Astro Tips: ಮನೆಯ ನಕಾರಾತ್ಮಕ ಶಕ್ತಿ ಹೋಗಲಾಡಿಸಲು ಇಲ್ಲಿದೆ ಸರಳ ಪರಿಹಾರ
ವಾಸ್ತು ಶಾಸ್ತ್ರದ ಸಲಹೆಗಳು: ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಮನೆಯಲ್ಲಿ ಕರ್ಪೂರವನ್ನು ಹಚ್ಚಿದರೆ ನಕಾರಾತ್ಮಕ ಶಕ್ತಿ ಮನೆಯಿಂದ ದೂರವಾಗುತ್ತದೆ. ಪೂಜೆಯ ಸಮಯದಲ್ಲಿ ಕರ್ಪೂರವನ್ನು ಉರಿಸಬೇಕು ಎಂದು ಹೇಳಲಾಗುತ್ತದೆ. ಹಿಂದೂ ಧರ್ಮದಲ್ಲಿ ಕರ್ಪೂರವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.
ನವದೆಹಲಿ: ಮನೆಯ ನಕಾರಾತ್ಮಕ ಶಕ್ತಿ ತೊಡೆದುಹಾಕಲು ಜನರು ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ನಕಾರಾತ್ಮಕ ಶಕ್ತಿಯಿದ್ದಾಗ ಮನೆಯ ಯಾವುದೇ ಸದಸ್ಯರು ಪ್ರಗತಿ ಹೊಂದಲು ಸಾಧ್ಯವಿಲ್ಲ. ಕುಟುಂಬದ ಸದಸ್ಯರಲ್ಲಿ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಈ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ಹೊಂದಲು ನೀವು ವಾಸ್ತುಶಾಸ್ತ್ರದ ಸಹಾಯ ತೆಗೆದುಕೊಳ್ಳಬೇಕು. ಹೀಗಾಗಿ ನೀವು ಮನೆಯ ನಕಾರಾತ್ಮಕ ಶಕ್ತಿ ನಿವಾರಿಸಬೇಕು. ಸಕಾರಾತ್ಮಕ ಶಕ್ತಿಯು ಕುಟುಂಬದಲ್ಲಿ ಸಮೃದ್ಧಿ ತರುತ್ತದೆ ಮತ್ತು ಮನೆ ಸದಸ್ಯರಿಗೆ ಪ್ರಗತಿಯನ್ನು ಸಹ ತರುತ್ತದೆ. ನಿಮ್ಮ ಮನೆಯಿಂದ ನಕಾರಾತ್ಮಕ ಶಕ್ತಿ ಹೋಗಲಾಡಿಸುವ ಕೆಲವು ಸರಳ ಪರಿಹಾರ ಕ್ರಮಗಳು ಇಲ್ಲಿವೆ ನೋಡಿ.
ನಕಾರಾತ್ಮಕ ಶಕ್ತಿಯ ಲಕ್ಷಣಗಳು
ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದ್ದಾಗ ನೀವು ಮಾಡುವ ಕೆಲಸವೂ ಹಾಳಾಗುತ್ತದೆ. ಕುಟುಂಬದ ಸದಸ್ಯರಿಗೆ ಅನಾರೋಗ್ಯ, ಚಿಕಿತ್ಸೆ ನೀಡಿದರೂ ರೋಗ ವಾಸಿಯಾಗುವುದಿಲ್ಲ ಮತ್ತು ಸಮಸ್ಯೆಗಳ ಮೇಲೆ ಸಮಸ್ಯೆ ಬರುವುದು ಇವೇ ನಕಾರಾತ್ಮಕ ಶಕ್ತಿಯ ಲಕ್ಷಣಗಳು. ಹೀಗಾಗಿಯೇ ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಸಿದಾಗ ಈ ಎಲ್ಲಾ ವಿಷಯಗಳು ನಿಮಗೆ ಕಾಡಲು ಪ್ರಾರಂಭಿಸುತ್ತವೆ.
ಇದನ್ನೂ ಓದಿ: ಈ ರಾಶಿಯವರಿಗೆ ಹೋಳಿ ಬಹಳ ಮಂಗಳಕರ! ರಾಹು-ಶುಕ್ರರು ಹೊಸ ಉದ್ಯೋಗ-ಬಡ್ತಿ, ಹಣ ನೀಡಲಿದ್ದಾರೆ
ನೆಗೆಟಿವ್ ಎನರ್ಜಿ ಇದೆಯೋ ಇಲ್ಲವೋ ಎಂದು ಹೀಗೆ ತಿಳಿಯುವುದು?
