Astro Tips: ಈ ಗ್ರಹಗಳ ದೆಸೆ ವ್ಯಕ್ತಿಯನ್ನು ಸೋಮಾರಿಯನ್ನಾಗಿಸುತ್ತವೆ

Astro Tips: ಜೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯ ಸ್ವಭಾವ ಇತರ ವ್ಯಕ್ತಿಗಿಂತ ಭಿನ್ನವಾಗಿರುತ್ತದೆ. ಇವುಗಳ ಹಿಂದೆ  ಗ್ರಹಗಳು ಕಾರಣವಾಗಿರುತ್ತವೆ. ವ್ಯಕ್ತಿಯೊಬ್ಬ ಸೋಮಾರಿಯಾಗುವುದು ಹಾಗೂ ಸುಸ್ತಾಗುವುದರ ಹಿಂದೆಯೂ ಕೂಡ ಈ ಗ್ರಹಗಳೆ ಕಾರಣವಾಗಿರುತ್ತವೆ. ಹಾಗಾದರೆ ಬನ್ನಿ ಇದರ ಹಿಂದೆ ಯಾವ ಗ್ರಹಗಳು ಕಾರಣವಾಗುತ್ತವೆ ತಿಳಿದುಕೊಳ್ಳೋಣ ಬನ್ನಿ  

Written by - Nitin Tabib | Last Updated : May 21, 2022, 10:17 PM IST
  • ಜೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯ ಸ್ವಭಾವ ಇತರ ವ್ಯಕ್ತಿಗಿಂತ ಭಿನ್ನವಾಗಿರುತ್ತದೆ.
  • ಇವುಗಳ ಹಿಂದೆ ಗ್ರಹಗಳು ಕಾರಣವಾಗಿರುತ್ತವೆ.
  • ವ್ಯಕ್ತಿಯೊಬ್ಬನ ಸೋಮಾರಿತನ ಮತ್ತು ಸುಸ್ತಿನ
Astro Tips: ಈ ಗ್ರಹಗಳ ದೆಸೆ ವ್ಯಕ್ತಿಯನ್ನು ಸೋಮಾರಿಯನ್ನಾಗಿಸುತ್ತವೆ title=
Astro Tips

Reason Of Laziness: ನಮ್ಮ ಜೀವನದಲ್ಲಿ ನಡೆಯುವ ಘಟನೆಗಳ ಹಿಂದೆ ಗ್ರಹಗಳ ಕೈವಾಡವಿರುತ್ತದೆ ಎಂದು ಜೋತಿಷ್ಯ ಶಾಸ್ತ್ರ ಹೇಳುತ್ತದೆ. ವ್ಯಕ್ತಿಯ ಸ್ವಭಾವ, ಭವಿಷ್ಯ ಮತ್ತು ವ್ಯಕ್ತಿತ್ವ ಎಲ್ಲವೂ ಕೂಡ ಗ್ರಹಗಳ ಮೇಲೆ ಅವಲಂಬಿಸಿದೆ. ಒಬ್ಬ ವ್ಯಕ್ತಿಯು ದೈಹಿಕವಾಗಿ ಸದೃಢನಾಗಿದ್ದರೂ ಕೂಡ ಸೋಮಮಾರಿ ಅಥವಾ ಸುಸ್ತಿನಿಂದ ಕೂಡಿರುವುದನ್ನು ನೀವು ಹಲವು ಬಾರಿ ನೋಡಿರಬಹುದು. ಇದರ ಹಿಂದೆಯೂ ಕೂಡ ವ್ಯಕ್ತಿಯ ಜಾತಕದ ಗ್ರಹಸ್ಥಿತಿ ಇರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವ್ಯಕ್ತಿಯ ಗ್ರಹಗಳ ಕೆಲವು ವಿಶೇಷ ಸ್ಥಿತಿಯು ವ್ಯಕ್ತಿಯನ್ನು ಸೋಮಾರಿಯನ್ನಾಗಿ ಮಾಡುತ್ತದೆ. ಯಾವ ಗ್ರಹಗಳ ಸ್ಥಿತಿಯು ವ್ಯಕ್ತಿಯನ್ನು ಸೋಮಾರಿ ಮತ್ತು ಸುಸ್ತಿನಿಂದ ಕೂಡಿರುವಂತೆ ಮಾಡುತ್ತದೆ ತಿಳಿದುಕೊಳ್ಳೋಣ ಬನ್ನಿ. 

