ಕಚೇರಿಯಲ್ಲಿ ಇಂತಹ ಕೆಲಸಗಳನ್ನು ಮಾಡುವುದನ್ನು ತಪ್ಪಿಸಿ: ಜನರು ತಮ್ಮ ವೃತ್ತಿಜೀವನದಲ್ಲಿ ಯಶಸ್ವಿಯಾಗಲು ಹಗಲಿರುಳು ಶ್ರಮಿಸುತ್ತಾರೆ. ಕೈ ಕೆಸರಾದರೆ ಬಾಯಿ ಮೊಸರು ಎಂಬಂತೆ ಯಾವುದೂ ಕೂಡ ಅಷ್ಟು ಸುಲಭವಾಗಿ ಲಭ್ಯವಾಗುವುದಿಲ್ಲ. ಒಳ್ಳೆ ಕೆಲಸ ಸಿಗಬೇಕೆಂದರೆ ಅದಕ್ಕೆ ಅಗತ್ಯ ಪರಿಶ್ರಮವೂ ಮುಖ್ಯ. ಆದರೆ ಗೊತ್ತೋ ಅಥವಾ ಗೊತ್ತಿಲ್ಲದೆಯೋ ಮಾಡುವ ಕೆಲವು ತಪ್ಪುಗಳಿಂದಾಗಿ ಆಫೀಸ್ ನಲ್ಲಿ ನಿಮ್ಮ ಇಡೀ ಇಮೇಜ್ ಹಾಳಾಗಬಹುದು. ಹಾಗಾಗಿ, ಕಚೇರಿಯಲ್ಲಿ ಕೆಲಸ ಮಾಡುವಾಗ, ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಇಂದು ನಾವು ನಿಮಗೆ ಅಂತಹ ಕೆಲವು ವಿಷಯಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಕಚೇರಿಯಲ್ಲಿ ಅಪ್ಪಿತಪ್ಪಿಯೂ ಕೂಡ ನಿಮ್ಮಿಂದ ಈ ತಪ್ಪುಗಳಾಗದಂತೆ ನಿಗಾವಹಿಸಿ. 


COMMERCIAL BREAK
SCROLL TO CONTINUE READING

ಕಚೇರಿಯಲ್ಲಿ ಇಂತಹ ಕೆಲಸಗಳನ್ನು ಮಾಡುವುದನ್ನು ತಪ್ಪಿಸಿ :-
ಕಚೇರಿಯಲ್ಲಿ ಕೆಲಸ ಮಾಡುವಾಗ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಇಲ್ಲದಿದ್ದರೆ ಅದು ನಿಮ್ಮ ವೃತ್ತಿ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. 


* ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳಬೇಡಿ:
ಮೊದಲನೆಯದಾಗಿ ಕಚೇರಿಯಲ್ಲಿ ಯಾರೊಂದಿಗೂ ನಿಮ್ಮ ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳಬೇಡಿ. ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನ ಪ್ರತ್ಯೇಕವಾಗಿರಬೇಕು. ಈ ರೀತಿ ಮಾಡುವುದರಿಂದ ಕಚೇರಿಯಲ್ಲಿ ನಿಮ್ಮ ಬಗ್ಗೆ ವದಂತಿಗಳು ಹರಡಬಹುದು, ಅದು ನಿಮ್ಮ ಇಮೇಜ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.


ಇದನ್ನೂ ಓದಿ- ಸ್ಮಾರ್ಟ್‌ಫೋನ್ ಕಳೆದು ಹೋದರೆ ಕೂಡಲೇ ಈ ಕೆಲಸ ಮಾಡಿ, ಇಲ್ಲವೇ ನಿಮ್ಮ ಖಾತೆ ಖಾಲಿಯಾಗಬಹುದು!


* ಸಮಯಪಾಲನೆ :
ಯಾವುದೇ ಕೆಲಸ ಮಾಡುವಾಗ ಸಮಯದ ಬಗ್ಗೆ ನಿಗಾವಹಿಸಬೇಕು. ಕಚೇರಿಯಲ್ಲಿ ಎಲ್ಲಾ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡಬೇಕು. ಸಮಯಕ್ಕೆ ಸರಿಯಾಗಿ ಕಛೇರಿಗೆ ಆಗಮಿಸುವುದು ನಿಮ್ಮನ್ನು ವೃತ್ತಿಪರರನ್ನಾಗಿಸುತ್ತದೆ. ನೀವು ಸಮಯಪಾಲನೆ ಮಾಡದಿದ್ದರೆ ಅದು ನಿಮ್ಮ ವ್ಯಕ್ತಿತ್ವದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಸಮಯಕ್ಕೆ ಸರಿಯಾಗಿ ಅಥವಾ ಅದಕ್ಕೂ 5 ನಿಮಿಷ ಮೊದಲೇ ಕಚೇರಿಗೆ ತಲುಪುವುದು ಇತರರಿಗೂ ಮಾದರಿ ಆಗಿರುತ್ತದೆ.


