ಯಾವ ವ್ಯಾಯಾಮವೂ ಬೇಡ ! ಪೇರಳೆ ಹಣ್ಣನ್ನು ಹೀಗೆ ತಿಂದರೆ ಕೆಲವೇ ದಿನಗಳಲ್ಲಿ ತೂಕ ಕಳೆದು ಕೊಳ್ಳುವುದು ಗ್ಯಾರಂಟಿ

ಹಲವು ನೈಸರ್ಗಿಕ ಮತ್ತು ಸರಳವಾದ ಮಾರ್ಗಗಳ ಮೂಲಕವೂ ತೂಕ ಇಳಿಸಿಕೊಳ್ಳಬಹುದು. ಪೇರಳೆ ಹಣ್ಣನ್ನು ತಿನ್ನುವುದರಿಂದ ತೂಕವನ್ನು ಕಳೆದುಕೊಳ್ಳಬಹುದು. ಆದರೆ ಇದಕ್ಕಾಗಿ ಪೇರಳೆಯನ್ನು  ಸರಿಯಾದ ವಿಧಾನದಲ್ಲಿ ಸೇವಿಸುವುದು ಅವಶ್ಯಕವಾಗಿದೆ. 

Written by - Ranjitha R K | Last Updated : Sep 27, 2023, 02:46 PM IST
  • ಬೊಜ್ಜು ಇತ್ತೀಚಿನ ದಿನಗಳಲ್ಲಿ ತುಂಬಾ ಸಾಮಾನ್ಯ ಸಮಸ್ಯೆಯಾಗಿದೆ.
  • ತೂಕ ಇಳಿಸಲು ಪೇರಳೆ ಹಣ್ಣು
  • ಬಳಸುವ ವಿಧಾನ ಹೀಗಿರಲಿ
ಯಾವ ವ್ಯಾಯಾಮವೂ ಬೇಡ ! ಪೇರಳೆ ಹಣ್ಣನ್ನು ಹೀಗೆ ತಿಂದರೆ ಕೆಲವೇ ದಿನಗಳಲ್ಲಿ ತೂಕ ಕಳೆದು ಕೊಳ್ಳುವುದು ಗ್ಯಾರಂಟಿ title=

ಬೆಂಗಳೂರು : ಬೊಜ್ಜು ಇತ್ತೀಚಿನ ದಿನಗಳಲ್ಲಿ ತುಂಬಾ ಸಾಮಾನ್ಯ ಸಮಸ್ಯೆಯಾಗಿದೆ. ತಪ್ಪು ಆಹಾರ ಪದ್ಧತಿ, ವ್ಯಾಯಾಮದ ಕೊರತೆ, ಒತ್ತಡ ಇತ್ಯಾದಿಗಳಿಂದ ಹೆಚ್ಚಿನ ಜನರು ಸ್ಥೂಲಕಾಯತೆ ಸಮಸ್ಯೆಯನ್ನು  ಎದುರಿಸುತ್ತಿದ್ದಾರೆ. ಬೊಜ್ಜು ಅಥವಾ ಹೆಚ್ಚಿದ ತೂಕವು ವ್ಯಕ್ತಿಯ ಸಂಪೂರ್ಣ ವ್ಯಕ್ತಿತ್ವವನ್ನೇ ಕೆಡಿಸಿ ಬಿಡುತ್ತದೆ. ಅನೇಕ ಜನರು ತೂಕ ಇಳಿಸಿಕೊಳ್ಳಲು ಬೇರೆ ಬೇರೆ ವಿಧಾನಗಳನ್ನು ಪ್ರಯತ್ನಿಸುತ್ತಿರುತ್ತಾರೆ. ಹಲವು ನೈಸರ್ಗಿಕ ಮತ್ತು ಸರಳವಾದ ಮಾರ್ಗಗಳ ಮೂಲಕವೂ ತೂಕ ಇಳಿಸಿಕೊಳ್ಳಬಹುದು. 

ತೂಕ ಇಳಿಸಲು ಪೇರಳೆ ಹಣ್ಣು :  ಪೇರಳೆ ಅನೇಕ ಜನರು ಇಷ್ಟಪಡುವ  ಹಣ್ಣು. ಈ ಹಣ್ಣು ವರ್ಷವಿಡೀ ಲಭ್ಯವಿದ್ದರೂ, ಅದರ ನಿಜವಾದ  ರುಚಿ ತಿಳಿಯುವುದು ಚಳಿಗಾಲದಲ್ಲಿ. ಸುಲಭವಾಗಿ ಸಿಗುವ ಈ ಹಣ್ಣಿನಿಂದ ತರಕಾರಿ, ಚಟ್ನಿ ಮತ್ತು ಸಲಾಡ್ ಮುಂತಾದವುಗಳನ್ನು ತಯಾರಿಸಬಹುದು. ಪೇರಳೆ ಹಣ್ಣನ್ನು ತಿನ್ನುವುದರಿಂದ ವಾಕರಿಕೆಯಿಂದ ಹಿಡಿದು ಜೀರ್ಣಕಾರಿ ಸಮಸ್ಯೆಗಳವರೆಗೆ ಎಲ್ಲದ್ದಕ್ಕೂ ಪರಿಹಾರ ಸಿಗುತ್ತದೆ.  

