Astro Remedies for Asubh Planet Problems: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜಾತಕದಲ್ಲಿರುವ ಉಚ್ಛ ಗ್ರಹಗಳು ಶುಭ ಫಲಿತಾಂಶಗಳನ್ನು ನೀಡುತ್ತವೆ, ನೀಚ ಗ್ರಹಗಳು ಅಶುಭ ಫಲಿತಾಂಶಗಳನ್ನು ನೀಡುತ್ತವೆ. ಯಾವ ರಾಶಿಯಲ್ಲಿ ಯಾವ ಗ್ರಹ ಉಚ್ಛ ಸ್ಥಾನದಲ್ಲಿರುತ್ತವೆ ಎಂಬುದನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಯಾವುದೇ ಒಂದು ಗ್ರಹವು ಉಚ್ಛ ಸ್ಥಾನದಲ್ಲಿದ್ದರೆ, ಅದು ತುಂಬಾ ಬಲಿಷ್ಠವಾಗಿರುತ್ತದೆ, ಆದರೆ ನೀಚ ಸ್ಥಾನದಲ್ಲಿರುವ ಗ್ರಹವು ದುರ್ಬಲವಾಗಿರುತ್ತದೆ. ಇದೆ ಕಾರಣದಿಂದ, ಗ್ರಹಗಳಿಗೆ ಸಂಬಂಧಿಸಿದ ಜೀವನದ ಕ್ಷೇತ್ರಗಳಲ್ಲಿ ಒಳ್ಳೆಯ ಅಥವಾ ಕೆಟ್ಟ ಫಲಿತಾಂಶಗಳು ಪ್ರಪ್ತಿಯಾಗುತ್ತವೆ. ಏಕೆಂದರೆ ಈ 9 ಗ್ರಹಗಳು ನಮ್ಮ ಜೀವನದ ಕೆಲವು ಅಂಶಗಳಿಗೆ ಸಂಬಂಧಿಸಿವೆ. ಉದಾಹರಣೆಗೆ - ವೃತ್ತಿ, ಆರ್ಥಿಕ ಸ್ಥಿತಿ, ಆರೋಗ್ಯ, ಪ್ರೇಮ ಜೀವನ, ವೈವಾಹಿಕ ಜೀವನ, ಯಶಸ್ಸು, ಗೌರವ ಇತ್ಯಾದಿ.

COMMERCIAL BREAK
SCROLL TO CONTINUE READING

ಯಾವ ರಾಶಿಯಲ್ಲಿ ಯಾವ ಗ್ರಹ ಉಚ್ಛ ಸ್ಥಾನದಲ್ಲಿರುತ್ತದೆ?
>> ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯನು ಮೇಷ ರಾಶಿಯಲ್ಲಿ ಉಚ್ಛ ಸ್ಥಾನದಲ್ಲಿರುತ್ತಾನೆ

>> ಜಾತಕದಲ್ಲಿ ಚಂದ್ರನು ವೃಷಭ ರಾಶಿಯಲ್ಲಿ ಉಚ್ಛ ಸ್ಥಾನದಲ್ಲಿರುತ್ತಾನೆ.

>> ಗುರುವು ಕರ್ಕರಾಶಿಯಲ್ಲಿ ಉಚ್ಛ ಸ್ಥಾನದಲ್ಲಿರುತ್ತಾನೆ.

>> ಕನ್ಯಾರಾಶಿಯಲ್ಲಿ ಬುಧನು ಉಚ್ಛ ಸ್ಥಾನದಲ್ಲಿರುತ್ತಾನೆ

>> ಶನಿಯು ತುಲಾ ರಾಶಿಯಲ್ಲಿ ಉನ್ನತ ಸ್ಥಾನದಲ್ಲಿರುತ್ತಾನೆ.

>> ಮಕರ ರಾಶಿಯಲ್ಲಿ ಮಂಗಳ ಉತ್ತುಂಗ ಸ್ಥಾನದಲ್ಲಿರುತ್ತದೆ.

>> ಮೀನ ರಾಶಿಯಲ್ಲಿ ಶುಕ್ರನು ಉಚ್ಛ ಸ್ಥಾನದಲ್ಲಿರುತ್ತಾನೆ.


ರಾಹು-ಕೇತುಗಳು ಯಾವ ರಾಶಿಗಳಲ್ಲಿ ಇರುತ್ತವೆಯೂ, ಆಯಾ ರಾಶಿಗಳ ರಾಷ್ಯಾಧಿಪನ ಮೇಲೆ ಅವುಗಳ ಕೆಟ್ಟ ಹಾಗೂ ಒಳ್ಳೆಯ ಫಲಿತಾಂಶಗಳು ಅವಲಂಭಿಸಿರುತ್ತವೆ. 


ಈ ತಪ್ಪುಗಳು ಶುಭ ಗ್ರಹಗಳ ಅಶುಭ ಫಲಿತಾಂಶಕ್ಕೆ ಕಾರಣವಾಗುತ್ತವೆ
ವ್ಯಕ್ತಿಯ ಜಾತಕದಲ್ಲಿ ಯಾವ ಗ್ರಹ ಉಚ್ಛ್ರಾಯ ಸ್ಥಿತಿಯಲ್ಲಿದೆಯೋ ಅದು ಆಯಾ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶವನ್ನು ನೀಡುತ್ತದೆ. ಆದರೆ ವ್ಯಕ್ತಿಯು ಆ ಗ್ರಹವನ್ನು ದುರ್ಬಲಗೊಳಿಸುವಂತಹ ಕೆಲಸಗಳನ್ನು ಮಾಡಿದರೆ, ಗ್ರಹ ಉಚ್ಛ್ರಾಯ ಸ್ಥಿತಿಯಲ್ಲಿದ್ದರೂ ಕೂಡ ಅದು ತನ್ನ ಸಂಪೂರ್ಣ ಫಲಗಳನ್ನು ನೀಡಲು ವಿಫಲವಾಗುತ್ತದೆ. 


