Baba Vanga Predictions for 2023: 2022 ವರ್ಷ ಮುಗಿಯಲು ಒಂದು ವಾರಕ್ಕಿಂತ ಕಡಿಮೆ ಸಮಯಾವಕಾಶ ಉಳಿದಿದೆ ಮತ್ತು ಜನರು 2023 ಅನ್ನು ಸ್ವಾಗತಿಸಲು ಸಿದ್ಧತೆ ಆರಂಭಿಸಿದ್ದಾರೆ. ಇದರೊಂದಿಗೆ, ಬಲ್ಗೇರಿಯಾದಲ್ಲಿ ಜನಿಸಿದ ಬಾಬಾ ವೆಂಗಾ ಭವಿಷ್ಯವಾಣಿಗಳು ಮತ್ತೊಮ್ಮೆ ಚರ್ಚೆಯಾಗಲಾರಂಭಿಸಿವೆ. ವರ್ಷಗಳ ಹಿಂದೆ, ಬಾಬಾ ವೆಂಗಾ ಅವರು 2023 ರ ವರ್ಷಕ್ಕೆ ಹಲವು ಮುನ್ಸೂಚನೆಗಳನ್ನು ನೀಡಿದ್ದರು, ಅದು ನಿಜವೆಂದು ಸಾಬೀತಾದರೆ, ಭೂಮಿಯ ಮೇಲೆ ಭಾರಿ ವಿನಾಶವೇ ಸಂಭವಿಸಲಿದೆ. ಬಾಬಾ ವೆಂಗಾ 111 ವರ್ಷಗಳ ಹಿಂದೆ ಅನೇಕ ಭವಿಷ್ಯವಾಣಿಗಳನ್ನು ಹೇಳಿದ್ದಾರೆ, ಅವುಗಳಲ್ಲಿ ಹಲವು ಭವಿಷ್ಯವಾಣಿಗಳು ಇದುವರೆಗೆ ನಿಜವೆಂದು ಸಾಬೀತಾಗಿವೆ.


COMMERCIAL BREAK
SCROLL TO CONTINUE READING

2023 ರಲ್ಲಿ ಮೂರನೇ ಮಹಾಯುದ್ಧ ಸಂಭವಿಸಬಹುದು
ಬಾಬಾ ವಂಗಾ ಅವರ ಭವಿಷ್ಯವಾಣಿ
ಯ ಪ್ರಕಾರ, 2023 ರಲ್ಲಿ ಮೂರನೇ ಮಹಾಯುದ್ಧ ಸಂಭವಿಸಬಹುದು ಮತ್ತು ಈ ಸಮಯದಲ್ಲಿ ಪರಮಾಣು ದಾಳಿಗಳು ಕೂಡ ಸಂಭವಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇದು ಭೂಮಿಯ ಮೇಲೆ ಭಾರಿ ವಿನಾಶಕ್ಕೆ ಕಾರಣವಾಗಬಹುದು. ರಷ್ಯಾ ಮತ್ತು ಉಕ್ರೇನ್ ನಡುವಿನ ನಡೆಯುತ್ತಿರುವ ಯುದ್ಧಕ್ಕೆ ಸಂಬಂಧಿಸಿ ತಜ್ಞರು ಬಾಬಾ ವೆಂಗಾ ಅವರ ಭವಿಷ್ಯವಾಣಿ ನಿಜ ಸಾಬೀತಾಗುವ ಸಾಧ್ಯತೆ ಇದೆ ಮತ್ತು ಮುಂದಿನ ವರ್ಷ ಇದು ಮೂರನೇ ಮಹಾಯುದ್ಧದ ರೂಪವನ್ನು ಪಡೆದುಕೊಳ್ಳಬಹುದು ಎಂದು ನಂಬಲಾಗಿದೆ,


2023 ರಲ್ಲಿ ಭೂಮಿಯ ಕಕ್ಷೆಯು ಬದಲಾಗಬಹುದು
ಬಾಬಾ ವಂಗಾ
ಅವರ ಭವಿಷ್ಯವಾಣಿಯ ಪ್ರಕಾರ, 2023 ರಲ್ಲಿ ಒಂದು ಪ್ರಮುಖ ಖಗೋಳ ಘಟನೆ ನಡೆಯಲಿದೆ, ಈ ಘಟನೆಯ ಬಳಿಕ ಭೂಮಿಯ ಕಕ್ಷೆಯು ಬದಲಾಗಬಹುದು ಮತ್ತು ಭೂಮಿಯ ಮೇಲೆ ಅನೇಕ ಪ್ರಮುಖ ಬದಲಾವಣೆಗಳು ಸಂಭವಿಸುವ ಸಾಧ್ಯತೆ ಇದೆ. ಈ ಖಗೋಳ ಘಟನೆಯು ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಬಾಬಾ ವೆಂಗಾ ಹೇಳಿದ್ದಾರೆ.


ಇದನ್ನೂ ಓದಿ-Tulsi Plant: ಒಂದೇ ರಾತ್ರಿಯಲ್ಲಿ ಅದೃಷ್ಟ ಬದಲಾಗಬೇಕೇ? ತುಳಸಿ ಕುಂಡದ ಮೇಲೆ ಈ ಚಿಹ್ನೆಗಳನ್ನು ರಚಿಸಿ


2023 ರಲ್ಲಿ ಜೈವಿಕ ಶಸ್ತ್ರಾಸ್ತ್ರಗಳು ದಾಳಿ ಮಾಡಬಹುದು
ಬಾಬಾ ವಂಗಾ ಅವರು 2023 ರಲ್ಲಿ ಜೈವಿಕ ಶಸ್ತ್ರಾಸ್ತ್ರಗಳ ದಾಳಿಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಆದರೆ, ಈ ದಾಳಿಯನ್ನು ಯಾರು ನಡೆಸುತ್ತಾರೆ ಮತ್ತು ಯಾರ ಮೇಲೆ ದಾಳಿ ನಡೆಸುತ್ತಾರೆ ಎಂಬುದರ ಕುರಿತು ಅವರು ಮಾಹಿತಿ ನೀಡಿಲ್ಲ. ಇದರೊಂದಿಗೆ ಸೌರವ್ಯೂಹದ ಬಿರುಗಾಳಿಗಳ ಬಗ್ಗೆಯೂ ಬಾಬಾ ವೆಂಗಾ ಭವಿಷ್ಯ ಹೇಳಿದ್ದಾರೆ.


ಇದನ್ನೂ ಓದಿ-Venus Transit 2022: ಧನ-ಸಂಪತ್ತು ಕರುಣಿಸುವ ಈ ಗ್ರಹದ ಗೋಚರದಿಂದ 2023 ರಲ್ಲಿ ಈ ರಾಶಿಯವರ ಮೇಲೆ ವಿಪರೀತ ಪರಿಣಾಮ

(ಹಕ್ಕುತ್ಯಾಗ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.