ಚಾಮರಾಜನಗರ: ಆಷಾಡ ಮಾಸದಲ್ಲಿ ನಡೆಯುವ ರಾಜ್ಯದ ಏಕೈಕ ರಥೋತ್ಸವವಾದ ಚಾಮರಾಜನಗರದ ಚಾಮರಾಜೇಶ್ವರ ರಥೋತ್ಸವಕ್ಕೆ ಸಿದ್ಧತೆ ಆರಂಭಗೊಂಡಿದ್ದು ಶಾಸಕ ಸಿ.ಪುಟ್ಟರಂಗಶೆಟ್ಟಿ ರಥ ಕಟ್ಟುವ ಕಾರ್ಯಕ್ಕೆ ಚಾಲನೆ ಕೊಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಆಷಾಡ ಮಾಸದಲ್ಲಿ ರಥೋತ್ಸವ  (Ashada Masa Rathotsava) ನಡೆಯುವುದು ಬಹಳ ಅಪರೂಪ ಮತ್ತು ವಿರಳವಾಗಿದ್ದು ರಾಜ್ಯದಲ್ಲಿ ಚಾಮರಾಜನಗರದಲ್ಲಿ ಮಾತ್ರ ಆಷಾಢದ ಜಾತ್ರೆ (Ashada Jatre) ನಡೆಯಲಿದೆ. ಇದೇ 20 ರಂದು ರಥೋತ್ಸವ ನಡೆಯಲಿದ್ದು ಇದಕ್ಕಾಗಿ ಸಾಂಪ್ರದಾಯಿಕವಾಗಿ ತಯಾರಿ ಆರಂಭಗೊಂಡಿದೆ.


ಇದನ್ನೂ ಓದಿ- ದುಡ್ಡನ್ನು ಅಯಸ್ಕಾಂತದಂತೆ ಆಕರ್ಷಿಸುತ್ತೆ ಈ ಪುಟ್ಟ ಸಸ್ಯ: ಸೂರ್ಯನ ಬೆಳಕಿಲ್ಲದೆ, ಕಡಿಮೆ ನೀರಿನಲ್ಲಿ ಬೆಳೆಸಬಹುದಾದ ಗಿಡವಿದು


ಚಾಮರಾಜೇಶ್ವರ ರಥೋತ್ಸವವು (Chamarajeshwara Rathotsava) ನೂರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದು ಇದು ದಂಪತಿಗಳ ಜಾತ್ರೆ ಎಂಥಲೇ ಜನಪ್ರಿಯವಾಗಿದೆ. ಮದುವೆಯಾದ ಹೊಸತರಲ್ಲಿ ಪತ್ನಿ ತವರಿನಲ್ಲಿ ಇರುವುದರಿಂದ ಈ ಜಾತ್ರೆಯ ದಿನದಂದು ಪತಿ- ಪತ್ನಿ (Husband Wife) ಭೇಟಿಯಾಗಿ ಹಣ್ಣು  ಜವನ ಎಸೆದು ಪ್ರಾರ್ಥನೆ ಸಲ್ಲಿಸುವುದು ಇಲ್ಲಿನ‌ ವಿಶೇಷವಾಗಿದೆ.


ಇದನ್ನೂ ಓದಿ- Snake Attract Plants: ಮನೆಯ ಸುತ್ತ ಈ ಗಿಡಗಳನ್ನು ತಪ್ಪಿಯೂ ಬೆಳೆಸಬೇಡಿ… ಹಾವುಗಳು ಬರುತ್ತೆ!


ತೇರು ಕಟ್ಟುವ ಕಾಯಕದಲ್ಲಿ ನುರಿತರು ಪಾಲ್ಗೊಂಡಿದ್ದು ಈ ಬಾರಿ ಮಳೆ ಉತ್ತಮವಾಗಿ ಸುರಿಯುತ್ತಿರುವ ಹಿನ್ನೆಲೆ ಅದ್ಧೂರಿಯಾಗಿ ಜಾತ್ರೆ ಮಾಡಲು ಭಕ್ತರು ಅಣಿಯಾಗುತ್ತಿದ್ದಾರೆ.‌ ಈ ಜಾತ್ರೆಯಲ್ಲಿ ನವಜೋಡಿಗಳ ಕಲರವವೇ ಕೇಂದ್ರ ಬಿಂದುವಾಗಿದ್ದು ಚಾಮರಾಜನಗರದಲ್ಲಿ ಜಾತ್ರೆ ಕಳೆ ಬರುತ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.