ಅಸಿಡಿಟಿ ಸಮಸ್ಯೆ ಹೋಗಲಾಡಿಸಲು ಸಿಂಪಲ್ ಮನೆ ಮದ್ದುಗಳಿವು ..!

ಕಳಪೆ ಆಹಾರ ಪದ್ಧತಿಯೂ ಅಸಿಡಿಟಿ ಗೆ ಕಾರಣ. ಅಸಿಡಿಟಿ ಸಮಸ್ಯೆಯಿಂದ ಮುಕ್ತಿ ಹೊಂದಲು ಆಹಾರ ಪದ್ಧತಿಯಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಂಡರೆ ಒಳ್ಳೆಯ ಲಾಭವಾಗುತ್ತದೆ ಎನ್ನುತ್ತಾರೆ ವೈದ್ಯರು.

Written by - Ranjitha R K | Last Updated : Mar 8, 2022, 04:45 PM IST
  • ಇತ್ತೀಚಿನ ದಿನಗಳಲ್ಲಿ ಅಸಿಡಿಟಿ ಎನ್ನುವುದು ಸಾಮಾನ್ಯ ಸಮಸ್ಯೆ
  • ನಾವು ಅನುಸರಿಸುತ್ತಿರುವ ಜೀವನ ಶೈಲಿಯೇ ಮುಖ್ಯ ಕಾರಣ.
  • ಕಳಪೆ ಆಹಾರ ಪದ್ಧತಿಯೂ ಅಸಿಡಿಟಿ ಗೆ ಕಾರಣ.
ಅಸಿಡಿಟಿ ಸಮಸ್ಯೆ ಹೋಗಲಾಡಿಸಲು  ಸಿಂಪಲ್  ಮನೆ ಮದ್ದುಗಳಿವು ..! title=
ಕಳಪೆ ಆಹಾರ ಪದ್ಧತಿಯೂ ಅಸಿಡಿಟಿ ಗೆ ಕಾರಣ. (file photo)

ಬೆಂಗಳೂರು :  ಇತ್ತೀಚಿನ ದಿನಗಳಲ್ಲಿ ಅಸಿಡಿಟಿ ಎನ್ನುವುದು ಸಾಮಾನ್ಯ ಸಮಸ್ಯೆಯಾಗಿದೆ (Acidity). ಇದಕ್ಕೆ ನಾವು ಅನುಸರಿಸುತ್ತಿರುವ ಜೀವನ ಶೈಲಿಯೇ (Lifestyle) ಮುಖ್ಯ ಕಾರಣ. ಆಸಿಡ್ ರಿಫ್ಲಕ್ಸ್, ಅಥವಾ ಹೊಟ್ಟೆಯಲ್ಲಿರುವ ಆಮ್ಲ, ಅನ್ನನಾಳದ ಮೇಲೆ ಚಲಿಸುವಾಗ ಎದೆಯ ಕೆಳಭಾಗದಲ್ಲಿ ಒಂದು ರೀತಿಯ ಕಿರಿಕಿರಿಯನ್ನು ಉಂಟುಮಾಡುತ್ತದೆ. ಮಾತ್ರವಲ್ಲ ಎದೆಯುರಿ, ಹೊಟ್ಟೆ ಕಿರಿಕಿರಿ, ಹೊಟ್ಟೆ ನೋವು, ಹುಳಿ ತೇಗು, ಮತ್ತು ಗ್ಯಾಸ್‌ನಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ.  

ಕಳಪೆ ಆಹಾರ ಪದ್ಧತಿಯೂ ಅಸಿಡಿಟಿ ಗೆ ಕಾರಣ (reason for acidity). ಅಸಿಡಿಟಿ ಸಮಸ್ಯೆಯಿಂದ ಮುಕ್ತಿ ಹೊಂದಲು ಆಹಾರ ಪದ್ಧತಿಯಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಂಡರೆ ಒಳ್ಳೆಯ ಲಾಭವಾಗುತ್ತದೆ ಎನ್ನುತ್ತಾರೆ ವೈದ್ಯರು.

ಆಸಿಡಿಟಿಗೆ ಕಾರಣಗಳು :
 ದೀರ್ಘಕಾಲದ ಹಸಿವು ಆಸಿಡಿಟಿಗೆ  ಮುಖ್ಯ ಕಾರಣವಾಗಿದೆ. ಜೀರ್ಣಿಸಿಕೊಳ್ಳಲು ಏನೂ ಇಲ್ಲದಿದ್ದಾಗ, ಹೊಟ್ಟೆಯ ಆಮ್ಲವು ಹೊಟ್ಟೆಯ ಒಳಗಿನ ಪದರಗಳನ್ನು ತೆಳ್ಳಗೆ ಮಾಡುತ್ತದೆ. ಹಾಗೆಯೇ ಊಟ ಮಾಡಿದ  ಕೂಡಲೇ ಮಲಗುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಮಸಾಲೆಯುಕ್ತ ಆಹಾರಗಳು, ಕರಿದ ಆಹಾರಗಳು, ಜಂಕ್ ಫುಡ್, ಮದ್ಯ, ಟೀ-ಕಾಫಿ, ಧೂಮಪಾನ ಮತ್ತು ತಂಪು ಪಾನೀಯಗಳಿಂದ ದೂರವಿರಿ. ಇವುಗಳ ಅತಿಯಾದ ಸೇವನೆ ಕೂಡಾ ಅಸಿದಿತಿಗೆ ಕಾರಣವಾಗಿರುತ್ತದೆ. ಇನ್ನು ಸಿಟ್ರಸ್  ಹಣ್ಣುಗಳು, ಟೊಮೆಟೊ (Tomato), ಅನಾನಸ್, ದ್ರಾಕ್ಷಿ, ನಿಂಬೆ, ಕಿತ್ತಳೆ (Orange)ಮುಂತಾದವುಗಳನ್ನು ಹೆಚ್ಚಾಗಿ ತಿಂದರೂ ಆಸಿಡಿಟಿಯಾಗುತ್ತದೆ.   