* ಗೆಳೆಯರೊಂದಿಗೆ ಸಭ್ಯ ವರ್ತನೆ:
ನೀವು ಕಚೇರಿಯಲ್ಲಿ ಏನನ್ನಾದರೂ ಕುರಿತು ಹೆಮ್ಮೆಪಡುತ್ತಿದ್ದರೆ, ಅದು ನಿಮ್ಮ ವೃತ್ತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ನಿಮ್ಮ ಕಚೇರಿಯ ಸಹೋದ್ಯೋಗಿಗಳೊಂದಿಗೆ ನಿಮ್ಮ ಸಂಬಂಧವೂ ಹಾಳಾಗುತ್ತದೆ. ಆದ್ದರಿಂದ, ನೀವು ಕಚೇರಿಯಲ್ಲಿ ನಿಮ್ಮ ಸಹೋದ್ಯೋಗಿಗಳೊಂದಿಗೆ ಸಭ್ಯ ಮತ್ತು ಸಹಾಯಕವಾದ ಮನೋಭಾವವನ್ನು ಅಳವಡಿಸಿಕೊಳ್ಳಬೇಕು.


ಇದನ್ನೂ ಓದಿ- Numerology: ಈ ದಿನಾಂಕದಂದು ಜನಿಸಿದ ಜನರು ಸ್ವಭಾವತಃ ಸರಳರು, ಆಸ್ತಿಯ ವಿಷಯದಲ್ಲಿ ಅದೃಷ್ಟವಂತರು


* ಕಚೇರಿಯಲ್ಲಿ ಹೆಚ್ಚು ಫೋನ್ ಬಳಸಬೇಡಿ:
ಕಚೇರಿಯಲ್ಲಿ ಫೋನ್‌ನಲ್ಲಿ ಹೆಚ್ಚು ಸಮಯ ಕಳೆಯಬೇಡಿ. ಕೆಲಸದ ಸಮಯದಲ್ಲಿ ನೀವು ದೀರ್ಘಕಾಲದವರೆಗೆ ಫೋನ್‌ನಲ್ಲಿ ಸಾಮಾಜಿಕ ಮಾಧ್ಯಮವನ್ನು ಚಲಾಯಿಸುತ್ತಿದ್ದರೆ ಅಥವಾ ಕಚೇರಿ ಕೆಲಸದ ವೇಳೆ ಫೋನ್ನಲ್ಲಿ ಮಾತನಾಡಿಕೊಂಡು ಇರುವುದು ಒಳ್ಳೆಯ ಅಭ್ಯಾಸವಲ್ಲ. ಇದು ನೀವು ವೃತ್ತಿಪರರಲ್ಲ ಅಥವಾ ಕೆಲಸದ ಬಗ್ಗೆ ಆಸಕ್ತಿ ಇಲ್ಲ ಎಂಬುದನ್ನು ತೋರಿಸುತ್ತದೆ. ನಿಮಗೂ ಇಂತಹ ಅಭ್ಯಾಸ ಇದ್ದರೆ ಮೊದಲು ಅದನ್ನು ಬದಲಿಸಿಕೊಳ್ಳಿ.


* ಕಚೇರಿಯಲ್ಲಿ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಿ:
ಕಚೇರಿಯಲ್ಲಿ ನಿಮ್ಮ ಮೇಜಿನ ಬಳಿ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು. ನಿಮ್ಮ ಡೆಸ್ಕ್ ಅನ್ನು ನೀವು ಕೊಳಕಾಗಿ ಇರಿಸಿದರೆ, ಅದು ಸಾಕಷ್ಟು ವೃತ್ತಿಪರವಲ್ಲದಂತೆ ಕಾಣುತ್ತದೆ. ಡೆಸ್ಕ್ ಅನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳುವುದರಿಂದ ಅದು ನಿಮ್ಮ ಕೆಲಸದ ಬಗ್ಗೆ ನೀವು ಜಾಗೃತರಾಗಿರುವಿರಿ ಎಂದು ತೋರಿಸುತ್ತದೆ. ಏಕೆಂದರೆ ಇದು ನಿಮ್ಮ ವ್ಯಕ್ತಿತ್ವಕ್ಕೆ ನೇರವಾಗಿ ಸಂಬಂಧಿಸಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.