ಏಪ್ರಿಲ್ ನಲ್ಲಿ ತೆರೆಯಲಿದೆ ಈ ರಾಶಿಯವರ ಅದೃಷ್ಟದ ಬಾಗಿಲು! ಪ್ರತಿ ಕೆಲಸದಲ್ಲಿಯೂ ಸಿಗಲಿದೆ ಯಶಸ್ಸು
ಏಪ್ರಿಲ್‌ನಲ್ಲಿ ಗ್ರಹಗಳ ಬದಲಾವಣೆಯು ಕೆಲವು ರಾಶಿಗಳ ಮೇಲೆ ಶುಭ ಪರಿಣಾಮವನ್ನು ಬೀರುತ್ತದೆ ಮತ್ತು ಕೆಲವು ರಾಶಿಗಳು ತೊಂದರೆಗಳನ್ನು ಎದುರಿಸಬೇಕಾಗಬಹುದು.
ಬೆಂಗಳೂರು : ಏಪ್ರಿಲ್ ನಲ್ಲಿ ಅನೇಕ ಗ್ರಹಗಳು ತಮ್ಮ ರಾಶಿಚಕ್ರದ ಚಿಹ್ನೆಗಳನ್ನು ಬದಲಾಯಿಸಲಿವೆ (Planet transit). ಮೇಷ ರಾಶಿಯಿಂದ ಮೀನ ರಾಶಿಯವರಿಗೆ ಏಪ್ರಿಲ್ ತಿಂಗಳು ಮಹತ್ವದ್ದಾಗಿದೆ. ಏಪ್ರಿಲ್‌ನಲ್ಲಿ ಗ್ರಹಗಳ ಬದಲಾವಣೆಯು ಕೆಲವು ರಾಶಿಗಳ ಮೇಲೆ ಶುಭ ಪರಿಣಾಮವನ್ನು ಬೀರುತ್ತದೆ ಮತ್ತು ಕೆಲವು ರಾಶಿಗಳು ತೊಂದರೆಗಳನ್ನು ಎದುರಿಸಬೇಕಾಗಬಹುದು (Planet transit effects).
ವೃಷಭ ರಾಶಿ (Taurus): ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ಏಪ್ರಿಲ್ ತಿಂಗಳು ವೃಷಭ ರಾಶಿಯವರಿಗೆ ಮಂಗಳಕರವಾಗಿರುತ್ತದೆ. ಏಪ್ರಿಲ್‌ನಲ್ಲಿ ರಾಹುವಿನ ರಾಶಿ ಬದಲಾಗಲಿದೆ (Rahu transit). ಇದೀಗ ರಾಹು ಇದೇ ರಾಶಿಯಲ್ಲಿದ್ದಾನೆ. ರಾಹು ವೃಷಭ ರಾಶಿಯಿಂದ ಹೊರಬಂದ ತಕ್ಷಣ, ಜೀವನದ ಎಲ್ಲಾ ಅಡೆತಡೆಗಳಿಂದ ಮುಕ್ತಿ ಸಿಗಲಿದೆ. ಈ ಸಮಯದಲ್ಲಿ ನೀವು ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ಪಡೆಯುತ್ತೀರಿ. ಉದ್ಯೋಗಸ್ಥರಿಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ. ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ.
ಇದನ್ನೂ ಓದಿ : Chaitra Navaratri 2022: ದೇವಿ ದುರ್ಗೆಯ ಆಗಮನ-ನಿರ್ಗಮನದ ಸವಾರಿ ವಿನಾಶ ಸೂಚಿಸುತ್ತಿದೆ
ಸಿಂಹ (Leo): ಸಿಂಹ ರಾಶಿಯ ಜನರು ಏಪ್ರಿಲ್ ತಿಂಗಳಲ್ಲಿ ಅನೇಕ ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯಲಿದ್ದಾರೆ. ಈ ಸಮಯದಲ್ಲಿ ನಿಮ್ಮ ಕೆಲಸಕ್ಕೆ ಪ್ರಶಂಸೆ ಸಿಗಲಿದೆ. ಉದ್ಯೋಗದಲ್ಲಿ ಪ್ರಗತಿಯಾಗಲಿದೆ. ಹೊಸ ಜವಾಬ್ದಾರಿ ನಿಮ್ಮ ಹೆಗಲೇರಲಿದೆ. ವ್ಯಾಪಾರದಲ್ಲಿ ಲಾಭವಾಗಬಹುದು. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಅನುಕೂಲಕರ ಫಲಿತಾಂಶಗಳನ್ನು ಪಡೆಯುವುದು ಸಾಧ್ಯವಾಗುತ್ತದೆ. ಶಾಂತಿಯ ವಾತಾವರಣ ಇರುತ್ತದೆ. ಈ ಸಮಯದಲ್ಲಿ ಲಕ್ಷ್ಮೀ ದೇವಿಯ (Godess Lakshmi) ವಿಶೇಷ ಆಶೀರ್ವಾದ ನಿಮ್ಮ ಮೇಲಿರಲಿದೆ.
ವೃಶ್ಚಿಕ ರಾಶಿ (Scorpio): ಏಪ್ರಿಲ್ ತಿಂಗಳು ವೃಶ್ಚಿಕ ರಾಶಿಯವರಿಗೆ ಲಾಭದಾಯಕವಾಗಿರುತ್ತದೆ. ಈ ಸಮಯದಲ್ಲಿ ನೀವು ಬಯಸಿದ ಫಲಿತಾಂಶಗಳನ್ನು ಪಡೆಯುತ್ತೀರಿ. ಏಪ್ರಿಲ್‌ನಲ್ಲಿ ಕೇತು ವೃಶ್ಚಿಕ ರಾಶಿಯಿಂದ ಹೊರಬರುತ್ತಾನೆ (Ketu Transit). ಇದಾದ ನಂತರ ನೀವು ತೊಂದರೆಗಳಿಂದ ಮುಕ್ತರಾಗುತ್ತೀರಿ. ಕುಟುಂಬ ಸದಸ್ಯರ ನಡುವೆ ಪ್ರೀತಿ ಹೆಚ್ಚಾಗುತ್ತದೆ. ಪ್ರೇಮ ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ. ಹಣಕಾಸಿನ ಲಾಭ ಅಧಿಕವಾಗಿರುತ್ತದೆ. ಹೂಡಿಕೆಗೆ ಇದು ಉತ್ತಮ ಸಮಯ.
ಇದನ್ನೂ ಓದಿ : ಜೀವನದಲ್ಲಿ ಕೆಟ್ಟ ಸಮಯ ನಡೆಯುತ್ತಿದ್ದಾಗ ಈ ವಿಚಾರಗಳು ನೆನಪಿರಲಿ, ಜಯ ಸಿಕ್ಕೇ ಸಿಗುತ್ತದೆ.!
ಧನು ರಾಶಿ (Sagitarius): ಈ ಅವಧಿಯಲ್ಲಿ ಧನು ರಾಶಿಯವರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಶನಿದೇವನಿಂದ (Shanideva) ನೀವು ಅನುಭವಿಸುತ್ತಿರುವ ತೊಂದರೆಗಳು ಕಡಿಮೆಯಾಗುತ್ತವೆ. ಲಕ್ಷ್ಮೀಯ ಕೃಪೆ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಆರ್ಥಿಕ ಲಾಭವಾಗಲಿದೆ. ಉದ್ಯೋಗ ಬದಲಾವಣೆಗೆ ಸಮಯ ಅನುಕೂಲಕರವಾಗಿರಲಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.