ಬೆಂಗಳೂರು : ಮೆಂತ್ಯೆ ಬೀಜಗಳು ಸಾಮಾನ್ಯವಾಗಿ ಎಲ್ಲರ ಅಡುಗೆ ಮನೆಯಲ್ಲಿಯೂ ಕಂಡು ಬರುತ್ತದೆ. ಮೆಂತ್ಯೆ ಔಷಧೀಯ ಗುಣವಿರುವ ಬೀಜ. ಇದು ಕೆಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಮಾತ್ರವಲ್ಲ, ತ್ವಚೆ ಮತ್ತು ಕೂದಲಿನ ಆರೋಗ್ಯಕ್ಕೂ ಬೆಸ್ಟ್ ಮನೆ ಮದ್ದು. ಈ ಮೆಂತ್ಯೆ ಬೀಜ ಫೋಲಿಕ್ ಆಸಿಡ್, ವಿಟಮಿನ್ ಎ, ಸಿ ಮತ್ತು ಕೆ, ಪೊಟ್ಯಾಸಿಯಮ್, ಕಬ್ಬಿಣ, ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಲ್ಲಿ ಸಮೃದ್ಧವಾಗಿದೆ. ಇದು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಕೂದಲನ್ನು ಬುಡದಿಂದ ಬಲಗೊಳಿಸಿ ಉದುರುವಿಕೆಯನ್ನು ತಡೆಯುತ್ತದೆ. 


COMMERCIAL BREAK
SCROLL TO CONTINUE READING

ಮೆಂತ್ಯೆ ಬೀಜಗಳನ್ನು ಕೂದಲಿಗೆ ಹಚ್ಚುವುದು ಹೇಗೆ ? : 
ತಲೆಹೊಟ್ಟು ಹೋಗಲಾಡಿಸಲು, ಕೂದಲು ಉದುರುವಿಕೆಯನ್ನು ತಡೆಯಲು, ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು, ಉದ್ದನೆಯ ದಪ್ಪ ಮತ್ತು ಹೊಳೆಯುವ ಕೂದಲಿಗಾಗಿ ಮೆಂತ್ಯೆ ಬೀಜಗಳನ್ನು ಬಳಸಬಹುದು. ಮೆಂತ್ಯೆ ಬೀಜಗಳು ಆಂಟಿ-ಆಕ್ಸಿಡೆಂಟ್ ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಕೂದಲಿಗೆ ಹಲವಾರು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. 


ಇದನ್ನೂ ಓದಿ: ಈ ಜ್ಯೂಸ್ ನಿಂದ ದಿನ ಆರಂಭಿಸಿ ! ಅಧಿಕ ರಕ್ತದೊತ್ತಡ ಸಮಸ್ಯೆಗೆ ಇದು ದಿವೌಷಧ


ಮೆಂತ್ಯೆ ಎಣ್ಣೆ : ತೆಳ್ಳನೆಯ ಕೂದಲಿಗೆ ಮೆಂತ್ಯೆ ಬೀಜಗಳನ್ನು  ಹಚ್ಚಲು ಅರ್ಧ ಕಪ್ ತೆಂಗಿನ ಎಣ್ಣೆಯಲ್ಲಿ 2 ಚಮಚ ಮೆಂತ್ಯೆ ಬೀಜಗಳನ್ನು ಹಾಕಿ ಚೆನ್ನಾಗಿ ಕುದಿಸಿ. ಇದು ತಣ್ಣಗಾಗುವವರೆಗೆ ಹಾಗೆಯೇ ಬಿಡಿ. ತಣ್ಣಗಾದ ಮೇಲೆ ತಯಾರಿಸಿದ ಮೆಂತ್ಯೆ ಎಣ್ಣೆಯನ್ನು ಕೂದಲಿನ ಬುಡದಿಂದ ತುದಿಯವರೆಗೆ ಹಚ್ಚಿ. ಇದರಿಂದ ಕೂದಲು ಉದ್ದ ಮತ್ತು ದಪ್ಪನೆ ಬೆಳೆಯುತ್ತದೆ.


ಮೆಂತ್ಯೆ ಪೇಸ್ಟ್ :  ಕೂದಲು ಉದುರುವ ಸಮಸ್ಯೆಯನ್ನು ಎದುರಿಸುತ್ತಿದ್ದರೆ, 2 ಚಮಚ ಮೆಂತ್ಯೆ ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಮರುದಿನ ಬೆಳಿಗ್ಗೆ, ನೆನೆಸಿಟ್ಟ ಮೆಂತ್ಯೆ ಬೀಜಗಳನ್ನು ಮಿಕ್ಸಿಯಲ್ಲಿ ಪೇಸ್ಟ್ ಮಾಡಿ.  ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ ಅರ್ಧ ಘಂಟೆಯ ನಂತರ ಸ್ನಾನ ಮಾಡಿ. ವಾರಕ್ಕೆ ಎರಡು ಬಾರಿ ಈ ವಿಧಾನವನ್ನು ಪುನಾರಾವರ್ತಿಸಿ. 


ಇದನ್ನೂ ಓದಿ: ದುಂಡಗಿರುವ ಹೊಟ್ಟೆ ಚಪ್ಪಟೆಯಾಗಬೇಕಾದರೆ ಈ ನಾಲ್ಕು ವಸ್ತುಗಳನ್ನು ಸೇವಿಸಿ ಸಾಕು !


ಮೆಂತ್ಯೆ ಹೇರ್ ಮಾಸ್ಕ್ : ಮೆಂತ್ಯೆ ಬೀಜಗಳು ಒಣ ಕೂದಲನ್ನು ಮೃದುಗೊಳಿಸುವಲ್ಲಿ ಪರಿಣಾಮಕಾರಿಯಾಗಿದೆ. ಇದಕ್ಕಾಗಿ, ಒಂದು ಬಟ್ಟಲಿನಲ್ಲಿ 2 ಚಮಚ ಮೊಸರು ತೆಗೆದುಕೊಂಡು ಮೊಸರಿಗೆ ಒಂದು ಚಮಚ ಮೆಂತ್ಯೆ ಪುಡಿಯನ್ನು ಸೇರಿಸಿ. ಈ ಮಿಶ್ರಣಕ್ಕೆ ಒಂದು ಚಮಚ ತೆಂಗಿನೆಣ್ಣೆಯನ್ನೂ ಸೇರಿಸಿ. ಈ ಹೇರ್ ಮಾಸ್ಕ್ ಅನ್ನು  ಕೂದಲಿಗೆ ಹಚ್ಚಿ ಅರ್ಧ ಗಂಟೆಯ  ಸಣ್ಣ ಮಾಡಿ. 


ಮೆಂತ್ಯೆ ಮತ್ತು ನಿಂಬೆ ರಸ : ಮೆಂತ್ಯೆಪುಡಿಯನ್ನು ನಿಂಬೆ ರಸದೊಂದಿಗೆ  ಬೆರೆಸಿ ಈ ಮಿಶ್ರಣವನ್ನು ಕೂದಲಿಗೆ  ಹಚ್ಚಿ. 20 ರಿಂದ 25 ನಿಮಿಷಗಳ   ನಂತರ ಕೂದಲನ್ನು ತೊಳೆಯಿರಿ. ಈ ಹೇರ್ ಮಾಸ್ಕ್‌ನೊಂದಿಗೆ, ತಲೆಹೊಟ್ಟು ನಿವಾರಣೆಯಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.