ನವದೆಹಲಿ : ಆರೋಗ್ಯಕರ ಆಹಾರದ ಆಯ್ಕೆ ಬಂದರೆ ಹೆಚ್ಚಿನ ಜನರು ಸಲಾಡ್ ಅನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಕೆಲವರು ಬರೀ ತರಕಾರಿಯ ಸಲಾಡ್ (Vegetable Salad) ತಿನ್ನಲು ಇಷ್ಟಪಡುತ್ತಾರೆ.  ಇನ್ನು ಕೆಲವರು ಹಣ್ಣುಗಳ ಸಲಾಡ್‌ಗಳನ್ನು (Fruit Salad) ಸೇವಿಸಲು ಬಯಸುತ್ತಾರೆ. ಆದರೆ ತರಕಾರಿ ಸಲಾಡ್ ಸೇವಿಸುವಾಗ ಕೆಲವೊಂದು ತರಕಾರಿಗಳನ್ನು ಒಟ್ಟಿಗೆ ಸೇವಿಸಬಾರದು. ಹೀಗೆ ಮಾಡಿದರೆ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. 


COMMERCIAL BREAK
SCROLL TO CONTINUE READING

ಟೊಮೆಟೊ ಮತ್ತು ಸೌತೆಕಾಯಿಯನ್ನು ಒಟ್ಟಿಗೆ ಸೇವಿಸುವುದರಿಂದ ಆರೋಗ್ಯ ಹದಗೆಡುತ್ತದೆ ಎನ್ನುವುದು ಅನೇಕರಿಗೆ ತಿಳಿದಿಲ್ಲ (Benefits of Cucumber). ಸಾಮಾನ್ಯವಾಗಿ ಜನರು ಸಲಾಡ್ ಮಾಡುವಾಗ ಸೌತೆಕಾಯಿ ಮತ್ತು ಟೊಮೆಟೊವನ್ನು ಒಟ್ಟಿಗೆ ತಸೇರಿಸುತ್ತಾರೆ. ಆದರೆ ಅದು ಸರಿಯಲ್ಲ ಎನ್ನುತಾರೆ ಆರೋಗ್ಯ ತಜ್ಞರು (Benefits of Tomato.)  


ಇದನ್ನೂ ಓದಿ : Tulsi ಹೇಗೆ ಸೇವಿಸಿದರೆ ಆರೋಗ್ಯಕ್ಕೆ ಉತ್ತಮ?


ಸೌತೆಕಾಯಿಯೊಂದಿಗೆ ಟೊಮೆಟೊ ಮಿಶ್ರಣ ಮಾಡಬೇಡಿ :
ತಜ್ಞರ ಪ್ರಕಾರ, ಸೌತೆಕಾಯಿ ಮತ್ತು ಟೊಮೆಟೊವನ್ನು ಒಟ್ಟಿಗೆ ಸೇವಿಸಿದರೆ, ಗ್ಯಾಸ್ (Acidity), ಹೊಟ್ಟೆ ಉಬ್ಬರ , ಹೊಟ್ಟೆ ನೋವು, ವಾಕರಿಕೆ, ಆಯಾಸ, ಅಜೀರ್ಣದಂತಹ ಸಮಸ್ಯೆಗಳು ಎದುರಾಗಬಹುದು. ಆದ್ದರಿಂದ, ಸೌತೆಕಾಯಿ ಮತ್ತು ಟೊಮೆಟೊವನ್ನು ಒಟ್ಟಿಗೆ ಸೇವಿಸಿದರೆ ಉದರದ  ಸಮಸ್ಯೆಗಳು  ಸೃಷ್ಟಿಯಾಗಬಹುದು. 
 
ಸೌತೆಕಾಯಿ ಮತ್ತು ಟೊಮೆಟೊ ರುಚಿ ವಿಭಿನ್ನವಾಗಿರುತ್ತದೆ : 
ತಜ್ಞರ ಪ್ರಕಾರ, ಟೊಮೆಟೊ ಮತ್ತು ಸೌತೆಕಾಯಿಗಳು ಕ್ರಮವಾಗಿ ನಿಧಾನ ಮತ್ತು ವೇಗವಾಗಿ ಜೀರ್ಣವಾಗುವ ಆಹಾರಗಳಾಗಿವೆ (Digestion). ವೇಗವಾಗಿ ಮತ್ತು ನಿಧಾನವಾಗಿ ಜೀರ್ಣವಾಗುವ ಆಹಾರವನ್ನು ಒಟ್ಟಿಗೆ ಸೇವಿಸಿದರೆ, ಒಂದು ಆಹಾರವು ಬೇಗ ಜೀರ್ಣವಾಗುತ್ತದೆ ಮತ್ತು ಕರುಳನ್ನು ಬೇಗ ತಲುಪುತ್ತದೆ. ಅದೇ ಸಮಯದಲ್ಲಿ, ಇನ್ನೊಂದು ಆಹಾರದ ಜೀರ್ಣಕ್ರಿಯೆ ಪ್ರಕ್ರಿಯೆ ನಿಧಾನವಾಗುತ್ತದೆ.  


ಇದನ್ನೂ ಓದಿ : Walking: ಪ್ರತಿನಿತ್ಯ ಹುಲ್ಲಿನ ಮೇಲೆ ನಡಿಯುವುದರಿಂದ ಸಿಗುತ್ತೆ ಇಷ್ಟೆಲ್ಲ ಆರೋಗ್ಯ ಪ್ರಯೋಜನಗಳು..


 ಏನು ಹೇಳುತ್ತಾರೆ ತಜ್ಞರು?
ಸೌತೆಕಾಯಿಯಲ್ಲಿ ಪೌಷ್ಠಿಕಾಂಶದ ಅಂಶಗಳು ಕಂಡುಬರುತ್ತವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇದು ದೇಹವನ್ನು ಹೈಡ್ರೇಟ್ ಮಾಡುತ್ತದೆ. ಸೌತೆಕಾಯಿಯಲ್ಲಿ ವಿಟಮಿನ್ ಸಿ ಹೀರುವಿಕೆಗೆ ಅಡ್ಡಿಪಡಿಸುವ ಗುಣವೂ ಇದೆ. ಆದ್ದರಿಂದ, ಟೊಮ್ಯಾಟೊ ಮತ್ತು ಸೌತೆಕಾಯಿಗಳನ್ನು ಒಟ್ಟಿಗೆ ತಿನ್ನದಂತೆ ಸಲಹೆ ನೀಡಲಾಗುತ್ತದೆ. ಅದಕ್ಕಾಗಿಯೇ ನೀವು ಈ ಎರಡು ಆಹಾರವನ್ನು ಒಟ್ಟಿಗೆ ತಿನ್ನುವಾಗ ಜಾಗರೂಕರಾಗಿರಬೇಕು. ಈ ಎರಡೂ  ತರಕಾರಿ ನಿಮಗೆ ಇಷ್ಟವಾಗಿದ್ದರೆ, ಅವುಗಳನ್ನು ಪ್ರತ್ಯೇಕವಾಗಿ ಸೇವಿಸುವುದು ಉತ್ತಮ. 


ಇದನ್ನೂ ಓದಿ : ಕಲ್ಲಂಗಡಿ ಬೀಜದ ಮಹತ್ವ ಗೊತ್ತಾದ್ರೆ, ಅದನ್ನ ಚಿನ್ನದಂತೆ ಜೋಪಾನ ಮಾಡ್ತೀರಾ..!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.