ನವದೆಹಲಿ : ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ವಿಶೇಷ ನಡವಳಿಕೆ, ಅಭ್ಯಾಸ ಮತ್ತು ವ್ಯಕ್ತಿತ್ವವನ್ನು ಹೊಂದಿರುತ್ತಾನೆ. ವ್ಯಕ್ತಿಯ ಗುಣಗಖ ಆಧಾರದ ಮೃಲೆ ಜನ ಅವರನ್ನು ನೋಡಿಕೊಳ್ಳುವ ರೀತಿಯೂ ಬದಲಾಗುತ್ತದೆ. ಇನ್ನು ಕೆಲವರು ಬಹಳ ನಿಗೂಢವಾಗಿರುತ್ತಾರೆ. ಅವರನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಜ್ಯೋತಿಷ್ಯದಲ್ಲಿ,  (Astrology) ಎಲ್ಲಾ 12 ರಾಶಿಚಕ್ರ ಚಿಹ್ನೆಗಳ ಗುಣಲಕ್ಷಣಗಳನ್ನು ಕೂಡಾ ಹೇಳಲಾಗಿದೆ. ಇದರ ಪ್ರಕಾರ, 3 ರಾಶಿಚಕ್ರ ಚಿಹ್ನೆಗಳ (Zodiac Signs) ಜನರು ತುಂಬಾ ಬುದ್ಧಿವಂತರು. ಆದರೆ ಯಾವಾಗ ಬೇಕಾದರೂ ಮೋಸ ಮಾಡಬಹುದು. ಅಂಥವರು ನಿಮ್ಮ ಸುತ್ತ ಇದ್ದರೆ ಹುಷಾರಾಗಿರಬೇಕು. 


COMMERCIAL BREAK
SCROLL TO CONTINUE READING

ಈ ರಾಶಿಯ ಜನರು ಯಾವಾಗ ಬೇಕಾದರೂ ಮೋಸ ಮಾಡಬಹುದು.  
ಈ ರಾಶಿಚಕ್ರ ಚಿಹ್ನೆಗಳ (Zodiac Signs) ಜನರು ಒಂದು ತರಹ ನರಿ ಬುದ್ಧಿಯವರು. ತಮ್ಮ ಸ್ವಂತ ಲಾಭಕ್ಕಾಗಿ ಯಾರನ್ನಾದರೂ ಯಾವ ಸಮಯದಲ್ಲಾದರೂ ಮೋಸ ಮಾಡಬಹುದು. ಆದರೂ, ಇವರ ಸಿಹಿ ನಡವಳಿಕೆಯಿಂದಾಗಿ, ಅವರ ತಂತ್ರಗಳನ್ನು ಅರ್ಥಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. 


ಇದನ್ನೂ ಓದಿ : Monday Remedies: ವೈವಾಹಿಕ ಜೀವನದಲ್ಲಿ ಸಮಸ್ಯೆ, ಹಣದ ಕೊರತೆ ನಿವಾರಣೆಗೆ ಇಂದು ಈ ಕೆಲಸ ಮಾಡಿ


ಮಿಥುನ (Gemini): ಮಿಥುನ ರಾಶಿಯವರು (Gemini) ಎದುರಿಗಿರಿವವರ ಮುಖ ನೋಡಿಯೇ ಅವರನ್ನು ಅರ್ಥ ಮಾಡಿಕೊಳ್ಳುತ್ತಾರೆ. ಇವರನ್ನು ಮೋಸ ಮಾಡುವುದು ತುಂಬಾ ಕಷ್ಟ.  ಆದರೆ ಈ ರಾಶಿಯವರು ಯಾರನ್ನು ಬೇಕಾದರೂ ಸುಲಭವಾಗಿ ಮೂರ್ಖರನ್ನಾಗಿ ಮಾಡಿ ಬಿಡುತ್ತಾರೆ. ತಮ್ಮ ಸ್ವಂತ ಲಾಭಕ್ಕಾಗಿ, ಅವರು ಕೆಲವೊಮ್ಮೆ ಇತರರಿಗೆ ಹಾನಿ ಉಂಟು ಮಾಡುತ್ತಾರೆ. 


ಕನ್ಯಾ ರಾಶಿ : ಕನ್ಯಾ ರಾಶಿಯ (Virgo) ಜನರು ಚುರುಕಾಗಿರುತ್ತಾರೆ. ಮಾತಿನಲ್ಲಿ ನಡವಳಿಕೆಯಲ್ಲಿತುಂಬಾ ಮೃದುವಾಗಿರುತ್ತಾರೆ.  ತಮ್ಮ ಕೆಲಸವನ್ನು ಇತರರಿಂದ ಮಾಡಿಸಿಕೊಳ್ಳುವುದು ಅವರಿಗೆ ಚೆನ್ನಾಗಿ ಗೊತ್ತು. ತಮ್ಮ ಈ ಗುಣದಿಂದಲೇ ಎಲ್ಲಾ ಕಷ್ಟಗಳಿಂದ ಹೊರಬರುತ್ತಾರೆ. ಸನ್ನಿವೇಶಗಳನ್ನು ತಮಗೆ ಬೇಕಾದಂತೆ ನಿರ್ವಹಿಸುವ ಅದ್ಭುತ ಪ್ರತಿಭೆ ಅವರಲ್ಲಿರುತ್ತದೆ. 


ಇದನ್ನೂ ಓದಿ : Signature Astrology: ವ್ಯಕ್ತಿಯ ಸಿಗ್ನೇಚರ್ ಆತನ ವ್ಯಕ್ತಿತ್ವದ ಪರಿಚಯಕ್ಕೆ ಹಿಡಿದ ಕನ್ನಡಿ ಎನ್ನುತ್ತೆ ಜ್ಯೋತಿಷ್ಯಶಾಸ್ತ್ರ


ವೃಶ್ಚಿಕ: ವೃಶ್ಚಿಕ ರಾಶಿಯ (Scorpio) ಜನರು ತುಂಬಾ ಬುದ್ಧಿವಂತರು. ತಮಗೆ ಬೇಕಾದುದನ್ನು ಪಡೆಯಲು ಅವರು ಯಾವುದೇ ಹಂತಕ್ಕೂ ತಲುಪುತ್ತಾರೆ.  ಪ್ರತಿಸ್ಪರ್ಧಿಗಳ ಹಿಂದೆ ಚಾಕಚಕ್ಯತೆಯಿಂದ ಮುನ್ನಡೆಯುವುದು ಇವರ ವಿಶೇಷತೆ. ಅವರ ಆಕರ್ಷಕ ಮತ್ತು ಸ್ನೇಹಪರ ವ್ಯಕ್ತಿತ್ವದಿಂದಾಗಿ, ಜನರು ಅವರನ್ನು ಸುಲಭವಾಗಿ ನಂಬುತ್ತಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.