Astro Tips: ಬೆಕ್ಕಿಗೆ ಸಂಬಂಧಿಸಿದ ಈ ಒಂದು ಸಂಗತಿ ನಿಮಗೆ ಕೋಟ್ಯಾಧಿಪತಿಯನ್ನಾಗಿಸಬಹುದು, ಲಕ್ಷ್ಮಿ ಯಂತ್ರದಂತೆ ಕೆಲಸ ಮಾಡುತ್ತದೆ
Jyotish Upay: ಜ್ಯೋತಿಷ್ಯ ಶಾಸ್ತ್ರದಲ್ಲಿ ತಾಯಿ ಲಕ್ಷ್ಮಿಯ ಕೃಪೆ ಪಡೆಯಲು ಹಲವು ಉಪಾಯಗಳನ್ನು ಸೂಚಿಸಲಾಗಿದೆ. ಪ್ರತಿಯೋರ್ವ ವ್ಯಕ್ತಿ ತಾಯಿ ಲಕ್ಷ್ಮಿಯ ಕೃಪೆ ಪಡೆಯಲು ಬಯಸುತ್ತಾನೆ. ಹೀಗಿರುವಾಗ ಪೂಜೆ-ಪುನಸ್ಕಾರಗಳ ಜೊತೆಗೆ ಜ್ಯೋತಿಷ್ಯದಲ್ಲಿ ಹೇಳಲಾಗಿರುವ ಕೆಲ ಉಪಾಯಗಳನ್ನು ಕೂಡ ಅನುಸರಿಸಿದರೆ ವಿಶೇಷ ಲಾಭಕಾರಿ ಸಾಬೀತಾಗಲಿವೆ.
Goddess Lakshmi Blessings: ಸಾಕಷ್ಟು ಹಣವನ್ನು ಸಂಪಾದಿಸಲು ಯಾರು ತಾನೇ ಬಯಸುವುದಿಲ್ಲ ಹೇಳಿ. ಎಲ್ಲರೂ ಸಾಕಷ್ಟು ಹಣವನ್ನು ಸಂಪಾದಿಸಿ ಜೀವನದಲ್ಲಿ ಸುಖ-ಶಾಂತಿಯ ಜೊತೆಗೆ ನೆಮ್ಮದಿಯ ಜೀವನ ನಡೆಸಲು ಬಯಸುತ್ತಾರೆ. ಇದಕ್ಕಾಗಿ ಜನರು ಸಾಕಷ್ಟು ಪರಿಶ್ರಮ ಕೂಡ ಪಡುತ್ತಾರೆ. ಆದರೆ, ಪರಿಶ್ರಮದ ಜೊತೆಗೆ ವ್ಯಕ್ತಿಗೆ ಭಾಗ್ಯದ ಬಲವೂ ಕೂಡ ಬೇಕಾಗುತ್ತದೆ. ಜೋತಿಷ್ಯ ಶಾಸ್ತ್ರದಲ್ಲಿ ತಾಯಿ ಲಕ್ಷ್ಮಿಯ ಕೃಪೆ ಪಡೆಯಲು ಕೆಲ ಉಪಾಯಗಳನ್ನು ಉಲ್ಲೇಖಿಸಲಾಗಿದೆ. ಈ ಉಪಾಯಗಳನ್ನು ಅನುಸರಿಸಿದರೆ. ವ್ಯಕ್ತಿಗಳ ದಿನವೇ ಬದಲಾಗಲು ಸಮಯ ಬೇಕಾಗುವುದಿಲ್ಲ.
