ನವದೆಹಲಿ: ಅಪಾರ ಹಣ, ಪ್ರತಿಷ್ಠೆ, ಪ್ರಗತಿ, ಸಂತೋಷ ಪಡೆಯುವುದು ಪ್ರತಿಯೊಬ್ಬ ವ್ಯಕ್ತಿಯ ಆಸೆ. ಆದರೆ, ಇದೆಲ್ಲವನ್ನು ಪಡೆಯವ ನಿಟ್ಟಿನಲ್ಲಿ ಮಾಡುವ ಪ್ರಯತ್ನಗಳು ಅನೇಕ ಬಾರಿ ಯಶಸ್ವಿಯಾಗುವುದಿಲ್ಲ. ಇದರ ಹಿಂದಿರುವ ಕಾರಣ ನಷ್ಟ, ದುಂದುವೆಚ್ಚ, ಕೆಲಸ ಹದಗೆಡುವುದು, ಅದೃಷ್ಟದ ಕೊರತೆ ಇತ್ಯಾದಿ. ಆದರೆ, ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಸಮಸ್ಯೆಗಳನ್ನು ಹೋಗಲಾಡಿಸಲು ಪರಿಣಾಮಕಾರಿ ಕ್ರಮಗಳ ಬಗ್ಗೆ ವಿವರಿಸಲಾಗಿದೆ. ಇಂದು ನಾವು ಅಂತಹ ಕೆಲವು ಪರಿಣಾಮಕಾರಿ ಪರಿಹಾರಗಳ ಬಗ್ಗೆ ನಿಮಗೆ ತಿಳಿಸಲಿದ್ದೇವೆ. ಇದು ಬಹಳಷ್ಟು ಹಣ, ಗೌರವ, ಸಂತೋಷವನ್ನು ಪಡೆಯುವಲ್ಲಿ ವ್ಯಕ್ತಿಗೆ ಧನಾತ್ಮಕ ಫಲಿತಾಂಶಗಳನ್ನು ನೀಡುತ್ತದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Money Plant Tricks: ಮನಿ ಪ್ಲಾಂಟ್ ಗೆ ಸಂಬಂಧಿಸಿದ ಈ ಟ್ರಿಕ್ ತುಂಬಾ ಚಮತ್ಕಾರಿಯಾಗಿದೆ


ಸಂಪತ್ತು & ಸಮೃದ್ಧಿ ಹೊಂದಲು ಪ್ರತಿದಿನ ಈ ಕೆಲಸ ಮಾಡಿ


  1. ವೃತ್ತಿಯಲ್ಲಿ ಯಶಸ್ಸು, ಗೌರವ, ಪ್ರಗತಿಯನ್ನು ನೀಡುವ ಗ್ರಹ ಸೂರ್ಯ. ಜಾತಕದಲ್ಲಿ ಸೂರ್ಯನನ್ನು ಬಲಪಡಿಸಲು, ಪ್ರತಿದಿನ ಬೆಳಿಗ್ಗೆ ಸ್ನಾನದ ನಂತರ ಸೂರ್ಯನಿಗೆ ಅರ್ಧ್ಯಾವನ್ನು ಅರ್ಪಿಸಿ. ಸಾಧ್ಯವಾದರೆ ಕುಂಕುಮ, ಅಕ್ಷತವನ್ನು ನೀರಿಗೆ ಹಾಕಿದರೆ ಉತ್ತಮ ಫಲಿತಾಂಶ ಸಿಗುತ್ತದೆ. ಶೀಘ್ರದಲ್ಲೇ ನಿಮ್ಮ ವೃತ್ತಿಜೀವನವು ಹೊಳೆಯುತ್ತದೆ ಮತ್ತು ನಿಮ್ಮ ಆದಾಯವೂ ಹೆಚ್ಚಾಗುತ್ತದೆ.

