ನವದೆಹಲಿ: ಯಾವುದೇ ಶುಭ ಕಾರ್ಯಕ್ಕೆ ಹೊರಡುವ ಮುನ್ನ ಮನೆಯ ಹಿರಿಯರು ಮೊಸರು ಮತ್ತು ಸಕ್ಕರೆ ಸೇವಿಸಿ ಹೋಗುವಂತೆ ಹೇಳುವುದನ್ನು ನೀವು ನೋಡಿರಬಹುದು. ಬಹುಶಃ ಪ್ರೀತಿಯಿಂದ ಅವರು ಹೀಗೆ ಹೇಳಿರಬಹುದು ಅಂತಾ ನೀವು ಅಂದುಕೊಂಡಿದ್ದರೆ ಅದು ತಪ್ಪು. ಏಕೆಂದರೆ ಹಿರಿಯರ ಈ ಸಲಹೆ ಹಿಂದೆ ಹಿರಿಯರ ವಾತ್ಸಲ್ಯವಷ್ಟೇ ಅಲ್ಲ, ಅನೇಕ ಆಧ್ಯಾತ್ಮಿಕ-ವೈಜ್ಞಾನಿಕ ಕಾರಣಗಳೂ ಇವೆ. ಇದರಿಂದ ಸ್ಥಗಿತಗೊಂಡಿರುವ ಮತ್ತು ಅಂದುಕೊಂಡಿರುವ ನಮ್ಮ ಕೆಲಸ-ಕಾರ್ಯಗಳು ಪೂರ್ಣಗೊಳ್ಳುತ್ತವೆ. ಶುಭ ಕಾರ್ಯಕ್ಕೂ ಮೊದಲು ಮೊಸರು-ಸಕ್ಕರೆ ತಿನ್ನುವುದರ ಅರ್ಥವೇನು ಅನ್ನೋದನ್ನು ತಿಳಿಯಿರಿ.


COMMERCIAL BREAK
SCROLL TO CONTINUE READING

ದೇಹವು ಗ್ಲೂಕೋಸ್ ಪಡೆಯುತ್ತದೆ


ಮೊಸರು ಮತ್ತು ಸಕ್ಕರೆ ಎರಡರಲ್ಲೂ ಅನೇಕ ಪೋಷಕಾಂಶಗಳಿವೆ. ಇದನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ಗ್ಲೂಕೋಸ್ ಸಿಗುತ್ತದೆ. ಹೀಗಾಗಿಯೇ ನಾವು ಅವುಗಳನ್ನು ಒಟ್ಟಿಗೆ ಸೇವಿಸಿದಾಗ ನಮ್ಮ ಮನಸ್ಸು ಮತ್ತು ಮೆದುಳು ದಿನವಿಡೀ ಆರೋಗ್ಯಕರ ಮತ್ತು ಶಕ್ತಿಯುತವಾಗಿರುತ್ತದೆ. ಅಲ್ಲದೆ ನಾವು ಬೇಗನೆ ಸುಸ್ತಾಗುವುದಿಲ್ಲ. ಈ ಕಾರಣಕ್ಕಾಗಿಯೇ ಯಾವುದೇ ಶುಭ ಕಾರ್ಯಗಳನ್ನು ಮಾಡುವ ಮೊದಲು ಮೊಸರು-ಸಕ್ಕರೆ ತಿನ್ನಲು ಸಲಹೆ ನೀಡಲಾಗುತ್ತದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.


ಇದನ್ನೂ ಓದಿ: Venus Transit: 2 ದಿನಗಳ ನಂತರ ಈ ರಾಶಿಗಳ ಭವಿಷ್ಯವೇ ಬದಲಾಗಲಿದೆ, ದೊಡ್ಡ ಯಶಸ್ಸು ಸಿಗಲಿದೆ!


ವ್ಯಕ್ತಿಯ ಕೋಪ-ತಾಪ ದೂರವಾಗುತ್ತದೆ


ಶುಭ ಕಾರ್ಯಕ್ಕೂ ಮೊದಲು ಮೊಸರು ಮತ್ತು ಸಕ್ಕರೆ ತಿನ್ನಲು ಅನೇಕ ಆಧ್ಯಾತ್ಮಿಕ ಕಾರಣಗಳಿವೆ. ವಾಸ್ತವವಾಗಿ ಶುಕ್ರ ಮತ್ತು ಬಿಳಿ ಬಣ್ಣವು ಪರಸ್ಪರ ಆಳವಾದ ಸಂಬಂಧವನ್ನು ಹೊಂದಿದೆ. ಇವೆರಡೂ ಶಾಂತಿಯ ಪ್ರತೀಕ. ಮೊಸರು ಮತ್ತು ಸಕ್ಕರೆ ಕೂಡ ಬಿಳಿಯಾಗಿರುತ್ತದೆ. ಇದಕ್ಕಾಗಿಯೇ ಇವುಗಳನ್ನು ತಿನ್ನುವುದರಿಂದ ವ್ಯಕ್ತಿಯ ಕೋಪ-ತಾಪ ದೂರವಾಗಿ ಮನಸ್ಸು ಶಾಂತವಾಗಿ ಏಕಾಗ್ರತೆಯಿಂದ ಇರುತ್ತದೆ. ಆದ್ದರಿಂದ ವ್ಯಕ್ತಿ ಹೆಚ್ಚು ಜಾಗರೂಕತೆಯಿಂದ ಯಾವುದೇ ಕೆಲಸವನ್ನು ಯಶಸ್ವಿಯಾಗಿ ಮಾಡಬಹುದು. ಹೀಗೆ ಮಾಡುವುದರಿಂದ ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು ಪಡೆಯುವ ಸಾಧ್ಯತೆ ಹೆಚ್ಚುತ್ತದೆ.


ವ್ಯಕ್ತಿಯ ಹೊಟ್ಟೆ ತುಂಬಿರುತ್ತದೆ


ಮೊಸರು ಮತ್ತು ಸಕ್ಕರೆ ತಿಂದ ನಂತರ ಮನೆಯಿಂದ ಹೊರಡುವ ಮತ್ತೊಂದು ಪ್ರಯೋಜನವೆಂದರೆ, ಇದನ್ನು ತಿನ್ನುವುದರಿಂದ ಹೊಟ್ಟೆ ತುಂಬಿರುತ್ತದೆ ಮತ್ತು ಬೇಗನೆ ಹಸಿವು ಉಂಟಾಗುವುದಿಲ್ಲ. ಇವುಗಳನ್ನು ಜೀರ್ಣಿಸಿಕೊಳ್ಳುವುದು ಸಹ ಸುಲಭ. ಈ ಕಾರಣದಿಂದ ನೀವು ಗ್ಯಾಸ್ ಸೇರಿದಂತೆ ಇತರ ದೈಹಿಕ ಅಸ್ವಸ್ಥತೆಗಳಿಂದ ರಕ್ಷಿಸಲ್ಪಡುತ್ತೀರಿ. ಮೊಸರು-ಸಕ್ಕರೆ ತಿನ್ನುವುದರಿಂದ ದೇಹಕ್ಕೆ ಹೆಚ್ಚಿನ ಶಕ್ತಿ ಸಿಗುತ್ತದೆ ಮತ್ತು ಹೆಚ್ಚು ಉಲ್ಲಾಸದಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ.


ಇದನ್ನೂ ಓದಿ: Astro Tips for Loan: ಈ 4 ದಿನಗಳಲ್ಲಿ ಅಪ್ಪಿತಪ್ಪಿಯೂ ಸಾಲ ತೆಗೆದುಕೊಳ್ಳಬೇಡಿ..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.