ಮ ಕೂದಲಿಗೆ ಅದ್ಭುತವಾದ ಬಣ್ಣವನ್ನು ನೀಡುತ್ತದೆ ಮತ್ತು ನಿಮ್ಮ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.


2. ನೆಲ್ಲಿಕಾಯಿ: ನೆಲ್ಲಿಕಾಯಿಯಿಂದ ತಯಾರಿಸಿದ ಹೇರ್ ಮಾಸ್ಕ್ ಅನ್ನು ನಿಮ್ಮ ಕೂದಲಿಗೆ ಆರೋಗ್ಯವನ್ನು ನೀಡುತ್ತದೆ. ಒಂದು ಬಟ್ಟಲಿನಲ್ಲಿ 2 ರಿಂದ 3 ನೆಲ್ಲಿಕಾಯಿನ್ನು ಪುಡಿಮಾಡಿಟ್ಟುಕೊಳ್ಳಿ. ಇದಕ್ಕೆ ಒಂದು ಚಮಚ ಬಾದಾಮಿ ಎಣ್ಣೆ ಮತ್ತು ಜೇನುತುಪ್ಪವನ್ನು ಬೆರೆಸಿ ಕೂದಲಿಗೆ ಹಚ್ಚಿ ಮತ್ತು ಅರ್ಧ ಘಂಟೆಯವರೆಗೆ ಬಿಡಿ. ಇದರ ನಂತರ ನಿಮ್ಮ ಕೂದಲನ್ನು ತೊಳೆಯಿರಿ. ಇದು ನಿಮ್ಮ ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ.


3. ಈರುಳ್ಳಿ: ಕೂದಲಿನ ಸಮಸ್ಯೆಯನ್ನು ಹೋಗಲಾಡಿಸಲು ಈರುಳ್ಳಿ ಕೂಡ ವರದಾನವಾಗಲಿದೆ. ಇದಕ್ಕಾಗಿ, ನೀವು ಎರಡು ಚಮಚ ಈರುಳ್ಳಿ ಮತ್ತು ನಿಂಬೆ ರಸವನ್ನು ಬೆರೆಸಿ ನಿಮ್ಮ ಕೂದಲಿಗೆ ಹಚ್ಚಿ ಮತ್ತು ಕನಿಷ್ಠ 30 ನಿಮಿಷಗಳ ನಂತರ ಕೂದಲನ್ನು ತೊಳೆಯಿರಿ. ಇದನ್ನು ವಾರಕ್ಕೆ 2-3 ಬಾರಿ ಹಚ್ಚಿದರೆ ಕೂದಲಿನ ಬೂದುಬಣ್ಣ ದೂರವಾಗುತ್ತದೆ.


4. ಕಪ್ಪು ಚಹಾ: ಕೂದಲಿನ ಸಮಸ್ಯೆಯನ್ನು ಹೋಗಲಾಡಿಸಲು ಬ್ಲ್ಯಾಕ್ ಟೀ ಕೂಡ ಉತ್ತಮ ಆಯ್ಕೆಯಾಗಿದೆ. ಇದಕ್ಕಾಗಿ, ಎರಡು ಲೋಟ ನೀರನ್ನು ಕುದಿಸಿ, ಅದರಲ್ಲಿ 3 ರಿಂದ 4 ಚಮಚ ಕಪ್ಪು ಚಹಾ ಮತ್ತು ಒಂದು ಚಮಚ ಉಪ್ಪನ್ನು ಸೇರಿಸಿ. ಇದೆಲ್ಲವನ್ನೂ ಕುದಿಸಿ, ಫಿಲ್ಟರ್ ಮಾಡಿ ಕೂದಲಿಗೆ ಹಚ್ಚಿ. ಬಳಿಕ 30 ನಿಮಿಷಗಳ ಕಾಲ ಬಿಡಿ, ನಂತರ ತೊಳೆಯಿರಿ. ಇದು ನಿಮ್ಮ ಕೂದಲು ಕಪ್ಪಾಗಿರುವಂತೆ ಮಾಡುತ್ತದೆ.


ಇದನ್ನೂ ಓದಿ: ವಿರಾಟ್ ಅಂದ್ರೆ ಇಷ್ಟನಾ? ಇಷ್ಟ ಇಲ್ವಾ?... ಗೌತಮ್ ಗಂಭೀರ್ ಕೊಟ್ಟ ಉತ್ತರ ಏನು ಗೊತ್ತಾ?


(ಸೂಚನೆ: ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