Sindhoora: ನಕಾರಾತ್ಮಕ ಶಕ್ತಿ, ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಸಹಾಯ ಮಾಡುತ್ತೆ ಸಿಂಧೂರ

ನಿಮ್ಮ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ನಿವಾರಿಸಲು ನಿಮ್ಮ ಹಣೆಯ ಸಿಂಧೂರ ನಿಮಗೆ ಸಹಾಯ ಮಾಡಲಿದೆ ಎಂದು ನಿಮಗೆ ತಿಳಿದಿದೆಯೇ?  

Written by - Yashaswini V | Last Updated : Apr 15, 2021, 02:35 PM IST
  • ಹೆಣ್ಣು ಮಕ್ಕಳು ಹಣೆಗೆ ಸಿಂಧೂರ ಇಡುವುದು ನಮ್ಮ ಸಂಪ್ರದಾಯ
  • ಇದು ನಮ್ಮ ಜೀವನದ ಹಲವು ರೀತಿಯ ಸಮಸ್ಯೆಗಳನ್ನು ಪರಿಹರಿಸುವಲ್ಲಿಯೂ ಸಹಾಯ ಮಾಡುತ್ತದೆ
  • ವಿವಾಹಿತ ಮಹಿಳೆಯರು ತಮ್ಮ ಗಂಡನ ದೀರ್ಘ ಆಯಸ್ಸಿಗಾಗಿ ಸಿಂಧೂರವನ್ನು ಹೆಚ್ಚುತ್ತಾರೆ
Sindhoora: ನಕಾರಾತ್ಮಕ ಶಕ್ತಿ, ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಸಹಾಯ ಮಾಡುತ್ತೆ ಸಿಂಧೂರ title=
How to use Sindhoora

ಬೆಂಗಳೂರು: ಹಿಂದೂ ಧರ್ಮದಲ್ಲಿ ಗೃಹಿಣಿ ಹಣೆಗಿಡುವ ಕುಂಕುಮ ಅಥವಾ ಸಿಂಧೂರಕ್ಕೆ ಬಹಳ ವಿಶೇಷ ಮಹತ್ವವಿದೆ. ವಿವಾಹಿತ ಮಹಿಳೆಯರು ತಮ್ಮ ಗಂಡನ ದೀರ್ಘ ಆಯಸ್ಸಿಗಾಗಿ ಸಿಂಧೂರವನ್ನು ಇಡುತ್ತಾರೆ ಎಂದು ನಂಬಲಾಗಿದೆ. ಸಿಂಧೂರ ಮೇಕಪ್‌ನ ಒಂದು ಭಾಗ ಮಾತ್ರವಲ್ಲ, ಇದು ಸಕಾರಾತ್ಮಕ ಶಕ್ತಿಯ ಸಂಕೇತವಾಗಿದೆ. 

ದೇವರ ಆರಾಧನೆಯಲ್ಲಿ, ಪೂಜೆ ಸಮಯದಲ್ಲಿ ಸಿಂಧೂರವನ್ನು ಬಳಸಲಾಗುತ್ತದೆ. ಸಿಂಧೂರವನ್ನು ಶುಭ ಸಂಕೇತವೆಂದು ಪರಿಗಣಿಸಲಾಗಿದೆ, ಅದಕ್ಕಾಗಿಯೇ ಪೂಜೆ ಸಮಯದಲ್ಲಿ ಅರಿಶಿನ, ಕುಂಕುಮವನ್ನು ಬಳಸಲಾಗುತ್ತದೆ. 

ಜೀವನದ ಹಲವು ಸಮಸ್ಯೆಗಳಿಗೆ ಪರಿಹಾರ ಸಿಂಧೂರ:
ಹೆಣ್ಣು ಮಕ್ಕಳು ಹಣೆಗೆ ಸಿಂಧೂರ (Sindoor) ಇಡುವುದು ನಮ್ಮ ಸಂಪ್ರದಾಯ. ಇದು ನಮ್ಮ ಜೀವನದ  ಹಲವು ರೀತಿಯ ಸಮಸ್ಯೆಗಳನ್ನು ಪರಿಹರಿಸುವಲ್ಲಿಯೂ ಸಹಾಯ ಮಾಡುತ್ತದೆ. ಸಿಂಧೂರಕ್ಕೆ ಸಂಬಂಧಿಸಿದ ಅನೇಕ ತಂತ್ರಗಳಿವೆ. ಸಿಂಧೂರದಲ್ಲಿನ ಶಕ್ತಿ  ನಿಮ್ಮ ಅನೇಕ ಸಮಸ್ಯೆಗಳು ದೂರವಾಗುವಂತೆ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ - Lord Hanuman Birth Place: ಅಂಜನೇಯ ಸ್ವಾಮಿ ಜನ್ಮಸ್ಥಾನದ ಕುರಿತು ಮುಖಾಮುಖಿಯಾದ ಕರ್ನಾಟಕ-ಆಂಧ್ರಪ್ರದೇಶ

