New Year 2023 Remedies: ಈ ಬಾರಿ ಭಾನುವಾರದ ದಿನದಿಂದ ಹೊಸ ವರ್ಷ ಆರಂಭಗೊಳ್ಳುತ್ತಿದೆ. ಭಾನುವಾರ ಗ್ರಹಗಳ ರಾಜ ಎಂದೇ ಕರೆಯಲಾಗುವ ಸೂರ್ಯನಿಗೆ ಸಮರ್ಪಿತವಾಗಿದೆ. ಉದ್ಯೋಗ ಅಥವಾ ವ್ಯವಹಾರದಲ್ಲಿ ಪ್ರಗತಿ ನಿಂತುಹೋಗಿದ್ದರೆ, ವರ್ಷದ ಮೊದಲ ದಿನ, ಸೂರ್ಯನಿಗೆ ಅರ್ಘ್ಯ ಅರ್ಪಿಸಿದ ನಂತರ, ಬೆಲ್ಲ ಮತ್ತು ಅಕ್ಕಿಯನ್ನು ಬೆರೆಸಿ ನೀರಿನಲ್ಲಿ ಹರಿಬಿಡಿ. ಸೂರ್ಯದೇವನ ಕೃಪೆಯಿಂದ ವರ್ಷವಿಡೀ ಪ್ರಗತಿಯ ಹಾದಿ ಸುಗಮವಾಗುತ್ತದೆ.

COMMERCIAL BREAK
SCROLL TO CONTINUE READING

>> ಸರ್ವಾರ್ಥ ಸಿದ್ಧಿ ಯೋಗವು ವರ್ಷದ ಮೊದಲ ದಿನದಂದು ಅಂದರೆ ಜನವರಿ 1, 2023 ರಂದು 07:16 AM - 12.48 PM ಗೆ ರೂಪಗೊಳ್ಳುತ್ತಿದೆ. ಈ ಯೋಗದಲ್ಲಿ ಹೊಸ ಕೆಲಸವನ್ನು ಪ್ರಾರಂಭಿಸುವುದು ಖಂಡಿತವಾಗಿಯೂ ಅದರಲ್ಲಿ ಯಶಸ್ಸನ್ನು ನೀಡಲಿದೆ. ಈ ಯೋಗವು ಎಲ್ಲಾ ಇಷ್ಟಾರ್ಥ ಮತ್ತು ಆಸೆಗಳನ್ನು ನೆರವೇರಿಸುತ್ತದೆ ಎಂದು ಪರಿಗಣಿಸಲಾಗಿದೆ.

>> ಹೊಸ ವರ್ಷದಲ್ಲಿ ಶಿವಯೋಗವೂ ಕೂಡ ರೂಪುಗೊಳ್ಳುತ್ತಿದೆ, ಇದು 31 ಡಿಸೆಂಬರ್ 2022 ರಂದು ಬೆಳಗ್ಗೆ 8.20 ರಿಂದ 1 ಜನವರಿ 2023 ರ ಬೆಳಗ್ಗೆ 7.25 ರವರೆಗೆ ಇರಲಿದೆ. ಮಂತ್ರೋಚ್ಚಾರಣೆ, ಶಿವಯೋಗದಲ್ಲಿ ಮಾಡುವ ಪೂಜೆ ಅಕ್ಷಯ ಪುಣ್ಯವನ್ನು ನೀಡುತ್ತದೆ ಎಂಬುದು ಧಾರ್ಮಿಕ ನಂಬಿಕೆ. ವರ್ಷದ ಮೊದಲ ದಿನದಂದು 108 ಬಾರಿ ಓಂ ನಮಃ ಶಿವಾಯ ಪಠಣ ಮಾಡುವ ಮೂಲಕ ದಿನವನ್ನು ಪ್ರಾರಂಭಿಸಿ. ಸಂಪತ್ತಿನ ಹೆಚ್ಚಳಕ್ಕೆ ಈ ಪರಿಹಾರವು ಅತ್ಯಂತ ಲಾಭಕಾರಿಯಾಗಿದೆ.

>> ಶಾಸ್ತ್ರಗಳಲ್ಲಿ ಸಿದ್ಧ ಯೋಗವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಜನವರಿ 1, 2023 ರಂದು ಬೆಳಗೆ 07.25 ರಿಂದ 2023 ರ ಜನವರಿ 2 ರಂದು ಬೆಳಗ್ಗೆ 06.58 ರವರೆಗೆ ಸಿದ್ಧಯೋಗವಿದೆ.ಮನೆ, ವಾಹನ, ಚಿನ್ನ, ಬೆಳ್ಳಿ ಖರೀದಿಸಲು ಈ ಯೋಗ ತುಂಬಾ ಶುಭವಾಗಿದೆ. ಸಿದ್ಧ ಯೋಗದಲ್ಲಿ ಗಣಪತಿಗೆ ಹೆಸರುಬೇಳೆ ಲಡ್ಡೂಗಳನ್ನು ಅರ್ಪಿಸಿ. ಇದರಿಂದ ಸಾಧಕನಿಗೆ ವರ್ಷವಿಡೀ ಗಜಾನನನ ರಕ್ಷಣೆ ಪ್ರಾಪ್ತಿಯಾಗುತ್ತದೆ ಎಂಬುದು ಧಾರ್ಮಿಕ ನಂಬಿಕೆ.


ಇದನ್ನೂ ಓದಿ-Astro Tips: ದೀರ್ಘ ಸುಮಂಗಲಿಯರು ಈ ದಿನ ಕೂದಲುಗಳನ್ನು ತೊಳೆದರೆ ಅತ್ಯಂತ ಶುಭಕರ

>> ಜನವರಿ 1, 2023 ರಂದು ತಾಮ್ರದ ಪಾತ್ರೆಯನ್ನು ದಾನ ಮಾಡಿ. ಇದು ಜಾತಕದಲ್ಲಿ ಸೂರ್ಯನ ಸ್ಥಾನವನ್ನು ಬಲಪಡಿಸುತ್ತದೆ ಮತ್ತು ಜೀವನದಲ್ಲಿ ಗೌರವವನ್ನು ಹೆಚ್ಚಿಸುತ್ತದೆ.


ಇದನ್ನೂ ಓದಿ-Gayatri Mantra: ಪ್ರತಿಯೊಂದು ಸಮಸ್ಯೆಗೆ ಈ ಮಂತ್ರದಲ್ಲದಲ್ಲಡಗಿದೆ ಪರಿಹಾರ, ಮಂತ್ರೋಚ್ಛಾರಣೆಯ ಸರಿಯಾದ ಸಮಯ ನಿಮಗೂ ತಿಳಿದಿರಲಿ

>> ವರ್ಷದ ಮೊದಲ ದಿನ ಹಿಟ್ಟಿನ ಸಣ್ಣ ಸಣ್ಣ ಉಂಡೆಗಳನ್ನು ತಯಾರಿಸಿ ಅವುಗಳನ್ನು ಮೀನುಗಳಿಗೆ ತಿನ್ನಲು ಕೊಡಿ. ಶಾಸ್ತ್ರಗಳ ಪ್ರಕಾರ, ಈ ರೀತಿ ಮಾಡುವುದರಿಂದ ಸಮೃದ್ಧಿ ಹೆಚ್ಚಾಗುತ್ತದೆ ಮತ್ತು ಎಲ್ಲಾ ತೊಂದರೆಗಳು ನಿವಾರಣೆಯಾಗುತ್ತವೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.