April Monthly Horoscope : ಗ್ರಹಗಳ ಬದಲಾವಣೆಯಿಂದ ಈ ತಿಂಗಳು ಯಾರಿಗೆ ಲಾಭ, ಮತ್ತು ಯಾರಿಗೆ ನಷ್ಟ ?
ಏಪ್ರಿಲ್‌ನಲ್ಲಿ ಒಂಭತ್ತು ಗ್ರಹಗಳ ರಾಶಿ ಬದಲಾವಣೆಯಾಗಲಿದೆ. ಗ್ರಹಗಳ ರಾಶಿಚಕ್ರ ಚಿಹ್ನೆಯ ಬದಲಾವಣೆ ಯಾರಿಗೆ ಶುಭ ಯಾರಿಗೆ ನಷ್ಟ ತಿಳಿಯೋಣ.
ಬೆಂಗಳೂರು : ಏಪ್ರಿಲ್ ನಲ್ಲಿ ಹಲವು ಪ್ರಮುಖ ಗ್ರಹಗಳ ರಾಶಿಚಕ್ರ ಬದಲಾಗಲಿದೆ. ಗ್ರಹ-ನಕ್ಷತ್ರಗಳ ಬದಲಾವಣೆಯು ಮಾನವ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಜ್ಯೋತಿಷ್ಯದಲ್ಲಿ ಹೇಳಲಾದ ಎಲ್ಲಾ 12 ರಾಶಿಚಕ್ರಗಳಲ್ಲಿ ಇದರ ಪ್ರಭಾವವನ್ನು ಕಾಣಬಹುದು. ಏಪ್ರಿಲ್‌ನಲ್ಲಿ ಒಂಭತ್ತು ಗ್ರಹಗಳ ರಾಶಿ ಬದಲಾವಣೆಯಾಗಲಿದೆ. ಗ್ರಹಗಳ ರಾಶಿಚಕ್ರ ಚಿಹ್ನೆಯ ಬದಲಾವಣೆ ಯಾರಿಗೆ ಶುಭ ಯಾರಿಗೆ ನಷ್ಟ ತಿಳಿಯೋಣ.
ಮೇಷ (Aries)- ಮೇಷ ರಾಶಿಯವರ ಮನಸ್ಸಿನಲ್ಲಿ ಹೊಸ ಭರವಸೆ ಮೂಡಬಹುದು. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಜೀವನದಲ್ಲಿ ಕೆಲವು ನೋವಿನ ಕ್ಷಣಗಳು ಬರಬಹುದು. ವೆಚ್ಚಗಳು ಹೆಚ್ಚಾಗಬಹುದು.
ಇದನ್ನೂ ಓದಿ : Shani Gochar: ಈ 4 ರಾಶಿಯವರ ಜೀವನದಲ್ಲಿ ಪ್ರತಿಯೊಂದು ದುಃಖವೂ ಕೊನೆಗೊಳ್ಳಲಿದೆ
ವೃಷಭ ರಾಶಿ (Taurus) - ಮನಸ್ಸಿನಲ್ಲಿ ಹತಾಶೆ ಉಂಟಾಗಬಹುದು. ಎಲ್ಲಾ ಸಮಯದಲ್ಲೂ ತಾಳ್ಮೆಯಿಂದ ಇರುವುದು ಅಗತ್ಯ. ಮಕ್ಕಳ ಮೂಲಕ ಶುಭ ಸುದ್ದಿ ಪಡೆಯುವಿರಿ. ರುಚಿಕರವಾದ ಆಹಾರದಲ್ಲಿ ಆಸಕ್ತಿ ಹೆಚ್ಚುವುದು.
ಮಿಥುನ ರಾಶಿ (Gemini)- ಅನಗತ್ಯ ಕೋಪ ಮತ್ತು ವಾದಗಳನ್ನು ತಪ್ಪಿಸಿ. ಸ್ನೇಹಿತರ ಸಹಾಯದಿಂದ ಆದಾಯ ಗಳಿಸುವಿರಿ. ಕುಟುಂಬದವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಕಟಕ (Cancer)- ಮನಸ್ಸು ಚಂಚಲವಾಗಿರುತ್ತದೆ. ತಾಳ್ಮೆಯಿಂದಿರಲು ಪ್ರಯತ್ನಿಸಿ. ಕೆಲಸದ ಸ್ಥಳ ಬದಲಾವಣೆ ಸಂಭವಿಸಬಹುದು. ಆದಾಯ ಹೆಚ್ಚಲಿದೆ.
ಸಿಂಹ (Leo)- ಮನಃಶಾಂತಿ ಸಿಗುತ್ತದೆ. ತಾಳ್ಮೆ ಕಡಿಮೆಯಾಗಲಿದೆ. ಮನಸ್ಸು ವಿಚಲಿತವಾಗಬಹುದು. ವೃತ್ತಿಯಲ್ಲಿ ಬದಲಾವಣೆ ಸಂಭವಿಸುವ ಸಾಧ್ಯತೆಯಿದೆ.