ಸೂರ್ಯ: ವ್ಯಕ್ತಿಯ ಜಾತಕದಲ್ಲಿ ಸೂರ್ಯ ಉತ್ಕೃಷ್ಟನಾಗಿದ್ದು, ವ್ಯಕ್ತಿ ತಪ್ಪು ಕಾರ್ಯಗಳಲ್ಲಿ ತೊಡಗಿದ್ದಾರೆ, ಅಂದರೆ, ಅವನು ತನ್ನ ತಂದೆ, ಗುರು, ಉನ್ನತ ಅಧಿಕಾರಿಯೊಂದಿಗೆ ಅನುಚಿತವಾಗಿ ವರ್ತಿಸಿದರೆ, ವ್ಯಕ್ತಿಯ ಜಾತಕದಲ್ಲಿನ ಸೂರ್ಯ ದುರ್ಬಲನಾಗುತ್ತಾನೆ. ಇಂತಹ ಪರಿಸ್ಥಿತಿಯಲ್ಲಿ, ಸೂರ್ಯ ಉನ್ನತ ಸ್ಥಾನದಲ್ಲಿದ್ದರೂ ಕೂಡ ಶುಭ ಫಲಗಳನ್ನು ನೀಡಲು ವಿಫಲನಾಗುತ್ತಾನೆ.


ಚಂದ್ರ: ವ್ಯಕ್ತಿಯು ತನ್ನ ತಾಯಿ, ತಾಯಿಯ ತಾಯಿ ಅಥವಾ ತಂದೆಯ ತಾಯಿಯನ್ನು ಗೌರವಿಸದಿದ್ದರೆ, ಉತ್ಕೃಷ್ಟ ಚಂದ್ರನು ದುರ್ಬಲನಾಗುತ್ತಾನೆ. ಇದರಿಂದ ವ್ಯಕ್ತಿ ಮಾನಸಿಕ ಒತ್ತಡ, ಖಿನ್ನತೆ ಎದುರಿಸಬೇಕಾಗುತ್ತದೆ.


ಮಂಗಳ: ಸಹೋದರನೊಂದಿಗೆ ಅನುಚಿತವಾಗಿ ವರ್ತಿಸುವುದು, ಆತನಿಗೆ ತೊಂದರೆಯನ್ನು ನೀಡುವುದು, ಮಂಗಳ ಗ್ರಹವನ್ನು ದುರ್ಬಲಗೊಳಿಸುತ್ತದೆ.


ಬುಧ: ಶಿಕ್ಷಕ, ಗುರು, ತಾಯಿಯನ್ನು ಅವಮಾನಿಸುವುದು, ಅವರಿಗೆ ತೊಂದರೆ ಕೊಡುವುದು ಬುಧನನ್ನು ದುರ್ಬಲಗೊಳಿಸುತ್ತದೆ. ಇದು ವ್ಯಕ್ತಿಯ ವ್ಯವಹಾರದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.


ಗುರು: ದೇವರು, ಹಿರಿಯರು ಮತ್ತು ಬ್ರಾಹ್ಮಣರನ್ನು ನಿಂದಿಸುವುದರಿಂದ ವ್ಯಕ್ತಿಯ ಜಾತಕದಲ್ಲಿನ ಉಚ್ಛ್ರಾಯ ಗುರು ದುರ್ಬಲವಾಗುತ್ತಾನೆ.

ಶುಕ್ರ: ಮಹಿಳೆಯರನ್ನು ಅವಮಾನಿಸುವುದು ಅಥವಾ ಕಿರುಕುಳ ನೀಡುವುದು ಶುಕ್ರನನ್ನು ದುರ್ಬಲಗೊಳಿಸುತ್ತದೆ. ಹಸುವಿಗೆ ಕಿರುಕುಳ ನೀಡುವುದರಿಂದಲೂ ಕೂಡ  ಶುಕ್ರ ಗ್ರಹ ದುರ್ಬಲವಾಗುತ್ತದೆ.


ಇದನ್ನೂ ಓದಿ-Good And Bad Indications Of Crow: ಶುಭ ಹಾಗೂ ಅಶುಭಗಳ ಕುರಿತು ತುಂಬಾ ಮಹತ್ವದ ಸಂಕೇತಗಳನ್ನು ನೀಡುತ್ತದೆ ಯಮದೂತ ಕಾಗೆ


ಶನಿ: ಮಾಂಸಾಹಾರ-ಮದ್ಯ ಸೇವನೆ, ನಾಯಿಗೆ ಕಿರುಕುಳ, ಆಶಕ್ತರು ಹಾಗೂ ಅಸಹಾಯಕರಿಗೆ ಕಿರುಕುಳ ನೀಡುವುದು, ಕೂಲಿಕಾರರನ್ನು ಪೀಡಿಸುವುದು ಶನಿಯನ್ನು ದುರ್ಬಲಗೊಳಿಸುತ್ತದೆ. ಇದರಿಂದ ಶನಿಯು ಉಚ್ಛಸ್ಥಾನದಲ್ಲಿದ್ದರು ಕೂಡ ಶುಭ ಫಲಗಳು ಪ್ರಾಪ್ತಿಯಾಗುವುದಿಲ್ಲ. 


ಇದನ್ನೂ ಓದಿ-Vastu Tips: ಮನೆಯ ಈ ದಿಕ್ಕಿಗೆ ಗಣಪತಿಯ ಮೂರ್ತಿ ಇಡುವುದರಿಂದ ಅದೃಷ್ಟ

(Disclaimer -  ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.