Sweet Potato: ಆರೋಗ್ಯದ ನಿಧಿ ಸಿಹಿಗೆಣಸು ತಿನ್ನುವುದರಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ

Sweet Potato: ಪೋಷಕಾಂಶಗಳಿಂದ ಸಮೃದ್ಧವಾಗಿರುವ ಸಿಹಿಗೆಣಸು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ ಎಂದು ಹೇಳಲಾಗುತ್ತದೆ. ಸಿಹಿಗೆಣಸು ತಿನ್ನುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳು ಲಭ್ಯವಿವೆ ಎಂದು ತಿಳಿಯೋಣ... 

Written by - Yashaswini V | Last Updated : Jan 22, 2024, 02:31 PM IST
  • ಸಿಹಿಗೆಣಸಿನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ನಂತಹ ಹಲವು ಪೋಷಕಾಂಶಗಳಿವೆ.
  • ಸಿಹಿ ಗೆಣಸಿನಲ್ಲಿ ಫೈಬರ್ ಹೇರಳವಾಗಿ ಕಂಡು ಬರುತ್ತದೆ.
  • ಸಿಹಿ ಗೆಣಸಿನಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ.
Sweet Potato: ಆರೋಗ್ಯದ ನಿಧಿ ಸಿಹಿಗೆಣಸು ತಿನ್ನುವುದರಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ  title=

Sweet Potato Benefits: ಸಿಹಿಗೆಣಸಿನ ಹೆಸರು ಕೇಳಿದರೆ ಸಾಕು ನಮ್ಮಲ್ಲಿ ಹಲವರ ಬಾಯಲ್ಲಿ ನೀರೂರುತ್ತದೆ. ತಿನ್ನಲು ಬಲು ರುಚಿಕರವಾದ ಸಿಹಿಗೆಣಸು ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಸಿಹಿಗೆಣಸು ತಿನ್ನುವುದರಿಂದ ಆರೋಗ್ಯಕ್ಕೆ ಸಿಗುವ ಪ್ರಮುಖ ಪ್ರಯೋಜನಗಳು ಯಾವುವು ಎಂದು ತಿಳಿಯೋಣ... 

ಪೋಷಕಾಂಶಗಳ ಗಣಿ ಸಿಹಿಗೆಣಸು: 
ಸಿಹಿಗೆಣಸಿನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಪೊಟ್ಯಾಶಿಯಂ ಮತ್ತು ಫೈಬರ್ ನಂತಹ ಹಲವು ಪೋಷಕಾಂಶಗಳಿವೆ. 

ಸಿಹಿಗೆಣಸು ಸೇವನೆಯಿಂದ ಸಿಗುವ ಅದ್ಭುತ ಆರೋಗ್ಯ ಪ್ರಯೋಜನಗಳೆಂದರೆ:- 
ರೋಗ ನಿರೋಧಕ ಶಕ್ತಿ: 

ಸಿಹಿಗೆಣಸು ತಿನ್ನುವುದರಿಂದ ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ನಾವು ಋತುಮಾನದ ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯಬಹುದು. 

ಇದನ್ನೂ ಓದಿ- ಸೀಬೆಹಣ್ಣು ತಿಂದ ನಂತರ ಯಾವುದೇ ಕಾರಣಕ್ಕೂ ಈ 5 ಆಹಾರಗಳನ್ನು ತಿನ್ನಲೇಬಾರದು

ಆರೋಗ್ಯಕರ ಜೀರ್ಣಕ್ರಿಯೆ: 
ಸಿಹಿ ಗೆಣಸಿನಲ್ಲಿ ಫೈಬರ್ ಹೇರಳವಾಗಿ ಕಂಡು ಬರುತ್ತದೆ. ಹಾಗಾಗಿ ಸಿಹಿಗೆಣಸಿನ ಸೇವನೆಯು  ಕರುಳಿನ ಚಲನೆಯನ್ನು ನಿಯಂತ್ರಿಸಲು ಪ್ರಯೋಜನಕಾರಿಯಾಗಿದ್ದು ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. 

ಹೃದಯದ ಆರೋಗ್ಯ: 
ಸಿಹಿ ಗೆಣಸಿನಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದ್ದು, ಇದು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ. ಹಾಗಾಗಿ, ಸಿಹಿಗೆಣಸಿನ ನಿಯಮಿತ ಸೇವನೆಯು ಹೃದಯವನ್ನು ಆರೋಗ್ಯವಾಗಿರಿಸುವಲ್ಲಿಯೂ ಪ್ರಮುಖ ಪಾತ್ರವಹಿಸುತ್ತದೆ. 

ಇದನ್ನೂ ಓದಿ- Weight Loss Magical Water: ಖಾಲಿ ಹೊಟ್ಟೆ ಒಂದು ಗ್ಲಾಸ್ ಈ ನೀರನ್ನು ಸೇವಿಸಿ, ಕೆಲವೇ ದಿನಗಳಲ್ಲಿ ತೂಕ ಇಳಿಕೆ ಗ್ಯಾರಂಟಿ!

ತೂಕ ಇಳಿಕೆ: 
ಸಿಹಿಗೆಣಸು ರುಚಿಯಾಗಿದ್ದಾರೋ ಕೂಡ ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಫೈಬರ್ ಯುಕ್ತ ಆಹಾರವಾಗಿದೆ. ಇದನ್ನು ತಿನ್ನುವುದರಿಂದ ದೀರ್ಘಕಾಲದವರೆಗೆ ಹೊಟ್ಟೆ ತುಂಬಿಸುತ್ತದೆ. ಹಾಗಾಗಿ, ಇದನ್ನು ತಿನ್ನುವುದರಿಂದ ಆರೋಗ್ಯಕರವಾಗಿ ತೂಕ ನಿಯಂತ್ರಿಸಬಹುದು ಎಂದು ಹೇಳಲಾಗುತ್ತದೆ. 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News