ಇದನ್ನೂ ಓದಿ : Palmistry: ಪ್ರೀತಿಯಲ್ಲಿ ಎಲ್ಲಾ ಲೂಟಿ ಮಾಡಿದ ನಂತರವೂ ಇಂತಹ ಜನರು ಮೋಸ ಹೋಗುತ್ತಾರೆ!
ಕನ್ಯಾ ರಾಶಿ (Virgo)- ತಾಳ್ಮೆಯಿಂದಿರಿ. ತಾಯಿಯ ಬೆಂಬಲ ಪಡೆಯಿರಿ. ವ್ಯಾಪಾರವನ್ನು ಸುಧಾರಿಸಲು ತಂದೆಯಿಂದ ಹಣವನ್ನು ಪಡೆಯುವಿರಿ. ನಿಮ್ಮ ಪತ್ನಿಯ ಆರೋಗ್ಯದ ಕಡೆ ಗಮನ ನೀಡಿ.
ತುಲಾ (Libra)- ತುಲಾ ರಾಶಿಯವರಿಗೆ ಮಾನಸಿಕ ಸಮಸ್ಯೆಗಳನ್ನು ಉಂಟಾಗಬಹುದು. ಜೀವನವು ನೋವಿನಿಂದ ಕೂಡಿರಬಹುದು. ಕೆಲಸದ ಸ್ಥಳದಲ್ಲಿ ಶ್ರಮವನ್ನು ಹೆಚ್ಚಿಸಿ. ಸಂಗಾತಿಯ ಬೆಂಬಲ ಪಡೆಯಿರಿ.
ವೃಶ್ಚಿಕ ರಾಶಿ (Scoprio)- ಕಲೆ ಅಥವಾ ಸಂಗೀತದಲ್ಲಿ ಆಸಕ್ತಿಯನ್ನು ಹೆಚ್ಚಾಗಲಿದೆ. ಕುಟುಂಬದ ಬೆಂಬಲ ಪಡೆಯುವಿರಿ. ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವೆಚ್ಚಗಳು ಹೆಚ್ಚಾಗಲಿವೆ. ಆದಾಯ ಹೆಚ್ಚಲಿದೆ.
ಧನು ರಾಶಿ (Sagitarius)- ಉದ್ಯೋಗದಲ್ಲಿ ಅವಕಾಶಗಳು ಹೆಚ್ಚಾಗಲಿವೆ. ಸಂತೋಷಕ್ಕಾಗಿ ಅನೇಕ ಮಾರ್ಗಗಳು ತೆರೆದುಕೊಳ್ಳುತ್ತವೆ. ಆದಾಯ ಹೆಚ್ಚಲಿದೆ. ತಾಯಿಯಿಂದ ಹೆಚ್ಚಿನ ಬೆಂಬಲ ಮತ್ತು ಪ್ರೀತಿಯನ್ನು ಪಡೆಯುವಿರಿ.
ಇದನ್ನೂ ಓದಿ : Chaitra Navratri 2022: ಚೈತ್ರ ನವರಾತ್ರಿಯಲ್ಲಿ ಅಪ್ಪಿ-ತಪ್ಪಿಯೂ ಈ ಕೆಲಸ ಮಾಡಬೇಡಿ!
ಮಕರ (Capricorn)- ಮನಸ್ಸಿನಲ್ಲಿ ಅನೇಕ ರೀತಿಯ ಗೊಂದಲ ಮೂಡಬಹುದು. ಉದ್ಯೋಗದಲ್ಲಿ ಅಧಿಕಾರಿಗಳ ಬೆಂಬಲ ಸಿಗಬಹುದು. ಕೆಲವು ಹೆಚ್ಚುವರಿ ಜವಾಬ್ದಾರಿಗಳು ಲಭ್ಯವಾಗಬಹುದು.
ಕುಂಭ (Aquarius)- ಉದ್ಯೋಗದಲ್ಲಿ ಪ್ರಗತಿಗೆ ಅವಕಾಶಗಳು ಇರಬಹುದು. ಅಧಿಕಾರಿಗಳ ಸಂಪೂರ್ಣ ಸಹಕಾರ ಸಿಗಲಿದೆ. ಆದಾಯವು ಹೆಚ್ಚಾಗುತ್ತದೆ. ಹೆಚ್ಚಿನ ಶ್ರಮ ವಹಿಸುವುದು ಕೂಡಾ ಅಗತ್ಯ.
ಮೀನ (Pisces)- ಮೀನ ರಾಶಿಯವರಿಗೆ ತಾಳ್ಮೆ ಅಗತ್ಯ. ಅತಿಯಾದ ಕೋಪ ಮತ್ತು ಕೆಟ್ಟ ಕುತೂಹಲವನ್ನು ತಪ್ಪಿಸಿ. ಬಹಳ ದಿನಗಳಿಂದ ಕೈ ಸೇರದೆ ಇದ್ದ ಹಣ ಸಿಗಲಿದೆ. ವ್ಯಾಪಾರದಲ್ಲಿ ಆದಾಯ ಹೆಚ್ಚಾಗಲಿದೆ. ಆರೋಗ್ಯದ ಬಗ್ಗೆ ಗಮನ ಹರಿಸಿ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.