Astro Tips: ಮಕ್ಕಳಲ್ಲಿ ಹಲ್ಲುಗಳ ಬರುವಿಕೆಯೂ ಕೂಡ ಶುಭ-ಅಶುಭ ಸಂಕೇತಗಳನ್ನು ನೀಡುತ್ತವೆ
Children Teeth Auspicious Sign: ಚಿಕ್ಕ ಮಗುವಿನಲ್ಲಿ ಹಲ್ಲುಗಳು ಬರುವ ಒಂದು ನಿರ್ಧಿಷ್ಟ ಸಮಯವಿರುತ್ತದೆ. ಆದರೆ, ಕೆಲವೊಮ್ಮೆ ಕೆಲ ಮಕ್ಕಳಲ್ಲಿ ಹಲ್ಲುಗಳು ಬೇಗ ಕಾಣಿಸಿಕೊಂಡರೆ, ಕೆಲ ಮಕ್ಕಳಲ್ಲಿ ತಡವಾಗಿ ಕಾಣಿಸಿಕೊಳ್ಳುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಅವು ಪೋಷಕರಿಗೆ ಶುಭ ಮತ್ತು ಅಶುಭ ಎರಡೂ ಸಂಕೇತಗಳನ್ನು ನೀಡುತ್ತವೆ. ಬನ್ನಿ ಅವುಗಳ ಬಗ್ಗೆ ತಿಳಿದುಕೊಳ್ಳೋಣ.
Teeth Indications: ಮಕ್ಕಳ ನಡೆದಾಡುವಿಕೆ, ಕುಲಿತುಕೊಲ್ಲುವಿಕೆ, ತಿನ್ನುವಿಕೆ, ಹಲ್ಲು ಬರುವಿಕೆ ಇತ್ಯಾದಿಗಳ ಆರಂಭಕ್ಕೆ ನಿಗದಿತ ಸಮಯ ಇರುತ್ತದೆ. ಆದರೆ ಈ ಸಂಗತಿಗಳ ಆರಂಭ ಅಥವಾ ತಡವಾಗುವಿಕೆ ಭವಿಷ್ಯದ ಬಗ್ಗೆ ಕೆಲ ಶುಭ ಅಥವಾ ಅಶುಭ ಸಂಕೇತಗಳನ್ನು ನೀಡುತ್ತವೆ. ಸಾಮಾನ್ಯವಾಗಿ, ಮಕ್ಕಳಲ್ಲಿ ಮೊದಲ ಹಲ್ಲುಗಳು 6 ತಿಂಗಳ ವಯಸ್ಸಿನಲ್ಲಿ ಬರಲು ಪ್ರಾರಂಭಿಸುತ್ತವೆ. ಜ್ಯೋತಿಷ್ಯದಲ್ಲಿ ಮಕ್ಕಳಲ್ಲಿ ಹಲ್ಲು ಕಾಣಿಸುವ ಪ್ರಕ್ರಿಯೆಯನ್ನು ತುಂಬಾ ಮುಖ್ಯವೆಂದು ಪರಿಗಣಿಸಲಾಗಿದೆ. ಮಕ್ಕಳಿಗೆ ಯಾವ ತಿಂಗಳಲ್ಲಿ ಹಲ್ಲು ಹುಟ್ಟುವುದು ಶುಭ ಮತ್ತು ಯಾವಾಗ ಅಶುಭ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಹುಟ್ಟಿನಿಂದಲೇ ಹಲ್ಲುಗಳನ್ನು ಹೊಂದಿರುವುದು
ಕೆಲವು ಶಿಶುಗಳು ಹುಟ್ಟುವಾಗಲೇ ಹಲ್ಲುಗಳಿಂದ ಹುಟ್ಟುತ್ತವೆ. ಇದು ಮಗುವಿನಲ್ಲಿ ಸಂಭವಿಸಿದರೆ, ಅದು ಪೋಷಕರಿಗೆ ತುಂಬಾ ನೋವಿನ ಸಂಗತಿಯಾಗಿದೆ. ಅಷ್ಟೇ ಅಲ್ಲ, ಇದು ಪೋಷಕರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಯಾವ ಹಲ್ಲು ಮೊದಲು ಬರುವುದು ಶುಭವಲ್ಲ?
ಸಾಮಾನ್ಯವಾಗಿ ಮಕ್ಕಳ ಕೆಳಗಿನ ಹಲ್ಲುಗಳು ಮೊದಲು ಬರುತ್ತವೆ. ಆದರೆ ಕೆಲವೊಮ್ಮೆ ಮೇಲಿನ ಹಲ್ಲುಗಳು ಮೊದಲು ಬಂದರೆ ಅದನ್ನು ಶುಭವೆಂದು ಪರಿಗಣಿಸಲಾಗುವುದಿಲ್ಲ. ಇದು ಮಗುವಿನ ತಾಯಿಯ ಪಾಲಿಗೆ ಶುಭವಲ್ಲ ಎಂದು ಹೇಳಲಾಗುತ್ತದೆ.