1. ನಿಮ್ಮ ಮನೆಯಲ್ಲಿ ಒಂದರ ನಂತರ ಒಂದರಂತೆ ಸಮಸ್ಯೆಗಳು ಪುನರಾವರ್ತಿತವಾಗುತ್ತಿದ್ದರೆ, ಹಲವು ಪ್ರಯತ್ನಗಳ ಹೊರತಾಗಿಯೂ ನೀವು ಆ ಸಮಸ್ಯೆಗಳಿಂದ ಹೊರಬರಲು ಸಾಧಯವಾಗದಿದ್ದರೆ ಸಿಂಧೂರದ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಬಹುದು. ಇದಕ್ಕಾಗಿ ಮಲ್ಲಿಗೆ ಎಣ್ಣೆಯಲ್ಲಿ ಸಿಂಧೂರವನ್ನು ಬೆರೆಸಿ ಹನುಮಂತನಿಗೆ ಅರ್ಪಿಸಿ. ಸತತ ಐದು ಮಂಗಳವಾರ ಮತ್ತು ಐದು ಶನಿವಾರದಂದು ಹೀಗೆ ಮಾಡುವುದರಿಂದ ನಿಮ್ಮ ಎಂತಹದ್ದೇ ತೊಂದರೆ ಇದ್ದರೂ ನಿವಾರಣೆಯಾಗುತ್ತದೆ ಎಂದು ನಂಬಲಾಗಿದೆ.

2. ಕುಟುಂಬದಲ್ಲಿ ಯಾರಾದರೂ ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರೆ ಮತ್ತು ಔಷಧಿಗಳನ್ನು ತೆಗೆದುಕೊಂಡ ನಂತರವೂ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರದಿದ್ದರೆ ಅವರಿಗೆ ಕುಂಕುಮವನ್ನು ನಿವಾರಿಸಿ ಅರ್ಥಾತ್ ಕುಂಕುಮದಿಂದ ಇಳಿ ತೆಗೆದು ಅದನ್ನು ಹರಿಯುವ ನೀರಿನಲ್ಲಿ ಬಿಡಿ.  ಹೀಗೆ ಮಾಡುವುದರಿಂದ ಅವರ ಆರೋಗ್ಯ ಶೀಘ್ರದಲ್ಲೇ ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- Staircase Vastu Tips - ಮನೆಯ Staircaseನಲ್ಲಿ ಅಡಗಿದೆ ಯಶಸ್ಸಿನ ಗುಟ್ಟು

3. ನೀವು ಹಣಕಾಸಿನ ಸಮಸ್ಯೆ (Financial Problems) ಯನ್ನು ಎದುರಿಸುತ್ತಿದ್ದರೆ, ಎಷ್ಟು ಸಂಪಾದಿಸಿದರೂ ನೀವು ಹಣಕಾಸಿನ ಸಮಸ್ಯೆಗಳಿಂದ ಹೊರಬರಲು ಸಾಧ್ಯವಾಗುತ್ತಿಲ್ಲವೇ? ಚಿಂತೆಬಿಡಿ, ಇದಕ್ಕಾಗಿ ಇದಕ್ಕಾಗಿ ತೆಂಗಿನಕಾಯಿಗೆ ಸಿಂಧೂರವನ್ನು ಹಚ್ಚಿ ಅದನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಪೂಜಿಸಿ. ಬಳಿಕ ಅದನ್ನು ನಿಮ್ಮ ಅಂಗಡಿಯ ಗಲ್ಲಾಪೆಟ್ಟಿಗೆಯಲ್ಲಿ ಅಥವಾ ಮನೆಯಲ್ಲಿ ನೀವು ಹಣ ಇಡುವ ಜಾಗದಲ್ಲಿ ಇಡಿ. ಹೀಗೆ ಮಾಡುವುದರಿಂದ ಆರ್ಥಿಕ ತೊಂದರೆಗಳು ನಿವಾರಣೆಯಾಗುತ್ತವೆ ಎನ್ನಲಾಗಿದೆ.

4. ಸಿಂಧೂರವನ್ನು ಎಣ್ಣೆಯೊಂದಿಗೆ ಬೆರೆಸಿ ಮನೆಯ ಮುಖ್ಯ ದ್ವಾರದಲ್ಲಿ ಹಚ್ಚುವುದರಿಂದ  ನಕಾರಾತ್ಮಕ ಶಕ್ತಿಯು ಮನೆಯೊಳಗೆ ಪ್ರವೇಶಿಸುವುದಿಲ್ಲ. ಸತತ 40 ದಿನಗಳ ಕಾಲ ಮುಖ್ಯ ಬಾಗಿಲಲ್ಲಿ ಈ ಪರಿಹಾರವನ್ನು ಮಾಡುವುದರಿಂದ, ಋಣಾತ್ಮಕ ಶಕ್ತಿಯು ಮನೆಯೊಳಗೆ ಬರುವುದಿಲ್ಲ ಮತ್ತು ವಾಸ್ತು ದೋಷಗಳು ಸಹ ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ.

(ಗಮನಿಸಿ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿಗಳನ್ನು ಆಧರಿಸಿದೆ. ಜೀ ನ್ಯೂಸ್ ಇವುಗಳನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News