ಜೋತಿಷ್ಯ ಶಾಸ್ತ್ರದಲ್ಲಿ ಬೆಕ್ಕನ್ನು ತಾಯಿ ಲಕ್ಷ್ಮಿಯ ಸ್ವರೂಪ ಎಂದು ಹೇಳಲಾಗಿದೆ. ಹೀಗಿರುವಾಗ ಬೆಕ್ಕು ಕಾಣಿಸಿಕೊಳ್ಳುವುದು ಅಥವಾ ಬೆಕ್ಕು ಬರುವುದು ಶುಭ ಸಂಕೇತ ಎಂದು ಹೇಳಲಾಗುತ್ತದೆ. ಆದರೆ, ಬೆಕ್ಕಿಗೆ ಸಂಬಂಧಿಸಿದ ಈ ಒಂದು ಸಂಗತಿಯನ್ನು ನೀವು ನಿಮ್ಮ ಮನೆಯಲ್ಲಿಟ್ಟುಕೊಂಡರೆ, ನಿಮ್ಮ ಭಾಗ್ಯ ಬದಲಾವಣೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಹೌದು, ನಾವು ಹೇಳುತ್ತಿರುವುದು ಬೆಕ್ಕಿನ ಗರ್ಭನಾಳದ ಕುರಿತು,
ಲಕ್ಷ್ಮಿ ಯಂತ್ರದಂತೆ ಕಾರ್ಯನಿರ್ವಹಿಸುತ್ತದೆ ಬೆಕ್ಕಿನ ಗರ್ಭನಾಳ
ಜೋತಿಷ್ಯ ಶಾಸ್ತ್ರದಲ್ಲಿ ತಾಯಿ ಲಕ್ಷ್ಮಿಯ ಆಶಿರ್ವಾದ ಪಡೆಯಲು ಹಾಗೂ ಪ್ರಸನ್ನಗೊಳಿಸಲು ಹಲವು ಉಪಾಯಗಳನ್ನು ಸೂಚಿಸಲಾಗಿದೆ. ಅವುಗಳಲ್ಲಿ ಬೆಕ್ಕಿನ ಗರ್ಭನಾಳವನ್ನು ಜೋಪಾನವಾಗಿಟ್ಟುಕೊಳ್ಳುವುದು ಕೂಡ ಒಂದಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಬೆಕ್ಕಿನ ಗರ್ಭನಾಳ ಲಕ್ಷ್ಮಿ ಯಂತ್ರದಂತೆ ಕೆಲಸ ಮಾಡುತ್ತದೆ. ಅದನ್ನು ಜೋಪಾನವಾಗಿಟ್ಟುಕೊಂಡರೆ, ಒಂದೇ ರಾತ್ರಿಯಲ್ಲಿ ಸಿರಿವಂತಿಕೆ ನಿಮ್ಮದಾಗುತ್ತದೆ. ವ್ಯಕ್ತಿಗೆ ಎಂದಿಗೂ ಕೂಡ ಹಣಕಾಸಿನ ಮುಗ್ಗಟ್ಟು ಎದುರಾಗುವುದಿಲ್ಲ.
ಈ ರೀತಿ ಜೋಪಾನವಾಗಿಟ್ಟುಕೊಳ್ಳಿ
ಭಾಗ್ಯ ಹಾಗೂ ಸೌಭಾಗ್ಯದ ಕಾರಣ ವ್ಯಕ್ತಿಗೆ ಧನಪ್ರಾಪ್ತಿಯಾಗುತ್ತದೆ. ಹೀಗಿರುವಾಗ ಭಾಗ್ಯ ಮತ್ತು ಸೌಭಾಗ್ಯವನ್ನು ಹೆಚ್ಚಿಸಿಕೊಳ್ಳಲು ಕೆಲ ಸಂಗತಿಗಳು ಶುಭ ಎಂದು ಹೇಳಲಾಗುತ್ತದೆ. ಜೋತಿಷ್ಯ ಶಾಸ್ತ್ರದ ಪ್ರಕಾರ ಬೆಕ್ಕಿನ ಗರ್ಭನಾಳ ಸಿಗುವುದು ತುಂಬಾ ಅಪರೂಪ ಹಾಗೂ ಕಷ್ಟಸಾಧ್ಯದ ಕೆಲಸವಾಗಿದೆ. ಒಂದು ವೇಳೆ ನೀವು ಬೆಕ್ಕಿನ ಗರ್ಭನಾಳವನ್ನು ಪಡೆಯಲು ಯಶಸ್ವಿಯಾದರೆ ತಕ್ಷಣವೆ ಆದರೆ ಮೇಲೆ ಅರಿಶಿಣ ಲೇಪವನ್ನು ಹಚ್ಚಿಕೊಳ್ಳಿ. ಈ ರೀತಿ ಮಾಡುವುದರಿಂದ ಅದು ಲಕ್ಷ್ಮಿ ಯಂತ್ರದಂತೆ ಕಾರ್ಯ ನಿರ್ವಹಿಸುತ್ತದೆ. ಇದು ಧನಾಗಮದ ಎಲ್ಲಾ ಮಾರ್ಗಗಳನ್ನು ತೆರೆಯುತ್ತದೆ.
ಇದನ್ನೂ ಓದಿ-Shani Dev: ಶನಿ ಮಹಾರಾಜನ ನೆಚ್ಚಿನ ರಾಶಿ ಯಾವುದು ಗೊತ್ತಾ? ಈ ರಾಶಿಗಳ ಜನರಿಗೆ ಶನಿ ಸತಾಯಿಸುವುದಿಲ್ಲ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.