Astrology: ಈ ರಾಶಿಯ ಮಕ್ಕಳು ಬಹಳ ಪ್ರತಿಭಾನ್ವಿತರಂತೆ, ಪ್ರೋತ್ಸಾಹದ ಕೊರತೆ ಇರಬಾರದಷ್ಟೇ

ಪ್ರತಿ ಮಗು ಕೂಡಾ ತನ್ನದೇ ಆದ ಪ್ರತಿಭೆಯನ್ನು ಹೊಂದಿರುತ್ತದೆ.   ರಾಶಿಚಕ್ರ ಚಿಹ್ನೆಯ  ಪ್ರಕಾರ, ಯಾವ ಮಕ್ಕಳು ಅಧ್ಯಯನದಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ ಎನ್ನುವುದು ಕೂಡಾ ತಿಳಿಯುತ್ತದೆ. 

Written by - Ranjitha R K | Last Updated : Jun 23, 2021, 11:17 AM IST
  • ಪ್ರತಿ ಮಗು ಕೂಡಾ ತನ್ನದೇ ಆದ ಪ್ರತಿಭೆಯನ್ನು ಹೊಂದಿರುತ್ತದೆ
  • ರಾಶಿಗನುಗುಣವಾಗಿ ಈ ಮಕ್ಕಳು ಬಹಳ ಪ್ರತಿಭಾವಂತರಾಗಿರುತ್ತಾರೆ
  • ಸ್ವಲ್ಪ ಪ್ರೋತ್ಸಾಹ ಸಿಕ್ಕಿದರೂ ಅದ್ಬುತ ಸಾಧನೆ ಮಾಡುತ್ತಾರೆ
Astrology: ಈ ರಾಶಿಯ ಮಕ್ಕಳು ಬಹಳ ಪ್ರತಿಭಾನ್ವಿತರಂತೆ, ಪ್ರೋತ್ಸಾಹದ ಕೊರತೆ ಇರಬಾರದಷ್ಟೇ title=
ರಾಶಿಗನುಗುಣವಾಗಿ ಈ ಮಕ್ಕಳು ಬಹಳ ಪ್ರತಿಭಾವಂತರಾಗಿರುತ್ತಾರೆ (file photo)

ನವದೆಹಲಿ : ಎಲ್ಲಾ ಪೋಷಕರು ತಮ್ಮ ಮಕ್ಕಳು ಎಲ್ಲಾ ವಿಷಯಗಳಲ್ಲೂ ಮುಂದಿರಬೇಕು ಎಂದು ಬಯಸುತ್ತಾರೆ. ಉತ್ತಮ ವೃತ್ತಿಜೀವನವನ್ನು ಹೊಂದಬೇಕು ಎಂದು ಬಯಸುತ್ತಾರೆ. ಇದಕ್ಕಾಗಿ ಪೋಷಕರು ಬಹಳ ಶ್ರಮಪಡುತ್ತಾರೆ. ಪ್ರತಿ ಮಗು ಕೂಡಾ ತನ್ನದೇ ಆದ ಪ್ರತಿಭೆಯನ್ನು ಹೊಂದಿರುತ್ತದೆ.   ರಾಶಿಚಕ್ರ ಚಿಹ್ನೆಯ (Zodiac sign) ಪ್ರಕಾರ, ಯಾವ ಮಕ್ಕಳು ಅಧ್ಯಯನದಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ ಎನ್ನುವುದು ಕೂಡಾ ತಿಳಿಯುತ್ತದೆ.  ಈ ಮಕ್ಕಳು ಸ್ವಲ್ಪ ಶ್ರಮವಹಿಸಿದರೂ ಜೀವನದಲ್ಲಿ ಉತ್ತಮ ಸ್ಥಾನಮಾನವನ್ನು ಪಡೆಯುತ್ತಾರೆ.

ಮೇಷ: ಈ ರಾಶಿಚಕ್ರದ (Zodiac sign) ಮಕ್ಕಳು ಬಹಳ ಪ್ರತಿಭಾವಂತರಾಗಿರುತ್ತಾರಂತೆ. ಶಿಕ್ಷಣದಲ್ಲಿ ಬಹಳ ಮುಂದಿರುತ್ತಾರೆ. ತೊಂದರೆಗಳು ಎದುರಾದರೆ, ಅದರಿಂದ ಯಾವ ಚಿಕ್ಕ ಹೊರ ಬರಬೇಕು ಎನ್ನುವುದು ತಿಳಿದಿರುತ್ತದೆ.   ಈ ರಾಶಿಯ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಸಿಕ್ಕಿದರೆ,  ಅವರು ಅಂತಹ ಕೆಲಸಗಳನ್ನು ಕೂಡಾ ಮಾಡಿ ಮುಗಿಸುತ್ತಾರೆ. 

ಇದನ್ನೂ ಓದಿ : Right Way To Take Shower: ಬೆಳಿಗ್ಗೆ ಹೊತ್ತು ದಣಿದಂತೆ ಭಾಸವಾಗುತ್ತಿದೆಯೇ, ಸ್ನಾನ ಮಾಡುವಾಗ ನೀವೂ ಕೂಡ ಈ ತಪ್ಪನ್ನು ಮೂಡುತ್ತೀರಾ?

