ಮನಿ ಪ್ಲಾಂಟ್ ಹಾಕುವಾಗ ಆಗುವ ಈ 5 ತಪ್ಪುಗಳ ಬಗ್ಗೆ ಇರಲಿ ಎಚ್ಚರ ..! ಮನೆಯಿಂದ ಆಗಬಹುದು ಲಕ್ಷ್ಮೀಯ ನಿರ್ಗಮನ

Money Plant Vastu Tips: ಮನೆಯಲ್ಲಿ ಮನಿ ಪ್ಲಾಂಟ್ ಅನ್ನು ನೆಡುವುದು ಮಂಗಳಕರ. ಹೀಗೆ ಮಾಡುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ ಮತ್ತು ಕುಟುಂಬದ ಮೇಲಿನ ಎಲ್ಲಾ ತೊಂದರೆಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ. 

Written by - Ranjitha R K | Last Updated : May 17, 2022, 09:09 AM IST
  • ಮನಿ ಪ್ಲಾಂಟ್ ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ
  • ಮನಿ ಪ್ಲಾಂಟ್ ನೆಡುವುದರಿಂದ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ
  • ಮನಿ ಪ್ಲಾಂಟ್ ನೆಡುವುದಕ್ಕೂ ಕೆಲವು ನಿಯಮಗಳಿವೆ
ಮನಿ ಪ್ಲಾಂಟ್ ಹಾಕುವಾಗ ಆಗುವ ಈ 5 ತಪ್ಪುಗಳ ಬಗ್ಗೆ ಇರಲಿ ಎಚ್ಚರ ..!  ಮನೆಯಿಂದ  ಆಗಬಹುದು ಲಕ್ಷ್ಮೀಯ ನಿರ್ಗಮನ  title=
Money plant Vastu (file photo)

ಬೆಂಗಳೂರು : Money Plant Vastu Tips: ಮನೆಯ ಒಳಗೆ ಮತ್ತು ಹೊರಗೆ ಅಲಂಕಾರಕ್ಕಾಗಿ ಮನಿ ಪ್ಲಾಂಟ್ ನೆಡುವುದು ಸಾಮಾನ್ಯ. ಈ ರೀತಿ ಮಾಡುವುದರಿಂದ ಮನೆಯ ಸೌಂದರ್ಯ ಹೆಚ್ಚಿಸುವುದು ಮಾತ್ರವಲ್ಲದೆ, ಮನೆಯ ಸುತ್ತ ಹಸಿರಾಗಿರುವಂತೆ ಮಾಡುತ್ತದೆ.   ಮನೆಯಲ್ಲಿ ಮನಿ ಪ್ಲಾಂಟ್ ಅನ್ನು ನೆಡುವುದರಿಂದ ಕುಟುಂಬದ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ. ಆದರೆ ಮಣಿ ಪ್ಲಾಂಟ್ ನೆಡುವಾಗ ಕೆಲವು ತಪ್ಪುಗಳಾಗದಂತೆ ನೋಡಿಕೊಳ್ಳಬೇಕು. 

ತುಂಬಾ ಬಿಸಿಲು ಇರುವ ಕಡೆ ಮನಿ ಪ್ಲಾಂಟ್ ನೆಡಬೇಡಿ :
ಮನಿ ಪ್ಲಾಂಟ್ ಗೆ ತುಂಬಾ ಸೂರ್ಯನ ಬೆಳಕಿನ ಅಗತ್ಯ ಇರುವುದಿಲ್ಲ. ಒಂದು ವೇಳೆ ಸೂರ್ಯನ ಬೆಳಕು ಹೆಚ್ಚು ಇರುವ ಕಡೆ ಇದನ್ನು ನೆಟ್ಟರೆ ಅದು ಬಹಳ ಬೇಗನೆ ಬಾಡಿ ಹೋಗುತ್ತದೆ. ಬ ಹಾಗಾಗಿ ಒಂದೋ ಈ ಸಸ್ಯವನ್ನು ಮನೆಯ ಒಳಗೆ ಇಡಬೇಕು. ಅಥವಾ ತುಂಬಾ ನೆರಳು ಇರುವ ಜಾಗದಲ್ಲಿ ನೆಡಬೇಕು.  ಯಾಕೆಂದರೆ ಈ ಸಸ್ಯ ಒಣಗಿದೆರೆ ಆರ್ಥಿಕ ಸಮಸ್ಯೆ ಸಮಸ್ಯೆ ಎದುರಾಗುತ್ತದೆ ಎನ್ನುವುದು ನಂಬಿಕೆ. 

