Sunday Remedies - ನವದೆಹಲಿ: ಭಾನುವಾರ ಸೂರ್ಯದೇವನ ದಿನ ಎಂದೇ ಪರಿಗಣಿಸಲಾಗುತ್ತದೆ. ಹೇಗಾಗಿ ಭಾನುವಾರ ಸೂರ್ಯದೇವನನ್ನು ಪ್ರಸನ್ನಗೊಳಿಸಲು ಹಲವು ಉಪಾಯಗಳನ್ನು ಮಾಡುತ್ತಾರೆ. ಶುದ್ಧ ಅಂತಃಕ್ಕರಣದಿಂದ ಭಾನುವಾರ ಸೂರ್ಯದೇವನಿಗೆ ಪೂಜೆ ಸಲ್ಲಿಸುವವರ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ ಎನ್ನಲಾಗುತ್ತದೆ. ಈ ದಿನ ಸೂರ್ಯದೇವನ ಹೆಸರಿನಲ್ಲಿ ವೃತಕ್ಕೆ ಭಾರಿ ಮಹತ್ವವಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಭಾನುವಾರ ಸೂರ್ಯದೇವನ ವೃತ ಕೈಗೊಂಡರೆ, ವೃತ ಕೈಗೊಂಡವರ ಮನೋಕಾಮನೆಗಳು ಪೂರ್ತಿಯಾಗುತ್ತವೆ ಎನ್ನಲಾಗುತ್ತದೆ.


COMMERCIAL BREAK
SCROLL TO CONTINUE READING

ಭಾನುವಾರ ಈ ಕೆಲಸಗಳು ವರ್ಜಿತ
ಭಾನುವಾರ ಸಾಮಾನ್ಯವಾಗಿ ರಜಾದಿನವಾಗಿರುವ ಕಾರಣ ಜನರು ಹಲವು ವಸ್ತುಗಳ ಶಾಪಿಂಗ್ ಮಾಡಿ ಮನೆಗೆ ತರುತ್ತಾರೆ. ಆದರೆ, ಈ ವಸ್ತುಗಳಲ್ಲಿ ಕೆಲ ವಸ್ತುಗಳು ಶುಭವಾಗಿದ್ದರೆ, ಕೆಲ ವಸ್ತುಗಳು ಅಶುಭ ಫಲ ನೀಡುತ್ತವೆ. ಹಾಗಾದರೆ ಬನ್ನಿ ಭಾನುವಾರ ಯಾವ ಕೆಲಸಗಳನ್ನು ಮಾಡುವುದರಿಂದ ಅಶುಭ ಫಲ ಪ್ರಾಪ್ತಿಯಾಗುತ್ತದೆ ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ.


ಇದನ್ನು ಓದಿ-ಸುಖ, ಸಮೃದ್ಧಿ ತರಬಲ್ಲದು ಚಿಟಿಕೆ ಉಪ್ಪು..! ವಾಸ್ತು ನಂಬುವವರು ಓದಲೇ ಬೇಕು,!


ಭಾನುವಾರ ಈ ಸಂಗತಿಗಳ ಬಗ್ಗೆ ಗಮನವಿರಲಿ


  1. ಭಾನುವಾರದಂದು ಕಬ್ಬಿಣದ ಸಾಮಾನು, ಫರ್ನಿಚರ್, ಹಾರ್ಡ್ ವೆಯರ್ ಖರೀದಿ ಅಶುಭ ಎಂದು ಹೇಳಲಾಗಿದೆ.

  2. ನಂಬಿಕೆಗಳ ಪ್ರಕಾರ ಭಾನುವಾರ ತಾಮ್ರದ ವಸ್ತುಗಳಮಾರಾಟ ಮಾಡಬಾರದು ಎಂದು ಹೇಳಲಾಗುತ್ತದೆ. ಇದರಿಂದ ಸೂರ್ಯದೇವನ ಕೃಪೆ ನಿಂತು ಹೋಗುತ್ತದೆ ಎನ್ನಲಾಗಿದೆ.

  3. ಈ ದಿನ ಕಪ್ಪು, ನೀಲಿ ಹಾಗೂ ಬೂದು ಬಣ್ಣದ ವಸ್ತ್ರಗಳನ್ನು ಧರಿಸಬಾರದು.


ಇದನ್ನು ಓದಿ-Vastu Tips : ಶಾಂತಂ ಪಾಪಂ..! ತಪ್ಪಿಯೂ ದೇವರ ಮನೆಯಲ್ಲಿ ಹೀಗೆಲ್ಲಾ ಮಾಡಬೇಡಿ.!


  1. ಈ ದಿನ ಉಪ್ಪು ಸೇವನೆ ಕೂಡ ವರ್ಜಿತ ಎಂದು ಹೇಳಲಾಗುತ್ತದೆ. ಇದರಿಂದ ಮುಂದಕ್ಕೆ ಸಾಗಿಬರುತ್ತಿರುವ ನಿಮ್ಮ ಕೆಲಸಗಳು ನಿಂತುಹೋಗುತ್ತವೆ. ಜೊತೆಗೆ ಆರೋಗ್ಯ ಕೂಡ ಹದಗೆಡುತ್ತದೆ. ಸೂರ್ಯಾಸ್ತದ ಬಳಿಕ ಉಪ್ಪು ಸೇವನೆ ಬೇಡವೇ ಬೇಡ.

  2. ಮಾಂಸ-ಮಧ್ಯಪಾನ (Alcohol) ಸೇವನೆ ಮಾಡಬಾರದು. ಇದರಿಂದ ಸೂರ್ಯದೇವ ಅಸಮಾಧಾನಗೊಳ್ಳುತ್ತಾನೆ ಎನ್ನಲಾಗಿದೆ. 

  3. ಭಾನುವಾರ ಶಾರೀರಿಕ ಸಂಬಂಧ ಬೆಳೆಸುವುದರ ಮೇಲೂ ಕೂಡ ಶಾಸ್ತ್ರಗಳಲ್ಲಿ ನಿರ್ಬಂಧವಿದೆ.


ಇದನ್ನು ಓದಿ- ಯಾರಿಗೂ ಹೇಳದೆ Saturday ಸಂಜೆ ಈ ಕೆಲಸ ಮಾಡಿದರೆ ನಿಮ್ಮ ಅದೃಷ್ಟವೇ ಬದಲಾಗುತ್ತೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.