Astro Remedies for Money : ನಿಮ್ಮ ಭಾಗ್ಯವನ್ನೇ ಬದಲಿಸಿಬಿಡಬಹುದು ಒಂದು ರೂಪಾಯಿ ನಾಣ್ಯ, ಹರಿಸಲಿದೆ ಹಣದ ಹೊಳೆ
Astro Remedies for Money : ಹಣ ಸಂಪಾದಿಸಲು ಮತ್ತು ಹಣವನ್ನು ಉಳಿಸಲು ಮಾಡುವ ಎಲ್ಲಾ ಪ್ರಯತ್ನಗಳು ವ್ಯರ್ಥವಾಗುತ್ತಿದ್ದರೆ, ಅದಕ್ಕೆ ದುರ್ಬಲ ಗ್ರಹಗಳು ಮತ್ತು ವಾಸ್ತು ದೋಷಗಳು ಕಾರಣವಾಗಿರಬಹುದು. ಈ ಸಮಸ್ಯೆಗಳಿಗೆ ವಾಸ್ತು ಶಾಸ್ತ್ರದಲ್ಲಿ ಕೆಲವು ಪರಿಹಾರಗಳನ್ನು ಸೂಚಿಸಲಾಗಿದೆ.
Astro Remedies for Money : ಕೆಲವೊಮ್ಮೆ ಎಷ್ಟೇ ಶ್ರಮ ಪಟ್ಟರೂ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದೇ ಇಲ್ಲ. ಹಣ ಸಂಪಾದಿಸುವ ಎಲ್ಲಾ ಶ್ರಮವು ವ್ಯರ್ಥವಾಗುತ್ತಿರುತ್ತದೆ. ಹೀಗಾಗುವುದಕ್ಕೆ ಗ್ರಹ ದೋಷಗಳು ಅಥವಾ ವಾಸ್ತು ದೋಷಗಳು ಕಾರಣವಾಗಿರಬಹುದು. ಗ್ರಹ ದೋಷ ಮತ್ತು ವಾಸ್ತು ದೋಷಗಳ ಕಾರಣದಿಂದಾಗಿ, ಎಷ್ಟೇ ಶ್ರಮ ಪಟ್ಟರೂ ಶ್ರಮಕ್ಕೆ ತಕ್ಕ ಫಲ ಸಿಗುವುದಿಲ್ಲ. ಇಂಥಹ ಪರಿಸ್ಥಿತಿಯನ್ನು ಎದುರಿಸಬೇಕಾದರೆ ಕೆಲವೊಂದು ಕ್ರಮಗಳನ್ನು ಕೈಗೊಳ್ಳಬೇಕು.
ಸಂಪತ್ತಿನ ಹೊಳೆ ಹರಿಸುತ್ತದೆ ಒಂದು ರೂಪಾಯಿ ನಾಣ್ಯ :
ಏನೇ ಮಾಡಿದರೂ ಆರ್ಥಿಕ ಬಿಕ್ಕಟ್ಟು ಕಡಿಮೆಯಾಗದಿದ್ದರೆ, ಶುಕ್ರವಾರದಂದು ಈ ಸುಲಭವಾದ ಪರಿಹಾರವನ್ನು ಅನುಸರಿಸಿ ನೋಡಿ. ಇದಕ್ಕಾಗಿ ನಿಮ್ಮ ಮನೆಯ ದೇವರ ಕೋಣೆಯ ಹೊಸ್ತಿಲಲ್ಲಿ ನೀರು ತುಂಬಿದ ಕಲಶವನ್ನು ಇರಿಸಿ. ನಂತರ ಕಲಶದ ಮೇಲೆ ಕುಂಕುಮದಿಂದ ಸ್ವಸ್ತಿಕವನ್ನು ಬರೆಯಿರಿ. ಕಲಶದ ನೀರಿನಲ್ಲಿ 1 ರೂಪಾಯಿಯ ನಾಣ್ಯವನ್ನು ಹಾಕಿ. ನಂತರ ಈ ಕಲಶವನ್ನು ಪೂಜಿಸಿ.
