Signature Astrology: ವ್ಯಕ್ತಿಯ ಸಿಗ್ನೇಚರ್ ಆತನ ವ್ಯಕ್ತಿತ್ವದ ಪರಿಚಯಕ್ಕೆ ಹಿಡಿದ ಕನ್ನಡಿ ಎನ್ನುತ್ತೆ ಜ್ಯೋತಿಷ್ಯಶಾಸ್ತ್ರ

Signature Astrology - ಓರ್ವ ವ್ಯಕ್ತಿಯ ತನ್ನ ರಾಶಿಯ  (Zodiac Sign) ಮೂಲಕ  ತನ್ನ ಸ್ವಭಾವ-ವ್ಯಕ್ತಿತ್ವದ  (Nature-Personality) ಬಗ್ಗೆ ಸಾಕಷ್ಟು ತಿಳಿದುಕೊಳ್ಳಬಹುದು. ಹಾಗೆಯೇ  ಆತನು ಮಾಡುವ ಸಹಿಯ ಮೂಲಕ ಕೂಡ ಆತನ ಸ್ವಭಾವದ ಬಗ್ಗೆ ತಿಳಿದುಕೊಳ್ಳಬಹುದು. 

Written by - Nitin Tabib | Last Updated : Nov 14, 2021, 07:59 PM IST
  • ನಿಮ್ಮ ಹಸ್ತಾಕ್ಷರ ಅಥವಾ ಸಹಿಯಿಂದ ನಿಮ್ಮ ವ್ಯಕ್ತಿತ್ವವನ್ನು ತಿಳಿಯಿರಿ.
  • ಒಂದೇ ಬಾರಿಗೆ ಸಹಿ ಮಾಡುವವರು ಅನೇಕ ಸ್ನೇಹಿತರನ್ನು ಹೊಂದಿರುತ್ತಾರೆ.
  • ಕೆಳಗಿನಿಂದ ಸಹಿ ಮಾಡುವವರು ಮಹತ್ವಾಕಾಂಕ್ಷೆಯುಳ್ಳವರಾಗಿರುತ್ತಾರೆ.
Signature Astrology: ವ್ಯಕ್ತಿಯ ಸಿಗ್ನೇಚರ್ ಆತನ ವ್ಯಕ್ತಿತ್ವದ ಪರಿಚಯಕ್ಕೆ ಹಿಡಿದ ಕನ್ನಡಿ ಎನ್ನುತ್ತೆ ಜ್ಯೋತಿಷ್ಯಶಾಸ್ತ್ರ title=
Signature Astrology (File Photo)

Signature Astrology - ಉದ್ಯೋಗ, ವ್ಯಾಪಾರ ಅಥವಾ ಬ್ಯಾಂಕ್‌ನಲ್ಲಿ ಖಾತೆ ತೆರೆಯಲು ಸಹಿ  (Signature) ಮಾಡದೆ ಎಲ್ಲಾ ಔಪಚಾರಿಕತೆಗಳು ಪೂರ್ಣಗೊಳ್ಳುವುದಿಲ್ಲ. ಆದರೆ  ಸಹಿಗಳು ನೀವು ಮಾಡಬೇಕಾದ ಕೆಲಸಗಳಿಗೆ ನಿಮ್ಮ ಒಪ್ಪಿಗೆಯನ್ನು ಮಾತ್ರ ನೀಡುವುದಿಲ್ಲ. ಅವು ನಿಮ್ಮ ವ್ಯಕ್ತಿತ್ವದ (Personality)  ಬಗ್ಗೆ ಅನೇಕ ವಿಶೇಷ ವಿಷಯಗಳನ್ನು ಸಹ ಹೇಳುತ್ತವೆ. ಜ್ಯೋತಿಷ್ಯದಲ್ಲಿ, ಇಡೀ ಒಂದು ಶಾಖೆಯೇ ಹಸ್ತಾಕ್ಷರ ಜೋತಿಷ್ಯದ ಕುರಿತು ಹೇಳುತ್ತದೆ. ಹಸ್ತಾಕ್ಷರ ಜ್ಯೋತಿಷ್ಯ ಶಾಸ್ತ್ರದಲ್ಲಿ (Signature  Astrology) ಸಹಿಯ ಮೂಲಕ ವ್ಯಕ್ತಿಯೊಬ್ಬರ ಸ್ವಭಾವ ಮತ್ತು ನಡವಳಿಕೆಯ ಬಗ್ಗೆ ಸಾಕಷ್ಟು ಸಂಗತಿಗಳನ್ನು ಹೇಳಲಾಗುತ್ತದೆ.  ಇಂತಹ ಕೆಲ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. 

ಇದನ್ನೂ ಓದಿ-Chanakya Niti:ಜೀವನದಲ್ಲಿ ಈ ಜನರ ಜೊತೆಗೆ ಎಂದಿಗೂ ಪಂಗಾಗಿಳಿಯಬೇಡಿ, ಸೋಲು ಕಟ್ಟಿಟ್ಟ ಬುತ್ತಿ

ಸಹಿಯ ಮೂಲಕ ನಿಮ್ಮ ಸ್ವಭಾವವನ್ನು ತಿಳಿಯಿರಿ
- ಹಸ್ತಾಕ್ಷರ ಮಾಡುವಾಗ ಒಮ್ಮೆಯೂ ಕೂಡ ಪೆನ್ನನ್ನು ಎತ್ತದೆ ಹಸ್ತಾಕ್ಷರ ಮಾಡುವ ಜನರು ಪರಂಪರೆಯಲ್ಲಿ ಹೆಚ್ಚು ನಂಬಿಕೆಯನ್ನು ಇಟ್ಟಿರುತ್ತಾರೆ. ಇದಲ್ಲದೆ ಇವರು ಸಾಕಷ್ಟು ಸ್ನೇಹಿತರನ್ನು ಕೂಡ ಹೊಂದಿರುತ್ತಾರೆ.

