ಈ ಅಕ್ಷರಗಳಿಂದ ಹೆಸರು ಪ್ರಾರಂಭವಾಗುವ ಹುಡುಗಿಯರು ಪತಿಯ ಪಾಲಿಗೆ ಅದೃಷ್ಟದಾತೆ

ಜ್ಯೋತಿಷ್ಯದ ಪ್ರಕಾರ , ಕೆಲವು ವರ್ಣಮಾಲೆಗಳಿಂದ ಹೆಸರು ಆರಂಭವಾಗುವ ಹುಡುಗಿಯರು ತಮ್ಮ ಪತಿಯ ಪಾಲಿಗೆ ಅದೃಷ್ಟವನ್ನು ಹೊತ್ತು ತರುತ್ತಾರೆ. 

Written by - Zee Kannada News Desk | Last Updated : Feb 25, 2022, 02:44 PM IST
  • ಅತ್ತೆಯ ಮನೆಗೆ ಇವರು ಅಕ್ಷರಶಃ ಅದೃಷ್ಟ ಲಕ್ಷ್ಮೀ ಯಾಗಿರುತ್ತಾರೆ.
  • ಗಂಡನ ಮನೆಯಲ್ಲಿ ಯಾವ ವಿಷಯಕ್ಕೂ ಕೊರತೆ ಇರುವುದೇ ಇಲ್ಲ.
  • ಯಾವ ಅಕ್ಷರಗಳಿಂದ ಹೆಸರು ಪ್ರಾರಂಭವಾದರೆ ಅದೃಷ್ಟ
 ಈ ಅಕ್ಷರಗಳಿಂದ ಹೆಸರು ಪ್ರಾರಂಭವಾಗುವ ಹುಡುಗಿಯರು ಪತಿಯ ಪಾಲಿಗೆ ಅದೃಷ್ಟದಾತೆ title=
ಅತ್ತೆಯ ಮನೆಗೆ ಇವರು ಅಕ್ಷರಶಃ ಅದೃಷ್ಟ ಲಕ್ಷ್ಮೀ ಯಾಗಿರುತ್ತಾರೆ. (file photo)

ಬೆಂಗಳೂರು :  Name Astrology Tips : ಜ್ಯೋತಿಷ್ಯದ ಪ್ರಕಾರ , ಕೆಲವು ವರ್ಣಮಾಲೆಗಳಿಂದ ಹೆಸರು ಆರಂಭವಾಗುವ ಹುಡುಗಿಯರು ತಮ್ಮ ಪತಿಯ ಪಾಲಿಗೆ ಅದೃಷ್ಟವನ್ನು ಹೊತ್ತು ತರುತ್ತಾರೆ. ಇವರು ಕಾಲಿಟ್ಟ ಮನೆಯಲ್ಲಿ ಹಣದ ಕೊರತೆಯಾಗುವುದೇ ಇಲ್ಲ (Name Astrology). ಅತ್ತೆಯ ಮನೆಗೆ ಇವರು ಅಕ್ಷರಶಃ ಅದೃಷ್ಟ ಲಕ್ಷ್ಮೀ ಯಾಗಿರುತ್ತಾರೆ (Luchy name). ಇವರು ಅತ್ತೆಯ ಮನೆ ಪ್ರವೇಶಿಸಿದ ದಿನದಿಂದ ಆ ಮನೆಯಲ್ಲಿ ಏಳಿಗೆ ಆರಂಭವಾಗುತ್ತದೆ. ಗಂಡನ ಮನೆಯಲ್ಲಿ ಯಾವ ವಿಷಯಕ್ಕೂ ಕೊರತೆ ಇರುವುದೇ ಇಲ್ಲ. ಈ ಅಕ್ಷರದಿಂದ ಹೆಸರು ಆರಂಭವಾಗುವ ಹೆಣ್ಣು ಮಕ್ಕಳನ್ನು ಮದುವೆಯಾದ ವ್ಯಕ್ತಿಯ ಬದುಕು ಬಂಗಾರವಾಗಿ ಬಿಡುತ್ತದೆ ಎಂದು ಹೇಳಲಾಗುತ್ತದೆ. 

