strology On Friendship: ಈ 4 ರಾಶಿಯ ಜನರಿಗೆ ಗೆಳೆತನ ನಿಭಾಯಿಸುವುದು ಗೊತ್ತೇ ಇಲ್ಲ ಎನ್ನುತ್ತೆ ಜೋತಿಷ್ಯ ಶಾಸ್ತ್ರ
Astrology On Friendship - ಒಬ್ಬ ಒಳ್ಳೆಯ ಸ್ನೇಹಿತ ಕೆಟ್ಟ ಹಾಗೂ ಒಳ್ಳೆಯ ಕಾಲದಲ್ಲಿಯೂ ಕೂಡ ಉತ್ತಮ ಸಾಥ್ ನೀಡುತ್ತಾನೆ ಎನ್ನುತ್ತಾರೆ. ಹೆಚ್ಚಿನ ಜನರು ಒಳ್ಳೆಯತನದ ಮುಖವಾಡ ಧರಿಸಿರುತ್ತಾರೆ.
Astrology On Friendship: ಒಬ್ಬ ಒಳ್ಳೆಯ ಸ್ನೇಹಿತ ಕೆಟ್ಟ ಹಾಗೂ ಒಳ್ಳೆಯ ಕಾಲದಲ್ಲಿಯೂ ಕೂಡ ಉತ್ತಮ ಸಾಥ್ ನೀಡುತ್ತಾನೆ ಎನ್ನುತ್ತಾರೆ. ಹೆಚ್ಚಿನ ಜನರು ಒಳ್ಳೆಯತನದ ಮುಖವಾಡ ಧರಿಸಿರುತ್ತಾರೆ. ಹಲವು ಮಿತ್ರರು ಜೀವನ ಪೂರ್ತಿ ಸಾಥ್ ಬಿಡುವುದಿಲ್ಲ. ಇತ್ತೀಚಿನ ದಿನಗಳಲ್ಲಿ ವ್ಯಸ್ತ ಜೀವನಶೈಲಿ (Busy Lifestyle) ಹಾಗೂ ದೀರ್ಘ ಕಾಲದವರೆಗೆ ಮಾತುಕತೆ ಇಲ್ಲದೆ ಇರುವುದು ಗೆಳೆತನ ಮುರಿಯಲು ಒಂದು ಪ್ರಮುಖ ಕಾರಣವಾಗಿದೆ. ಗೆಳೆತನ ನಿಭಾಯಿಸುವುದು ತುಂಬಾ ಕಷ್ಟದ ಕೆಲಸ ಎಂದು ಹೇಳಲಾಗುತ್ತದೆ. ಓರ್ವ ಒಳ್ಳೆಯ ಸ್ನೇಹಿತನನ್ನು ಗಳಿಸಲು ಬೇಕಾಗುವ ಸಮಯಕ್ಕಿಂತ ಹೆಚ್ಚು ಪರಿಶ್ರಮ ಅದನ್ನು ನಿಭಾಯಿಸಲು ಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ಜೋತಿಷ್ಯಶಾಸ್ತ್ರದಲ್ಲಿ (Jotishya Shastra) ಒಟ್ಟು ನಾಲ್ಕು ರಾಶಿಗಳನ್ನು ಉಲ್ಲೇಖಿಸಲಾಗಿದ್ದು. ಈ ನಾಲ್ಕು ರಾಶಿಯ (Zodiac Signs) ಜನರಿಗೆ ಗೆಳೆತನ ನಿಭಾಯಿಸುವುದು ಗೊತ್ತೇ ಇಲ್ಲ ಎನ್ನಲಾಗಿದೆ. ಹಾಗಾದರೆ ಬನ್ನಿ ಈ ರಾಶಿಗಳು ಯಾವುವು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ.
1. ಮೇಷ ರಾಶಿ - ಜ್ಯೋತಿಷ್ಯ ಶಾಸ್ತ್ರದ (Astrology) ಅನುಸಾರ ಮೇಷ ರಾಶಿಯ ಜಾತಕದ ಜನರು ಹಠಮಾರಿ ಹಾಗೂ ಕಠಿಣ ಸ್ವಭಾವದ ವ್ಯಕ್ತಿಗಳು. ಇವರು ತೀರಾ ಅಂತರ್ಮುಖಿಯಾದ ಕಾರಣ ಹಲವು ಬಾರಿ ಇವರು ಗೆಳೆಯರನ್ನು ನಿರ್ಲಕ್ಷಿಸುತ್ತಾರೆ. ಇವರ ದಬ್ಬಾಳಿಕೆಯ ಸ್ವಭಾವ ಕೂಡ ಗೆಳೆಯರಿಗೆ ಕಾಡುತ್ತದೆ. ಇದರಿಂದ ಇವರ ಗೆಳೆತನದ ಸಂಬಂಧಕ್ಕೆ ಹಾನಿ ತಲುಪುತ್ತದೆ.
