ಬೆಂಗಳೂರು : ಹಣ ಸಂಪಾದಿಸುವುದರ ಜೊತೆಗೆ ಹಣವನ್ನು ಉಳಿಸುವುದು ಕೂಡ ಒಂದು ಕಲೆ. ಈ ಕಲೆ ಎಲ್ಲರಿಗೂ ತಿಳಿದಿರುವುದಿಲ್ಲ. ಕೈ ತುಂಬಾ ಸಂಬಳ ಪಡೆದು ತಿಂಗಳಾಂತ್ಯದಲ್ಲಿ ಕೈ ಖಾಲಿ ಮಾಡಿಕೊಳ್ಳುವ ಅದೆಷ್ಟೋ ಜನ ನಮ್ಮ ಮಧ್ಯೆ ಇರುತ್ತಾರೆ. ಇನ್ನೊಂದೆಡೆ, ಸೀಮಿತ ಆದಾಯದಲ್ಲಿಯೂ ತಮ್ಮ ಖರ್ಚುಗಳನ್ನು ಪೂರೈಸಿ ಉಳಿತಾಯ ಮಾಡುವವರು ಕೂಡಾ ಇದ್ದಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತುಂಬಾ ಜಿಪುಣರಾಗಿರುವ ರಾಶಿ ಚಕ್ರಗಳನ್ನು ಕೂಡಾ ಹೇಳಲಾಗಿದೆ. 


COMMERCIAL BREAK
SCROLL TO CONTINUE READING

ಮಿಥುನ  : ಮಿಥುನ ರಾಶಿಯ ಜನರು ಹಣವನ್ನು ಬಹಳ ಚಿಂತನಶೀಲವಾಗಿ ಖರ್ಚು ಮಾಡುತ್ತಾರೆ. ಅವರು ಉಳಿತಾಯ ಮತ್ತು ಹೂಡಿಕೆಯಲ್ಲೂ ನಂಬಿಕೆ  ಇಟ್ಟುಕೊಂಡಿರುತ್ತಾರೆ.  ಸಾಮಾನ್ಯವಾಗಿ ಈ ಜನರು ಸರಳ ಜೀವನವನ್ನು ನಡೆಸುತ್ತಾರೆ ಮತ್ತು ಕಷ್ಟದ ಸಮಯಕ್ಕಾಗಿ ಹಣವನ್ನು  ಇಟ್ಟುಕೊಳ್ಳುತ್ತಾರೆ. 


ಇದನ್ನೂ ಓದಿ : ತುಳಸಿಯ ಸುತ್ತಮುತ್ತ ತಪ್ಪಿಯೂ ಈ ಸಸ್ಯಗಳನ್ನು ನೆಡಬೇಡಿ , ಎದುರಾಗುವುದು ಸಮಸ್ಯೆ


ಸಿಂಹ ರಾಶಿ  : ಸಿಂಹ ರಾಶಿಯವರ ಜೇಬಿನಿಂದ ಹಣ ತೆಗೆಸುವುದು ಅಷ್ಟು ಸುಲಭವಲ್ಲ. ಈ ಜನರು ಉಪಯುಕ್ತ ವಸ್ತುಗಳಿಗೆ ಮಾತ್ರ ಹಣವನ್ನು ಖರ್ಚು ಮಾಡುತ್ತಾರೆ. ಆದರೆ ಪ್ರತಿಷ್ಠೆಯ ವಿಚಾರ ಬಂದಾಗ ಕೈಯನ್ನು ಸ್ವಲ್ಪ ಮಟ್ಟಿಗೆ ಸಡಿಲಗೊಳಿಸುತ್ತಾರೆ. 


ತುಲಾ  : ತುಲಾ ರಾಶಿಯ ಜನರು ಹಣವನ್ನು ಉಳಿಸುವಲ್ಲಿ ಮತ್ತು ಬಜೆಟ್ ಮಾಡುವಲ್ಲಿ ಅತ್ಯುತ್ತಮರು. ಹಣವನ್ನು ಖರ್ಚು ಮಾಡಬೇಕಾದ ಸ್ಥಳಗಳಿಂದ ಅವರು ಸುಲಭವಾಗಿ ತಪ್ಪಿಸಿಕೊಂಡು ಬಿಡುತ್ತಾರೆ. ಹಣಕಾಸಿನ ಯೋಜನೆಯಲ್ಲಿ ಪರಿಣತಿ ಹೊಂದಿರುತ್ತಾರೆ. 


ಇದನ್ನೂ ಓದಿ: ಇಂಥಹ ಜನರ ಕೈ ಸೋಕಿದರೆ ಮಣ್ಣು ಕೂಡಾ ಹೊನ್ನಾಗುತ್ತದೆಯಂತೆ. ! ನಿಮ್ಮಲ್ಲಿವೆಯಾ ಈ ಗುಣ ?


ಕುಂಭ ರಾಶಿ  :ಕುಂಭ ರಾಶಿಯವರು ತುಂಬಾ ಶ್ರಮಜೀವಿಗಳು ಮತ್ತು ಕಠಿಣ ಪರಿಶ್ರಮದಿಂದ ಸಾಕಷ್ಟು ಹಣವನ್ನು ಗಳಿಸುತ್ತಾರೆ. ಆದರೆ ಹಣವನ್ನು ಖರ್ಚು ಮಾಡುವ ವಿಷಯ ಬಂದಾಗ, ಅವರು ಬಹಳಷ್ಟು ಯೋಚಿಸುತ್ತಾರೆ. ಸಾಮಾನ್ಯವಾಗಿ ಈ ಜನರು ಸಾಕಷ್ಟು ಸಂಪತ್ತನ್ನು ಹೊಂದಿದ್ದರೂ ಸಹ ಅತ್ಯಂತ ಸರಳ ಜೀವನವನ್ನು ನಡೆಸುತ್ತಾರೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.