Mangal Gochar In Aries: ಯಾವುದೇ ಗ್ರಹವು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಬದಲಾಗುವುದನ್ನು ಗ್ರಹಗಳ ಸಂಕ್ರಮಣ ಎಂದು ಕರೆಯಲಾಗುತ್ತದೆ. ಜೂನ್‌ನಲ್ಲಿ, 5 ದೊಡ್ಡ ಗ್ರಹಗಳು ರಾಶಿಚಕ್ರವನ್ನು ಬದಲಾಯಿಸಲಿವೆ. ಇದರಲ್ಲಿ ಮಂಗಳ ಗ್ರಹವೂ ಸೇರಿದೆ. ಜೂನ್ 27 ರಂದು ಬೆಳಿಗ್ಗೆ 5:39 ಕ್ಕೆ ಮಂಗಳ ಗ್ರಹವು ಮೀನ ರಾಶಿಯಿಂದ ಹೊರ ಬಂದು ಮೇಷ ರಾಶಿಗೆ ಸಾಗಲಿದೆ. ಜ್ಯೋತಿಷ್ಯದಲ್ಲಿ, ಮಂಗಳ ಗ್ರಹವನ್ನು ಧೈರ್ಯ, ವ್ಯವಹಾರ ಮತ್ತು ಶಕ್ತಿಯ ಅಂಶವೆಂದು ಪರಿಗಣಿಸಲಾಗುತ್ತದೆ. ಮಂಗಳ ಸಂಕ್ರಮಣವು ಈ 4 ರಾಶಿಯವರಿಗೆ ಪ್ರಯೋಜನಕಾರಿಯಾಗಲಿದೆ.
ಮಂಗಳ ಸಂಕ್ರಮಣ ಈ ರಾಶಿಚಕ್ರದ ಜನರಿಗೆ ಶುಭ ಫಲ ನೀಡುತ್ತದೆ :
ಮಿಥುನ : ಈ ರಾಶಿಯ ಜನರು ಮಂಗಳ ಸಂಚಾರದ ಶುಭ ಫಲಿತಾಂಶಗಳನ್ನು ಪಡೆಯಲಿದ್ದಾರೆ. ಕೆಲಸದ ಸ್ಥಳದಲ್ಲಿ ಅನುಕೂಲಕರ ವಾತಾವರಣವಿರುತ್ತದೆ. ಮತ್ತು ಈ ಅವಧಿಯಲ್ಲಿ ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ. ಉದ್ಯಮಿಗಳಿಗೆ ಲಾಭವನ್ನು ತರಲಿದೆ. ಆದರೆ . ಈ ಅವಧಿಯಲ್ಲಿ ಯಾವುದೇ ರೀತಿಯ ಸಾಲವನ್ನು ತೆಗೆದುಕೊಳ್ಳಬಾರದು. ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ. ವೃತ್ತಿಜೀವನದಲ್ಲಿ ನಿರೀಕ್ಷೆಗೂ ಮೀರಿದ ಫಲಿತಾಂಶಗಳು ಸಿಗಲಿವೆ.
ಇದನ್ನೂ ಓದಿ : Weekly Horoscope: ಹೊಸ ಉದ್ಯೋಗ ಹುಡುಕುತ್ತಿರುವ ಜನರಿಗೆ ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆ
ಸಿಂಹ : ಜ್ಯೋತಿಷ್ಯದ ಪ್ರಕಾರ, ಸಿಂಹ ರಾಶಿಯ ಜನರು ಅದೃಷ್ಟದ ಬೆಂಬಲವನ್ನು ಪಡೆಯಲಿದ್ದಾರೆ. ಕುಟುಂಬ ಜೀವನದಲ್ಲೂ ಸಮತೋಲನ ಇರುತ್ತದೆ. ಆಸ್ತಿ ವಿಷಯಗಳಲ್ಲಿ ಸಹ ಲಾಭವನ್ನು ಪಡೆಯಬಹುದು. ಈ ಸಮಯವು ಉದ್ಯೋಗಿಗಳಿಗೆ ಮತ್ತು ಉದ್ಯಮಿಗಳಿಗೆ ಅನುಕೂಲಕರವಾಗಿರುತ್ತದೆ. ಆದರೆ ಒಂದಕ್ಕಿಂತ ಹೆಚ್ಚು ಕೆಲಸಕ್ಕೆ ಕೈ ಹಾಕುವುದು ಸಮಸ್ಯೆಗಳನ್ನು ಉಂಟುಮಾಡಬಹುದು. ಮಂಗಳ ಸಂಚಾರದಿಂದ ಮನೆಯಲ್ಲಿ ಎಲ್ಲವೂ ಮಂಗಳವಾಗಲಿದೆ. ಮನೆಯಲ್ಲಿ ಸಂತೋಷ ಮತ್ತು ಶಾಂತಿ ನೆಲೆಸಲಿದೆ.
ಮಕರ ರಾಶಿ : ಈ ರಾಶಿಚಕ್ರದ ಸಂಚಾರವು ನಾಲ್ಕನೇ ಮನೆಯಲ್ಲಿ ಸಂಭವಿಸಲಿದೆ. ಈ ಸಮಯದಲ್ಲಿ ಆಸ್ತಯಲ್ಲಿ ಲಾಭದಾಯಕವಾಗಬಹುದು. ತಾಯಿಯ ಆರೋಗ್ಯದ ಬಗ್ಗೆ ವಿಶೇಷ ಗಮನ ಕೊಡುವುದು ಒಳ್ಳೆಯದು. ಕೆಲಸದ ಸ್ಥಳದಲ್ಲಿಯೂ ಶುಭ ಫಲಿತಾಂಶಗಳನ್ನು ಪಡೆಯಬಹುದು. ಈ ಸಮಯದಲ್ಲಿ, ಹಣಕಾಸಿನ ವಿಷಯಗಳ ಬಗ್ಗೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ.
ಇದನ್ನೂ ಓದಿ : Ketu gochar: ಮುಂದಿನ ಒಂದು ವರ್ಷದವರೆಗೆ ಈ 4 ರಾಶಿಯವರ ಮೇಲೆ ಕೃಪೆ ತೋರುತ್ತಾನೆ ಕೇತು
ಮೀನ : ಮಂಗಳ ಸಂಚಾರವು ಈ ರಾಶಿಯವರಿಗೆ ಅನುಕೂಲಕರವಾಗಿರುತ್ತದೆ. ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ಅದೃಷ್ಟ ಕೂಡ ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ಯಾವುದೇ ಕೆಲಸವನ್ನು ಪ್ರಾರಂಭಿಸುವ ಬಗ್ಗೆ ಯೋಚಿಸುತ್ತಿದ್ದರೆ, ಈ ಸಮಯ ಸೂಕ್ತವಾಗಿರುತ್ತದೆ. ಈ ಸಮಯದಲ್ಲಿ, ನೀವು ಕೈ ಹಾಕುವ ಕೆಲಸವು ಯಶಸ್ವಿಯಾಗುತ್ತದೆ. ಆದರೆ ಈ ಸಮಯದಲ್ಲಿ, ಕಣ್ಣುಗಳು ಅಥವಾ ಹಲ್ಲುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಈ ಬಗ್ಗೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಿ.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆ ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.