ಯಾವ ಅಕ್ಷರಗಳಿಂದ ಹೆಸರು ಪ್ರಾರಂಭವಾದರೆ ಅದೃಷ್ಟ ? 
A ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಹುಡುಗಿಯರು ಕೇವಲ ಅದೃಷ್ಟವನ್ನು ಮಾತ್ರ ಹೊತ್ತು ತರುವುದಿಲ್ಲ,  ಬದಲಿಗೆ, ಇತರರೊಂದಿಗೆ ಅವರ ನಡವಳಿಕೆ ಮತ್ತು ಸ್ವಭಾವ ಎರಡೂ ಉತ್ತಮವಾಗಿರುತ್ತದೆ. ಈ ಹುಡುಗಿಯರು ತನ್ನ ಸ್ವಭಾವದಿಂದ ಎಲ್ಲರನ್ನೂ ತನ್ನೆಡೆಗೆ ಆಕರ್ಷಿಸುತ್ತಾರೆ (Name astrology). ಹೀಗಿರುವಾಗ ಈ ಹುಡುಗಿಯರನ್ನು ಯಾರೇ ಮದುವೆ ಮಾಡಿಕೊಂಡರೂ ಅವರ ಮನೆಯಲ್ಲಿ ಹಣದ ಕೊರತೆ ಎದುರಾಗುವುದಿಲ್ಲ. 

ಇದನ್ನೂ ಓದಿ : ನಾಳೆ ಈ ರಾಶಿಯಲ್ಲಿ ರೂಪುಗೊಳ್ಳಲಿದೆ ಅಂಗಾರಕ ಯೋಗ, ಜೀವನದ ಮೇಲೆ ಬೀರಲಿದೆ ಭಾರೀ ಪ್ರಭಾವ

K ಅಕ್ಷರದಿಂದ ಹೆಸರು ಪ್ರಾರಂಭವಾಗುವ ಹುಡುಗಿಯರು ತಮ್ಮ ಅತ್ತೆ ಮನೆ ಮತ್ತು ಮನೆಯವರಿಗೆ ತುಂಬಾ ಅದೃಷ್ಟವಂತರು (Lucky name girl). ಅವರ ಮನೆಯಲ್ಲಿ ಸುಖ, ಶಾಂತಿ, ಸಂಪತ್ತುಗಳಿಗೆ ಕೊರತೆಯಿರುವುದಿಲ್ಲ. ಇವರು ಪತಿಯ ಜೀವನವನ್ನೂ ಬೆಳಗುತ್ತಾರೆ. ಅವರ ಜೀವನ ಸದಾ ಸುಖಮಯವಾಗಿರುತ್ತದೆ.

L ಅಕ್ಷರದಿಂದ ಹೆಸರು ಪ್ರಾರಂಭವಾಗುವ ಹುಡುಗಿಯರ ಜೀವನದಲ್ಲಿ ಎಂದೂ ಯಾವ ವಸ್ತುವಿಗೂ ಕೊರತೆಯಿರುವುದಿಲ್ಲ (Lucky girls). ಅವಳು ತನ್ನ ಅತ್ತೆ ಮನೆಯನ್ನು ಬೆಳಗುವ ಗುಣ ಹೊಂದಿರುತ್ತಾಳೆ.  ಈ ಹುಡುಗಿಯರಿಗೆ ಜೀವನದಲ್ಲಿ ಎಲ್ಲಾ ರೀತಿಯ ಸೌಕರ್ಯಗಳು ಸಿಗುತ್ತವೆ. ಆಕೆ ಶ್ರಮಜೀವಿ ಮಾತ್ರವಲ್ಲದೆ ಪ್ರತಿ ಹಂತದಲ್ಲೂ ಕುಟುಂಬದ ಜೊತೆಗೆ ನಿಲ್ಲುತ್ತಾಳೆ. 

ಇದನ್ನೂ ಓದಿ : Milk Remedies : ಹಾಲನ್ನು ಹೀಗೆ ಬಳಸುವುದರಿಂದ ನಿಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲಸುತ್ತಾಳೆ ಲಕ್ಷ್ಮಿದೇವಿ!

C ಅಕ್ಷರದಿಂದ ಪ್ರಾರಂಭವಾಗುವ ಹುಡುಗಿಯರು ಉತ್ಸಾಹಭರಿತ ಮತ್ತು ಸಂತೋಷದ ಸ್ವಭಾವವನ್ನು ಹೊಂದಿರುತ್ತಾರೆ. ತನ್ನ ಕಠಿಣ ಪರಿಶ್ರಮದಿಂದ ಗುರಿಯನ್ನು ಸಾಧಿಸುತ್ತಾಳೆ. ಇವರೂ ಯಾವ ಮನೆಗೆ ಮದುವೆಯಾಗಿ ಹೋಗುತ್ತಾರೋ, ಆ ಮನೆಯಲ್ಲಿ ಹಣಕ್ಕೆ ಕೊರತೆಯಿರುವುದಿಲ್ಲ.  ಈ ಹುಡುಗಿಯರು ಅತ್ತೆ ಮನೆಯ ಪಾಲಿಗೆ ಅದೃಷ್ಟವಂತರಾಗಿರುತ್ತಾರೆ .  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News