Chaitra Navaratri 2022: ದೇವಿ ದುರ್ಗೆಯ ಆಗಮನ-ನಿರ್ಗಮನದ ಸವಾರಿ ವಿನಾಶ ಸೂಚಿಸುತ್ತಿದೆ

Chaitra Navratri - ಈ ಬಾರಿ ಚೈತ್ರ ನವರಾತ್ರಿಯಲ್ಲಿ ದೇವಿ ದುರ್ಗೆ ಕುದುರೆ ಏರಿ ಆಗಮಿಸುತ್ತಿದ್ದು, ಎಮ್ಮೆಯ ಮೇಲೆ ನಿರ್ಗಮಿಸಲಿದ್ದಾಳೆ. ದೇಶ ಮತ್ತು ವಿಶ್ವದ ದೃಷ್ಟಿಕೋನದಿಂದ, ಸವಾರಿಗಳನ್ನು ಉತ್ತಮವೆಂದು ಪರಿಗಣಿಸಲಾಗುವುದಿಲ್ಲ.  

Written by - Nitin Tabib | Last Updated : Mar 28, 2022, 01:21 PM IST
  • ಕುದುರೆ ಏರಿ ದೇವಿ ದುರ್ಗೆಯ ಆಗಮನ
  • ಎಮ್ಮೆಯ ಮೇಲೆ ದೇವಿ ದುರ್ಗೆಯ ನಿರ್ಗಮನ
  • ಏನನ್ನು ಸೂಚಿಸುತ್ತಿದೆ ತಿಳಿಯಲು ಈ ವರದಿ ಓದಿ
Chaitra Navaratri 2022: ದೇವಿ ದುರ್ಗೆಯ ಆಗಮನ-ನಿರ್ಗಮನದ ಸವಾರಿ ವಿನಾಶ ಸೂಚಿಸುತ್ತಿದೆ title=
Chaitra Navaratri 2022

ನವದೆಹಲಿ: Navratri 2022 - ಈ ಬಾರಿ ಏಪ್ರಿಲ್ 2, 2022 ರಿಂದ ಏಪ್ರಿಲ್ 11, 2022ರವರೆಗೆ ಚೈತ್ರ ನವರಾತ್ರಿ (When Is Chaitra Navratri) ಪರ್ವವನ್ನು ಆಚರಿಸಲಾಗುತ್ತಿದೆ. ಈ ವರ್ಷದ ನವರಾತ್ರಿಯು ಸಂಪೂರ್ಣ 9 ದಿನಗಳವರೆಗೆ ಇರಲಿದೆ. ಈ ರೀತಿ 9 ದಿನಗಳ ಕಾಲ ವ್ರತವನ್ನು ಆಚರಿಸಿ ದುರ್ಗಾ ದೇವಿಯ ಪೂಜೆಯನ್ನು ನೆರವೇರಿಸಲಾಗುತ್ತದೆ. ನವರಾತ್ರಿಯಲ್ಲಿ ತಿಥಿ ಕ್ಷಯವಾಗದಿರುವುದು ಮಂಗಳಕರವೆಂದು (Chaitra Navratri Auspicious Yoga) ಪರಿಗಣಿಸಲಾಗಿದೆ. ಇದಲ್ಲದೆ, ಈ ನವರಾತ್ರಿಯಲ್ಲಿ 2 ಪ್ರಮುಖ ಬದಲಾವಣೆಗಳು ಸಹ ನಡೆಯುತ್ತಿವೆ, ಈ ಪರಿವರ್ತನೆಗಳು ಮಂಗಳಕರವಾಗಿವೆ.. ಆದಾಗ್ಯೂ, ದೇವಿ ದುರ್ಗೆಯ ಸವಾರಿ ಕೆಲ ಅಹಿತಕರ ಘಟನೆಗಳತ್ತ ಸಂಕೇತ ನೀಡುತ್ತಿದೆ.

