Astro Tips: ಗ್ರಹಣದ ಸಮಯದಲ್ಲಿ ಮಾಡುವ ಈ ಪರಿಹಾರಗಳು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತದೆ!

ಸೂರ್ಯ-ಚಂದ್ರ ಗ್ರಹಣ 2023:ಗ್ರಹಣದ ಸಮಯದಲ್ಲಿ ತೆಗೆದುಕೊಳ್ಳುವ ಕ್ರಮಗಳಿಗೆ ಜ್ಯೋತಿಷ್ಯದಲ್ಲಿ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಈ ಪರಿಹಾರ ಮಾಡುವುದರಿಂದ ಜಾತಕದ ಮೇಲಿನ ಅಶುಭ ಪರಿಣಾಮಗಳು ಶುಭವಾಗುತ್ತವೆ ಎಂದು ಹೇಳಲಾಗುತ್ತದೆ.

Written by - Puttaraj K Alur | Last Updated : Feb 23, 2023, 02:08 PM IST
  • ಗ್ರಹಣದ ವೇಳೆ ಕೆಲವೊಂದು ವಿಶೇಷ ಕ್ರಮ ಕೈಗೊಂಡರೆ ಲಕ್ಷ್ಮಿದೇವಿಯ ಆಶೀರ್ವಾದ ಸಿಗುತ್ತದೆ
  • ಗ್ರಹಣದ ನಂತರ ಸಿಹಿ ಅನ್ನ ತಯಾರಿಸಿ ಕಾಗೆಗಳಿಗೆ ತಿನ್ನಿಸಿದ್ರೆ ವೃತ್ತಿ ಸಂಬಂಧಿತ ತೊಂದರೆಗಳಿಂದ ಮುಕ್ತಿ
  • ಚಂದ್ರಗ್ರಹಣದ ವೇಳೆ ಹಾಲು, ಅನ್ನ, ಸಿಹಿತಿಂಡಿಗಳನ್ನು ಅಗತ್ಯವಿರುವವರಿಗೆ ದಾನ ಮಾಡಬೇಕು
Astro Tips: ಗ್ರಹಣದ ಸಮಯದಲ್ಲಿ ಮಾಡುವ ಈ ಪರಿಹಾರಗಳು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತದೆ!   title=
ಸೂರ್ಯ-ಚಂದ್ರ ಗ್ರಹಣ

ನವದೆಹಲಿ: ಜ್ಯೋತಿಷ್ಯದ ಪ್ರಕಾರ ಈ ವರ್ಷದಲ್ಲಿ ಸಂಭವಿಸುವ ಸೂರ್ಯ ಮತ್ತು ಚಂದ್ರ ಗ್ರಹಣಗಳು ವಿಶೇಷ ಪ್ರಾಮುಖ್ಯತೆ ಪಡೆದಿವೆ. ಗ್ರಹಣ ಕಾಲದಲ್ಲಿ ಮಾಡುವ ಕೆಲವು ವಿಶೇಷ ಕ್ರಮಗಳಿಂದ ವ್ಯಕ್ತಿಯ ಜಾತಕದಲ್ಲಿ ಅಶುಭ ಫಲ ನೀಡುವ ಗ್ರಹಗಳು ಶುಭ ಫಲ ನೀಡುತ್ತವಂತೆ. ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ 20ರಂದು ಗುರುವಾರ ಸಂಭವಿಸಿದ್ರೆ, ಚಂದ್ರಗ್ರಹಣವು 15 ದಿನಗಳ ನಂತರ ಸಂಭವಿಸಲಿದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಣದ ಸಮಯದಲ್ಲಿ ಕೆಲವೊಂದು ವಿಶೇಷ ಕ್ರಮಗಳನ್ನು ಕೈಗೊಂಡರೆ ಲಕ್ಷ್ಮಿದೇವಿಯ ಆಶೀರ್ವಾದ ಸದಾ ಇರುತ್ತದೆ. ಅಲ್ಲದೆ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ಇಂದು ನಾವು ಗ್ರಹಣದ ಸಮಯದಲ್ಲಿ ಮಾಡಬೇಕಾದ ಕೆಲವು ವಿಶೇಷ ಕ್ರಮಗಳ ಬಗ್ಗೆ ನಿಮಗೆ ತಿಳಿಸಲಿದ್ದೇವೆ.

ಸಾಲ ಮರುಪಾವತಿಸಲು: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನೀವು ದೀರ್ಘಕಾಲದವರೆಗೆ ಸಾಲದಿಂದ ತೊಂದರೆಗೊಳಗಾಗಿದ್ದರೆ ಮತ್ತು ಹಣ ಮರುಪಾವತಿಸಲು ಸಾಧ್ಯವಾಗದಿದ್ದರೆ, ಗ್ರಹಣ ದಿನದಂದು ಬೀಗವನ್ನು ಖರೀದಿಸಿ ಮತ್ತು ರಾತ್ರಿ ಚಂದ್ರನ ಬೆಳಕು ಬೀಳುವ ಸ್ಥಳದಲ್ಲಿ ಇರಿಸಿ. ರಾತ್ರಿಯಿಡೀ ಹೀಗೆ ಮಾಡಬೇಕು. ನಂತರ ಆ ಬೀಗವನ್ನು ಬೆಳಗ್ಗೆ ದೇವಸ್ಥಾನದಲ್ಲಿ ಇಡುವುದರಿಂದ ವ್ಯಕ್ತಿಯ ಎಲ್ಲಾ ಋಣಭಾರಗಳು ದೂರವಾಗುತ್ತವಂತೆ. ಇದರೊಂದಿಗೆ ಮನೆಯಲ್ಲಿ ಹಣದ ಒಳಹರಿವು ಹೆಚ್ಚಾಗುತ್ತದೆ.

