Skin Care Mistakes: ಮೊಡವೆಗಳಿಂದ ಮುಕ್ತಿ ಬೇಕೆಂದರೆ ಇಂದೇ ನಿಮ್ಮ ಈ ಅಭ್ಯಾಸ ಬದಲಿಸಿ
Skin Care Mistakes: ನಿಮ್ಮ ತ್ವಚೆಯ ಬಗ್ಗೆ ವಿಶೇಷ ಕಾಳಜಿ ತೆಗೆದುಕೊಳ್ಳುವ ಹೊರತಾಗಿಯೂ ನೀವೂ ಮೊಡವೆ ಸಮಸ್ಯೆಗಳನ್ನು ಎದುರಿಸುತ್ತಿದ್ದೀರಾ... ನಿಮ್ಮ ದೈನಂದಿನ ತಪ್ಪುಗಳು ಇದಕ್ಕೆ ಕಾರಣವಿರಬಹುದು.
ತ್ವಚೆಯ ಆರೈಕೆಯಲ್ಲಿ ಮಾಡುವ ತಪ್ಪುಗಳ ಬಗ್ಗೆ ಇರಲಿ ಎಚ್ಚರ: ಬದಲಾಗುತ್ತಿರುವ ಹವಾಮಾನದಲ್ಲಿ ತ್ವಚೆಯ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯ. ಇಲ್ಲದಿದ್ದರೆ ಮುಖದ ಸೌಂದರ್ಯ ಹದಗೆಡಬಹುದು. ಆದರೆ ಅನೇಕ ಬಾರಿ ಸೌಂದರ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿಯೂ, ನಿತ್ಯ ತ್ವಚೆಯ ಆರೈಕೆ ಮಾಡಿಯೂ ಮೊಡವೆ ಸೇರಿದಂತೆ ಹಲವು ರೀತಿಯ ಚರ್ಮ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತೇವೆ. ಇದಕ್ಕೆ ಕಾರಣ ಏನಿರಬಹುದು ಎಂದು ಎಂದಾದರೂ ಯೋಚಿಸಿದ್ದೀರಾ...? ನಿತ್ಯ ನಾವು ಮಾಡುವ ಕೆಲವು ಸಣ್ಣ ಸಣ್ಣ ತಪ್ಪುಗಳು ಮೊಡವೆಗಳಿಗೆ ಕಾರಣವಾಗಬಹುದು. ಹಾಗಿದ್ದರೆ, ನಾವು ಮಾಡುವ ಅಂತಹ ತಪ್ಪುಗಳು ಯಾವುವು? ಮೊಡವೆಗಳಿಂದ ಮುಕ್ತಿ ಪಡೆಯಲು ಏನು ಮಾಡಬೇಕು ಎಂದು ತಿಳಿಯುವುದು ಬಹಳ ಮುಖ್ಯ.
ನಮ್ಮ ಈ ತಪ್ಪುಗಳು ತ್ವಚೆಗೆ ಹಾನಿಕಾರಕ: -
* ಹಾನಿಕಾರಕ ಮೇಕಪ್ ಉತ್ಪನ್ನಗಳನ್ನು ಬಳಸುವುದು:
ಮುಖದ ಅಂದವನ್ನು ಹೆಚ್ಚಿಸುವ ಸಲುವಾಗಿ ಮೇಕಪ್ ಮಾಡಲಾಗುತ್ತದೆ. ಆದರೆ, ನಾವು ಯಾವ ರೀತಿಯ ಮೇಕಪ್ ಉತ್ಪನ್ನಗಳನ್ನು ಬಳಸುತ್ತೇವೆ ಎಂಬುದರ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅತ್ಯಗತ್ಯ. ವಾಸ್ತವವಾಗಿ, ಅನೇಕ ಮೇಕಪ್ ಉತ್ಪನ್ನಗಳಲ್ಲಿ ಅಧಿಕ ರಾಸಾಯನಿಕಗಳನ್ನೂ ಬಳಸಲಾಗುತ್ತದೆ. ಇದಲ್ಲದೆ, ಮುಖದಲ್ಲಿ ಹೆಚ್ಚು ಹೊತ್ತು ಮೇಕಪ್ ಅನ್ನು ಹಾಗೇ ಬಿಡುವುದರಿಂದ ಚರ್ಮಕ್ಕೆ ಅಗತ್ಯ ಆಮ್ಲಜನಕ ಸಿಗದೇ ಇರಬಹುದು. ಇದರಿಂದ ಮೊಡವೆಗಳು ಮೂಡುತ್ತವೆ. ಹಾಗಾಗಿ ನಿಮ್ಮ ಮೇಕಪ್ ಪ್ರಾಡಕ್ಟ್ ಬಗ್ಗೆ ಬಹಳ ಎಚ್ಚರದಿಂದಿರುವುದು ಅತ್ಯಗತ್ಯ.