ಶನಿ ದೆಸೆ
ಎಲ್ಲಾ ಗ್ರಹಗಳಿಗೆ ಹೋಲಿಸಿದರೆ ಶನಿ ತುಂಬಾ ನಿಧಾನಗತಿಯಲ್ಲಿ ಚಲಿಸುತ್ತಾನೆ. ಯಾರ ಜಾತಕದಲ್ಲಿ ಶನಿಯ ದೆಸೆ ನಡೆಯುತ್ತಿರುತ್ತದೆಯೋ, ಅವರು ತಮ್ಮ ನಿಜ ಜೀವನದಲ್ಲಿ ತುಂಬಾ ಸೋಮಾರಿಗಳಾಗುತ್ತಾರೆ . ಇದರರ್ಥ ಶನಿ ಸೋಮಾರಿತನವನ್ನು ಹೆಚ್ಚಿಸುತ್ತಾನೆ ಎಂದಲ್ಲ, ಶನಿ ವ್ಯಕ್ತಿಗಳಿಗೆ ಶಿಸ್ತಿನಿಂದ ಇರಲು ಮತ್ತು ಕಠಿಣ ಪರಿಶ್ರಮ ಮಾಡುವುದನ್ನು ಹೇಳಿಕೊಡುತ್ತಾನೆ. ಆದರೆ, ಶನಿ ಶತ್ರು ಭಾವದಲ್ಲಿದ್ದರೆ, ವ್ಯಕ್ತಿ ಸುಸ್ತಿನಿಂದ ಕೂಡಿರುತ್ತಾನೆ. 

ಸೂರ್ಯ ದೆಸೆ
ಸೂರ್ಯ ದೇವನಿಗೆ ಹಾಗೆ ನೋಡಿದರೆ ಶಕ್ತಿಯ ಮೂಲ ಎಂದು ಹೇಳಲಾಗುತ್ತದೆ. ಆದರೆ, ಯಾವುದೇ ಜಾತಕದಲ್ಲಿ ಸೂರ್ಯ ದುರ್ಬಲ ಭಾವದಲ್ಲಿದ್ದರೆ, ವ್ಯಕ್ತಿ ತುಂಬಾ ಸೋಮಾರಿಯಾಗುತ್ತಾನೆ. ವ್ಯಕ್ತಿ ಎಷ್ಟೊಂದು ಸೋಮಾರಿಯಾಗುತ್ತಾನೆ ಎಂದರೆ, ವ್ಯಕ್ತಿಗೆ ಹಾಸಿಗೆಯಿಂದ ಮೇಲೆಳಲೂ ಕೂಡ ಆಗುವುದಿಲ್ಲ. 

ರಾಹು ದೆಸೆ
ವ್ಯಕ್ತಿಯ ಜನ್ಮ ಜಾತಕದಲ್ಲಿ ರಾಹು ಲಗ್ನ ಭಾವದಲ್ಲಿದ್ದಾರೆ ವ್ಯಕ್ತಿ ಸೋಮಾರಿಯಾಗುತ್ತಾನೆ. ಹೀಗಿರುವಾಗ ವ್ಯಯಕ್ತಿಯಿಂದ ಯಾವುದೇ ಸುಲಭ  ನಿರ್ಣಯ ಕೈಗೊಳ್ಳುವುದು ಸಾಧ್ಯವಾಗುವುದಿಲ್ಲ. ಅಷ್ಟೇ ಅಲ್ಲ ಯಾವುದು ಸರಿ ಅಥವಾ ಯಾವುದು ತಪ್ಪು ಇದನ್ನು ನಿರ್ಧರಿಸಲು ಅವನಿಂದ ಆಗುವುದಿಲ್ಲ. ಹೀಗಿರುವಾಗ ವ್ಯಕ್ತಿಯ ಮೆದುಳು ತುಂಬಾ ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುತ್ತದೆ. 