ನಿಮ್ಮ ಮನೆಯಲ್ಲಿ ನೆಗೆಟಿವ್ ಎನರ್ಜಿ ಇದೆಯೋ ಇಲ್ಲವೋ ಎಂದು ತಿಳಿದುಕೊಳ್ಳಬೇಕಿದ್ದರೆ 1 ಲೋಟದಲ್ಲಿ ಗಂಗಾಜಲತೆಗೆದುಕೊಂಡು ಅದರಲ್ಲಿ ಗುಲಾಬಿ ಹೂ ಹಾಕಿ, 24 ಗಂಟೆ ಅದನ್ನು ಮನೆಯ ಯಾವುದಾದರೂ ಮುಲೆಯಲ್ಲಿಡಿ. ಈ 24 ಗಂಟೆಗಳಲ್ಲಿ ಅದರ ಬಣ್ಣ ಬದಲಾದರೆ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಯಿದೆ ಎಂದರ್ಥ. ಈ ಹೂವುಗಳು ಬಣ್ಣ ಬದಲಾಯಿಸದಿದ್ದರೆ ಮತ್ತು ತಾಜಾ ಆಗಿಯೇ ಉಳಿದರೆ ಧನಾತ್ಮಕ ಶಕ್ತಿ ನಿಮ್ಮ ಮನೆಯಲ್ಲಿದೆ ಎಂದರ್ಥ.
ಕರ್ಪೂರದಿಂದ ನೆಗೆಟಿವ್ ಎನರ್ಜಿ ದೂರವಾಗುತ್ತದೆ
ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಕರ್ಪೂರವನ್ನು ಉರಿಸಿದರೆ ಮನೆಯಿಂದ ನೆಗೆಟಿವ್ ಎನರ್ಜಿ ದೂರವಾಗುತ್ತದೆ. ಪೂಜೆಯ ಸಮಯದಲ್ಲಿ ಕರ್ಪೂರವನ್ನು ಉರಿಸಬೇಕು. ಹಿಂದೂ ಧರ್ಮದಲ್ಲಿ ಕರ್ಪೂರವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಇದಕ್ಕಾಗಿಯೇ ಪ್ರತಿ ಶುಭ ಕಾರ್ಯದಲ್ಲಿಯೂ ಕರ್ಪೂರದ ಆರತಿಯನ್ನು ಮಾಡಲಾಗುತ್ತದೆ.
ಇದನ್ನೂ ಓದಿ: Budh Gochar 2023: ಬುಧಾದಿತ್ಯ ರಾಜಯೋಗದಿಂದ ಈ 5 ರಾಶಿಯವರು ಮುಟ್ಟಿದ್ದೆಲ್ಲ ಚಿನ್ನವಾಗುವ ಕಾಲ
ಈ ರೀತಿ ಪ್ರಯೋಗ ಮಾಡಿ
ಮನೆಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ, ನಂತರ ಒಂದು ಮೂಲೆಯಲ್ಲಿ ಕರ್ಪೂರವನ್ನು ಬೆಳಗಿಸಿ. ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದ್ದರೆ ಅದು ಹೊರಗೆ ಹೋಗುತ್ತದೆ. ನೀವು ಮಲಗುವಾಗ ನಿಮ್ಮ ದಿಂಬಿನ ಕೆಳಗೆ ಕರ್ಪೂರವನ್ನು ಇಟ್ಟುಕೊಳ್ಳಬಹುದು. ಇದು ನಿಮಗೆ ಉತ್ತಮ ನಿದ್ರೆಯನ್ನು ನೀಡುತ್ತದೆ ಮತ್ತು ನೀವು ಬೆಳಗ್ಗೆ ಧನಾತ್ಮಕ ಶಕ್ತಿಯೊಂದಿಗೆ ಎಚ್ಚರಗೊಳ್ಳುತ್ತೀರಿ. ಕರ್ಪೂರವನ್ನು ಸುಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಉಂಟಾಗುತ್ತದೆ.
ವಿಜ್ಞಾನಿಗಳು ಕರ್ಪೂರದ ಮಹತ್ವ ತಿಳಿಸಿದ್ದಾರೆ
ವಿಜ್ಞಾನಿಗಳು ಸಹ ಕರ್ಪೂರದ ಮಹತ್ವವನ್ನು ಹೇಳಿದ್ದಾರೆ. ವಿಜ್ಞಾನಿಗಳ ಪ್ರಕಾರ ಪ್ರತಿದಿನ ಕರ್ಪೂರವನ್ನು ಸುಡುವ ಮನೆಯಲ್ಲಿ ಬ್ಯಾಕ್ಟೀರಿಯಾಗಳ ಸಮಸ್ಯೆ ಇರುವುದಿಲ್ಲ. ಹೀಗೆ ಮಾಡುವುದರಿಂದ ಮನೆಯೂ ಸ್ವಚ್ಛ ಮತ್ತು ಅಚ್ಚುಕಟ್ಟಾಗಿ ಉಳಿಯುತ್ತದೆ. ಮನೆಗೆ ಯಾವಾಗಲೂ ಭೀಮಸೇನಿ ಕರ್ಪೂರವನ್ನು ಬಳಸಬೇಕು.
(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿ ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿ ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.