Uric Acid: ಯೂರಿಕ್ ಆಸಿಡ್ ಸಮಸ್ಯೆಯಿಂದ ಪರಿಹಾರ ಪಡೆಯಲು ಈ ಡ್ರೈ ಫ್ರೂಟ್ಸ್ ತಪ್ಪದೇ ಸೇವಿಸಿ

Dry Fruits For Uric Acid: ನೀವೂ ಕೂಡ ಯೂರಿಕ್ ಆಸಿಡ್ ಸಮಸ್ಯೆಯಿಂದ ತೊಂದರೆಗೊಳಗಾಗಿದ್ದರೆ ನಿಮ್ಮ ಡಯಟ್ನಲ್ಲಿ ಈ ಡ್ರೈ ಫ್ರೂಟ್ಸ್ ಗಳನ್ನು ತಪ್ಪದೇ ಸೇರಿಸಿ.

Dry Fruits For Uric Acid: ಬಿಪಿ ಶುಗರ್ ನಂತೆಯೇ ಇತ್ತೀಚಿನ ದಿನಗಳಲ್ಲಿ ಯೂರಿಕ್ ಆಸಿಡ್ ಸಮಸ್ಯೆಯೂ ಹೆಚ್ಚಾಗುತ್ತಿದೆ. ನೀವೂ ಯೂರಿಕ್ ಆಸಿಡ್ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಬಗ್ಗೆ ವಿಶೇಷ ಕಾಳಜಿ ಅಗತ್ಯವಾಗಿದೆ. ನಿಮ್ಮ ದಿನ ನಿತ್ಯದ ಆಹಾರದಲ್ಲಿ ಕೆಲವು ಒಣ ಹಣ್ಣುಗಳನ್ನು ಅಂದರೆ ಡ್ರೈ ಫ್ರೂಟ್ಸ್ ಅನ್ನು ಸೇರಿಸುವ ಮೂಲಕ ನೀವು ಈ ಸಮಸ್ಯೆಯಿಂದ ಸುಲಭವಾಗಿ ಪರಿಹಾರ ಪಡೆಯಬಹುದು.  ಯೂರಿಕ್ ಆಮ್ಲದಿಂದ ಪರಿಹಾರ ನೀಡಬಲ್ಲ ಡ್ರೈ ಫ್ರೂಟ್ಸ್ ಬಗ್ಗೆ ತಿಳಿಯೋಣ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಗೋಡಂಬಿ:  ಗೋಡಂಬಿಯಲ್ಲಿ  ಪೊಟ್ಯಾಸಿಯಮ್, ಫೈಬರ್ ಮತ್ತು ವಿಟಮಿನ್ ಸಿ ಹೇರಳವಾಗಿವೆ. ನಿತ್ಯ ಒಂದೆರಡು ಗೋಡಂಬಿ ಸೇವಿಸುವುದರಿಂದ ಯೂರಿಕ್ ಆಸಿಡ್ ಮಟ್ಟವನ್ನು ಸುಲಭವಾಗಿ ನಿಯಂತ್ರಿಸಬಹುದು.

2 /5

ವಾಲ್ನಟ್ಸ್:  ಸೂಪರ್ ಫುಡ್ ಎಂದು ಕರೆಯಲ್ಪಡುವ ವಾಲ್ನಟ್ಸ್ ನಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಇವು ದೇಹದಿಂದ ಯೂರಿಕ್ ಆಮ್ಲಾನ್ನು ಹೊರಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

3 /5

ಬಾದಾಮಿ:  ಮೆದುಳಿನ ಆರೋಗ್ಯಕ್ಕೆ ಬಾದಾಮಿಯನ್ನು ಅತ್ಯುತ್ತಮ ಡ್ರೈ ಫ್ರೂಟ್ಸ್ ಎಂದು ಪರಿಗಣಿಸಲಾಗಿದೆ. ನಿತ್ಯ ಸೀಮಿತ ಪ್ರಮಾಣದಲ್ಲಿ ಬಾದಾಮಿ ಸೇವಿಸುವುದರಿಂದ ಬುದ್ದಿ ಚುರುಕುಗೊಳ್ಳುವುದರ ಜೊತೆಗೆ ಯೂರಿಕ್ ಆಸಿಡ್ ಕೂಡ ಕಡಿಮೆ ಆಗುತ್ತದೆ.

4 /5

ಬ್ರೆಜಿಲ್ ನಟ್: ಬ್ರೆಜಿಲ್ ನಟ್ಸ್ ನಲ್ಲಿ ಸಾಕಷ್ಟು ಪ್ರಮಾಣದಲ್ಲಿ  ಸೆಲೆನಿಯಮ್ ಕಂಡು ಬರುತ್ತದೆ.  ಸೆಲೆನಿಯಮ್ ಯೂರಿಕ್ ಆಸಿಡ್ ಅನ್ನು ನಿಯಂತ್ರಿಸಲು ಬಹಳ ಪರಿಣಾಮಕಾರಿ ಎಂದು ಹೇಳಲಾಗುತ್ತದೆ.

5 /5

ಅಗಸೆ ಬೀಜಗಳು:  ಅಗಸೆ ಬೀಜಗಳು ಅಗತ್ಯ ಕೊಬ್ಬಿನಾಮ್ಲಗಳ ಅತ್ಯುತ್ತಮ ಮೂಲವಾಗಿದೆ. ಇದರ ಸೇವನೆಯು ದೇಹದಲ್ಲಿ ಯೂರಿಕ್ ಆಮ್ಲವನ್ನು ಕಡಿಮೆ ಮಾಡುವಲ್ಲಿ ಪ್ರಯೋಜನಕಾರಿ ಆಗಿದೆ.  ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಿರಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.