ತುಳಸಿಯ ಸುತ್ತಮುತ್ತ ತಪ್ಪಿಯೂ ಈ ಸಸ್ಯಗಳನ್ನು ನೆಡಬೇಡಿ , ಎದುರಾಗುವುದು ಸಮಸ್ಯೆ

Vastu Tips For Tulsi Plant : ತುಳಸಿ ಗಿಡವನ್ನು ಸನಾತನ ಧರ್ಮದಲ್ಲಿ ಪೂಜ್ಯವೆಂದು ಪರಿಗಣಿಸಲಾಗಿದೆ. ಇದರೊಂದಿಗೆ ತುಳಸಿ ಗಿಡವನ್ನು ಮನೆಯಲ್ಲಿ ನೆಡುವುದು, ಅದರ ನಿರ್ವಹಣೆ, ಪೂಜೆ ಇತ್ಯಾದಿಗಳ ಬಗ್ಗೆಯೂ ಕೆಲವು ಪ್ರಮುಖ ನಿಯಮಗಳನ್ನು ಹೇಳಲಾಗಿದೆ. 

Written by - Ranjitha R K | Last Updated : Apr 8, 2022, 03:59 PM IST
  • ತುಳಸಿ ಗಿಡದ ಬಗ್ಗೆ ಈ ಪ್ರಮುಖ ನಿಯಮಗಳನ್ನು ತಿಳಿದುಕೊಳ್ಳಿ
  • ತುಳಸಿ ಗಿಡದ ಬಳಿ ಕೊಳೆ ಉಳಿಯಲು ಬಿಡಬೇಡಿ
  • ತುಳಸಿ ಗಿಡವನ್ನು ತಪ್ಪು ದಿಕ್ಕಿನಲ್ಲಿ ಇಡಬೇಡಿ
ತುಳಸಿಯ ಸುತ್ತಮುತ್ತ ತಪ್ಪಿಯೂ ಈ ಸಸ್ಯಗಳನ್ನು ನೆಡಬೇಡಿ , ಎದುರಾಗುವುದು ಸಮಸ್ಯೆ  title=
Vastu Tips For Tulsi Plant (file photo)

ಬೆಂಗಳೂರು : Vastu Tips For Tulsi Plant :ಮನೆಯಲ್ಲಿ ತುಳಸಿ ಗಿಡವನ್ನು ನೆಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಇದು ಎಷ್ಟು ಧಾರ್ಮಿಕ ಮಹತ್ವವನ್ನು ಹೊಂದಿದೆಯೋ, ವಿಜ್ಞಾನದ ದೃಷ್ಟಿಯಿಂದಲೂ ಅಷ್ಟೇ ಪ್ರಯೋಜನಕಾರಿಯಾಗಿದೆ. ಇದಲ್ಲದೆ, ಮನೆಯಲ್ಲಿ ತುಳಸಿ ಗಿಡವನ್ನು ಇಡುವುದು ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದಲ್ಲಿ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗಿದೆ. ಈ ಎಲ್ಲಾ ಕಾರಣಗಳಿಂದ ಬಹುತೇಕ ಮನೆಗಳಲ್ಲಿ ತುಳಸಿ ಗಿಡವನ್ನು ನೆಡಲಾಗುತ್ತದೆ.  ವಿಷ್ಣುವಿನ ಆರಾಧನೆಯಲ್ಲಿ ತುಳಸಿ ದಳವನ್ನು ಅರ್ಪಿಸಲಾಗುತ್ತದೆ. ವಿಷ್ಣುವಿಗೆ ತುಳಸಿ ಎಂದರೆ ಅತ್ಯಂತ ಪ್ರೀತಿ. ಇದಲ್ಲದೇ ತುಳಸಿ ಗಿಡ ಇರುವ ಮನೆಯಲ್ಲಿ ಸದಾ ಲಕ್ಷ್ಮೀ ನೆಲೆಸಿರುತ್ತಾಳೆ ಎನ್ನಲಾಗುತ್ತದೆ.  

ಆದರೆ ಈ ವಿಷಯಗಳನ್ನು ನೆನಪಿನಲ್ಲಿಡಿ :
ತುಳಸಿ ಗಿಡವನ್ನು ಇಡುವಾಗ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಇಲ್ಲದಿದ್ದರೆ ಅದು ಪ್ರಯೋಜನಕ್ಕೆ ಬದಲಾಗಿ ಹಾನಿಯನ್ನು ಉಂಟುಮಾಡಬಹುದು. 

ಇದನ್ನೂ ಓದಿ : Chanakya Niti Tips : ನೀವು ಈ 4 ರೀತಿಯ ಮಹಿಳೆಯರನ್ನು ಮದುವೆಯಾಗಿ, ಇವರು ತುಂಬಾ ಅದೃಷ್ಟವಂತರು!