ಚಂದ್ರನ ದೆಸೆ
ಜೋತಿಷ್ಯ ಶಾಸ್ತ್ರದ ಪ್ರಕಾರ, ಚಂದ್ರ ಒಂದು ವೇಳೆ ಯಾವುದೇ ವ್ಯಕ್ತಿಯ ಕುಂಡಲಿಯ ಕೇಂದ್ರ ಸ್ಥಾನ ಅಂದರೆ,  ಪ್ರಥಮ, ಚತುರ್ಥ, ಸಪ್ತಮ ಹಾಗೂ ದಶಮ  ಸ್ಥಾನದಲ್ಲಿದ್ದರೆ ಅಥವಾ ಈ ಮನೆಗಳಲ್ಲಿ ಕರ್ಕ ರಾಶಿ ಇದ್ದರೆ, ವ್ಯಕ್ತಿಯ ಸ್ವಭಾವ ತುಂಬಾ ಸೋಮಾರಿತನದಿಂದ ಕೂಡಿರುತ್ತದೆ. ಇವರು ಕೇವಲ ತಮ್ಮ ಯೋಚನೆಯಲ್ಲಿ ತಾವೇ ಮುಳುಗಿರುತ್ತಾರೆ ಮತ್ತು ಕಷ್ಟಪಡಲು ಹಿಂಜರಿಯುತ್ತಾರೆ. 

ಇದನ್ನೂ ಓದಿ-Money Plant Tricks: ಮನಿ ಪ್ಲಾಂಟ್ ಗೆ ಸಂಬಂಧಿಸಿದ ಈ ಟ್ರಿಕ್ ತುಂಬಾ ಚಮತ್ಕಾರಿಯಾಗಿದೆ

ಗುರು ದೆಸೆ
ಕುಂಡಲಿಯಲ್ಲಿ ಒಂದು ವೇಳೆ ಗುರು ದುರ್ಬಲನಾಗಿದ್ದರೆ, ವ್ಯಕ್ತಿ ಸೋಮಾರಿತನದಿಂದ ತುಂಬಿರುತ್ತಾನೆ. ಗುರು ದೆಸೆಯಿಂದ ವ್ಯಕ್ತಿಗೆ ತಾನು ತನ್ನ ಜೀವನದಲ್ಲಿ ಎಲ್ಲವೂ ಸಾಧಿಸಿರುವ ಮತ್ತು ಹೆಚ್ಚಿಗೆ ಸಾಧಿಸಬೇಕಾದುದು ಏನೂ ಇಲ್ಲ ಎಂಬ ಭಾವನೆ ಉಂಟಾಗುತ್ತದೆ. ಇದೇ ಕಾರಣದಿಂದ ಇವರು ತಮ್ಮ ಜೀವನದಲ್ಲಿ ಮುಂದಕ್ಕೆ ಹೋಗುವುದಿಲ್ಲ. 

ಇದನ್ನೂ ಓದಿ-Romantic People: ಈ ತಿಂಗಳಲ್ಲಿ ಜನಿಸಿದವರು ಸಖತ್‌ ರೊಮ್ಯಾಂಟಿಕ್‌ ಆಗಿರ್ತಾರೆ!

ಈ ರೀತಿ ಸೋಮಾರಿತನವನ್ನು ದೂರಗೊಳಿಸಿ
>>  ಯಾವುದೇ ರೀತಿಯ ಚಂದನದ ಬಳಕೆ ವ್ಯಕ್ತಿಯನ್ನು ಸೋಮಾರಿತನದಿಂದ ದೂರಗೊಳಿಸಲು ಸಹಕರಿಸುತ್ತದೆ. 
>> ರಾಹುವಿನ ಅಶುಭ ಪ್ರಭಾವ ಕಡಿಮೆ ಮಾಡಿಕೊಳ್ಳಲು ಶುಕ್ರವಾರ ಹಾಗೂ ಭಾನುವಾರ ಭೈರವನಿಗೆ ಪೂಜೆ ಸಲ್ಲಿಸಬೇಕು.  
>> ವ್ಯಕ್ತಿಗಳ ಜೀವನದಲ್ಲಿ ಬಣ್ಣಗಳಿಗೆ ವಿಶೇಷ ಮಹತ್ವವಿದೆ. ನಿಮ್ಮನ್ನು ನೀವು ಸಕ್ರೀಯವಾಗಿರಿಸಿಕೊಳ್ಳಲು ಕಿತ್ತಳೆ ಬಣ್ಣವನ್ನು ಹೆಚ್ಚಿಗೆ ಪ್ರಯೋಗಿಸಿ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News