ನವದೆಹಲಿ: Suspicious Zodiac People - ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ರಾಶಿಗಳ ಆಧಾರದ ಮೇಲೆ ವ್ಯಕ್ತಿಯೊಬ್ಬನ ಗುಣ ಹಾಗೂ ಅವಗುಣಗಳನ್ನು ತಿಳಿಯಬಹುದ. ಎದುರಿಗಿರುವವರ ರಾಶಿಯನ್ನು ತಿಳಿದುಕೊಂಡು ಅವರ ಸ್ವಭಾವ ಹೇಗಿರುತ್ತದೆ ಎಂಬುದನ್ನು ನೀವು ತಿಳಿಯಬಹುದು. ಅಲ್ಲದೆ, ಯಾವ ಸಂದರ್ಭಗಳಲ್ಲಿ ಅವನು ಹೇಗೆ ವರ್ತಿಸುತ್ತಾನೆ? ಎಂಬಂತಹ ಕೆಲ ವಿಷಯಗಳನ್ನೂ ರಾಶಿ ಜ್ಯೋತಿಷ್ಯದಲ್ಲಿ ಹೇಳಲಾಗಿದೆ, ಆಯಾ ಜನರು ತಮ್ಮ ಸಂಗಾತಿಯನ್ನು ನಂಬುವುದಿಲ್ಲ. ಅವರು ತಮ್ಮ ಸಂಗಾತಿಯ ಪ್ರತಿಯೊಂದು ಚಟುವಟಿಕೆಯನ್ನು ಅನುಮಾನದಿಂದ ಗಮನಿಸುತ್ತಾರೆ. ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,

COMMERCIAL BREAK
SCROLL TO CONTINUE READING

ಮೇಷ ರಾಶಿ (Aries)
ಈ ರಾಶಿಯ ಜನರು ತುಂಬಾ ಅನುಮಾನಾಸ್ಪದರು. ವಿಶೇಷವಾಗಿ ಈ ರಾಶಿಚಕ್ರದ ಮಹಿಳೆಯರು ತಮ್ಮ ಸಂಗಾತಿ ಅಥವಾ ಪತಿಯನ್ನು ಸಂಪೂರ್ಣವಾಗಿ ನಂಬುವುದಿಲ್ಲ ವಾಸ್ತವದಲ್ಲಿ ಅನುಮಾನಾಸ್ಪದ ವರ್ತನೆ ಅವರ ಸ್ವಭಾವದ ಭಾಗವಾಗಿದೆ. ಈ ರಾಶಿಯ ಜನರು ತುಂಬಾ ಭಾವುಕರಾಗಿರುತ್ತಾರೆ. ಇದರಿಂದಾಗಿ ಅವರು ಬೇಸರವನ್ನು ಸಹಿಸುವುದಿಲ್ಲ. ಅಂತಹ ಸಂದರ್ಭಗಳು ಎದುರಾದರೆ ಅವರು ತಮ್ಮ ತಲೆ ಓಡಿಸಲು ಪ್ರಾರಂಭಿಸುತ್ತಾರೆ ಮತ್ತು ಅಂತಹ ಪರಿಸ್ಥಿತಿಯಲ್ಲಿ ಅವರು ತಮ್ಮ ಸಂಗಾತಿಯ ಚಟುವಟಿಕೆಯ ಮೇಲೆ ನಿಗಾ ಇಡಲು ಆರಂಭಿಸುತ್ತಾರೆ

ವೃಷಭ ರಾಶಿ (Taurus)
ಈ ರಾಶಿಯವರನ್ನು ಕುರುಡಾಗಿ ನಂಬಬಹುದು ಆದರೆ ಸಾಮಾನ್ಯವಾಗಿ ಈ ರಾಶಿಯವರು ಬೇರೆಯವರನ್ನು ನಂಬುವುದಿಲ್ಲ. ಈ ರಾಶಿಚಕ್ರದ ಜನರನ್ನು ಬಹಳ ಕುತೂಹಲದಿಂದ ಪರಿಗಣಿಸಲಾಗುತ್ತದೆ. ಅವರು ತಮ್ಮ ಸಂಗಾತಿಯ ಪ್ರತಿಯೊಂದು ಚಟುವಟಿಕೆಯ ಮೇಲೆ ನಿಗಾ ಇಡುತ್ತಾರೆ. ಅನುಮಾನಾಸ್ಪದ ಮನಸ್ಥಿತಿಯಿಂದಾಗಿ, ಅವರು ತಮ್ಮ ಸಂಗಾತಿಯ ಫೋನ್ ಅಥವಾ ಇಮೇಲ್ ಅನ್ನು ಪರಿಶೀಲಿಸುತ್ತಲೇ ಇರುತ್ತಾರೆ.


ಇದನ್ನೂ ಓದಿ-March 2022 Planet Transit: ಈ ನಾಲ್ಕು ರಾಶಿಯವರ ಪಾಲಿಗೆ ಅದ್ಭುತವಾಗಿರಲಿದೆ ಮಾರ್ಚ್, ಚತುರ್ಗ್ರಹಿ ಯೋಗದಿಂದ ಹೊಳೆಯಲಿದೆ ಭಾಗ್ಯ

ಧನು ರಾಶಿ (Sagittarius)
ಈ ರಾಶಿಯ ಜನರು ತಮ್ಮ ಸಂಗಾತಿಗೆ ಸಂಬಂಧದಲ್ಲಿ ಜಾಗ ಕೊಡಲು ಇಷ್ಟಪಡುವುದಿಲ್ಲ. ವಿಶೇಷವಾಗಿ ಈ ರಾಶಿಚಕ್ರದ ಹುಡುಗಿಯರು ತಮ್ಮ ಸಂಗಾತಿಯ ಪ್ರತಿಯೊಂದು ಚಟುವಟಿಕೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ.


ಇದನ್ನೂ ಓದಿ-Turtle Ring Wearing Rules : ಆಮೆ ಉಂಗುರ ಧರಿಸಿ ಸಂಪತ್ತಿನ ಸುರಿ ಮಳೆಯಾಗುತ್ತೆ : ಆದ್ರೆ, ಈ ರಾಶಿಯವರು ಧರಿಸಬಾರದು!

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
 


ಇದನ್ನೂ ಓದಿ-Vastu Suggestions: ವ್ಯಾಪಾರ ಮತ್ತು ನೌಕರಿಯಲ್ಲಿ ಉನ್ನತಿಗಾಗಿ ಈ ಉಪಾಯಗಳನ್ನು ಅನುಸರಿಸಿ ನೋಡಿ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