2. ವೃಷಭ ರಾಶಿ - ಈ ಜಾತಕ ಹೊಂದಿರವ ಜನರಿಗೆ ಹೊಸ ಜನರನ್ನು ಸಂಪರ್ಕಿಸುವುದು ಹಾಗೂ ಅವರೊಂದಿಗೆ ಗೆಳೆತನ ಬೆಳೆಸುವುದು ತುಂಬಾ ಇಷ್ಟ ಎನ್ನಲಾಗುತ್ತದೆ. ಆದರೆ, ಸ್ವಲ್ಪ ಸಮಯದ ಬಳಿಕ ಈ ವ್ಯಕ್ತಿಗಳು ತನ್ನಷ್ಟಕ್ಕೆ ತಾನೇ ಸಮಯ ಕಳೆಯಲು ಪ್ರಾರಂಭಿಸುತ್ತಾರೆ. ಹೀಗಾಗಿ ಗೆಳೆಯರೊಂದಿಗಿನ ಇವರ ಸಂವಾದ ನಿಂತುಹೋಗುತ್ತದೆ. ಒಂಟಿಯಾಗಿರುವ ಸ್ವಭಾವ ಹಾಗೂ ಗೂಢ ಸ್ವಭಾವದ ಕಾರಣ ಇವರ ಗೆಳೆತನಕ್ಕೆ ಹಾನಿ ತಲುಪುತ್ತದೆ.
ಇದನ್ನೂ ಓದಿ-Swapana Shastra : ಕನಸಿನಲ್ಲಿ ಈ 6 ಪ್ರಾಣಿ, ಪಕ್ಷಿ ಕಾಣಿಸಿಕೊಂಡರೆ, ಬದಲಾಗತ್ತೆ ನಿಮ್ಮ ಗೃಹಗತಿ..!
3. ಕರ್ಕ ರಾಶಿ - ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕರ್ಕ ರಾಶಿಯ ಜನರು ತುಂಬಾ ಮೂಡಿ ಸ್ವಭಾವದ ಜನರು. ಸಣ್ಣ ಪುಟ್ಟ ವಿಷಯಕ್ಕೆ ಮುನಿಸಿಕೊಳ್ಳುತ್ತಾರೆ. ಇವರು ಕೊಟ್ಟ ಮಾತನ್ನು ಮುರಿಯುವಲ್ಲಿ ನಿಪುಣರಾಗಿರುತ್ತಾರೆ. ಏಕಕಾಲಕ್ಕೆ ಇವರ ಮೆದುಳಿನಲ್ಲಿ ಹಲವು ವಿಚಾರಗಳು ನಡೆಯುತ್ತಿರುತ್ತವೆ. ಹೀಗಾಗಿ ಇವರ ಸಂಬಂಧದಲ್ಲಿ ಅಂತರ ಬೀಳಲು ಆರಂಭಿಸುತ್ತದೆ.
ಇದನ್ನೂ ಓದಿ- Sindhoora: ನಕಾರಾತ್ಮಕ ಶಕ್ತಿ, ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಸಹಾಯ ಮಾಡುತ್ತೆ ಸಿಂಧೂರ
4. ಸಿಂಹ ರಾಶಿ - ತಮಗೆ ಸರಿಸಾಟಿ ಯಾರೂ ಇಲ್ಲ ಎಂಬುದು ಇವರ ಸ್ವಭಾವ. ಇವರ ಇದೆ ಸ್ವಭಾವ ಗೆಳೆಯರಿಗೆ ಕಿರಿಕಿರಿ ಉಂಟುಮಾಡುತ್ತದೆ. ಇದರಿಂದ ಈ ಜಾತಕದ ಜನರು ಒಂಟಿತನ ಅನುಭವಿಸಲು ಆರಂಭಿಸುತ್ತಾರೆ. ಆದರೆ, ಸಿಂಹ ಜಾತಕದ ಜನರು ತುಂಬಾ ಪ್ರಾಮಾಣಿಕ ಹಾಗೂ ನಿಷ್ಠೆಯುಳ್ಳ ವ್ಯಕ್ತಿಗಳಾಗಿರುತ್ತಾರೆ.
ಇದನ್ನೂ ಓದಿ-Staircase Vastu Tips - ಮನೆಯ Staircaseನಲ್ಲಿ ಅಡಗಿದೆ ಯಶಸ್ಸಿನ ಗುಟ್ಟು
(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯ ಹಾಗೂ ನಿಖರವಾಗಿದೆ ಎಂಬುದನ್ನು ಝೀ ಹಿಂದುಸ್ತಾನ್ ಕನ್ನಡ ಪುಷ್ಥೀಕರಿಸುವುದಿಲ್ಲ. ಇವುಗಳನ್ನು ಅನುಸರಿಸುವ ಮುನ್ನ ಈ ಕ್ಷೇತ್ರಕ್ಕೆ ಸಂಬಂಧಿತ ವ್ಯಕ್ತಿಗಳನ್ನು ಸಂಪರ್ಕಿಸಿ ಸಲಹೆ ಪಡೆಯಿರಿ)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.