ಇದನ್ನೂ  ಓದಿ : Tuesday Remedies: ಹನುಮಂತನನ್ನು ಮೆಚ್ಚಿಸಲು ಇಂದೇ ಈ ಪರಿಹಾರ ಮಾಡಿ

ನೆಲದ ಮೇಲೆ ಹರಡದಂತೆ ನೋಡಿಕೊಳ್ಳಿ : 
ಮನಿ ಪ್ಲಾಂಟ್ ಪ್ಲಾಂಟ್ ನೆಲದ ಮೇಲೆ ಹರಡದಂತೆ ನೋಡಿಕೊಳ್ಳಬೇಕು. ಈ ಗಿಡ ವೇಗವಾಗಿ ಬೆಳೆಯುವುದರಿಂದ ಇದನ್ನು ಕೆಳಗೆ ಬಿಟ್ಟರೆ ಮನೆಯಲ್ಲಿ ಕಾಡಂತೆ ಹಬ್ಬುತ್ತದೆ. ಮಣಿ ಪ್ಲಾಂಟ್ ಈ ರೀತಿ ನೆಲದ ಮೇಲೆ ಹರಡುವುದು ಅಶುಭ ಎನ್ನಲಾಗಿದೆ.  ಈ ಕಾರಣಕ್ಕಾಗಿ, ಹಗ್ಗ ಅಥವಾ ಕೋಲಿನ ಸಹಾಯದಿಂದ ಈ ಬಳ್ಳಿಯನ್ನು ಮೇಲಕ್ಕೆ ಹತ್ತಲು ಅವಕಾಶ ಮಾಡಿಕೊಡಬೇಕು. 

ಈ ಸಸ್ಯವನ್ನು ಯಾರಿಗೂ ಉಡುಗೊರೆಯಾಗಿ ನೀಡಬಾರದು : 
ಮನಿ ಪ್ಲಾಂಟ್ ಪ್ಲಾಂಟ್ ಅನ್ನು ಶುಕ್ರ ಗ್ರಹದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದನ್ನು ತಪ್ಪಿಯೂ ಯಾರಿಗೂ ಉಡುಗೊರೆಯಾಗಿ ನೀಡಬಾರದು. ಹೀಗೆ ಮಾಡುವುದರಿಂದ ನಿಮ್ಮ ಮನೆಯ ಸಂತೋಷ, ಶಾಂತಿ ಮತ್ತು ಆರ್ಥಿಕ ಸಮೃದ್ಧಿಯನ್ನು ನೀವು ಇತರರಿಗೆ ಉಡುಗೊರೆಯಾಗಿ ಕೊಟ್ಟಂತೆ. 

ಇದನ್ನೂ  ಓದಿ Jyeshta Month 2022: ಈ ದಿನದಿಂದ ಜ್ಯೇಷ್ಠ ಮಾಸ ಪ್ರಾರಂಭ, ಉಪವಾಸ-ಹಬ್ಬದ ಬಗ್ಗೆ ತಿಳಿಯಿರಿ

ಸಸ್ಯವನ್ನು ಯಾವ ದಿಕ್ಕಿನಲ್ಲಿ ಇಡಬೇಕು ? : 
ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಮತ್ತು ಕುಟುಂಬದಲ್ಲಿ ಶಾಂತಿಗಾಗಿ ಮನಿ ಪ್ಲಾಂಟ್ ಅನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಕೂಡಾ ಮುಖ್ಯ. ಹಾಗೆ ಮಾಡದಿದ್ದಲ್ಲಿ, ವ್ಯಕ್ತಿಯು ಸಾಲದ ಹೊರೆಯಲ್ಲಿ ಸಮಾಧಿಯಾಗುತ್ತಾನೆ. ಇದಕ್ಕಾಗಿ, ನೀವು ಮನೆಯ ಈಶಾನ್ಯ ದಿಕ್ಕಿನಲ್ಲಿ ಸಸ್ಯವನ್ನು ಇಡಬಾರದು. ಒಂದು ವೇಳೆ ಹೀಗೆ ಮಾಡಿದರೆ ನಕಾರಾತ್ಮಕ ಶಕ್ತಿಗಳು ಮನೆಯೊಳಗೆ ಪ್ರವೇಶಿಸುತ್ತವೆ. ಬದಲಿಗೆ ಸಸ್ಯವನ್ನು ಯಾವಾಗಲೂ ಆಗ್ನೇಯ ದಿಕ್ಕಿನಲ್ಲಿ ಇಡಬೇಕು.

ಸಸ್ಯದ ಎಲೆಗಳು ಒಣಗುವುದು ಒಳ್ಳೆಯದಲ್ಲ : 
ಮನೆಯಲ್ಲಿ ಹಣದ ಹರಿವು ಚೆನ್ನಾಗಿ ಇರಬೇಕಾದರೆ ಮನಿ ಪ್ಲಾಂಟ್ ಆರೈಕೆಯಲ್ಲಿ ಯಾವುದೇ ಕೊರತೆ ಇರಬಾರದು. ಇತರ ಸಸ್ಯಗಳಂತೆ, ಮನಿ ಪ್ಲಾಂಟ್‌ನ ಎಲೆಗಳು ಸಹ ಕಾಲಕಾಲಕ್ಕೆ ಒಣಗುತ್ತವೆ. ಈ ಸಂದರ್ಭದಲ್ಲಿ, ಒಣ ಎಲೆಗಳನ್ನು ತೆಗೆದುಹಾಕಬೇಕು. ಈ ಒಣ ಎಲೆಗಳನ್ನು ಮನಿ ಪ್ಲಾಂಟ್‌ನಲ್ಲಿ ಬಿಟ್ಟರೆ, ಅದನ್ನು ದುರದೃಷ್ಟ ಮತ್ತು ತೊಂದರೆಗಳ ಆಗಮನದ ಸಂಕೇತವೆಂದು ಪರಿಗಣಿಸಲಾಗುತ್ತದೆ. 

 

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆ ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News