ಇದನ್ನೂ ಓದಿ : ಈ ದಿಕ್ಕಿಗೆ ಮುಖಮಾಡಿ ಆಹಾರ ಸೇವಿಸುವುದು ಅತ್ಯಂತ ಶ್ರೇಯಸ್ಕರ! ಒಲಿದು ಬರುವುದು ಧನ ಸಂಪತ್ತು , ಉತ್ತಮ ಆರೋಗ್ಯ
ಜೀವನವು ಅನೇಕ ರೀತಿಯ ತೊಂದರೆಗಳಿಂದ ಆವೃತವಾಗಿದ್ದರೆ, ಒಂದು ಮುಷ್ಟಿ ಅಕ್ಕಿ ಮತ್ತು 1 ರೂಪಾಯಿ ನಾಣ್ಯವನ್ನು ತೆಗೆದುಕೊಳ್ಳಿ. ನಂತರ ನಿಮ್ಮ ತೊಂದರೆಗಳು ನಿವಾರಣೆಯಾಗಲಿ ಎಂದು ದೇವರನ್ನು ಪ್ರಾರ್ಥಿಸಿ ಆ ಅಕ್ಕಿಯನ್ನು ದೇವರ ಕೋಣೆಯ ಯಾವುದಾದರು ಒಂದು ಮೂಲೆಯಲ್ಲಿ ನಾಣ್ಯ ಸಮೇತ ಇರಿಸಿ. ಕೆಲವೇ ದಿನಗಳಲ್ಲಿ ಎಲ್ಲಾ ಕಷ್ಟದಿಂದ ಪರಿಹಾರ ಸಿಗುತ್ತದೆ ಎನ್ನಲಾಗುತ್ತದೆ.
ನಿಮ್ಮನ್ನು ಬಡತನ ಕಾಡುತ್ತಿದ್ದರೆ, ಆದಾಯವು ಕಡಿಮೆಯಾಗುತ್ತಿದ್ದರೆ, ಪ್ರತಿದಿನ ಸಂಜೆ ಮನೆಯ ಮುಖ್ಯ ಬಾಗಿಲಲ್ಲಿ ನಾಲ್ಕು ಮುಖದ ದೀಪವನ್ನು ಬೆಳಗಿಸಿ. ಸಾಧ್ಯವಾದರೆ ತುಪ್ಪದ ದೀಪವನ್ನು ಹಚ್ಚಿ. ಆ ದೀಪದಲ್ಲಿ ಒಂಡು ರೂಪಾಯಿಯ ನಾಣ್ಯವನ್ನು ಹಾಕಿ. ಇದು ಮನೆಯ ನಕಾರಾತ್ಮಕ ಶಕ್ತಿಯನ್ನು ತೊಡೆದುಹಾಕುತ್ತದೆ . ಅಲ್ಲದೆ ಈ ಕ್ರಮದಿಂದ ಲಕ್ಷ್ಮೀ ದೇವಿಯನ್ನು ಸಂತೋಷಗೊಂಡು, ಸಮೃದ್ಧಿಯನ್ನು ನೀಡುತ್ತಾಳೆ.
ಇದನ್ನೂ ಓದಿ : Vastu Tips for Purse: ಪರ್ಸ್ ನಲ್ಲಿ ದೇವರ ಚಿತ್ರ ಇಟ್ಟುಕೊಳ್ಳುವ ಅಭ್ಯಾಸ ನಿಮಗೂ ಇದೆಯೇ ? ಹಾಗಿದ್ದರೆ ಹುಷಾರಾಗಿರಿ ..!
ಜೀವನದಲ್ಲಿ ಅವಕಾಶಗಳ ಕೊರತೆಯಿದ್ದರೆ, ಯಾವಾಗಲೂ ನಿಮ್ಮ ಜೇಬಿನಲ್ಲಿ 1 ರೂ ನಾಣ್ಯ ಮತ್ತು ನವಿಲು ಗರಿಗಳನ್ನು ಇಟ್ಟುಕೊಳ್ಳಿ. ಇದು ಹೊಸ ಅವಕಾಶಗಳನ್ನು ಪಡೆಯುವಲ್ಲಿ ಸಹಾಯ ಮಾಡುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.