ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ಸುಲಭ ಪರಿಹಾರ ಬಾಳೆಹಣ್ಣು
Banana For Skin Care: ಎಲ್ಲಾ ಋತುಮಾನಗಳಲ್ಲೂ ಅತ್ಯಂತ ಸುಲಭವಾಗಿ ಅಗ್ಗದ ಬೆಲೆಯಲ್ಲಿ ಲಭ್ಯವಾಗುವ ಹಣ್ಣು ಬಾಳೆಹಣ್ಣು. ಬಾಳೆ ಹಣ್ಣಿನ ಸೇವನೆಯಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ ಎಂದು ನಿಮಗೆ ತಿಳಿದೇ ಇದೆ. ಆದರೆ, ಬಾಳೆ ಹಣ್ಣಿನಿಂದ, ಅದರ ಸಿಪ್ಪೆಯಿಂದ ಆರೋಗ್ಯಕರ ಸುಂದರವಾದ ತ್ವಚೆಯನ್ನು ನಿಮ್ಮದಾಗಿಸಬಹುದು ಎಂದು ನಿಮಗೆ ತಿಳಿದಿದೆಯೇ?
Banana For Skin Care: ಬಾಳೆಹಣ್ಣು ಆರೋಗ್ಯಕ್ಕಷ್ಟೇ ಪ್ರಯೋಜನಕಾರಿ ಅಲ್ಲ. ಬಾಳೆಹಣ್ಣು ಉತ್ತಮ ಸೌಂದರ್ಯವರ್ಧಕವೂ ಹೌದು. ನೀವು ಬಾಳೆ ಹಣ್ಣನ್ನು ಸೇವಿಸಲು ಇಷ್ಟಪಡದಿದ್ದರೂ ಸಹ ನಿಮ್ಮ ಕೋಮಲವಾದ ತ್ವಚೆಗೆ ಅದರ ಪ್ರಯೋಜನಗಳ ಬಗ್ಗೆ ತಿಳಿದರೆ ಅದನ್ನು ಖಂಡಿತವಾಗಿಯೂ ಒಮ್ಮೆಯಾದರೂ ಟ್ರೈ ಮಾಡುತ್ತೀರಿ.
ಸಾಮಾನ್ಯವಾಗಿ, ಎಲ್ಲಾ ಋತುಮಾನಗಳಲ್ಲೂ ಅತ್ಯಂತ ಸುಲಭವಾಗಿ ಅಗ್ಗದ ಬೆಲೆಯಲ್ಲಿ ಲಭ್ಯವಾಗುವ ಹಣ್ಣು ಬಾಳೆಹಣ್ಣು. ಬಾಳೆ ಹಣ್ಣಿನ ಸೇವನೆಯಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ ಎಂದು ನಿಮಗೆ ತಿಳಿದೇ ಇದೆ. ಆದರೆ, ಬಾಳೆ ಹಣ್ಣಿನಿಂದ, ಅದರ ಸಿಪ್ಪೆಯಿಂದ ಆರೋಗ್ಯಕರ ಸುಂದರವಾದ ತ್ವಚೆಯನ್ನು ನಿಮ್ಮದಾಗಿಸಬಹುದು ಎಂದು ನಿಮಗೆ ತಿಳಿದಿದೆಯೇ?
ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ಸುಲಭ ಪರಿಹಾರ ಬಾಳೆಹಣ್ಣು:
* ಚರ್ಮಕ್ಕೆ ಉತ್ತಮ ಮಾಯಿಶ್ಚರೈಸಿಂಗ್ :
ಬಾಳೆಹಣ್ಣು ಚರ್ಮವನ್ನು ಹೈಡ್ರೇಟ್ ಮಾಡಬಲ್ಲ ಅತ್ಯುತ್ತಮ ಅಂಶಗಳನ್ನು ಹೊಂದಿದೆ. ಹಾಗಾಗಿ ಇದು ಉತ್ತಮ ಮಾಯಿಶ್ಚರೈಸರ್ ಆಗಿದೆ. ಮಾಗಿದ ಬಾಳೆಹಣ್ಣನ್ನು ಮ್ಯಾಶ್ ಮಾಡಿ ಮತ್ತು ಅದಕ್ಕೆ ಎರಡು ಚಮಚ ಜೇನುತುಪ್ಪವನ್ನು ಬೆರೆಸಿ 15-20 ನಿಮಿಷಗಳ ನಂತರ ಮುಖ ತೊಳೆಯಿರಿ. ಇದರಿಂದ ತ್ವಚೆಯಲ್ಲಿ ತೇವಾಂಶವನ್ನು ಪುನಃಸ್ಥಾಪಿಸಬಹುದಾಗಿದೆ.