ವೃಷಭ ರಾಶಿ : ಈ ರಾಶಿಚಕ್ರದ ಮಕ್ಕಳು ಶ್ರಮಜೀವಿಗಳು. ಅವರ ಕಠಿಣ ಪರಿಶ್ರಮಕ್ಕೆ ಸರಿಯಾದ ಪ್ರೋತ್ಸಾಹ ಸಿಕ್ಕಿದರೆ, ಅದ್ಭುತ ಕೆಲಸಗಳನ್ನು ಮಾಡುತ್ತಾರೆ. ಯಾವುದೇ ಕೆಲಸವನ್ನು ಮನಸ್ಸಿಟ್ಟು ಮಾಡಿದರೆ ಪ್ರತಿ ಬಾರಿಯೂ ಅಗ್ರಸ್ಥಾನಕ್ಕೆರುತ್ತಾರಂತೆ. ಇವರ ಗುಣ ಹೇಗಿರುತಯ್ತದೆ ಎಂದರೆ ಇವರು ಯಾವಾಗಲೂ ಪ್ರಥಮ ಸ್ಥಾನದಲ್ಲೇ ಉಳಿಯಲು ಬಯಸುತ್ತಾರೆ. 

ಕರ್ಕ : ಈ ರಾಶಿಚಕ್ರದ ಮಕ್ಕಳಿಗೆ ಯಾವುದೇ ಹೊಸ ಕೆಲಸಗಳು ಎದುರಾದರೆ ಸ್ವಲ್ಪ ಸಮಯವನ್ನು ಅದನ್ನು ನೋಡಲು, ಅಭ್ಯಾಸ ಮಾಡಲು ತೆಗೆದುಕೊಳ್ಳುತ್ತಾರೆ. ಒಮ್ಮೆ ಆ ಕೆಲಸವನ್ನು ಕಲಿತರೆಂದರೆ ನಂತರ ಅವರನ್ನು ಹಿಡಿಯುವುದು ಸಾಧ್ಯವಾಗುವುದಿಲ್ಲ. ಈ ಮಕ್ಕಳು ಕೆಲವು ದೊಡ್ಡ ಹಂತಗಳನ್ನು ತಲುಪುವ ಮೂಲಕ ಯಶಸ್ಸನ್ನು ಪಡೆಯುತ್ತಾರೆ.

ಇದನ್ನೂ ಓದಿ : Palmistry : ಹಸ್ತದಲ್ಲಿ ಈ ರೇಖೆಗಳು ಮತ್ತು ಮಚ್ಚೆಗಳಿದ್ದರೆ ಸದಾ ಹಣದ ಕೊರತೆಯಂತೆ

ಕನ್ಯಾರಾಶಿ : ಚಿಕ್ಕವಯಸ್ಸಿನಿಂದಲೇ ಈ ರಾಶಿಚಕ್ರದ ಮಕ್ಕಳ (children zodiac sign) ಪ್ರಾಕ್ಟಿಕಲ್ ನಡವಳಿಕೆ ಎಮತವರನ್ನೂ ಆಶ್ಚರ್ಯಗೊಳಿಸುತ್ತದೆ.  ಈ ಮಕ್ಕಳು ತಮ್ಮ ಇಚ್ಛೆಯಂತೆ ನಡೆದುಕೊಳ್ಳುತ್ತಾರೆ. ಅವರ ಗುರಿಗಳ ಬಗ್ಗೆ ಬಹಳ ಸ್ಪಷ್ಟವಾಗಿರುತ್ತಾರೆ. ಅವರು ಇತರರನ್ನು ಲೆಕ್ಕಿಸದೆ ತಮ್ಮ ಕೆಲಸದಲ್ಲಿ ನಿರತರಾಗಿರುತ್ತಾರೆ.

ಮಕರ ರಾಶಿ : ಈ ರಾಶಿಚಕ್ರದ ಮಕ್ಕಳು ಜ್ಞಾಪಕ ಶಕ್ತಿ (Memory power) ಹೊಂದಿರುತ್ತಾರೆ.  ಇವರು ಬಹಳ ಚುರುಕಾಗಿರುತ್ತಾರೆ. ಸಣ್ಣ ವಯಸ್ಸಿನಲ್ಲೇ ಉತ್ತಮ ಪ್ರೋತ್ಸಾಹ ಸಿಕ್ಕಿದರೆ, ಏನೂ ಬೇಕಾದರೂ ಸಾಧಿಸುತ್ತಾರೆ. 

ಇದನ್ನೂ ಓದಿ : Sun enters Ardra Nakshatra: ಆರ್ದ್ರ ನಕ್ಷತ್ರದಲ್ಲಿ ಸೂರ್ಯನ ಪ್ರವೇಶ, ಇದರ ಪರಿಣಾಮ ಹೇಗಿರಲಿದೆ!

ಕುಂಭ ರಾಶಿ : ಈ ರಾಶಿಚಕ್ರದ ಮಕ್ಕಳು ಪ್ರತಿಭಾವಂತರು. ಅವರು ಆಟ ಆಡುತ್ತಲೇ ಬಹಳಷ್ಟು ಕಲಿಯುತ್ತಾರೆ. ಅವರ ಪ್ರತಿಭೆ ಗೊತ್ತಾದ ತಕ್ಷಣ ಇವರಿಗೆ ಸರಿಯಾದ ಪ್ರೋತ್ಸಾಹ ನೀಡುವುದು ಪೋಷಕರ ಕೆಲಸವಾಗಿರುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News