Chaitra Navratri 2022: ಚೈತ್ರ ನವರಾತ್ರಿಯಲ್ಲಿ ಅಪ್ಪಿ-ತಪ್ಪಿಯೂ ಈ ಕೆಲಸ ಮಾಡಬೇಡಿ!

ಚೈತ್ರ ನವರಾತ್ರಿಯ ಬಗ್ಗೆ ಕೆಲವು ನಿಯಮಗಳ ಬಗ್ಗೆ ತಿಳಿದುಕೊಳ್ಳಲು ಮರೆಯದಿರಿ. ಈ 9 ದಿನಗಳಲ್ಲಿ ಕೆಲವು ಕೆಲಸ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಪ್ರತಿಯೊಬ್ಬರೂ ಈ ನಿಯಮಗಳನ್ನು ಪಾಲಿಸಬೇಕು.

Written by - Puttaraj K Alur | Last Updated : Apr 1, 2022, 04:27 PM IST
  • ಚೈತ್ರ ನವರಾತ್ರಿ ಏಪ್ರಿಲ್ 2ರ ಶನಿವಾರದಿಂದ ಆರಂಭವಾಗಲಿದೆ
  • ನವರಾತ್ರಿಯ ಮೊದಲ ದಿನದಂದು ಕಲಶವನ್ನು ಸ್ಥಾಪಿಸಲಾಗುತ್ತದೆ
  • ತಾಯಿ ದುರ್ಗೆಯ 9 ರೂಪಗಳನ್ನು ಪ್ರತಿದಿನ 9 ದಿನಗಳ ಕಾಲ ಪೂಜಿಸಲಾಗುತ್ತದೆ
Chaitra Navratri 2022: ಚೈತ್ರ ನವರಾತ್ರಿಯಲ್ಲಿ ಅಪ್ಪಿ-ತಪ್ಪಿಯೂ ಈ ಕೆಲಸ ಮಾಡಬೇಡಿ! title=
ತಾಯಿ ದುರ್ಗೆಯ 9 ರೂಪಗಳನ್ನು ಪೂಜಿಸಲಾಗುತ್ತದೆ

ನವದೆಹಲಿ: ಚೈತ್ರ ನವರಾತ್ರಿ(Chaitra Navratri 2022)ನಾಳೆ ಅಂದರೆ ಏಪ್ರಿಲ್ 2ರ ಶನಿವಾರದಿಂದ ಆರಂಭವಾಗಲಿದೆ. ಈ ನವರಾತ್ರಿಯು ಚೈತ್ರ ಮಾಸದ ಶುಕ್ಲ ಪಕ್ಷದ ಪ್ರತಿಪದದಿಂದ ಪ್ರಾರಂಭವಾಗುತ್ತದೆ ಮತ್ತು ಈ ದಿನದಿಂದ ಹಿಂದೂ ಹೊಸ ವರ್ಷ(Hindu New Year)ವು ಪ್ರಾರಂಭವಾಗಲಿದೆ. ನವರಾತ್ರಿಯ ಮೊದಲ ದಿನದಂದು ಕಲಶವನ್ನು ಸ್ಥಾಪಿಸಲಾಗುತ್ತದೆ ಮತ್ತು ನಂತರ ತಾಯಿ ದುರ್ಗೆಯ 9 ರೂಪಗಳನ್ನು ಪ್ರತಿದಿನ 9 ದಿನಗಳ ಕಾಲ ಆಚರಣೆಗಳೊಂದಿಗೆ ಪೂಜಿಸಲಾಗುತ್ತದೆ.

ದುರ್ಗೆ(Durga Devi)ಯ ಆರಾಧನೆಯಿಂದ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಪ್ರಗತಿಯನ್ನು ತರುತ್ತದೆ. ದುರ್ಗಾ ಮಾತೆ ಇಷ್ಟಾರ್ಥಗಳನ್ನು ಪೂರೈಸುತ್ತಾಳೆ. ಇಂತಹ ಪರಿಸ್ಥಿತಿಯಲ್ಲಿ ಮಾತಾ ರಾಣಿಯ ಆಶೀರ್ವಾದ ಪಡೆಯಲು ನವರಾತ್ರಿಯಲ್ಲಿ ಕೆಲವು ತಪ್ಪುಗಳನ್ನು ಮಾಡಬಾರದು. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.  