ಕುದುರೆಯ ಮೇಲೆ ಸವಾರಿಯಾಗಿ ದೇವಿ ದುರ್ಗೆಯ ಆಗಮನ
ಈ ಬಾರಿ ದುರ್ಗಾ ಮಾತೆಯು ಕುದುರೆಯ ಮೇಲೆ ಆಗಮಿಸುತ್ತಿದ್ದು, ಎಮ್ಮೆಯ ಮೇಲೆ ನಿರ್ಗಮಿಸಲಿದ್ದಾಳೆ. ಈ ಎರಡೂ ವಾಹನಗಳು ಉತ್ತಮವೆಂದು ಪರಿಗಣಿಸಲಾಗಿಲ್ಲ. ಇವು ದೇಶದಲ್ಲಿನ ವಿವಾದಗಳು, ಉದ್ವಿಗ್ನತೆ, ಅಪಘಾತಗಳು ಮತ್ತು ನೈಸರ್ಗಿಕ ವಿಕೋಪಗಳ ಸೂಚನೆಗಳಾಗಿವೆ. ಇಂತಹ ಪರಿಸ್ಥಿತಿಯಲ್ಲಿ 9 ದಿನಗಳ ಕಾಲ ಪೂರ್ಣ ಭಕ್ತಿಯಿಂದ ದುರ್ಗಾದೇವಿಯನ್ನು ಪೂಜಿಸಿ, ಅಶುಭ ಫಲಗಳನ್ನು ಕಡಿಮೆ ಮಾಡಬಹುದು.

ಇದನ್ನೂ ಓದಿ-Chanakya Niti: ಇಂತಹ ಜನರ ಮಧ್ಯೆ ಎಂದಿಗೂ ಇರಬೇಡಿ, ಇಲ್ದಿದ್ರೆ ಲೈಫ್ ಲಾಂಗ್ ದುಃಖದಲ್ಲಿರಬೇಕಾಗುತ್ತದೆ

2 ಗ್ರಹಗಳು ತನ್ನ ರಾಶಿಯನ್ನು ಬದಲಾಯಿಸುತ್ತವೆ
ಚೈತ್ರ ನವರಾತ್ರಿಯಲ್ಲಿ 2 ಪ್ರಮುಖ ಗ್ರಹಗಳು ತನ್ನ ರಾಶಿಯನ್ನು ಬದಲಾಯಿಸಲಿವೆ. ಈ 9 ದಿನಗಳಲ್ಲಿ, ಮಂಗಳ ಮತ್ತು ಬುಧ ಗ್ರಹಗಳು ರಾಶಿ ಬದಲಾಯಿಸಲಿವೆ. ಮತ್ತೊಂದೆಡೆ, ಶನಿದೇವ (Shani Dev) ಮಕರ ರಾಶಿಯಲ್ಲಿ ನೆಲೆಸುವ ಮೂಲಕ ತನ್ನ ಶಕ್ತಿಯನ್ನು ಹೆಚ್ಚಿಸಲಿದ್ದಾನೆ. ಇದಲ್ಲದೇ ನವರಾತ್ರಿಯ ಸಮಯದಲ್ಲಿ ರವಿ ಪುಷ್ಯ ನಕ್ಷತ್ರದ ಜೊತೆಗೆ ಸರ್ವಾರ್ಥ ಸಿದ್ಧಿ ಯೋಗ, ರವಿಯೋಗ ನಿರ್ಮಾಣಗೊಳ್ಳುತ್ತಿವೆ. ಶನಿವಾರದಿಂದ ನವರಾತ್ರಿಯ ಆರಂಭ ಮತ್ತು ಶನಿದೇವ ತನ್ನ ಸ್ವಂತ ರಾಶಿಯಾದ ಮಕರ ರಾಶಿಯಲ್ಲಿ ಮಂಗಳನೊಂದಿಗೆ ಇರುವುದು ಶುಭ ಫಲಿತಾಂಶಗಳನ್ನು ನೀಡಲಿದೆ. ಒಟ್ಟಿನಲ್ಲಿ ಈ ಸಮಯದಲ್ಲಿ ತಾಯಿಯನ್ನು ಪೂಜಿಸುವುದರಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ ಮತ್ತು ಇಷ್ಟಾರ್ಥಗಳು ನೆರವೇರಲಿವೆ.

ಇದನ್ನೂ ಓದಿ-ಜೀವನದಲ್ಲಿ ಕೆಟ್ಟ ಸಮಯ ನಡೆಯುತ್ತಿದ್ದಾಗ ಈ ವಿಚಾರಗಳು ನೆನಪಿರಲಿ, ಜಯ ಸಿಕ್ಕೇ ಸಿಗುತ್ತದೆ.!

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News