ಇದನ್ನೂ ಓದಿ : ಕೂದಲಿಗೆ ಹೆನ್ನಾ ಹಚ್ಚುವಾಗ ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ!!

ತೂಕ ಇಳಿಕೆಯಲ್ಲಿ ಸಹಕಾರಿ : 
ಪೇರಳೆ ಹಣ್ಣನ್ನು ಕೇವಲ ರುಚಿಗಾಗಿ ಮಾತ್ರ ಸೇವಿಸುವುದಲ್ಲ. ಈ ಹಣ್ಣು ಅನೇಕ ಔಷಧೀಯ ಗುಣಗಳನ್ನು ಕೂಡಾ ಹೊಂದಿದೆ. ಇದನ್ನು  ತಿನ್ನುವುದರಿಂದ ತೂಕವನ್ನು ಕಳೆದುಕೊಳ್ಳಬಹುದು.  ಹೌದು, ಪೇರಳೆಯಲ್ಲಿರುವ ಕೆಲವು ಅಂಶಗಳು ತೂಕ ಇಳಿಕೆಯಲ್ಲೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಆದರೆ ಇದಕ್ಕಾಗಿ ಪೇರಳೆಯನ್ನು  ಸರಿಯಾದ ವಿಧಾನದಲ್ಲಿ ಸೇವಿಸುವುದು ಅವಶ್ಯಕವಾಗಿದೆ. 

ತೂಕ ನಷ್ಟಕ್ಕೆ ಪೇರಳೆ ಹೇಗೆ ಸಹಾಯ ಮಾಡುತ್ತದೆ? : 
ಪೇರಳೆ  ಹಣ್ಣಿನಲ್ಲಿ ಕ್ಯಾಲೋರಿಗಳು ತುಂಬಾ ಕಡಿಮೆಯಿರುವುದರಿಂದ, ಇದನ್ನು ಸೇವಿಸುವುದರಿಂದ ಹೆಚ್ಚಿನ ಕ್ಯಾಲೊರಿಗಳು ನಮ್ಮ ದೇಹ ಸೇರುವುದಿಲ್ಲ. ಒಂದು ಪೇರಳೆ  ಕೇವಲ 37 ರಿಂದ 55 ಕ್ಯಾಲೋರಿಗಳನ್ನು ಹೊಂದಿರುತ್ತದೆ. ಇದಲ್ಲದೆ, ಪೇರಳೆಯನ್ನು ಸೇವಿಸಿದ ನಂತರ ವ್ಯಕ್ತಿಗೆ ಹೆಚ್ಚು ಸಮಯದವರೆಗೆ ಹಸಿವಾಗುವುದಿಲ್ಲ. 

ಫೈಬರ್ ಅಂಶ ಹೆಚ್ಚಾಗಿರುತ್ತದೆ : 
ಪೇರಳೆ ಫೈಬರ್ ಮತ್ತು ಪ್ರೊಟೀನ್‌ನಲ್ಲಿ ಸಮೃದ್ಧವಾಗಿದೆ. ಈ ಕಾರಣದಿಂದಾಗಿ ಸಂಪೂರ್ಣವಾಗಿ ಜೀರ್ಣಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ, ಇದನ್ನು ಸೇವಿಸಿದ ವ್ಯಕ್ತಿಗೆ ಬೇಗನೆ ಹಸಿವಾಗುವುದಿಲ್ಲ. ಹಾಗಾಗಿ ಅನಗತ್ಯವಾದ ಅನಾರೋಗ್ಯಕರ ಆಹಾರವನ್ನು ಸೇವಿಸುವುದನ್ನು ತಡೆಯುತ್ತದೆ. ಹೆಚ್ಚಿನ ಫೈಬರ್ ಅಂಶದಿಂದಾಗಿ, ಇದು ದೇಹದ ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ .

ಇದನ್ನೂ ಓದಿ : ಮನೆಯ ಮುಂದೆ ಈ ಗಿಡಗಳನ್ನು ನೆಟ್ಟರೆ ಸೊಳ್ಳೆಗಳು ಹತ್ತಿರವೂ ಸುಳಿಯದು !

