Astrology, Zodiac Sign: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯ ಸ್ವಭಾವವು ವಿಭಿನ್ನವಾಗಿರುತ್ತದೆ. ಅವರು ಇಷ್ಟಪಡುವುದು ಅಥವಾ ಇಷ್ಟ ಪಡದೇ ಇರುವುದು ಎಲ್ಲವೂ ಕೂಡ ಬೇರೆ ಬೇರೆಯಾಗಿರುತ್ತದೆ.  ಓರ್ವ ವ್ಯಕ್ತಿಯ ರಾಶಿ ಮತ್ತು ಗ್ರಹಗಳ ಸ್ಥಿತಿಗತಿಯ ಆಧಾರದ ಮೇಲೆ ಆ ವ್ಯಕ್ತಿಯ ಸ್ವಭಾವ ಮತ್ತು ಭವಿಷ್ಯವನ್ನು ಅಂಡಾಜಿಸಬಹುದು. ರಾಶಿಗನುಗುಣವಾಗಿ ಕೆಲವರು ಸ್ವಭಾವತಃ ಶಾಂತವಾಗಿದ್ದರೆ, ಕೆಲವರು ತುಂಬಾ ಮಾತನಾಡುವ ಅಭ್ಯಾಸವನ್ನು ಹೊಂದಿರುತ್ತಾರೆ. ಹಲವು ಬಾರಿ ಈ ಜನರ ಈ ಅಭ್ಯಾಸವು ಅವರನ್ನು ಸಮಸ್ಯೆಗೆ ಸಿಲುಕಿಸುತ್ತದೆ. 


COMMERCIAL BREAK
SCROLL TO CONTINUE READING

ಜ್ಯೋತಿಷ್ಯ ಶಾಸ್ತ್ರದಲ್ಲಿ ಅತಿ ಹೆಚ್ಚು ಮಾತನಾಡುವ ಜನರಿಗೆ ಎಚ್ಚರಿಕೆಯಿಂದ ಮಾತನಾಡಲು ಸಲಹೆ ನೀಡಲಾಗುತ್ತದೆ. ಈ ಜನರು ಕೆಲವೊಮ್ಮೆ ತಮ್ಮ ಹೆಚ್ಚು ಮಾತನಾಡುವ ಅಭ್ಯಾಸದಿಂದಾಗಿ ಅನೇಕ ಸಮಸ್ಯೆಗಳನ್ನು ತಮಗೆ ತಾವೇ ಸೃಷ್ಟಿಸಿಕೊಳ್ಳುತ್ತಾರೆ ಎಂದು ಹೇಳಲಾಗಿದೆ. ಆ ರಾಶಿಗಳು ಮತ್ತು ಅವುಗಳಿಗೆ ಸೇರಿದ ಜನರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. 


ಈ ರಾಶಿಗಳಿಗೆ ಸೇರಿದ ಜನರಿಗಿರುತ್ತದೆ ಅತಿ ಹೆಚ್ಚು ಮಾತನಾಡುವ ಅಭ್ಯಾಸ
ವೃಷಭ ರಾಶಿ -
ಜೋತಿಷ್ಯ ಶಾಸ್ತ್ರದ ಪ್ರಕಾರ, ಶುಕ್ರ ದೇವ ಈ ರಾಶಿಯ ಅಧಿಪತಿ. ಹೀಗಾಗಿ ಈ ರಾಶಿಗೆ ಸೇರಿದ ಜನರ ಮೇಲೆ ಶುಕ್ರನ ಪ್ರಭಾವ ಗೋಚರಿಸುತ್ತದೆ.  ವೃಷಭ ರಾಶಿಯ ಜಾತಕ ಹೊಂದಿರುವವರಲ್ಲಿ ಒಂದು ವೇಳೆ ಶುಕ್ರ ದುರ್ಬಲನಾಗಿದ್ದರೆ, ಅಥವಾ ರಾಹು-ಕೇತುಗಳಿಂದ ಪೀಡಿತನಾಗಿದ್ದರೆ, ಈ ಜನರು ತಮ್ಮ ಮಾತಿನ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುತ್ತಾರೆ ಮತ್ತು ಯೋಚನೆ ಇಲ್ಲದೆಯೇ ಯಾರಿಗೆ ಏನು  ಬೇಕಾದರೂ ಕೂಡ ಮಾತನಾಡುತ್ತಾರೆ. 


