ನವದೆಹಲಿ: ಸಾಲವನ್ನು ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಆದರೆ ಮದುವೆ, ಮನೆ ನಿರ್ಮಾಣ, ಮಕ್ಕಳ ವಿದ್ಯಾಭ್ಯಾಸ, ಅನಾರೋಗ್ಯದಂತಹ ತುರ್ತು ಸಂದರ್ಭಗಳಲ್ಲಿ ಆಗಾಗ ಸಾಲ ಮಾಡಬೇಕಾಗುತ್ತದೆ. ಅಗತ್ಯವಿರುವ ಸಮಯದಲ್ಲಿ ಸಾಲ ಪಡೆದ ಬಳಿಕ ಸಾಕಷ್ಟು ಪ್ರಯತ್ನಗಳ ಹೊರತಾಗಿಯೂ, ಅದನ್ನು ಮರುಪಾವತಿಸಲು ಸಾಧ್ಯವಾಗದೆ ಅನೇಕ ಜನರು ಸಮಸ್ಯೆ ಎದುರಿಸುತ್ತಾರೆ.
ಜ್ಯೋತಿಷಿಗಳ ಪ್ರಕಾರ ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡದಿರುವ ಪ್ರಮುಖ ಕಾರಣವೆಂದರೆ ಸಾಲ ತೆಗೆದುಕೊಳ್ಳುವಾಗ ಸರಿಯಾದ ರಾಶಿಗಳು ಮತ್ತು ದಿನವನ್ನು ಆಯ್ಕೆ ಮಾಡದಿರುವುದು. ನೀವು ಕೆಟ್ಟ ದಿನ ಮತ್ತು ಸಮಯದಲ್ಲಿ ಸಾಲವನ್ನು ತೆಗೆದುಕೊಂಡರೆ ಅದನ್ನು ಮರುಪಾವತಿಸಲು ನೀವು ಅನೇಕ ತೊಂದರೆ ಎದುರಿಸಬೇಕಾಗುತ್ತದೆ. ಯಾವ ದಿನ ನೀವು ಸಾಲ ತೆಗೆದುಕೊಳ್ಳಬಾರದು ಅನ್ನೋದರ ಬಗ್ಗೆ ಇಂದು ನಾವು ನಿಮಗೆ ತಿಳಿಸಿಕೊಡುತ್ತೇವೆ.
ಇದನ್ನೂ ಓದಿ: Horoscope Today: ಈ ರಾಶಿಯವರಿಗೆ ಉದ್ಯೋಗದಲ್ಲಿ ಯಶಸ್ಸಿನ ಜೊತೆಗೆ ಧನಲಾಭವಾಗಲಿದೆ
ಈ 4 ದಿನಗಳಲ್ಲಿ ಅಪ್ಪಿತಪ್ಪಿಯೂ ಸಾಲ ತೆಗೆದುಕೊಳ್ಳಬೇಡಿ
ಶಾಸ್ತ್ರಗಳ ಪ್ರಕಾರ ಅಪ್ಪಿತಪ್ಪಿಯೂ ಭಾನುವಾರ, ಮಂಗಳವಾರ, ಬುಧವಾರ ಮತ್ತು ಶನಿವಾರ ಸಾಲವನ್ನು ತೆಗೆದುಕೊಳ್ಳಬಾರದು. ಈ 4 ದಿನಗಳನ್ನು ಸಾಲ ತೆಗೆದುಕೊಳ್ಳಲು ಅಶುಭವೆಂದು ಪರಿಗಣಿಸಲಾಗುತ್ತದೆ. ಈ 4 ದಿನಗಳಲ್ಲಿ ತೆಗೆದುಕೊಂಡ ಸಾಲವನ್ನು ಸುಲಭವಾಗಿ ಮರುಪಾವತಿಸಲು ಸಾಧ್ಯವಾಗುವುದಿಲ್ಲ. ಇದರೊಂದಿಗೆ ಕೃತಿಕಾ, ಉತ್ತರಾಭಾದ್ರಪದ, ಉತ್ತರ ಫಾಲ್ಗುಣಿ, ಜ್ಯೇಷ್ಠ, ಹಸ್ತ, ಅದ್ರ, ವಿಶಾಖ, ಮೂಲ, ಉತ್ತರಾಷಾಢ ನಕ್ಷತ್ರಗಳೂ ಸಹ ಸಾಲ ಪಡೆಯಲು ಅಶುಭವೆಂದು ಪರಿಗಣಿಸಲಾಗಿದೆ. ಈ ನಕ್ಷತ್ರಗಳ ಸಮಯದಲ್ಲಿ ತೆಗೆದುಕೊಂಡ ಸಾಲವು ಕಡಿಮೆಯಾಗುವ ಬದಲು ಹೆಚ್ಚುತ್ತಲೇ ಇರುತ್ತದೆ ಎಂದು ನಂಬಲಾಗಿದೆ.
