ನವದೆಹಲಿ : Bedroom Vastu Tips : ವಾಸ್ತು ಶಾಸ್ತ್ರಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಪ್ರಾಮುಖ್ಯತೆಯಿದೆ. ವಾಸ್ತು ಪ್ರಕಾರ ಮನೆಯಲ್ಲಿ ವಸ್ತುಗಳನ್ನು ಇಟ್ಟುಕೊಂಡರೆ, ವ್ಯಕ್ತಿಯ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎನ್ನಲಾಗಿದೆ. ವೈವಾಹಿಕ ಜೀವನದ ಬಗ್ಗೆಯೂ ವಾಸ್ತುವಿನಲ್ಲಿ ಕೆಲ ಸಲಹೆಗಳನ್ನು ನೀಡಲಾಗಿದೆ. ವೈವಾಹಿಕ ಜೀವನ ಸುಖಕರವಾಗಿರಬೇಕಾದರೆ, ಮಲಗುವ ಕೋಣೆಗೆ ಸಂಬಂಧಿಸಿದಂತೆ, ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಹಾಗಿದ್ದರೆ, ಮಲಗುವ ಕೋಣೆಗೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯಗಳ ಬಗ್ಗೆ ಇಲ್ಲಿ ಹೇಳಲಿದ್ದೇವೆ. 


COMMERCIAL BREAK
SCROLL TO CONTINUE READING

1. ಹಾಸಿಗೆಯಲ್ಲಿ ಮಲಗುವಾಗ, ತಲೆಯನ್ನು ದಕ್ಷಿಣದ ಕಡೆಗೆ ಮತ್ತು ಪಾದಗಳನ್ನು ಉತ್ತರದ ಕಡೆಗೆ ಹಾಕಿ ಮಲಗಬೇಕು. ಈ ದಿಕ್ಕಿಗೆ ಅನುಗುಣವಾಗಿ ಮಲಗುವುದು ಒಳ್ಳೆಯದು ಎನ್ನಲಾಗಿದೆ. 


ಇದನ್ನೂ ಓದಿ : Friday Remedies: ನೀವು ಶ್ರೀಮಂತರಾಗಬೇಕೆ? ಹಾಗಿದ್ದರೆ ಪ್ರತಿ ಶುಕ್ರವಾರ ತಪ್ಪದೇ ಮಾಡಿ ಈ ಕೆಲಸ


2. ನಿಮ್ಮ ಮದುವೆಯ ಪೋಟೋವನ್ನು (marriage photo) ಮಲಗುವ ಕೋಣೆಯಲ್ಲಿ ಇರಿಸಿದರೆ ಪರಸ್ಪರ ಪ್ರೀತಿ , ಪ್ರೇಮ ಹೆಚ್ಚುತ್ತದೆಯಂತೆ. ಹಾಗಾಗಿ   ಮಲಗುವ ಕೋಣೆಯಲ್ಲಿ (Bed room) ಮದುವೆಯ ಫೋಟೋವನ್ನು ಖಂಡಿತಾ ಇರಿಸಬೇಕು ಎನ್ನುತ್ತಾರೆ ವಾಸ್ತು ಬಲ್ಲವರು.
3. ಮಲಗುವ ಕೋಣೆಯಲ್ಲಿ ಬೆಳಕು ಯಾವಾಗಲೂ ಹಿಂದಿನಿಂದ ಅಥವಾ ಎಡದಿಂದ ಬರುವಂತಿರಬೇಕು. 
4. ಬೆಡ್ ರೂಂನಲ್ಲಿ  (Bed room vastu) ಬಾಗಿಲಿಗೆ ಸಮೀಪದಲ್ಲಿ ಯಾವತ್ತೂ ಬೆಡ್ ಹಾಕಬಾರದು. ಒಂದು ವೇಳೆ, ಬಾಗಿಲಿಗೆ ಸಮೀಪದಲ್ಲಿ ಬೆಡ್ ಹಾಕಿದರೆ ಮನೆಯಲ್ಲಿ ಸಂಬಂಧದಲ್ಲಿ ಅಶಾಂತಿ ಉಂಟಾಗುತ್ತದೆಯಂತೆ. 


ಇದನ್ನೂ ಓದಿ : ಈ ಐದು ರಾಶಿಯವರಲ್ಲಿ ಉತ್ತಮ ನಾಯಕತ್ವದ ಗುಣವಿರುತ್ತದೆಯಂತೆ..!


5. ಕೆಲವರಿಗೆ ಕೊಳಕು ಅಂದರೆ ಒಗೆಯುವ ಬಟ್ಟೆ, ಶೂ, ಚಪ್ಪಲಿಗಳನ್ನು ಬೆಡ್ ರೂಂನಲ್ಲಿ ಇಡುವ ಅಭ್ಯಾಸವಿರುತ್ತದೆ. ಆದರೆ ನೆನೆಪಿರಲಿ, ಕೊಳಕು ಬಟ್ಟೆ, ಶೂ, ಚಪ್ಪಲಿಗಳನ್ನು ಎಂದೂ ಮಲಗುವ ಕೋಣೆಯಲ್ಲಿ ಇಡಬಾರದು. ಅವುಗಳನ್ನು ಸ್ಟೋರ್ ರೂಂನಲ್ಲಿ ಇಡುವುದು ಒಳ್ಳೆಯದು.
6. ಮಲಗುವ ಕೋಣೆಯಲ್ಲಿ ಕನ್ನಡಿ ಇರಬಾರದು. ಕನ್ನಡಿ (Mirror) ಇಡುವುದು ನಿಮಗೆ ಅನಿವಾರ್ಯ ಎಂದಿದ್ದರೆ, ಮಲಗುವ ವೇಳೆ, ಆ ಕನ್ನಡಿಯನ್ನು ಬಟ್ಟೆಯಿಂದ ಮುಚ್ಚಲು ಮರೆಯಬೇಡಿ.  
7. ಇನ್ನು ಬೆಡ್ ಕೆಳಗೆ ಬೆಡದ ವಸ್ತುಗಳನ್ನು ತುರುಕಿ ಇಡುವ ಅಭ್ಯಾಸವೂ ಒಳ್ಳೆಯದಲ್ಲ. ಬೆಡ್ ಕೆಳಗೆ ಕಸ ಉಳಿಯದಂತೆ ನೋಡಿಕೊಳ್ಳಬೇಕು. 
8. ಯಾವುದೇ ಕಾರಣಕ್ಕೂ ಅಶಾಂತಿ ಉಂಟು ಮಾಡುವ ಪೋಟೊಗಳನ್ನು ಬೆಡ್ ರೂಂನಲ್ಲಿ ಹಾಕಲು ಹೋಗಬೇಡಿ, 


ಇದನ್ನೂ ಓದಿ : Astrology: ಈ ರಾಶಿಯ ಮಕ್ಕಳು ಬಹಳ ಪ್ರತಿಭಾನ್ವಿತರಂತೆ, ಪ್ರೋತ್ಸಾಹದ ಕೊರತೆ ಇರಬಾರದಷ್ಟೇ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.