ತೂಕ ನಷ್ಟಕ್ಕೆ ಪೇರಳೆಯನ್ನು  ಹೇಗೆ ತಿನ್ನಬೇಕು? :
ಪೇರಳೆಯನ್ನು ಅದರ ಸಿಪ್ಪೆ ಸಮೇತ ತಿನ್ನಬೇಕು. ಏಕೆಂದರೆ ಜೀರ್ಣಕ್ರಿಯೆಗೆ ಬೇಕಾದ ಅಗತ್ಯ ಗುಣಗಳು ಇದರ  ಸಿಪ್ಪೆಯಲ್ಲಿ ಕಂಡುಬರುತ್ತವೆ. ನಿಮ್ಮ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುವ ಕೆಲವು ಪಾಕವಿಧಾನಗಳು ಇಲ್ಲಿವೆ.

ಪೇರಳೆ  ಸ್ಮೂಥಿ :
ಪೇರಳೆ  ಸ್ಮೂಥಿಯನ್ನು ಕುಡಿಯುವುದರಿಂದ ದೀರ್ಘಕಾಲ ಹಸಿವಾಗದಂತೆ ಮಾಡುತ್ತದೆ. ಇದಕ್ಕಾಗಿ ಮಿಕ್ಸಿಂಗ್ ಜಾರ್‌ನಲ್ಲಿ 2 ಪೇರಳೆ ಮತ್ತು 4 ಸ್ಟ್ರಾಬೆರಿಗಳನ್ನು ಮಿಕ್ಸಿ ಜಾರ್ ಗೆ ಹಾಕಿ. ಇದಕ್ಕೆ 2 ಚಮಚ ಜೇನುತುಪ್ಪ ಮತ್ತು 1 ಕಪ್ ಹಾಲು ಸೇರಿಸಿ ರುಬ್ಬಿಕೊಳ್ಳಿ. ಈಗ ರುಚಿಯಾದ ಪೇರಳೆ ಸ್ಮೂಥಿ  ಸವಿಯಿರಿ. 

ಪೇರಳೆ ಮತ್ತು ಪುದೀನ ರಸ : 
ಪೇರಳೆ ಮತ್ತು ಪುದೀನಾ ರಸವನ್ನು ತಯಾರಿಸಲು, 2 ಪೇರಳೆ, ಅರ್ಧ ಸೌತೆಕಾಯಿ, ಕೆಲವು ಪುದೀನ ಎಲೆಗಳು, 2 ಟೀಸ್ಪೂನ್ ನಿಂಬೆ ರಸ ಮತ್ತು  ಬ್ಲಾಕ್ ಸಾಲ್ಟ್ ಅನ್ನು ಮಿಕ್ಸಿಂಗ್ ಜಾರ್‌ನಲ್ಲಿ ಸೇರಿಸಿ. ಎಲ್ಲವನ್ನೂ ಒಟ್ಟಿಗೆ ಪುಡಿಮಾಡಿ ಒಂದು ಲೋಟ ನೀರು ಸೇರಿಸಿ ಜ್ಯೂಸ್ ತಯಾರಿಸಿ ಕುಡಿಯಿರಿ. 

ಇದನ್ನೂ ಓದಿ : ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಇದು ಅತ್ಯುತ್ತಮ ಹೇರ್ ಆಯಿಲ್!

ಪೇರಳೆ  ಚಟ್ನಿ :
ಪೇರಳೆ ಚಟ್ನಿ ತಯಾರಿಸಲು, 250 ಗ್ರಾಂ ಪೇರಳೆಯನ್ನು  ನುಣ್ಣಗೆ ಕತ್ತರಿಸಿ. ಈಗ 1 ಚಮಚ ನಿಂಬೆ ರಸ, ಸ್ವಲ್ಪ ಕೊತ್ತಂಬರಿ ಸೊಪ್ಪು, 2 ಹಸಿರು ಮೆಣಸಿನಕಾಯಿ ಮತ್ತು ರುಚಿಗೆ ಉಪ್ಪು ಸೇರಿಸಿ. ಇದಕ್ಕೆ ಸ್ವಲ್ಪ ನೀರು ಸೇರಿಸಿ ರುಬ್ಬಿಕೊಳ್ಳಿ. ಚಟ್ನಿ ಬಡಿಸಲು ಸಿದ್ಧವಾಗಿದೆ. 

ಈ ಪಾಕವಿಧಾನಗಳ ಪ್ರಕಾರ ಪೇರಳೆಯನ್ನು ಸೇವಿಸುವುದರಿಂದ ದೀರ್ಘಕಾಲದವರೆಗೆ ಹಸಿವಾಗುವುದಿಲ್ಲ.ಆದ್ದರಿಂದ, ನಿಮ್ಮ ತೂಕ ನಷ್ಟ ಆಹಾರದಲ್ಲಿ ಇವುಗಳನ್ನು ಸೇರಿಸಿಕೊಳ್ಳಬಹುದು. 

(ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ) .

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News