ಇದನ್ನೂ ಓದಿ: Chanakya Niti: ಇಂತಹ ಜನರಿಂದ ದೂರವಿರಿ, ಇಲ್ದಿದ್ರೆ ಕೆಟ್ಟ ಹೆಸರು ಬರುತ್ತೆ

ನವರಾತ್ರಿಯಲ್ಲಿ ಈ ತಪ್ಪುಗಳನ್ನು ಮಾಡಬೇಡಿ

  • ಮಾತಾ ರಾಣಿಯ ಭಕ್ತರು ಈ 9 ದಿನಗಳಲ್ಲಿ ಉಪವಾಸವನ್ನು ಮಾಡುತ್ತಾರೆ. ನೀವು ಉಪವಾಸ(Navratri Fasting)ವನ್ನು ಮಾಡುತ್ತಿದ್ದರೆ ಕೆಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಉಪವಾಸ ಮಾಡದವರು ಸಹ ಈ ನಿಯಮಗಳನ್ನು ಪಾಲಿಸಬೇಕು.
  • ಚೈತ್ರ ನವರಾತ್ರಿ(Chaitra Navratri)ಯ ಒಂದು ದಿನ ಮೊದಲು ತಾಮಸಿಕ ಆಹಾರವನ್ನು ಸೇವಿಸುವುದನ್ನು ನಿಲ್ಲಿಸಿ. ಅಮಲು ಪದಾರ್ಥಗಳನ್ನು ಸೇವಿಸಬೇಡಿ ಮತ್ತು ನಿಮ್ಮ ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳನ್ನು ತರಬೇಡಿ. ನವರಾತ್ರಿಯಲ್ಲಿ ಯಾವುದೇ ವ್ಯಕ್ತಿಯು ತನ್ನ ದೇಹ ಮತ್ತು ಮನಸ್ಸು ಎರಡನ್ನೂ ಶುದ್ಧವಾಗಿಟ್ಟುಕೊಳ್ಳಬೇಕು.
  • ನವರಾತ್ರಿಯಲ್ಲಿ ಬೆಳ್ಳುಳ್ಳಿ-ಈರುಳ್ಳಿ ಕೂಡ ಸೇವಿಸಬಾರದು.
  • ಉಪವಾಸ ಇರುವವರು ಧಾನ್ಯ ಮತ್ತು ಉಪ್ಪನ್ನು ಸೇವಿಸಬಾರದು. ಒಂದು ವೇಳೆ ಉಪ್ಪು ಬಳಸಲೇಬೇಕೆಂದರೆ ಉಪವಾಸಕ್ಕಾಗಿ ಕಲ್ಲು ಉಪ್ಪನ್ನು ಬಳಸಿ.
  • ಉಪವಾಸದ ಅವಧಿಯಲ್ಲಿ ಯಾವುದೇ ತಪ್ಪು ಕೆಲಸಗಳನ್ನು ಮಾಡಬಾರದು ಅಥವಾ ಯಾರ ಬಗ್ಗೆಯೂ ಕೆಟ್ಟ ಆಲೋಚನೆ ಮಾಡಬಾರದು. ಮನಸ್ಸು ಮತ್ತು ಆಲೋಚನೆಗಳು ಧನಾತ್ಮಕ-ಸಾತ್ವಿಕವಾಗಿರಬೇಕು. ಆಗ ಮಾತ್ರ ಉಪವಾಸದ ಸಂಪೂರ್ಣ ಫಲ ಪಡೆಯಲು ಸಾಧ‍್ಯವಾಗುತ್ತದೆ.
  • ಈ ಸಮಯದಲ್ಲಿ ದುರ್ಗಾ ಸಪ್ತಶತಿಯನ್ನು ನಿಯಮಿತವಾಗಿ ಪಠಿಸಬೇಕು. ನೀವು ಉಪವಾಸವಿರಲಿ ಅಥವಾ ಇಲ್ಲದಿರಲಿ ಇದನ್ನು ಪಠಿಸುವುದರಿಂದ ದುರ್ಗಾ ಮಾತೆಯು ಬಹಳ ಸಂತೋಷಪಡುತ್ತಾಳೆ.
  • ಉಪವಾಸದ ವೇಳೆ ನೆಲದ ಮೇಲೆ ಮಲಗಬೇಕು. ಹಾಸಿಗೆಯ ಮೇಲೆ ಮಲಗುವುದನ್ನು ತಪ್ಪಿಸುವುದು ಉತ್ತಮ.
  • ವ್ರತ ಮಾಡುವವರು ಮತ್ತು ಉಪವಾಸವಿಲ್ಲದವರು ನವರಾತ್ರಿ(Chaitra Navratri)ಯಲ್ಲಿ ತಮ್ಮ ಕೂದಲು ಮತ್ತು ಉಗುರುಗಳನ್ನು ಕತ್ತರಿಸಬಾರದು. ಅಲ್ಲದೆ ಗಡ್ಡವನ್ನು ಸಹ ಕತ್ತಿರಿಸಿಕೊಳ್ಳಬಾರದು.
  • ಈ ಸಮಯದಲ್ಲಿ ಕಡ್ಡಾಯವಾಗಿ ಬ್ರಹ್ಮಚರ್ಯವನ್ನು ಅನುಸರಿಸಬೇಕು.

ಇದನ್ನೂ ಓದಿ: Astrology : ಮನೆಯ ದರಿದ್ರ ತೊಡೆದು ಹಾಕಲು ಈ ಸುಲಭ ಕ್ರಮಗಳನ್ನು ಅನುಸರಿಸಿ

(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News