- ತಮ್ಮ ಹಸ್ತಾಕ್ಷರದ ಎಲ್ಲಾ ಅಕ್ಷರಗಳು ಸ್ಪಷ್ಟವಾಗಿ ಗೋಚರಿಸುವಂತೆ ಸಹಿ ಮಾಡುವ ಜನರು, ಸ್ವಭಾವತಃ ತುಂಬಾ ಪಾರದರ್ಶಕರಾಗಿರುತ್ತಾರೆ.  ಇವರನ್ನು ನೀವು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.

- ಸಹಿ ಮಾಡುವಾಗ, ಅಕ್ಷರಗಳನ್ನು ಗುರುತಿಸಲು ಕೂಡ ಕಷ್ಟವಾಗುವ ರೀತಿಯಲ್ಲಿ ಹಸ್ತಾಕ್ಷರ ಮಾಡುವ ಜನರು ನಿಗೂಢ ಸ್ವಭಾವದವರಾಗಿರುತ್ತಾರೆ. ಅಂತಹ ಜನರೊಂದಿಗೆ ದೀರ್ಘಕಾಲ ಕಳೆದರೂ ಕೂಡ ಅವರ ಸ್ವಭಾವವನ್ನು ಗುರುತಿಸುವುದು ಕಷ್ಟ. ಈ ಜನರು ತುಂಬಾ ಚುರುಕು ಸ್ವಭಾವದವರು ಹಾಗೂ ಚತುರರಾಗಿರುತ್ತಾರೆ. 

ಇದನ್ನೂ ಓದಿ-Vastu Tips:ಮನೆಯಲ್ಲಿ ತುಳಸಿ ಗಿಡ ನೆಡುವ ಸರಿಯಾದ ಜಾಗ ತಿಳಿದುಕೊಳ್ಳಿ, ಹಣಕಾಸಿನ ಮುಗ್ಗಟ್ಟು ನಿವಾರಣೆಯಾಗುತ್ತದೆ

- ಸಹಿ ಮಾಡುವಾಗ ಕೆಳಗಿನಿಂದ ಮೇಲಕ್ಕೆ ಅಕ್ಷರಗಳನ್ನು ಬರೆಯುವುದು ವ್ಯಕ್ತಿಯ ಉತ್ಸಾಹದ ಸಂಕೇತವಾಗಿದೆ. ಅಂತಹ ಜನರು ದೊಡ್ಡ ಕನಸುಗಳನ್ನು ಕಾಣುತ್ತಾರೆ ಮತ್ತು ಅವುಗಳನ್ನು ಪೂರೈಸುತ್ತಾರೆ.

- ಮತ್ತೊಂದೆಡೆ, ಸಹಿ ಮಾಡುವಾಗ ಅಕ್ಷರಗಳನ್ನು ಕೆಳಕ್ಕೆ ತರುವವರು, ಜೀವನದ ಬಗೆಗಿನ ಅವರ ವರ್ತನೆ ತುಂಬಾ ನಿರಾಶಾವಾದಿಯಾಗಿ ಉಳಿಯುತ್ತದೆ.

- ಯಾರು ಪೆನ್ನನ್ನು ತುಂಬಾ ಆಳವಾಗಿ ಊರಿ ಸಹಿ ಮಾಡುತ್ತಾರೆ, ಅವರು ತುಂಬಾ ಹಠಮಾರಿ ಮತ್ತು ಸ್ವಭಾವತಃ ಬಹಿರಂಗವಾಗಿ ಮಾತನಾಡುತ್ತಾರೆ.

- ಸಹಿಯಲ್ಲಿ ಡಾಟ್ ಬಳಸುವ ಜನರು ಇತರರನ್ನು ಸುಲಭವಾಗಿ ನಂಬುವುದಿಲ್ಲ ಮತ್ತು ಅವರು ಕೈಗೆ ಬಂದ ಕೆಲಸವನ್ನು ಪೂರ್ಣಗೊಳಿಸಿದ ನಂತರವೇ ಮುಂದಿನ ಕೆಲಸ ಮಾಡುತ್ತಾರೆ.

ಇದನ್ನೂ ಓದಿ-Tulsi Vivah 2021 : ನಾಳೆ ತುಳಸಿ ವಿವಾಹ : ಶುಭ ಮುಹೂರ್ತ ಹಾಗೂ ಪೂಜಾ ವಿಧಾನದ ಬಗ್ಗೆ ತಿಳಿಯಿರಿ

(Disclaimer:ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆದರಿಸಿದೆ. ಝೀ ಹಿಂದುಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವುದಕ್ಕು ಮುನ್ನ ವಿಷಯ ತಜ್ಞರ ಸಲಹೆ ಖಂಡಿತ ಪಡೆಯಿರಿ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News