  2. ಹಿಂದೂ ಧರ್ಮದಲ್ಲಿ ತುಳಸಿಯನ್ನು ಲಕ್ಷ್ಮಿದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ಐಶ್ವರ್ಯವಂತರಾಗಲು ಲಕ್ಷ್ಮಿಯ ಕೃಪೆ ಅಗತ್ಯ. ಹೀಗಾಗಿ ತುಳಸಿ ಗಿಡವನ್ನು ಮನೆಯಲ್ಲಿ ನೆಟ್ಟು ಪ್ರತಿನಿತ್ಯ ಪೂಜೆ ಮಾಡಿ. ಪ್ರತಿದಿನ ಬೆಳಿಗ್ಗೆ ಸ್ನಾನ ಮಾಡಿ ಮತ್ತು ತುಳಸಿಗೆ ನೀರನ್ನು ಅರ್ಪಿಸಿ. ಸಂಜೆ ತುಳಸಿ ಕವಚದಲ್ಲಿ ದೀಪವನ್ನು ಹಚ್ಚಬೇಕು.  

  3. ಲಕ್ಷ್ಮಿದೇವಿಯನ್ನು ಮೆಚ್ಚಿಸಲು ಕನಕಧಾರಾ ಸ್ತೋತ್ರ ಮತ್ತು ಲಕ್ಷ್ಮೀ ಸ್ತೋತ್ರವನ್ನು ಪಠಿಸುವುದು ಉತ್ತಮ ಮಾರ್ಗವಾಗಿದೆ. ಇದರೊಂದಿಗೆ ಮನೆಯ ಸದಸ್ಯರು ಉತ್ತಮ ಪ್ರಗತಿ ಹೊಂದುತ್ತಾರೆ.

  4. ಶಿವನ ಅನುಗ್ರಹವು ಜೀವನದ ಎಲ್ಲಾ ದುಃಖ ಮತ್ತು ನೋವುಗಳನ್ನು ನಿವಾರಿಸುತ್ತದೆ. ಇದು ಜೀವನದಲ್ಲಿ ಅಪಾರ ಸಂತೋಷ ಮತ್ತು ಸಮೃದ್ಧಿಯನ್ನು ನೀಡುತ್ತದೆ. ಆದ್ದರಿಂದ ಪ್ರತಿದಿನ ಶಿವಲಿಂಗದ ಅಭಿಷೇಕವನ್ನು ಮಾಡಿ. ಸಾಧ್ಯವಾದರೆ ಹಾಲು ಮಿಶ್ರಿತ ನೀರಿನಿಂದ ಅಭಿಷೇಕ ಮಾಡಿ.

  5. ರಾತ್ರಿ ವೇಳೆ ಮನೆಯ ಅಡುಗೆ ಮನೆಯನ್ನು ಕೊಳಕಾಗಿ ಇಡುವುದು, ಕೊಳಕು ಪಾತ್ರೆಗಳನ್ನು ಹಾಗೆಯೇ ಇಡುವುದು ಮಾತಾ ಲಕ್ಷ್ಮಿ ಮತ್ತು ಮಾತೆ ಅನ್ನಪೂರ್ಣೆಗೆ ಕೋಪಗೊಳಿಸುತ್ತದೆ. ಹೀಗಾಗಿ ಈ ತಪ್ಪನ್ನು ಎಂದಿಗೂ ಮಾಡಬೇಡಿ, ಇಲ್ಲದಿದ್ದರೆ ನಿಮಗೆ ಬಡತನ ಕಾಡುತ್ತದೆ. ಪ್ರತಿದಿನ ಅಡುಗೆ ಮನೆಯನ್ನು ಸ್ವಚ್ಛಗೊಳಿಸಿದ ನಂತರವೇ ಮಲಗಬೇಕು. ಇವುಗಳನ್ನು ಪಾಲಿಸುವುದರಿಂದ ನಿಮ್ಮ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ.


ಇದನ್ನೂ ಓದಿ: Astro Tips: ಈ ಗ್ರಹಗಳ ದೆಸೆ ವ್ಯಕ್ತಿಯನ್ನು ಸೋಮಾರಿಯನ್ನಾಗಿಸುತ್ತವೆ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.