1. ತುಳಸಿ ಗಿಡವನ್ನು ಯಾವಾಗಲೂ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ನೆಡಬೇಕು. ತುಳಸಿ ಗಿಡವನ್ನು ತಪ್ಪು ದಿಕ್ಕಿನಲ್ಲಿ ಇಡುವುದರಿಂದ ಯಾವುದೇ ಪ್ರಯೋಜನವಿಲ್ಲ. 
2. ತುಳಸಿ ಗಿಡವನ್ನು ಮನೆಯಲ್ಲಿ ನೆಟ್ಟರೆ ಸಾಲದು, ಅದಕ್ಕೆ ಪ್ರತಿನಿತ್ಯವೂ ಪೂಜೆ ಸಲ್ಲಿಸಬೇಕು.  ಇದಕ್ಕಾಗಿ ಪ್ರತಿದಿನ ಬೆಳಗ್ಗೆ ಸ್ನಾನ ಮಾಡಿ ತುಳಸಿಗೆ ನೀರು ಅರ್ಪಿಸಿ ಸಂಜೆ ದೀಪ ಹಚ್ಚಬೇಕು. 
3. ತುಳಸಿಗೆ ನೀರನ್ನು ಅರ್ಪಿಸುವಾಗ ಮಹಿಳೆಯರು ಎಂದಿಗೂ ತಮ್ಮ ಕೂದಲನ್ನು ಬಿಚ್ಚಿಕೊಳ್ಳ ಬಾರದು.  
4. ಭಾನುವಾರ ಮತ್ತು ಏಕಾದಶಿಯಂದು ತುಳಸಿಗೆ ನೀರನ್ನು ಅರ್ಪಿಸಬೇಡಿ. ಈ ದಿನದಂದು ತುಳಸಿ ವಿಷ್ಣುವಿಗಾಗಿ ಉಪವಾಸ ಆಚರಿಸುತ್ತಾರೆ ಎನ್ನುವುದು ನಂಬಿಕೆ.  
5. ತಪ್ಪಾಗಿ ತುಳಸಿ ಗಿಡದ ಸುತ್ತ ಕಸ, ಕೊಳಕು ಪಾತ್ರೆಗಳು, ಪಾದರಕ್ಷೆಗಳು, ಪೊರಕೆಗಳು ಅಥವಾ ಕಸವನ್ನು ಇಡಬೇಡಿ. ಅಲ್ಲದೆ, ತುಳಸಿ ಗಿಡದ ಮೇಲೆ ಕೊಳಕು ನೀರು ಬೀಳದಂಟೆ  ನೋಡಿಕೊಳ್ಳಬೇಕು

ಇದನ್ನೂ ಓದಿ : ಇಂಥಹ ಜನರ ಕೈ ಸೋಕಿದರೆ ಮಣ್ಣು ಕೂಡಾ ಹೊನ್ನಾಗುತ್ತದೆಯಂತೆ. ! ನಿಮ್ಮಲ್ಲಿವೆಯಾ ಈ ಗುಣ ?

ತುಳಸಿಯ ಸುತ್ತ ಈ ಗಿಡಗಳನ್ನು ನೆಡಲೇ ಬಾರದು :  
1.ತುಳಸಿಯ ಸುತ್ತ ಮುಳ್ಳಿನ ಗಿಡಗಳನ್ನು ನೆಡಬೇಡಿ. ಇಲ್ಲದಿದ್ದರೆ, ಮನೆಯಲ್ಲಿ ದುರಾದೃಷ್ಟ ಮತ್ತು ನಕಾರಾತ್ಮಕತೆ ಹೆಚ್ಚಾಗುತ್ತದೆ. 
2. ತುಳಸಿ ಗಿಡ ನೆಟ್ಟ ಕುಂಡದಲ್ಲಿ ಬೇರೆ ಯಾವುದೇ ಗಿಡವನ್ನು ನೆಡಬೇಡಿ. ಹಾಗೆಯೇ ಟೆರೇಸ್ ಮೇಲೆ ತುಳಸಿ ಗಿಡವನ್ನು ಇಡಬೇಡಿ. ಇದನ್ನು ಮನೆಯ ಅಂಗಳದಲ್ಲಿ ಅಥವಾ ಬಾಲ್ಕನಿಯಲ್ಲಿ ಇಡಬೇಕು. 
3. ಸಂಜೆ ತುಳಸಿಯ ಕೆಳಗೆ ದೀಪವನ್ನು ಇಟ್ಟ ನಂತರ ಆರಿದ ದೀಪವನ್ನು ತೆಗೆಡು ಬಿಡಬೇಕು. 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

                      

Trending News