ಇದನ್ನೂ ಓದಿ- Skin care: ಮುಖಕ್ಕೆ ಅರಿಶಿನವನ್ನು ಹಚ್ಚುವ ಸರಿಯಾದ ವಿಧಾನ ಇಲ್ಲಿದೆ ನೋಡಿ
* ತಪ್ಪಾದ ತ್ವಚೆ ಉತ್ಪನ್ನಗಳನ್ನು ಬಳಸುವುದು:
ಚರ್ಮದ ಉತ್ಪನ್ನಗಳನ್ನು ಅನ್ವಯಿಸುವ ಮೊದಲು, ನಿಮ್ಮ ಚರ್ಮವು ಎಣ್ಣೆಯುಕ್ತ, ಶುಷ್ಕ ಅಥವಾ ಸಾಮಾನ್ಯವಾಗಿದೆಯೇ ಎಂದು ತಿಳಿದುಕೊಳ್ಳುವುದು ಮುಖ್ಯ. ನಿಮ್ಮ ತ್ವಚೆಗೆ ಅನುಗುಣವಾಗಿ ಸ್ಕಿನ್ ಕೇರ್ ಗಳನ್ನು ಬಳಸುವುದು ಸೂಕ್ತ. ತ್ವಚೆಗೆ ತಪ್ಪಾದ ಉತ್ಪನ್ನವನ್ನು ಬಳಸಿದರೆ, ಅವು ಚರ್ಮಕ್ಕೆ ಹಾನಿ ಮಾಡುತ್ತದೆ. ಇದರಿಂದಾಗಿ ಮೊಡವೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
* ಮುಖಕ್ಕೆ ತಪ್ಪು ಕ್ಲೆನ್ಸರ್ ಅನ್ನು ಅನ್ವಯಿಸುವುದು :
ಚರ್ಮದ ಆರೈಕೆಗಾಗಿ ಸರಿಯಾದ ಕ್ಲೆನ್ಸರ್ನ ಆಯ್ಕೆಯು ಸಹ ಬಹಳ ಮುಖ್ಯವಾಗಿದೆ, ಇಲ್ಲದಿದ್ದರೆ ಮುಖದ ಚರ್ಮವು ಹಾನಿಗೊಳಗಾಗಬಹುದು. ನೀವು ಫೋಮ್ನೊಂದಿಗೆ ಕ್ಲೆನ್ಸರ್ಗಳನ್ನು ಬಳಸಬಾರದು, ಜೊತೆಗೆ ಚರ್ಮವನ್ನು ಎಫ್ಫೋಲಿಯೇಟ್ ಮಾಡಲು ಕ್ಲೆನ್ಸರ್ಗಳನ್ನು ಬಳಸಬಾರದು. ಹೀಗೆ ಮಾಡುವುದರಿಂದ ಚರ್ಮವು ಒಡೆಯಲು ಪ್ರಾರಂಭಿಸುತ್ತದೆ. ನೀವು ಉತ್ತಮ ಫಲಿತಾಂಶವನ್ನು ಪಡೆಯಲು ಬಯಸಿದರೆ, ಅದಕ್ಕಾಗಿ ವಾಟರ್ ಆಧಾರಿತ ಕ್ಲೆನ್ಸರ್ ಅನ್ನು ಮಾತ್ರ ಅನ್ವಯಿಸುವುದು ಸೂಕ್ತ.
ಇದನ್ನೂ ಓದಿ- Face Beauty Tips: ಮುಖದ ಕಾಂತಿ ಹೆಚ್ಚಿಸಲು ಮಲಗುವ ಮುನ್ನ ಈ ಕೆಲಸ ಮಾಡಿ
* ಮೇಕಪ್ ತೆಗೆಯುವಾಗ ಈ ತಪ್ಪು ಆಗದಂತೆ ನಿಗಾವಹಿಸಿ:
ಸಾಮಾನ್ಯವಾಗಿ ಮೇಕಪ್ ತೆಗೆಯಲು ವೈಪ್ಸ್ ಬಳಸಲಾಗುತ್ತದೆ. ಮೇಕಪ್ ತೆಗೆಯಲು ವೈಪ್ಸ್ ಬಳಸುವುದು ತಪ್ಪಲ್ಲ, ಆದರೆ ಇದನ್ನು ಬಳಸಿದ ನಂತರ ಫೇಸ್ ವಾಶ್ ಉತ್ಪನ್ನಗಳನ್ನು ಸಹ ಬಳಸಬೇಕು, ಇದು ಮುಖದ ಮೇಲಿನ ಎಲ್ಲಾ ರೀತಿಯ ರಾಸಾಯನಿಕಗಳನ್ನು ತೆಗೆದುಹಾಕುತ್ತದೆ. ಕೇವಲ ವೈಪ್ಫ್ ಬಳಸಿ ಮೇಕಪ್ ತೆಗೆದು ಚರ್ಮವನ್ನು ಹಾಗೆ ಬಿಟ್ಟರೆ ಅದು ತ್ವಚೆಗೆ ಹಾನಿಕಾರಕ ಎಂದು ಸಾಬೀತುಪಡಿಸಬಹುದು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.