ಯಾವ ಮಾಸದಲ್ಲಿ ಹಲ್ಲು ಕಾಣಿಸಿಕೊಳ್ಳುವುದು ಶುಭ
>> ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಹುಟ್ಟಿದ ಮೊದಲ ತಿಂಗಳಲ್ಲಿ ಹಲ್ಲು ಹುಟ್ಟುವುದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಇದರಿಂದಾಗಿ ಮಕ್ಕಳು ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ನಂಬಲಾಗಿದೆ.
>> ಎರಡನೇ ತಿಂಗಳಲ್ಲಿ, ಮಗುವಿನಲ್ಲಿ ಹಲ್ಲಿನ ಬರುವಿಕೆ ಮಗುವಿನ ಸಹೋದರರಿಗೆ ನೋವಿನಿಂದ ಕೂಡಿದೆ.
>> ಮೂರನೇ ತಿಂಗಳಲ್ಲೂ ಹಲ್ಲು ಬರುವುದು ಶುಭವೆಂದು ಪರಿಗಣಿಸಲಾಗುವುದಿಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಾಲ್ಕನೇ ತಿಂಗಳಲ್ಲಿ ಹಲ್ಲು ಹುಟ್ಟುವುದು ಮಗುವಿನ ಪೋಷಕರಿಗೆ ಶುಭವಲ್ಲ. ಅಣ್ಣನಿಗೆ ಐದನೇ ತಿಂಗಳು ಶುಭವಲ್ಲ.
>> ಇದೇ ವೇಳೆ ಮಗುನಲ್ಲಿ ಆರನೇ ತಿಂಗಳಲ್ಲಿ ಹಲ್ಲು ಕಾಣಿಸಿಕೊಂಡರೆ, ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದರಿಂದ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಏಳನೇ ತಿಂಗಳಲ್ಲಿ ಹಲ್ಲು ಹುಟ್ಟುವುದು ತಂದೆಗೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
>> ಎಂಟನೇ ತಿಂಗಳಲ್ಲಿ ಮಗುವಿನ ಹಲ್ಲು ಹುಟ್ಟುವುದು ಮಗುವಿನ ತಾಯಿಯ ಚಿಕ್ಕಪ್ಪನಿಗೆ ನೋವು ತರುತ್ತದೆ. ಒಂಬತ್ತನೇ ತಿಂಗಳು ಮಂಗಳಕರವೆಂದು ಪರಿಗಣಿಸಲಾಗಿದೆ. ಇದೇ ವೇಳೆ ಹತ್ತನೇ ತಿಂಗಳಲ್ಲಿ ಹಲ್ಲುಗಳ ಹೊರಹೊಮ್ಮುವಿಕೆ, ಮಗುವಿಗೆ ಜೀವನದಲ್ಲಿ ಸಂತೋಷ ತರುತ್ತದೆ.
ಇದನ್ನೂ ಓದಿ-Vastu Tips : ಕಷ್ಟಪಟ್ಟು ಕೆಲಸ ಮಾಡಿದರೂ ಹಣ ನಿಲ್ಲುತ್ತಿಲ್ಲವೆ, ಹಾಗಿದ್ರೆ ಈ ಉಪಾಯ ಮಾಡಿ!
>> ಹನ್ನೊಂದನೇ ತಿಂಗಳು ಮತ್ತು ಹೊರಗಿನ ಅದಕ್ಕಿಂತ ತಡವಾಗಿ ಹಲ್ಲುಗಳ ಹೊರಹೊಮ್ಮುವಿಕೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಹನ್ನೊಂದನೇ ತಿಂಗಳಲ್ಲಿ ಹಲ್ಲುಗಳ ಕಾಣಿಸಿಕೊಳ್ಳುವಿಕೆ ಸಂತೋಷವನ್ನು ತರುತ್ತದೆ. ನಂತರದ ತಿಂಗಳುಗಳಲ್ಲಿ ಹಲ್ಲು ಮಗುವಿನ ಜೀವನದಲ್ಲಿ ಸಂಪದ್ಭರಿತ ಮತ್ತು ಆಹಾರದ ಕೊರತೆ ಇಲ್ಲದಿರುವಿಕೆಯನ್ನು ಸೂಚಿಸುತ್ತದೆ.
ಇದನ್ನೂ ಓದಿ-ಕೈಗೊಂಡ ಕೆಲಸ ಅರ್ಧಕ್ಕೆ ನಿಲ್ಲುತ್ತಿದೆಯೇ? ಏಲಕ್ಕಿಯಲ್ಲಿದೆ ಇದಕ್ಕೆ ಪರಿಹಾರ!
(ಹಕ್ಕುತ್ಯಾಗ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.