Ketu Transit 2023: ಪ್ರತಿ ವ್ಯಕ್ತಿಯ ಜೀವನದಲ್ಲಿ ಗ್ರಹ-ನಕ್ಷತ್ರಗಳು ಪ್ರಭಾವ ಬೀರುತ್ತವೆ. ವಿವಿಧ ಗ್ರಹಗಳ ಗೋಚರ ವ್ಯಕ್ತಿಯ ಜಾತಕದ ಮೇಲೆ ಶುಭ ಹಾಗೂ ಅಶುಭ ಎರಡೂ ಪ್ರಭಾವಗಳನ್ನು ಬೀರುತ್ತವೆ. ಜೋತಿಷ್ಯ ಶಾಸ್ತ್ರದ ಪ್ರಕಾರ ಕೇತು ಒಂದು ಛಾಯಾ ಗ್ರಹವಿದೆ. ಕರ್ಮ ಪ್ರಧಾನವಾಗಿರುವ ಕೇತು ಹೊಸ ವರ್ಷದಲ್ಲಿ ತನ್ನ ರಾಶಿಯನ್ನು ಪರಿವರ್ತಿಸಲಿದೆ. ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಕೇತುವಿನ ಈ ಸಂಚಾರ ಎಲ್ಲಾ 12 ಜಾತಕದವರ ಮೇಲೆ ಪ್ರಭಾವ ಬೀರಲಿದೆ. ಆದರೆ, ಈ ಅವಧಿ ಕೆಲ ಜಾತಕದವರ ಪಾಲಿಗೆ ಅತ್ಯಂತ ಶುಭಕರ ಸಾಬೀತಾಗಲಿದೆ. ಪ್ರಸ್ತುತ ಕೇತು ಕನ್ಯಾ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಆದರೆ, ಅಕ್ಟೋಬರ್ 2023ರಂದು ಕೇತು ತುಲಾ ರಾಶಿಗೆ ಸಾಗಲಿದ್ದಾನೆ. ಈ ಕೇತು ಸಂಕ್ರಮಣದ ಯಾವ ರಾಶಿಗೆ ಲಾಭಕಾರಿಯಾಗಿದೆ ತಿಳಿದುಕೊಳ್ಳೋಣ ಬನ್ನಿ,

COMMERCIAL BREAK
SCROLL TO CONTINUE READING

1. ವೃಷಭ ರಾಶಿ- ಈ ಕೇತು ಗೋಚರ ನಿಮಗೆ ಲಾಭ ನೀಡಲಿದೆ. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ. ಈ ಅವಧಿಯಲ್ಲಿ ನಿಮ್ಮ ವೃತ್ತಿ ಜೀವನದಲ್ಲಿ ನಿಮಗೆ ಅಪಾರ ಯಶಸ್ಸು ಸಿಗಲಿದೆ. ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಳಿವೆ. ದೀರ್ಘ ಕಾಲದಿಂದ ಪೂರ್ಣಗೊಳ್ಳಬೇಕಿದ್ದ ಕೆಲಸಗಳು ಪೂರ್ಣಗೊಲ್ಲಲಿವೆ. ಹೂಡಿಕೆಗೆ ಈ ಸಮಯ ಅನುಕೂಲಕರವಾಗಿದೆ. ವ್ಯಾಪಾರದಲ್ಲಿ ಲಾಭ ಸಿಗಲಿದೆ.


2. ಸಿಂಹ ರಾಶಿ- ಸಿಂಹ ರಾಶಿಯ ಜಾತಕದವರಿಗೆ ಈ ಕೇತು ಗೋಚರದ ಅವಧಿ ಅತ್ಯಂತ ಮಂಗಳಕರವಾಗಿದೆ. ಕುಟುಂಬದಲ್ಲಿ ಸುಖ ಶಾಂತಿ ಇರಲಿದೆ. ಸಂಬಂಧಗಳಲ್ಲಿ ಸುಧಾರಣೆ ಇರಲಿದೆ. ಸಮಾಜದಲ್ಲಿ ಘನತೆ-ಗೌರವ ಹೆಚ್ಚಾಗಲಿದೆ. ಕಾರ್ಯಸ್ಥಳದಲ್ಲಿ ಮೇಲಾಧಿಕಾರಿಗಳ ಜೋತೆಗಿನ ಸಂಬಂಧದಲ್ಲಿ ಮಧುರತೆ ಇರಲಿದೆ. ಕಷ್ಟದ ಸಂಪೂರ್ಣ ಫಲ ನಿಮಗೆ ಸಿಗಲಿದೆ.

3. ಧನು ರಾಶಿ- ಧನು ರಾಶಿಯ ಜಾತಕದವರಿಗೆ ಈ ಕೇತು ಗೋಚರ ಶುಭವಾಗಿರಲಿದೆ. ಈ ಅವಧಿಯಲ್ಲಿ ನಿಮಗೆ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಧಾರ್ಮಿಕ ಕಾರ್ಯಗಳ ಪ್ರತಿ ನಿಮ್ಮ ಆಸಕ್ತಿ ಹೆಚ್ಚಾಗಲಿದೆ. ಕೋರ್ಟ್-ಕಚೇರಿ ಕೆಲಸಗಳಲ್ಲಿ ನಿಮಗೆ ಯಶಸ್ಸು ಸಿಗಲಿದೆ. ಹಳೆ ಕಾಯಿಲೆಗಳಿಂದ ಮುಕ್ತಿ ಸಿಗಲಿದೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ.


ಇದನ್ನೂ ಓದಿ-Plant For Navagraha: ಜಾತಕದಲ್ಲಿನ ಗ್ರಹಗಳನ್ನು ಶಾಂತಗೊಳಿಸುತ್ತವೆ ಈ ಗಿಡ-ಮರಗಳು, ಕ್ಷನಾರ್ಧದಲ್ಲಿ ಭಾಗ್ಯ ಬದಲಾಯಿಸುತ್ತವೆ

4. ಮಕರ ರಾಶಿ- ಮಕರ ರಾಶಿಯ ಜಾತಕದವರ ಆದಾಯ ಈ ಕೇತು ಗೋಚರದಿಂದ ಹೆಚ್ಚಾಗಲಿದೆ. ಆರ್ಥಿಕ ವೇದಿಕೆಯಲ್ಲಿ ನೀವು ಸಾಕಷ್ಟು ಲಾಭ ಗಳಿಸುವಿರಿ. ಕಾರ್ಯಸ್ಥಳದಲ್ಲಿ ಹೊಸ ಜವಾಬ್ದಾರಿ ಸಿಗಲಿದೆ. ಧನಾಗಮವಾಗಲಿದೆ. ಹೊಸ ಕೆಲಸವನ್ನು ನೀವು ಪ್ರಾರಂಭಿಸಬಹುದು. ವ್ಯಾಪಾರಿಗಳ ಪಾಲಿಗೆ ಈ ಸಮಯ ಅನುಕೂಲಕರವಾಗಿದೆ.


ಇದನ್ನೂ ಓದಿ-Dream Science: ಅವಿವಾಹಿತರೇ.. ನೀವೂ ಈ ರೀತಿಯ ಕನಸು ನೋಡಿದ್ದೀರಾ ? ಹಾಗಾದ್ರೆ ಕುಣಿದು ಕುಪ್ಪಳಿಸಿ, ಕಾರಣ ಇಲ್ಲಿದೆ



(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ )


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.