ಈ 3 ದಿನಗಳಲ್ಲಿ ನೀವು ಸಾಲ ತೆಗೆದುಕೊಳ್ಳಬಹುದು
ಜ್ಯೋತಿಷಿಗಳ ಪ್ರಕಾರ ಸೋಮವಾರ, ಗುರುವಾರ ಮತ್ತು ಶುಕ್ರವಾರ ಸಾಲವನ್ನು ತೆಗೆದುಕೊಳ್ಳಲು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದರೊಂದಿಗೆ ಶತಭಿಷ, ಸ್ವಾತಿ, ಅನುರಾಧ, ಅಶ್ವಿನಿ, ಮೃಗಶಿರ, ಪುನರ್ವಸು, ರೇವತಿ, ಚಿತ್ರ ಮತ್ತು ಪುಷ್ಯ ನಕ್ಷತ್ರಗಳ ಬಗ್ಗೆಯೂ ಕಾಳಜಿ ವಹಿಸಬೇಕು. ಈ ನಕ್ಷತ್ರಗಳಲ್ಲಿ ಪಡೆದ ಸಾಲವನ್ನು ಸುಲಭವಾಗಿ ಮರುಪಾವತಿ ಮಾಡಬಹುದು. ಇದರಿಂದ ನಿಮ್ಮ ಕುಟುಂಬವು ಸಾಮಾಜಿಕ ಮುಜುಗರವನ್ನು ಎದುರಿಸುವುದು ಸಹ ತಪ್ಪುತ್ತದೆ.
ಇದನ್ನೂ ಓದಿ: Venus Transit: 2 ದಿನಗಳ ನಂತರ ಈ ರಾಶಿಗಳ ಭವಿಷ್ಯವೇ ಬದಲಾಗಲಿದೆ, ದೊಡ್ಡ ಯಶಸ್ಸು ಸಿಗಲಿದೆ!
ಸಾಲ ಮರುಪಾವತಿಸಲು ಈ ದಿನ ಮಂಗಳಕರ
ನೀವು ತೆಗೆದುಕೊಂಡ ಸಾಲವನ್ನು ಮರುಪಾವತಿ ಮಾಡಲು ಪ್ರಾರಂಭಿಸಬಯಸಿದರೆ ಮಂಗಳವಾರ, ಬುಧವಾರ ಮತ್ತು ಶುಕ್ರವಾರವನ್ನು ಇದಕ್ಕೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ದಿನದಿಂದ ಸಾಲವನ್ನು ಮರುಪಾವತಿ ಮಾಡಲು ಪ್ರಾರಂಭಿಸಿದಾಗ ಅದು ನಿಮಗೆ ಸುಲಭವಾಗುತ್ತದೆ. ನೀವು ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಬಯಸಿದರೆ ಬುಧವಾರ ಮತ್ತು ಗುರುವಾರ ಉತ್ತಮ ದಿನಗಳೆದು ಪರಿಗಣಿಸಲಾಗುತ್ತದೆ. ಹೀಗೆ ಮಾಡುವುದರಿಂದ ಆ ಉಳಿತಾಯ ಯೋಜನೆಗಳು ನಿಮಗೆ ಫಲಪ್ರದವಾಗುತ್ತವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.