ಕೋಪಕ್ಕೆ ತುತ್ತಾಗಿ ಕೆಲವೊಮ್ಮೆ ಇವರು ಹೇಳಬಾರದ್ದನೆಲ್ಲಾ ಹೇಳಿಬಿಡುತ್ತಾರೆ. ಹೀಗಾಗಿ ಅನೇಕ ಬಾರಿ ಇವರು ಸಂಕಷ್ಟಕ್ಕೆ ಒಳಗಾಗುತ್ತಾರೆ. ಆದರೆ, ಇವರು ಸ್ವಭಾವತಃ ತುಂಬಾ ಕೋಮಲರಾಗಿರುತ್ತಾರೆ ಮತ್ತು ಇವರ ಮನಸ್ಸು ನಿಷ್ಕಲ್ಮಶವಾಗಿರುತ್ತದೆ. ಹೀಗಾಗಿ ಇವರು ಬೇಗನೆ ಇತರರ ಮಾತನ್ನು ಅರ್ಥೈಸಿಕೊಳ್ಳುವುದಿಲ್ಲ. ಸ್ವಾರ್ಥ ಹಾಗೂ ಲೋಭದಿಂದ ಕೂಡಿರುವ ಜನರಿಂದ ಇವರು ಅಂತರ ಕಾಯ್ದುಕೊಳ್ಳಬೇಕು. ಈ ರಾಶಿಗೆ ಸೇರಿದವರ ಹೆಸರು ಈ, ಉ, ಎ, ಓ  ವಾ, ವಿ, ವೂ, ವೆ, ವೊ ಅಕ್ಷರಗಳಿಂದ ಆರಂಭವಾಗುತ್ತದೆ. 


ಕನ್ಯಾ ರಾಶಿ - ಬುಧ ದೇವ ಈ ರಾಶಿಗೆ ಅಧಿಪತಿ. ಬುಧ, ವಾಣಿ ಅಂದರೆ ಮಾತಿನೊಂದಿಗೆ ನೇರ ಸಂಬಂಧ ಹೊಂದಿದ್ದಾನೆ. ಹೀಗಾಗಿ ಈ ರಾಶಿಗೆ ಸೇರಿದ ಜನರು ತಮ್ಮ ಭಾಷೆ ಹಾಗೂ ಮಾತಿನ ವಿಷಯದಲ್ಲಿ ತುಂಬಾ ಜಾಗ್ರತರಾಗಿರುತ್ತಾರೆ. ಈ ರಾಶಿಯ ಮೇಲೆ ಒಂದು ವೇಳೆ ಕೆಟ್ಟ ಗ್ರಹಗಳ ದೃಷ್ಟಿ ಬಿದ್ದರೆ, ರಾಶಿಗೆ ಸೇರಿದ ಜನರು ಕಠೋರ ಮಾತುಗಳನ್ನಾಡಲು  ಆರಂಭಿಸುತ್ತಾರೆ ಹಾಗೂ ಇತರ ಜನರ ಜೊತೆಗಿನ ತಮ್ಮ ಸಂಬಂಧವನ್ನು ಇವರು ಬಿಗಡಾಯಿಸಿಕೊಳ್ಳುತ್ತಾರೆ. 


ಇದನ್ನೂ ಓದಿ-Jyeshtha Month 2022: ವೈಶಾಖ ಹುಣ್ಣಿಮೆಯ ಬಳಿಕ ಜೇಷ್ಠ ಮಾಸ ಆರಂಭ, ಭಾಗ್ಯವೃದ್ಧಿ ಹಾಗೂ ಪುಣ್ಯ ಪ್ರಾಪ್ತಿಗೆ ಈ 8 ಕೆಲಸಗಳನ್ನು ಮಾಡಿ


ತನ್ನ ಮನಸ್ಸಿನ ಮಾತುಗಳನ್ನು ಹಂಚಿಕೊಳ್ಳಲು ಇವರು ಎಂದಿಗೂ  ಹಿಂಜರಿಯುವುದಿಲ್ಲ ಅಥವಾ ನಾಚಿಕೊಳ್ಳುವುದಿಲ್ಲ. ಇದೇ ಕಾರಣದಿಂದ ಇತರರು ಇವರನ್ನು ತಪ್ಪಾಗಿ ಬಳಸಿಕೊಳ್ಳುತ್ತಾರೆ.  ಹೀಗಾಗಿ ಸ್ನೇಹ ಬೆಳೆಸುವಾಗ ಇವರು ಸಾಕಷ್ಟು ಎಚ್ಚರದಿಂದ ಇರಬೇಕು ಎಂಬ ಸಲಹೆ ನೀಡಲಾಗುತ್ತದೆ. ಢೋ , ಪಾ, ಪಿ, ಪೂ, ಷ , ಣ , ಪೆ  ಹಾಗೂ ಪೊ  ಅಕ್ಷರಗಳಿಂದ ಆರಂಭಗೊಳ್ಳುವ ಹೆಸರಿನ ವ್ಯಕ್ತಿಗಳು ಈ ರಾಶಿಗೆ ಸೇರುತ್ತಾರೆ. 


ಇದನ್ನೂ ಓದಿ-Chanakya Niti: ಚಿನ್ನ ಸೇರಿದಂತೆ ಈ ವಸ್ತುಗಳು ಕೇಸರಲ್ಲಿ ಬಿದ್ದಿದ್ದರೂ ಕೂಡ ಕೈಗೆತ್ತಿಕೊಳ್ಳಲು ತಡಮಾಡಬೇಡಿ


(Disclaimer  - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.