Dream Science: ಅವಿವಾಹಿತರೇ.. ನೀವೂ ಈ ರೀತಿಯ ಕನಸು ನೋಡಿದ್ದೀರಾ ? ಹಾಗಾದ್ರೆ ಕುಣಿದು ಕುಪ್ಪಳಿಸಿ, ಕಾರಣ ಇಲ್ಲಿದೆ

Swapna Shaastra: ಸರಿಯಾದ ಸಮಯಕ್ಕೆ ಮದುವೆಯಾಗುವುದು, ನಾವು ಬಯಸಿದ ಬಾಳ ಸಂಗಾತಿ ಸಿಗುವುದು ಅಥವಾ ನಾವು ಬಯಸಿದ ಪ್ರೀತಿ ನಮಗೆ ಸಿಗುವುದು ಒಂದು ಅದೃಷ್ಟವೇ ಹೌದು. ಸ್ವಪ್ನಶಾಸ್ತ್ರದಲ್ಲಿ ಕೆಲ ಶುಭ ಕನಸುಗಳ ಕುರಿತು ಉಲ್ಲೇಖಿಸಲಾಗಿದ್ದು, ಅವು ಮದುವೆಗೆ ಸಂಬಂಧಿಸಿದ ಪ್ರಮುಖ ಸಂಕೇತಗಳನ್ನೂ ನೀಡುತ್ತದೆ.  

Written by - Nitin Tabib | Last Updated : Dec 18, 2022, 03:17 PM IST
  • ನಿಮ್ಮ ಕನಸಿನಲ್ಲಿ ನೀವೇ ನೃತ್ಯ ಮಾಡುತ್ತಿರುವುದನ್ನು ನೀವು ನೋಡಿದರೆ,
  • ಅದು ಶೀಘ್ರದಲ್ಲೇ ನಿಮ್ಮ ಜೀವನದಲ್ಲಿ ಖುಷಿಯ ಪ್ರವೇಶದ ಸಂಕೇತವಾಗಿದೆ.
  • ನಿಮ್ಮ ಸಂಗಾತಿಯೊಂದಿಗೆ ನೀವು ನೃತ್ಯ ಮಾಡುವುದನ್ನು ನೀವು ನೋಡಿದರೆ, ಅದು ..?
Dream Science: ಅವಿವಾಹಿತರೇ.. ನೀವೂ ಈ ರೀತಿಯ ಕನಸು ನೋಡಿದ್ದೀರಾ ? ಹಾಗಾದ್ರೆ ಕುಣಿದು ಕುಪ್ಪಳಿಸಿ, ಕಾರಣ ಇಲ್ಲಿದೆ title=
Dream Science

Dreams about Marriage: ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದ ಒಂದು ಮಹತ್ವದ ಘಟ್ಟ. ಒಳ್ಳೆಯ ಬಾಳ ಸಂಗಾತಿ ಸಿಕ್ಕರೆ ಜೀವನ ಸ್ವರ್ಗವಾಗುತ್ತದೆ. ಮತ್ತೊಂದೆಡೆ, ಇತ್ತೀಚಿನ ದಿನಗಳಲ್ಲಿ ಮದುವೆಯ ವಿಳಂಬ ಒಂದು ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ. ನಿಗದಿತ ಸಮಯಕ್ಕೆ ಮದುವೆ ಆಗದೆ ಅನೇಕ ಯುವಕ ಯುವತಿಯರು ಹಾಗೂ ಅವರ ಸಂಬಂಧಿಕರು ತೀವ್ರ ನೊಂದುವುದನ್ನು ನೀವು ನೋಡಬಹುದು. ಜಾತಕದ ಗ್ರಹ ರಾಶಿಗಳ ಹೊರತಾಗಿ ಮದುವೆ ವಿಳಂಬದ ಹಿಂದೆ ಹಲವು ಕಾರಣಗಳಿರಬಹುದು. ಸ್ವಪ್ನ ಶಾಸ್ತ್ರದಲ್ಲಿ, ಅಂತಹ ಕೆಲ ಮಂಗಳಕರ ಕನಸುಗಳು ಮತ್ತು ಅವುಗಳ ಸಂಕೇತಗಳ ಕುರಿತು ಹೇಳಲಾಗಿದೆ, ಈ ರೀತಿಯ ಕನಸುಗಳು ಬೀಳುವುದು ಶೀಘ್ರದಲ್ಲೇ ಮದುವೆಯಾಗುವ ಸಂಕೇತವನ್ನು ನೀಡುತ್ತವೆ. ಹೀಗಾಗಿ ಅವಿವಾಹಿತರೆ ನಿಮಗೂ ಕೂಡ ಈ ರೀತಿಯ ಕನಸುಗಳು ಬಿದ್ದರೆ, ಕುಣಿದು ಕುಪ್ಪಳಿಸಿ, ಏಕೆಂದರೆ ಅವು ನಿಮ್ಮ ಶೀಘ್ರ ಕಂಕಣ ಬಲದ ಸಂಕೇತವಾಗಿವೆ..