ಇದನ್ನೂ ಓದಿ : ಗೊತ್ತಿರಲಿ, ಮೂತ್ರದ ಬಣ್ಣ ಬದಲಾಗುವುದು ಗಂಭೀರ ಸಮಸ್ಯೆಯ ಸಂಕೇತ..!

ಅಸಿಡಿಟಿಯನ್ನು ನಿವಾರಿಸಲು ಸಹಾಯ ಮಾಡುವ ಆಹಾರಗಳು :
ಬಾಳೆಹಣ್ಣು pH ಅನ್ನು ಸಮತೋಲನಗೊಳಿಸುತ್ತದೆ (banana benefits). ಇದು ಪೊಟ್ಯಾಸಿಯಮ್, ಕ್ಯಾಲ್ಸಿಯಂ,  ಫೈಬರ್ ನಲ್ಲಿ ಸಮೃದ್ಧವಾಗಿದೆ.  ಇದು  ಅನ್ನನಾಳದಿಂದ ಹೊಟ್ಟೆಯಲ್ಲಿನ ಲೋಳೆಯವರೆಗೆ ರಕ್ಷಿಸುತ್ತದೆ. ಈ ಕಾರಣದಿಂದಾಗಿ ಇದು ಆಸಿಡಿಟಿಯನ್ನು ಹೋಗಲಾದುಸಲು ಸಹಾಯ ಮಾಡುತ್ತದೆ.  ಇದಲ್ಲದೆ ಸೇಬು, ಕಲ್ಲಂಗಡಿ, ದಾಳಿಂಬೆ ಮತ್ತು ಪಪ್ಪಾಯಿಗಳು ಕೂಡಾ ಅತ್ಯಂತ ಪ್ರಯೋಜನಕಾರಿ. ಹಳೆಯ ಅಕ್ಕಿ, ಗೋಧಿ, ಬಾರ್ಲಿ, ದಾಳಿಂಬೆ, ನೆಲ್ಲಿಕಾಯಿ, ಸೌತೆಕಾಯಿ, ಇವುಗಳು  ಆಮ್ಲೀಯತೆ ಅಥವಾ ಅಸಿಡಿಟಿಯನ್ನು  ಕಡಿಮೆ ಮಾಡುತ್ತದೆ. 

ನೆಲ್ಲಿಕಾಯಿಯಲ್ಲಿ ವಿಟಮಿನ್-ಸಿ ಅಧಿಕವಾಗಿರುತ್ತದೆ (AMla benefits). ಹುಳಿಯಾದರೂ ಇದು ಆಮ್ಲೀಯತೆಯನ್ನು ನಿಯಂತ್ರಿಸುತ್ತದೆ. ಅಸಿಡಿಟಿ ಹೋಗಲಾಡಿಸಲು 5-10 ಗ್ರಾಂ ನೆಲ್ಲಿಕಾಯಿ ಪುಡಿಯನ್ನು ದಿನಕ್ಕೆರಡು ಬಾರಿ ಸೇವಿಸಿ.

ಲವಂಗ ಮತ್ತು ತುಳಸಿ ಎಲೆಗಳನ್ನು  (Tulsi leaves) ಜಗಿಯುವುದರಿಂದ ವಾಕರಿಕೆ, ವಾಂತಿ ಮತ್ತು ಆಮ್ಲೀಯತೆಯಿಂದ ಪರಿಹಾರ ದೊರೆಯುತ್ತದೆ.

 ಇದನ್ನೂ ಓದಿ : Morning Drinks: ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಈ ಡ್ರಿಂಕ್ಸ್ ಸೇವಿಸಿದರೆ ಸ್ಲಿಮ್ ಆಗಬಹುದು!

ಆಂಟಾಸಿಡ್‌ಗಳಿಗೆ ವ್ಯಸನಿಯಾಗಬೇಡಿ. ಅವುಗಳನ್ನುಹೆಚ್ಚು ಪ್ರಮಾಣದಲ್ಲಿ ತೆಗೆದುಕೊಂಡರೆ, ಅವು ಹೊಟ್ಟೆಯ ಒಳಪದರ ತೆಳುವಾಗುವುದು ಮತ್ತು ಹುಣ್ಣುಗಳಂಥಹ  ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು. 

ಸರಿಯಾದ ಸಮಯಕ್ಕೆ ತಿನ್ನುವುದು ಆಸಿಡಿಟಿ ಹೋಗಲಾಡಿಸಲು ಇರುವ ಬಹು ದೊಡ್ಡ ಅಸ್ತ್ರವಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News