Tips for long hair : ಪುರುಷರಾಗಲಿ ಅಥವಾ ಮಹಿಳೆಯರಾಗಲಿ, ಕೂದಲಿನ ಮೇಲೆ ಎಲ್ಲರಿಗೂ ಒಂದು ರೀತಿಯ ಮೋಹ ಇದ್ದೇ ಇರುತ್ತದೆ. ಕೂದಲು ಉದುರಲು ಆರಂಭವಾದರೆ ಒಂದು ರೀತಿಯ ಆತಂಕ ಕಾಡಲು ಆರಂಭವಾಗುತ್ತದೆ. ಇತ್ತೀಚಿಗೆ ಯುವಕರು ಕೂದಲಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಈ ಸಮಸ್ಯೆಗಳ ಪರಿಹಾರಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ನಾನಾ ಬಗೆಯ  ಉತ್ಪನ್ನಗಳ ಮೊರೆ ಹೋಗುತ್ತಾರೆ. ಆದರೆ ಸಾಮಾನ್ಯವಾಗಿ ರಾಸಾಯನಿಕಗಳನ್ನು ಹೊಂದಿರುವ ಈ ಉತ್ಪನ್ನಗಳು ಕೂದಲಿಗೆ ಹಾನಿಯನ್ನುಂಟು ಮಾಡುವುದೇ ಹೆಚ್ಚು.  ಆದ್ದರಿಂದ ನಾವು ಕೂದಲಿನ ಸಮಸ್ಯೆ ಎದುರಾಗುತ್ತಿದ್ದಂತೆಯೇ ರಾಸಾಯನಿಕ ಪರಿಹಾರದ ಬದಲು ನೈಸರ್ಗಿಕ ವಸ್ತುಗಳನ್ನು ಬಳಸಲು ಪ್ರಯತ್ನಿಸಬೇಕು.  ಮನೆಯಲ್ಲಿಯ್ ಹೇರ್ ಮಾಸ್ಕ್ ಗಳನ್ನು ಬಳಸುವ ಮೂಲಕ ಕೂದಲಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. 


COMMERCIAL BREAK
SCROLL TO CONTINUE READING

ಈ ರೀತಿ ಹೇರ್ ಮಾಸ್ಕ್ ತಯಾರಿಸಿ : 
ಬೇಕಾಗುವ ಅಗತ್ಯ ಪದಾರ್ಥಗಳು
- 1 ಲೀಟರ್ ನೀರು
- 1 ಸಣ್ಣ ಬೌಲ್ ಅಗಸೆ ಬೀಜಗಳು
- 1 ಬೌಲ್ ತುರಿದ ಬೀಟ್ರೂಟ್


ಇದನ್ನೂ ಓದಿ : Weight Loss Tips: ಕೆಲವೇ ದಿನಗಳಲ್ಲಿ ಹೊಟ್ಟೆ ಭಾಗದ ಕೊಬ್ಬು ಕರಗಿಸಲು ಬೆಳಗ್ಗೆ ಖಾಲಿ ಹೊಟ್ಟೆ ಈ ಪಾನೀಯ ಸೇವಿಸಿ!


ಹೇರ್ ಮಾಸ್ಕ್ ಮಾಡುವುದು ಹೇಗೆ ? : 
- ಮೊದಲನೆಯದಾಗಿ, ಪ್ಯಾನ್ ತೆಗೆದುಕೊಂಡು ಅದನ್ನು ಕಡಿಮೆ ಉರಿಯಲ್ಲಿ ಒಲೆಯ ಮೇಲೆ ಇರಿಸಿ.
-ಈಗ ಬಾಣಲೆಯಲ್ಲಿ ನೀರು ಹಾಕಿ ನಂತರ ಅಗಸೆ ಬೀಜಗಳು ಮತ್ತು ಬೀಟ್ರೂಟ್ ಸೇರಿಸಿ.
- ಈಗ ಅದನ್ನು ಚೆನ್ನಾಗಿ ಕುದಿಯಲು ಬಿಡಿ, ನೀರಿನ ಬಣ್ಣವು ಕೆಂಪು ಬಣ್ಣಕ್ಕೆ ತಿರುಗುವವರೆಗೂ ಕುದಿಸಿ.  
 ನಂತರ ಈ ನೀರನ್ನು ಫಿಲ್ಟರ್ ಮಾಡಿ.
- ಉಳಿದ ಮಿಶ್ರಣವನ್ನು ಚೆನ್ನಾಗಿ ಅರೆದು ಪೇಸ್ಟ್ ಮಾಡಿ ಕೂದಲಿಗೆ ಹಚ್ಚಿ. 
- ಸುಮಾರು 20 ನಿಮಿಷಗಳ ಕಾಲ ಅದನ್ನು ಕೂದಲಿನ ಮೇಲೆ ಬಿಟ್ಟು ನಂತರ, ಕೂದಲನ್ನು ತೊಳೆಯಿರಿ.
- ವಾರದಲ್ಲಿ 3 ದಿನ ಈ ರೀತಿ ಮಾಡುತ್ತಾ ಬರಬೇಕು.


ಹೇರ್ ಮಾಸ್ಕ್ ನ ಪ್ರಯೋಜನಗಳು :
ಕೂದಲು ಉದುರುತ್ತಾ ಹೋಗಿ, ಕೂದಲು ಉದುರಿದ ಜಾಗದಲ್ಲಿ ಮತ್ತೆ ಬೆಳೆದಿಲ್ಲ ಎಂದಾದರೆ ಅದು ಸಮಸ್ಯೆಯಾಗಿ ಪರಿಣಮಿಸುತ್ತದೆ. ಆದರೆ, ಹೇರ್ ಮಾಸ್ಕ್ ಗಳನ್ನು ಉಪಯೋಗಿಸಿ ಕೂದಲು ಉದುರುವುದನ್ನು ತಡೆಯಬಹುದು. 


ಇದನ್ನೂ ಓದಿ : ನೀವು ಫೇಸಿಯಲ್ ಮಾಡಬೇಕು ಅಂದ್ರೆ ಹೀಗೆ ಮಾಡಿ..!


- ಹೇರ್ ಮಾಸ್ಕ್ ಕೂದಲಿಗೆ ಅಗತ್ಯವಾದ ಪೋಷಣೆಯನ್ನು ಒದಗಿಸುತ್ತದೆ. ಇದು  ಕೂದಲನ್ನು ದಪ್ಪವಾಗಿಸಲು ಸಹಾಯ ಮಾಡುತ್ತದೆ.
- ಹೇರ್ ಮಾಸ್ಕ್ ಕೂದಲಿನ ಮೇಲೆ ಸುರಕ್ಷತಾ ಪದರವಾಗಿ ಕಾರ್ಯನಿರ್ವಹಿಸುತ್ತದೆ.  ಇದು ಮಾಲಿನ್ಯದಿಂದ ಕೂದಲನ್ನು ರಕ್ಷಿಸುತ್ತದೆ.
- ನಿಮ್ಮ ಕೂದಲು ಶುಷ್ಕ ಮತ್ತು ಫ್ರೀಜ್ ಆಗಿದ್ದರೆ ಹೇರ್ ಮಾಸ್ಕ್ ನಿಮ್ಮ ಕೂದಲಿಗೆ ಹೊಳಪನ್ನು ನೀಡಲು ಸಹಾಯ ಮಾಡುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.