ಇದನ್ನೂ ಓದಿ- Uric Acid: ಯೂರಿಕ್ ಆಸಿಡ್ ಸಮಸ್ಯೆಯಿಂದ ಪರಿಹಾರ ಪಡೆಯಲು ಈ ಡ್ರೈ ಫ್ರೂಟ್ಸ್ ತಪ್ಪದೇ ಸೇವಿಸಿ
* ಆಯಿಲ್ ಕಂಟ್ರೋಲ್:
ಮಾಗಿದ ಬಾಳೆ ಹಣ್ಣಿಗೆ ಒಂದು ಚಮಚ ಓಟ್ ಮೀಲ್, 2 ಚಮಚ ನಿಂಬೆ ರಸ ಬೆರೆಸಿ ತ್ವಚೆಗೆ ಹಚ್ಚಿ. 15 ನಿಮಿಷಗಳ ಬಳಿಕ ಸ್ಕ್ರಬ್ ಮಾಡುವುದರಿಂದ ಕಾಂತಿಯುತ ತ್ವಚೆ ನಿಮ್ಮದಾಗುತ್ತದೆ. ಬಾಳೆಹಣ್ಣಿನಲ್ಲಿರುವ ವಿಟಮಿನ್ ಸಿ ನಿಮ್ಮ ಚರ್ಮದಲ್ಲಿರುವ ಎಣ್ಣೆಯನ್ನು ನಿಯಂತ್ರಿಸುತ್ತದೆ. ಮಾತ್ರವಲ್ಲ ಚರ್ಮವು ಹೊಳೆಯುವಂತೆ ಮಾಡುತ್ತದ.ಎ
* ಮೊಡವೆಯಿಂದ ಮುಕ್ತಿ:
ಬಾಳೆಹಣ್ಣು ಮಾತ್ರವಲ್ಲ ಬಾಳೆಹಣ್ಣಿನ ಸಿಪ್ಪೆಯೂ ಕೂಡ ಉತ್ತಮ ಸೌಂದರ್ಯವರ್ಧಕವಾಗಿದೆ. ನೀವು ಮೊಡವೆ ಮತ್ತದರ ಕಲೆಗಳಿಂದ ಮುಕ್ತಿ ಪಡೆಯಲು ಬಯಸಿದರೆ, ಬಾಳೆಹಣ್ಣಿನ ಸಿಪ್ಪೆಯನ್ನು ತೆಗೆದುಕೊಂಡು ಅದರ ಒಳಭಾಗವನ್ನು ಮೊಡವೆ ಪೀಡಿತ ಪ್ರದೇಶದಲ್ಲಿ ಹಚ್ಚಿ. ಹತ್ತು ನಿಮಿಷಗಳ ಕಾಲ ನಯವಾಗಿ ಮಸಾಜ್ ಮಾಡಿ. ಬಳಿಕ ರಾತ್ರಿಯಿಡೀ ಹಾಗೆಯೇ ಬಿಟ್ಟು ಬೆಳಗ್ಗೆ ಎದ್ದು ಮುಖ ತೊಳೆಯಿರಿ. ರೀತಿ ಮಾಡುವುದರಿಂದ ಮೊಡವೆಯಿಂದ ಮುಕ್ತಿ ಪಡೆಯಬಹುದು. ವಾಸ್ತವವಾಗಿ, ಬಾಳೆಹಣ್ಣಿನ ಸಿಪ್ಪೆಯಲ್ಲಿರುವ ಅಂಶಗಳು ಉರಿಯೂತವನ್ನು ಗುಣಪಡಿಸಲು ಮತ್ತು ಬ್ಯಾಕ್ಟೀರಿಯಾವನ್ನು ನಾಶಮಾಡುವ ಗುಣಗಳನ್ನು ಹೊಂದಿದೆ.
ಇದನ್ನೂ ಓದಿ- Petroleum Jelly Hacks: ತ್ವಚೆ ಮಾತ್ರವಲ್ಲ ಮನೆಯಲ್ಲಿರುವ ಈ ವಸ್ತುಗಳನ್ನೂ ಹೊಳೆಯುವಂತೆ ಮಾಡುತ್ತೆ ಪೆಟ್ರೋಲಿಯಂ ಜೆಲ್ಲಿ
* ಸುಕ್ಕುಗಳ ವಿರುದ್ಧ ಹೋರಾಡಲು:
ಹಣ್ಣಿನಲ್ಲಿ ವಯಸ್ಸಾದ ವಿರೋಧಿ ಗುಣಗಳು ಕೂಡ ಸಮೃದ್ಧವಾಗಿವೆ. ಮಾಗಿದ ಬಾಳೆಹಣ್ಣನ್ನು ಮ್ಯಾಶ್ ಮಾಡಿಕೊಂಡು ಆದರಕ್ಕೆ ಒಂದು ಟೀ ಸ್ಪೂನ್ ಮೊಸರು ಮತ್ತು ಅವಕಾಡೋ ತಿರುಳಿನೊಂದಿಗೆ ಬೆರೆಸಿ ಮಾಸ್ಕ್ ರೀತಿ ಮುಖಕ್ಕೆ ಲೇಪಿಸಿ. ಬಳಿಕ ಅದು ಚೆನ್ನಾಗಿ ಡ್ರೈ ಆದ ಮೇಲೆ ಮುಖವನ್ನು ಸ್ವಚ್ಛಗೊಳಿಸಿ. ಈ ರೀತಿ ಮಾಡುವುದರಿಂದ ಮುಖದ ಸುಕ್ಕುಗಳನ್ನು ತಡೆಯಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.