ತಾರಾಬಲ ಮತ್ತು ಚಂದ್ರ ಬಲವನ್ನು ಸಾಮಾನ್ಯವಾಗಿ ವಿವಾಹ, ಗೃಹ ಪ್ರವೇಶ, ಪ್ರಯಾಣ ಇನ್ನೂ ಮುಂತಾದ ಶುಭ ಕಾರ್ಯಗಳಿಗೆ ತಾರಾಬಲ ಮತ್ತು ಚಂದ್ರ ಬಲವನ್ನು ನೋಡುವ ಪದ್ದತಿಯಲ್ಲಿದೆ.


COMMERCIAL BREAK
SCROLL TO CONTINUE READING

ಪ್ರತಿ ಶುಭ ಕಾರ್ಯ ಮಾಡುವ ಮೊದಲು ತಾರಾಬಲ(Planetary Forces)ವನ್ನು ನೋಡಿಕೊಂಡು ಆ ಕಾರ್ಯವನ್ನು ಮಾಡುವುದು ಶ್ರೇಯಸ್ಕರ ಎಂಬುದು ನಂಬಿಕೆ. 27 ನಕ್ಷತ್ರಗಳನ್ನು 9 ವಿಧವಾಗಿ ವಿಭಾಗಿಸಲ್ಪಟ್ಟಿವೆ ಇವುಗಳನ್ನೇ ತಾರೆಗಳೆಂದು ಕರೆಯುತ್ತಾರೆ.


ಇದನ್ನೂ ಓದಿ : Akshaya Tritiya 2021: ಅಕ್ಷಯ ತೃತೀಯದಲ್ಲಿ ನಿಮ್ಮ ಪ್ರೀತಿಪಾತ್ರರಿಗೆ ಈ ರೀತಿ ಶುಭ ಹಾರೈಸಿ


ತಾರಾಬಲ- ಜನ್ಮನಕ್ಷತ್ರ(Moon Force and Planetary Forces) ಮೊದಲು ಇಷ್ಟಕಾಲದ ನಕ್ಷತ್ರದವರೆಗೆ (ಯಾವ ದಿನ ಶುಭ ಕಾರ್ಯ ಮಾಡಬೇಕೆಂದುಕೊಂಡಿರುತ್ತೀರೊ ಆ ದಿನದ ನಕ್ಷತ್ರ) ಎರಡು ಸೇರಿ ಲೆಕ್ಕಮಾಡಿ
ಒಂಭತ್ತರಿಂದ ಭಾಗಿಸಿ ಬಂದ ಶೇಷವು


ಇದನ್ನೂ ಓದಿ : Daily Horoscope: ದಿನಭವಿಷ್ಯ 14-05-2021 Today astrology


1 ಬಂದರೆ ಜನ್ಮತಾರೆ (ಇದು ಒಳ್ಳೆಯದಲ್ಲ ದೇಹಕ್ಕೆ ತೊಂದರೆಗಳು)


2 ಬಂದರೆ ಸಂಪತ್ತಾರೆ (ಸಂಪತ್ತು ಕೊಡುವುದು)


3 ಬಂದರೆ ವಿಪತ್ತಾರೆ (ಕಾರ್ಯನಾಶ ಮಾಡುವುದು)


4 ಬಂದರೆ ಕ್ಷೇಮತಾರೆ (ಕ್ಷೇಮವನ್ನು ಮಾಡುವುದು)


ಇದನ್ನೂ ಓದಿ : Akshaya Tritiya 2021 : ನಾಳೆ ಅಕ್ಷಯ ತೃತೀಯ ದಿನ ಈ ವಸ್ತುಗಳನ್ನು ದಾನ ಮಾಡಿ ; ಅದರ ಅದೃಷ್ಟ ನೋಡಿ!


5 ಬಂದರೆ ಪ್ರತ್ಯಕ್ತಾರೆ (ಸರ್ವವೂ ವಿರುದ ಪಲಗಳನ್ನು ನೀಡುವುದು)


6 ಬಂದರೆ ಸಾಧನತಾರೆ (ಕಾರ್ಯ ಸಾಧನೆಯಾಗುವುದು)


7 ಬಂದರೆ ವಧತಾರೆ (ಆರೋಗ್ಯಕ್ಕೆ ತೊಂದರೆಯಾಗ ಬಹುದು)


8 ಬಂದರೆ ಮಿತ್ರತಾರೆ (ಸುಖವನ್ನು ಕೊಡುವುದು)


9 ಮತ್ತು 0 ಬಂದರೆ ಪರಮಮೈತ್ರತಾರೆ (ಸುಖ, ಸೌಭಾಗ್ಯ ಕೊಡುವುದು)


2-4-6-8-9 ಶೇಷ ಬಂದರೆ ಒಳ್ಳೆಯದು.


ಇದನ್ನೂ ಓದಿ : Planet Transition: ಈ ರಾಶಿಚಕ್ರದಲ್ಲಿ ನಾಲ್ಕು ಗ್ರಹಗಳ ಸಂಯೋಜನೆ, ಯಾರಿಗೆ ಅದೃಷ್ಟ, ಯಾರಿಗೆ ಸಂಕಷ್ಟ


ಚಂದ್ರ ಬಲ- ಜನ್ಮ ರಾಶಿ ಮೊದಲು ಚಂದ್ರನಿದ್ದ ರಾಶಿಯವರಿಗೆ ಲೆಕ್ಕಿಸಿದರೆ,12 ರಾಶಿಗಳಲ್ಲಿ ಚಂದ್ರ ಬಲವನ್ನು ನಿರ್ಣಯಿಸಬಹುದು. ಜನ್ಮ ರಾಶಿ ಬದಲು ಚಂದ್ರನಿದ್ದ ರಾಶಿಗೆ ಲೆಕ್ಕ ಮಾಡಿ ಚಂದ್ರನು ಒಂದನೆ ಮನೆಯಲ್ಲಿದ್ದರೆ
1 ದೇಹಸೌಖ್ಯ, 2 ಕಲಹ, 3 ದ್ರವ್ಯಲಾಭ, 4 ರೋಗಭಯ, 5 ಕಾರ್ಯವಿಕಲ್ಪ, 6 ಶತ್ರುನಾಶ, 7 ಸೌಖ್ಯ ವೃದ್ದಿ, 8 ಆರೋಗ್ಯವೃದ್ದಿ(Health), 9 ಕಾರ್ಯತಾಮಸ, 10 ಉದ್ಯೋಗವೃದ್ದಿ, 11 ಇಷ್ಟಾರ್ಥಸಿದ್ದಿ 12 ಧನ ವ್ಯಯ.
ಈ ಸ್ಥಾನಗಳಲ್ಲಿ ಚಂದ್ರನಿದ್ದರೆ ಶುಭನೆಂದು ತಿಳಿದು ಕೊಳ್ಳಬೇಕ.ಮೇಲೆ ಹೇಳಿದಂತೆ ತಾರಬಲ ಮತ್ತು ಚಂದ್ರ ಬಲವನ್ನು ಶುಭ ಸ್ಥಾನಗಳಲ್ಲಿ ಇದ್ದರೆ ತಾಯಿ ಮಗನನ್ನು ಕಾಪಾಡಿದಂತೆ ಕಾಪಾಡುತ್ತದೆ. ಸಮಸ್ಯೆಗಳಿಗೆ ಕರೆ ಮಾಡಿ: 9008993001 Call / WhatsApp


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.