ಇದನ್ನೂ ಓದಿ: Astro Tips: ಈ ವಸ್ತುಗಳನ್ನು ದಾನ ಮಾಡಿದರೆ ಶನಿ ಸಂತೋಷಗೊಳ್ಳುತ್ತಾನೆ, ಶ್ರೀಮಂತರಾಗಲು ಇದು ಸುಲಭ ಮಾರ್ಗ!

ವೃತ್ತಿ ಪ್ರಗತಿಗೆ: ಯಾವುದೇ ಒಬ್ಬ ವ್ಯಕ್ತಿ ತನ್ನ ವೃತ್ತಿಜೀವನದಲ್ಲಿ ಅಡೆತಡೆ ಎದುರಿಸುತ್ತಿದ್ದರೆ ಅಥವಾ ವೃತ್ತಿಜೀವನದಲ್ಲಿ ಸಮಸ್ಯೆ ಎದುರಿಸುತ್ತಿದ್ದರೆ, ಅಂತಹ ವ್ಯಕ್ತಿಯು ಗ್ರಹಣದ ನಂತರ ಸಿಹಿ ಅನ್ನ ತಯಾರಿಸಿ ಕಾಗೆಗಳಿಗೆ ತಿನ್ನಿಸಬೇಕು. ಈ ಪರಿಹಾರ ಮಾಡುವುದರಿಂದ ಶನಿ, ರಾಹು ಮತ್ತು ಕೇತುಗಳ ದುಷ್ಪರಿಣಾಮ ಕಡಿಮೆ ಮಾಡಬಹುದು. ಇದು ವ್ಯಕ್ತಿಯ ಪ್ರಗತಿಗೆ ಹೊಸ ಮಾರ್ಗಗಳನ್ನು ತೆರೆಯುತ್ತದೆ.

ಗ್ರಹಣ ದೋಷ ನಿವಾರಣೆಗೆ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿಯ ಜಾತಕದಲ್ಲಿ ಗ್ರಹಣ ದೋಷವಿದ್ದಲ್ಲಿ ಚಂದ್ರಗ್ರಹಣದ ಸಮಯದಲ್ಲಿ ಹಾಲು, ಅನ್ನ, ಸಿಹಿತಿಂಡಿ ಇತ್ಯಾದಿಗಳನ್ನು ಅಗತ್ಯವಿರುವವರಿಗೆ ದಾನ ಮಾಡಬೇಕು. ಇದು ಚಂದ್ರನ ಶುಭ ಪರಿಣಾಮಗಳನ್ನು ಹೆಚ್ಚಿಸುತ್ತದೆ ಮತ್ತು ಮನಸ್ಸಿನ ಸಂದಿಗ್ಧತೆಯನ್ನು ನಿವಾರಿಸುತ್ತದೆ.

ಇದನ್ನೂ ಓದಿ: Vinayak Chaturthi 2023: ವಿನಾಯಕ ಚತುರ್ಥಿ ಪೂಜೆಯ ಶುಭ ಮುಹೂರ್ತ ಮತ್ತು ಮಹತ್ವ ತಿಳಿಯಿರಿ

ತ್ವರಿತ ಹಣ ಪಡೆಯಲು: ನೀವು ತ್ವರಿತವಾಗಿ ಹಣ ಗಳಿಸಬಯಸಿದ್ರೆ ಚಂದ್ರಗ್ರಹಣದ ಸಮಯದಲ್ಲಿ ವಿಶೇಷ ಪರಿಹಾರವು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡಬಹುದು. ಈ ಪರಿಹಾರ ಮಾಡಲು ಒಂದು ತುಂಡು ಬೆಳ್ಳಿ, ಹಾಲು ಮತ್ತು ಗಂಗಾಜಲ ತೆಗೆದುಕೊಂಡು ಅದನ್ನು ಚಂದ್ರಗ್ರಹಣದ ನೆರಳು ಬೀಳುವ ಸ್ಥಳದಲ್ಲಿರಿಸಿ. ಇದಾದ ನಂತರ ಮರುದಿನ ಬ್ರಾಹ್ಮೀ ಮುಹೂರ್ತದಲ್ಲಿ ಅದನ್ನು ಎತ್ತಿಕೊಂಡು ಕೆಂಪು ಬಣ್ಣದ ಬಟ್ಟೆಯಲ್ಲಿ ಕಟ್ಟಿ ಕಮಾನಿನಲ್ಲಿ ಇಡಬೇಕು. ಈ ಪರಿಹಾರ  ಮಾಡುವುದರಿಂದ ವ್ಯಕ್ತಿಯ ಎಲ್ಲಾ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ.

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News