ಶೀಘ್ರದಲ್ಲಿಯೇ ಕಂಕಣಬಲ ಕೂಡಿ ಬರಲಿವೆ ಎನ್ನುತ್ತವೆ ಈ ಸಂಕೇತಗಳು
ಕನಸಿನಲ್ಲಿ ಜೇನುತುಪ್ಪನ್ನು ನೋಡುವುದರ ಅರ್ಥ
- ಸ್ವಪ್ನ ಶಾಸ್ತ್ರದ ಪ್ರಕಾರ, ಯುವಕ ಅಥವಾ ಯುವತಿಗೆ ಕನಸಿನಲ್ಲಿ ಜೇನುತುಪ್ಪವನ್ನು ಕಾಣಿಸಿದರೆ, ಅದು ಮಂಗಳಕರ ಸಂಕೇತವಾಗಿದೆ. ನೀವು ಜೇನುತುಪ್ಪ ತಿನ್ನುವುದನ್ನು ನೋಡಿದರೆ, ನೀವು ಶೀಘ್ರದಲ್ಲೇ ಹಸೆಮಣೆ ಎರಲಿರುವಿ ಎಂದು ಭಾವಿಸಿ.

ಕನಸಿನಲ್ಲಿ ನೀವೇ ನೃತ್ಯ ಮಾಡುತ್ತಿರುವುದನ್ನು ನೀವು ನೋಡಿದರೆ - ನಿಮ್ಮ ಕನಸಿನಲ್ಲಿ ನೀವೇ ನೃತ್ಯ ಮಾಡುತ್ತಿರುವುದನ್ನು ನೀವು ನೋಡಿದರೆ, ಅದು ಶೀಘ್ರದಲ್ಲೇ ನಿಮ್ಮ ಜೀವನದಲ್ಲಿ ಖುಷಿಯ ಪ್ರವೇಶದ ಸಂಕೇತವಾಗಿದೆ. ನಿಮ್ಮ ಸಂಗಾತಿಯೊಂದಿಗೆ ನೀವು ನೃತ್ಯ ಮಾಡುವುದನ್ನು ನೀವು ನೋಡಿದರೆ, ಅದು ಶೀಘ್ರದಲ್ಲೇ ಮದುವೆಯಾಗುವ ಸಂಕೇತವಾಗಿದೆ. ಮತ್ತೊಂದೆಡೆ, ವಿವಾಹಿತರು ಈ ಕನಸನ್ನು ಕಂಡರೆ, ಅದು ಅವರ ವೈವಾಹಿಕ ಜೀವನದಲ್ಲಿ ಸಮೃದ್ಧಿಯ ಸಂಕೇತವಾಗಿದೆ.

ಕನಸಿನಲ್ಲಿ ಜಾತ್ರೆಯಲ್ಲಿ ಸುತ್ತಾಡುವುದನ್ನು ನೋಡಿದರೆ- ಕನಸಿನಲ್ಲಿ ಜಾತ್ರೆಯಲ್ಲಿ ಸುತ್ತಾಡುವುದು ಒಂದು ಶುಭ ಸಂಕೇತವಾಗಿದೆ. ಭಾವಿ ಜೀವನದಲ್ಲಿ ನಿಮಗೆ ಶೀಘ್ರದಲ್ಲಿಯೇ ನಿಮ್ಮ ನೆಚ್ಚಿನ ಬಾಳಸಂಗಾತಿ ಸಿಗಲಿದ್ದಾಳೆ ಎಂಬುದನ್ನು ಅದು ಸಂಕೇತಿಸುತ್ತದೆ. 

ಇದನ್ನೂ ಓದಿ-Feng Shui Tips: ಕಪ್ಪೆಗೆ ಸಂಬಂಧಿಸಿದ ಈ ಉಪಾಯ ಮಾಡಿ, ಮನೆ, ನೌಕರಿ, ವ್ಯಾಪಾರದಲ್ಲಿ ಹಣದ ಕೊರತೆ ಎಂದಿಗೂ ಎದುರಾಗಲ್ಲ

ಕನಸಿನಲ್ಲಿ ನವಿಲನ್ನು ನೋಡುವುದು - ಕನಸಿನಲ್ಲಿ ನವಿಲು ರೆಕ್ಕೆಗಳನ್ನು ಹರಡಿ ನೃತ್ಯ ಮಾಡುವದನ್ನು ನೀವು ನೋಡಿದರೆ, ನೀವು ಖುಷಿಪಡಬೇಕು. ಏಕೆಂದರೆ ಈ ಕನಸನ್ನು ಕನಸಿನ ಶಾಸ್ತ್ರದಲ್ಲಿ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇಂತಹ ಕನಸು ನಿಮ್ಮ ಮದುವೆಯಲ್ಲಿ ಬರುವ ಎಲ್ಲಾ ಅಡೆತಡೆಗಳು ನಿವಾರಣೆಯಾಗಲಿವೆ ಮತ್ತು ನೀವು ಶೀಘ್ರದಲ್ಲೇ ಮದುವೆಯಾಗುತ್ತೀರಿ ಎಂಬುದನ್ನು ಸೂಚಿಸುತ್ತದೆ.

ಇದನ್ನೂ ಓದಿ-Suryaನ ಬಳಿಕ ಇದೀಗ ಮತ್ತೊಂದು ಮಹತ್ವದ ಗ್ರಹದ ರಾಶಿ ಪರಿವರ್ತನೆಯ ಸರದಿ, ಯಾರ ಜೀವನದಲ್ಲಾಗಲಿದೆ ಮಹತ್ತರ ಬದಲಾವಣೆ?

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News